ಕಳೆದ ವಾರ ಬಂಧನಕ್ಕೊಳಗಾದ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಆಸಿಫ್ ಇಕ್ಬಾಲ್ ತನ್ಹಾರ ಪ್ರಕರಣದ ಪರಿಶೀಲನೆ ನಡೆಸಿದ ದಿಲ್ಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆತಂಕ ವ್ಯಕ್ತಪಡಿಸಿದೆ. ಪ್ರಕರಣದ ಸಂಪೂರ್ಣ ವಾದ ಆಲಿಸಿದ ನ್ಯಾಯಾಧೀಶ ಧಮೇಂದ್ರ ರಾಣಾ ಅವರು, ಸಿಎಎ ಪ್ರತಿಭಟನೆಗಳ ತನಿಖೆ ಏಕಪಕ್ಷೀಯವಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಸಿಎಎ ಕಾಯ್ದೆಯ ವಿಚಾರವಾಗಿ ದೇಶದಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಪ್ರತಿಭಟನೆ ಕೆಲ ಕಿಡಿಗೇಡಿಗಳ ಕಾರಣದಿಂದ ಹಿಂಸಾಚರ ರೂಪ ಪಡೆದುಕೊಂಡಿತ್ತು. ಇದರ ಭಾಗವಾಗಿ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರನ್ನ ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
Also Read: ದೆಹಲಿ ಹಿಂಸಾಚಾರ: ಪೊಲೀಸರಿಗೆ ಛೀಮಾರಿ ಹಾಕಿದ ಹೈಕೋರ್ಟ್
Also Read: ದೆಹಲಿ ಹಿಂಸಾಚಾರ: ಸಿಎಎ ಪರ ಹೋರಾಟ ಎಂದರೆ ಏನು?
Also Read: ದೆಹಲಿ ಹಿಂಸಾಚಾರ: ಹಿಂದೂ ಮುಸ್ಲಿಂ ಸಾಮರಸ್ಯದ ನಡುವೆ ಶಾಂತಿ ಕದಡಿದ ಮೂರನೇ ಗುಂಪು ಯಾವುದು?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಮೇ 27ರಂದು ವಾದ ಆಲಿಸಿತ್ತು. ಈ ವೇಳೆ ಸಿಎಎ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟಿಸಿದವರ ಮೇಲೆಯೇ ಹೆಚ್ಚು ಮೊಕದ್ದಮೆ ದಾಖಲಾಗಿದೆ ಎಂದು ಆತಂಕ ತೋಡಿಕೊಂಡರು. ಇದೇ ಸಂದರ್ಭ ಸಿಎಎ ಪರ ಪ್ರತಿಭಟನೆ ನಡೆಸಿದವರ ಮೇಲೆ ಯಾವ ಪ್ರಕರಣ ದಾಖಲಾಗಿದೆ. ಆ ಬಗ್ಗೆ ಎಷ್ಟು ತನಿಖೆ ನಡೆಸಲಾಗಿದೆ. ತನಿಖೆ ಎಲ್ಲಿಗೆ ತಲುಪಿದೆ ಎಂದು ನ್ಯಾಯಾಲಯ ಪೊಲೀಸರನ್ನು ಪ್ರಶ್ನಿಸಿದೆ. ಅಲ್ಲದೆ ಈ ಸಂಬಂಧ ತನಿಖೆ ನಡೆಸುತ್ತಿದ್ದ ಇನ್ಸ್ಪೆಕ್ಟೆರ್ಗಳಾದ ಲೋಕೇಶ್ ಹಾಗೂ ಅನಿಲ್ ಅವರು ವಾಸ್ತಿವಿಕ ತನಿಖೆ ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿತು.
ದೆಹಲಿಯ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಧಮೇಂದ್ರ ರಾಣಾ ಅವರು, ಕಾಯ್ದೆಯನ್ನು ವಿರೋಧಿಸಿ ಪ್ರತಿಭಟಿಸಿದ ಜನರ ಮೇಲೆಯೇ ಹೆಚ್ಚು ದೂರು ದಾಖಲಾಗಿರೋದು ಏಕಪಕ್ಷೀಯವಾದ ನಡೆ. ತನಿಖೆಯನ್ನು ನ್ಯಾಯಯುತವಾಗಿ ನಡೆಸಿ ಎಂದು ನ್ಯಾಯಾಪೀಠ ಪೊಲೀಸರ ಕಿವಿ ಹಿಂಡಿದೆ. ಇದು ಪೊಲೀಸರು ಏಕಪಕ್ಷೀಯವಾಗಿ ಕೆಲಸ ನಿರ್ವಹಿಸುತ್ತಿದೆ ಎಂಬುವುದಕ್ಕಿರುವ ತಾಜಾ ಉದಾಹರಣೆ. ಇದೇ ವೇಳೆ ಆಸಿಫ್ ಇಕ್ಬಾಲ್ ತನ್ಹಾರಿಗೆ ನ್ಯಾಯಾಲಯ 30 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.