ಜಾರ್ಖಂಡ್ ನಲ್ಲಿ ನಡೆದ ಸಂಘರ್ಷ ಯಾತ್ರೆಯು ಹೇಮಂತ್ ಸೊರೇನ್ ಅವರನ್ನು ಮುನ್ನೆಲೆಗೆ ತಂದು ಉತ್ತಮ ನಾಯಕನಾಗಿಸುವುದರಲ್ಲಿ ತಂಡದ ಪ್ರಯತ್ನ ಸಾಕಷ್ಟು ಕೆಲಸ ಮಾಡಿ ಯಶಸ್ವಿಯೂ ಆಗಿದೆ.
ಜೆಎಂಎಂನ ಜನಪ್ರಿಯತೆ ಹೆಚ್ಚಾಗಲು ಹೇಮಂತ್ ಸೊರೇನ್ ಅವರ ಪಾತ್ರ ಪ್ರಮುಖವಾಗಿದೆ. ಅವರಷ್ಟೇ ಪ್ರಮುಖ ಪಾತ್ರ ವಹಿಸಿದವರೆಂದರೆ ಅವರ ಬೆನ್ನಿಗೆ ನಿಂತಿದ್ದ ಪರಿಣತರು ಮತ್ತು ಯುವಕರ ಪಡೆ. ಇವರೆಲ್ಲರೂ ಸೇರಿಕೊಂಡು 2018 ರಿಂದ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದ ಹೇಮಂತ್ ಸೊರೇನ್ ಅವರ ಕೈಬಲಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೆಹಲಿ ಮೂಲದ 12 ಯುವಕರ ಪಡೆಯು 2018 ರ ಮಾರ್ಚ್ ನಿಂದ ಹೇಮಂತ್ ಸೊರೇನ್ ರನ್ನು ಪ್ರೊಜೆಕ್ಟ್ ಮಾಡಲು ಆರಂಭಿಸಿತು. ಸೊರೇನ್ ಅವರನ್ನು ಸಾರ್ವಜನಿಕ ನಾಯಕರನ್ನಾಗಿ ಮಾಡುವುದು ಈ ತಂಡದ ಉದ್ದೇಶವಾಗಿತ್ತು. ಹಿಂದುಳಿದ ವರ್ಗಗಳ ಕಲ್ಯಾಣ, ಸಾಮಾಜಿಕ ನ್ಯಾಯಕ್ಕಾಗಿ ನಡೆದ ಹೋರಾಟಗಳಲ್ಲಿ ಸೊರೇನ್ ಅವರನ್ನು ಮುನ್ನಲೆಗೆ ತರುವಲ್ಲಿ ತಂಡವು ಯಶಸ್ವಿಯಾಗಿದೆ.
ಈ ತಂಡದಲ್ಲಿ ಸಂವಹನ ಮತ್ತು ಸಲಹಾ ತಜ್ಞರಿದ್ದು, ಆಕ್ಸ್ ಫರ್ಡ್, ಸಸೆಕ್ಸ್, ಎಸೆಕ್ಸ್ (ವಿಶ್ವವಿದ್ಯಾಲಯಗಳು) ಮತ್ತು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್ಎಸ್) ನಂತಹ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಯುವಕರು ಈ ತಂಡದಲ್ಲಿದ್ದರು. ಈ ತಂಡವು ಸಾರ್ವಜನಿಕ ನೀತಿ ನಿರೂಪಣೆ, ಸಂವಹನ ರೂಪಿಸುವಲ್ಲಿ ನಿಷ್ಣಾತವಾಗಿದೆ. ಈ ಮೂಲಕ ತಂಡವು ರಾಜ್ಯಾದ್ಯಂತ ತಿರುಗಾಟ ನಡೆಸಿ ಅಲ್ಲಿನ ಜನಸಾಮಾನ್ಯರ ಸ್ಥಿತಿಗತಿಯನ್ನು ಆಮೂಲಾಗ್ರವಾಗಿ ಅಧ್ಯಯನ ನಡೆಸಿ ಅದಕ್ಕೆ ತಕ್ಕಂತೆ ವಿಚಾರಗಳನ್ನು ಮಂಡಿಸುವ ಸಾಮರ್ಥ್ಯವನ್ನು ಸೊರೇನ್ ಅವರಿಗೆ ತುಂಬುವ ಕೆಲಸ ಮಾಡಿತು. ಈ ಮೂಲಕ 360° ಸಂವಹನ ನಡೆಸುವುದು ಮತ್ತು ಸಂಘಟನಾ ಸಾಮರ್ಥ್ಯವನ್ನು ಬಲವರ್ಧನೆಗೊಳಿಸುವಲ್ಲಿ ಯಶಸ್ವಿಯಾಯಿತು.

ಸ್ಥಳೀಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಪರಿಹರಿಸುವ ಮೂಲಕ ಹೇಮಂತ್ ಸೊರೇನ್ ಅವರನ್ನು ಜಾರ್ಖಂಡ್‌ನಾದ್ಯಂತದ ನಾಯಕನನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದೆವು. ಸೊರೇನ್ ಅವರನ್ನು ಕೇವಲ ಬುಡಕಟ್ಟು ಜನಾಂಗದ ನಾಯಕನನ್ನಾಗಿ ಮಾತ್ರವಲ್ಲ, ವಿನಯಶೀಲತೆ ಮತ್ತು ಸ್ನೇಹಪರತೆಯಿಂದ ಜನಪರವಾದ ನಾಯಕನನ್ನಾಗಿ ರೂಪಿಸುವ ಮೂಲಕ ಮುಖ್ಯಮಂತ್ರಿಯಾಗಿದ್ದ ರಘುಬರ್ ದಾಸ್‌ರ ದುರಹಂಕಾರ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಯುದ್ಧ ಸಾರುವಂತೆ ಸೊರೇನ್ ಅವರನ್ನು ತಯಾರು ಮಾಡಿತ್ತು ಈ ಗುಂಪು.
ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ಧ ಜೆಎಂಎಂ ಕೈಗೊಂಡಿದ್ದ ಸಂಘರ್ಷ ಯಾತ್ರೆಯಲ್ಲಿ ಸೊರೇನ್ ಅವರನ್ನು ಇಡೀ ಜಾರ್ಖಂಡ್ ನ ನಾಯಕನನ್ನಾಗಿಸುವಲ್ಲಿ ಯಶಸ್ವಿಯಾಯಿತು. ಈ ಹಿನ್ನೆಲೆಯಲ್ಲಿದ್ದ ಯುವಕರ ಪಡೆಯೇ ಸೊರೇನ್ ನಿರಾಯಸವಾಗಿ ಜಯ ಸಾಧಿಸಿ ತಮ್ಮ ಪಕ್ಷವನ್ನು ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಸೊರೇನ್ ಅವರನ್ನು ಮುಖ್ಯಮಂತ್ರಿಯಾಗಿ ನೋಡಲು ಕಾರಣವಾಯಿತು.
ಇದನ್ನು ಒಪ್ಪಿಕೊಳ್ಳುವ ಜೆಎಂಎಂನ ವಕ್ತಾರರಾದ ಸುಪ್ರಿಯೋ ಭಟ್ಟಾಚಾರ್ಯ ಅವರು, ನಮಗೆ ಸಂಘರ್ಷ ಯಾತ್ರೆಯು ಒಂದು ನಿರ್ಣಾಯಕ ಹಂತವಾಗಿತ್ತು. ಈ ಸಂಘರ್ಷ ಯಾತ್ರೆಯು ಜಾರ್ಖಂಡ್ ರಾಜ್ಯಾದ್ಯಂತ 2018 ರ ಸೆಪ್ಟಂಬರ್ ನಿಂದ 2019 ರ ಮಾರ್ಚ್ ವರೆಗೆ ಐದು ಹಂತಗಳಲ್ಲಿ ನಡೆಯಿತು. ಇದರಿಂದ ರಾಜ್ಯದ ಮೂಲೆಮೂಲೆಗಳಲ್ಲಿ ಹೇಮಂತ್ ಸೊರೇನ್ ಅವರನ್ನು ಪಕ್ಷದ ನಾಯಕನನ್ನಾಗಿ ಬಿಂಬಿಸಲು ಸಾಧ್ಯವಾಯಿತು.
ಈ ಯುವಕರ ಪಡೆಯು ಸಾಮಾಜಿಕ ಮಾಧ್ಯಮದಲ್ಲಿ ಪಕ್ಷದ ಉಪಸ್ಥಿತಿಯನ್ನು ಸಾಕಾರಗೊಳಿಸಿತಲ್ಲದೇ ಅದು ಆಕ್ಟೀವ್ ಆಗಿ ಇರುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ರಾಜ್ಯದ ಯುವ ಮತದಾರರನ್ನು ತಲುಪಲು ಸಾಧ್ಯವಾಗಿದೆ.

ಸಂಘರ್ಷ ಯಾತ್ರೆಯಲ್ಲಿ ಸಮಸ್ಯೆಗಳನ್ನು ಎತ್ತಿ ತೋರಿಸುತ್ತಿದ್ದರೆ, ಅದಕ್ಕೆ ಪರಿಹಾರ ನೀಡುವುದರ ಕುರಿತು ಚರ್ಚೆ ನಡೆಯುತ್ತಿತ್ತು. ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಸಾರ್ವಜನಿಕ ಸಭೆಗಳು ಮತ್ತು ರ್ಯಾಲಿಗಳು ನೇರ ಪ್ರಸಾರವಾಗುತ್ತಿದ್ದವು. ರಾಜ್ಯ ನೀತಿಗಳ ಕುರಿತು ಪ್ರಭಾವಿತ ಮಂದಿಯ ಜೊತೆಗೆ ಎಲ್ಲೆಡೆ ಪ್ರತಿದಿನ ಸಂಜೆ ಸಭೆಗಳು ನಡೆಯುತ್ತಿದ್ದವು. ಅಲ್ಲದೆ, ಯುವ ಸಂವಾದದ ಮೂಲಕ ಯುವಕರೊಂದಿಗೆ ಸಭೆಗಳು ನಡೆಯುತ್ತಿದ್ದವು.
ಕಳೆದ ಲೋಕಸಭಾ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಎಂಎಂ-ಆರ್‌ಜೆಡಿ-ಜೆವಿಎಂ ಮೈತ್ರಿಕೂಟದ ಕೇವಲ ಇಬ್ಬರು ಅಭ್ಯರ್ಥಿಗಳು ಗೆಲುವು ಸಾಧಿಸಲು ಸಾಧ್ಯವಾಯಿತು. ಈ ಹೊಡೆತಕ್ಕೆ ಯುವಕರ ಪಡೆ ತಕ್ಕ ಪರಿಹಾರವನ್ನೂ ಕಂಡುಕೊಂಡಿತು. ಈ ಮೂಲಕ ಹೇಮಥ್ ಸೊರೇನ್ ಅವರ ಭಾಷಣಗಳನ್ನು ಸಾರ್ವಜನಿಕ ಪರವಾದ ರೀತಿಯಲ್ಲಿ ಸಿದ್ಧಪಡಿಸಿ ಅವುಗಳನ್ನು ಸಾರ್ವಜನಿಕರ ಮನಸಿಗೆ ನಾಟುವಂತೆ ಮಾಡಿದ್ದರಲ್ಲಿ ಈ ಯುವಕರ ಪಡೆ ಯಶಸ್ವಿಯಾಗಿದೆ. ಈ ಕಾರಣದಿಂದಾಗಿಯೇ ಹೇಮಂತ್ ಸೊರೇನ್ ಜನನಾಯಕನಾಗಿ ಬೆಳೆದರು.
ಲೋಕಸಭೆ ಚುನಾವಣೆ ಆದ ಬಳಿಕ ಪ್ರಸ್ತಾಪವಾಗುತ್ತಿದ್ದ ಪ್ರತಿಯೊಂದು ಸಮಸ್ಯೆಗೂ ದೂರದೃಷ್ಟಿ ಆಧಾರಿತ ಪರಿಹಾರಗಳನ್ನು ಕಂಡುಕೊಳ್ಳಲಾಗುತ್ತಿತ್ತು. ಪರಿಹಾರಗಳನ್ನು ರೂಪಿಸುವಲ್ಲಿ ಈ ಬ್ಯಾಕ್ ರೂಂ ಟೀಂ ಪ್ರಮುಖ ಪಾತ್ರ ವಹಿಸಿತ್ತು.
ಲೋಕಸಭೆ ಚುನಾವಣೆ ನಂತರ ಪ್ರತಿಯೊಂದು ಸಂವಹನದಲ್ಲಿ, ನಾವು ಪ್ರತಿಯೊಂದು ವಿಷಯವನ್ನು ಗಮನದಲ್ಲಿಟ್ಟುಕೊಂಡು, ಸಮಸ್ಯೆಗಳಿಗೆ ಪರಿಹಾರ ಏನೆಂಬುದನ್ನು ಉಲ್ಲೇಖಿಸಿದ್ದೆವು. ಉದಾಹರಣೆಗೆ ಪಿಎಂ ಆವಾಸ್ ಯೋಜನೆ ಜನರಿಗೆ ಸರ್ಮಥವಾದುದಲ್ಲ ಎಂದು ಉಲ್ಲೇಖಿಸಿದರೆ, ಹೇಮಂತ್ ಅವರು ವಸತಿ ವಂಚಿತರಿಗೆ 3 ಲಕ್ಷ ರೂಪಾಯಿ ಒಳಗೊಂಡ ಮನೆಯನ್ನು ನಿರ್ಮಿಸಿ ಕೊಡುವ ಭರವಸೆಯನ್ನು ನೀಡುತ್ತಿದ್ದರು. ಇದರ ಜೊತೆಗೆ ನಾವು 10 ಅಂಶಗಳ ಕಾರ್ಯಸೂಚಿಗಳನ್ನು ಸಹ ಸಿದ್ಧಪಡಿಸಿದ್ದೆವು. ಈ ಯಾತ್ರೆಯು 2019 ಆಗಸ್ಟ್ ಅಂತ್ಯದಿಂದ, ಅಕ್ಟೋಬರ್‌ವರೆಗೆ ರಾಂಚಿಯಲ್ಲಿ ಬೃಹತ್ ಬದ್ಲಾವ್ ರ್ಯಾಲಿಯೊಂದಿಗೆ ಕೊನೆಗೊಂಡಿತು. ಇವೆಲ್ಲವೂ ಸಂಪೂರ್ಣ ಸಂವಹನ ವಿಧಾನದಿಂದ, ನಮ್ರತೆ, ಸರಳತೆ, ಎಲ್ಲರೊಂದಿಗೆ ಬೆರೆಯುವ ಸಾಮರ್ಥ್ಯದಿಂದ, ಎಲ್ಲರ ಸಮಸ್ಯೆಗಳನ್ನು ಹಂಚಿಕೊಂಡು ಮತ್ತು ಸ್ಥಳೀಯವಾಗಿ, ನೀತಿ-ಸಂಬಂಧಿತವಾಗಿ ಮಾನವೀಯ ದೃಷ್ಟಿಯಿಂದ ಕಾಣವುದಕ್ಕೆ ಈ ಯಾತ್ರೆ ದಾರಿ ಮಾಡಿ ಕೊಟ್ಟಿತು ಎನ್ನುತ್ತಾರೆ ಯುವಪಡೆಯ ಓರ್ವ ಸದಸ್ಯ.

