Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಹಳೆಯ ಧಾರವಾಡದ ರೈಲು ನಿಲ್ದಾಣ, ಈಗ ಬರಿ ನೆನಪು ಮಾತ್ರ

ಹಳೆಯ ಧಾರವಾಡದ ರೈಲು ನಿಲ್ದಾಣ, ಈಗ ಬರಿ ನೆನಪು ಮಾತ್ರ
ಹಳೆಯ ಧಾರವಾಡದ ರೈಲು ನಿಲ್ದಾಣ

November 27, 2019
Share on FacebookShare on Twitter

ಆ ನಿಲ್ದಾಣವೇ ಹಾಗಿತ್ತು: ಹಲವು ನೆನಪಿನ ಬುತ್ತಿಗಳ ಆಗರ ಅಲ್ಲಿತ್ತು. ಧಾರವಾಡದ ಹಳೆಯ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಹಳೆಯ ಕಟ್ಟಡ ತೆರವುಗೊಳಸಿ ಹೊಸ ಕಟ್ಟಡ ಕಟ್ಟಲಾಗುತ್ತಿದೆ. ಪ್ರತಿ ವರ್ಷ ಈ ಊರಿಗೆ ಕಲಿಯಲು ಸಹಸ್ರ ಸಂಖ್ಯೆಯಲ್ಲಿ ರಾಜ್ಯದ ನಾನಾ ಮೂಲೆಯಿಂದ ಆಗಮಿಸುತ್ತಿದ್ದ ವಿದ್ಯಾರ್ಥಿಗಳು ಮೊದಲು ನೋಡುತ್ತಿದ್ದುದು ಇದೇ ರೈಲು ನಿಲ್ದಾಣ. ಇಲ್ಲಿ ಪ್ರಥಮಾಗಮನದ ಖುಷಿ, ಕಲಿತು ಹೊರಟನಂತರದ ಬೇಸರ, ಸಾಧನೆ ಮಾಡಿದ, ಕಲಿತ ಸುಂದರ ