ಹೊಸ ಭೂಸ್ವಾಧೀನ ಕಾಯ್ದೆ ಎಂದು ಕರೆಯಲ್ಪಡುವ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ-2013 ರ ಅಡಿಯಲ್ಲಿ ಬರುವ ಸೂಕ್ತ ಪರಿಹಾರದ ಮತ್ತು ಪಾರದರ್ಶಕತೆಯ ಹಕ್ಕು, ರಾಜ್ಯ ಕಾನೂನುಗಳಾದ ಬಿಡಿಎ ಕಾಯ್ದೆ ಸೇರಿದಂತೆ ಇತರ ಯಾವುದೇ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಪ್ರಾರಂಭಿಸಲಾದ ಸ್ವಾಧೀನಗಳಿಗೆ ಅನ್ವಯಿಸುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಎಚ್ಎಸ್ಆರ್ ಲೇಔಟ್ ರಚನೆಗೆ ಸ್ವಾಧೀನಪಡಿಸಿಕೊಂಡಿರುವ ಅಗರಾ ಗ್ರಾಮದ 20 ಗುಂಟಾ ಭೂಮಿಗೆ ಸಂಬಂಧಿಸಿದಂತೆ ಹೊಸ ಕಾನೂನಿನಡಿಯಲ್ಲಿ ಪರಿಹಾರ ಕೋರಿ ಭೂಮಾಲೀಕರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಮತ್ತು ಎನ್.ಎಸ್.ಸಂಜಯ್ ಗೌಡರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠವು, ರಾಜ್ಯದ ಕಾನೂನಿನಡಿಯಲ್ಲಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ಹೊಸ ಭೂಸ್ವಾಧೀನ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಅರ್ಜಿಯನ್ನು ತಿರಸ್ಕರಿಸಿದೆ.