ಜೆಎಂಎಂನ ಸಾಮಾಜಿಕ ಮಾಧ್ಯದಲ್ಲಿ ತೊಡಗಲು 2018ರಲ್ಲಿ ಸ್ವಯಂಸೇವಕ ತಂಡವನ್ನು ರಚಿಸಿ ತರಬೇತಿ ನೀಡಲಾಯಿತು. ಮತ್ತು ಆಧಾರಗಳನ್ನಿಟ್ಟುಕೊಂಡು ಜಿಲ್ಲೆಗಳಲ್ಲಿನ ಸ್ಥಳೀಯ ಬಿಜೆಪಿ ಸಂಘಟನೆಗಳನ್ನು ಎದುರಿಸಲು ಸಾಧ್ಯವಾಯಿತು.
ಈ ಯುವಪಡೆಯ ಪ್ರೇರಣೆಯಿಂದಲೇ ಹೇಮಂತ್ ಸೊರೇನ್ ಅವರು 28 ದಿನಗಳಲ್ಲಿ 165 ರ್ಯಾಲಿಗಳನ್ನು ರಾಜ್ಯಾದ್ಯಂತ ಮಾಡಿದರು. ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿಯೂ ಎರಡೆರಡು ಬಾರಿ ಈ ರ್ಯಾಲಿಯನ್ನು ಆಯೋಜಿಸಲಾಗಿತ್ತು ಮತ್ತು ರ್ಯಾಲಿಯ ನಂತರದಲ್ಲಿ ಹಲವಾರು ಸ್ಥಳೀಯ ಮಟ್ಟದ ಸಭೆಗಳನ್ನು ನಡೆಸಲಾಗಿತ್ತು.
ತಂಡವು ಹಲವಾರು ನಾಗರಿಕ ಸಮಾಜ ಸಂಸ್ಥೆಗಳೊಂದಿಗೆ, ಕಾರ್ಯಕರ್ತರೊಂದಿಗೆ, ಸರ್ಕಾರಿ, ಕಾರ್ಮಿಕ ಸಂಘಗಳೊಂದಿಗೆ ಮತ್ತು ಇನ್ನಿತರ ಸಂಘಗಳೊಂದಿಗೆ ಸಭೆಗಳನ್ನು ಆಯೋಜಿಸಿದ್ದೆವು. ಅವರ ಬೇಡಿಕೆಗಳನ್ನೆಲ್ಲಾ ಪಟ್ಟಿ ಮಾಡಿ, ಪರಿಷ್ಕರಿಸಿ, ಚರ್ಚಿಸಿ ಪ್ರಣಾಳಿಕೆಯಲ್ಲಿ ಸೇರಿಸಲಾಗಿತ್ತು. ಜೆಎಂಎಂನ ನಾಯಕರ ಭಾಷಣಗಳು ಇಡೀ ಚುನಾವಣಾ ಪ್ರಚಾರದಲ್ಲಿ ಹೇಮಂತ್ ಸೊರೇನ್ ಅವರ ಭಾಷಣಗಳು ಜಾರ್ಖಂಡ್‌ನ ಸ್ಥಳೀಯ ವಿಷಯಗಳ ಮೇಲೆ ಕೇಂದ್ರೀಕೃತವಾಗಿದ್ದದ್ದು ಜೆಎಂಎಂಗೆ ಪ್ಲಸ್ ಪಾಯಿಂಟ್ ಆಗಿ ಪರಿಣಮಿಸಿತು.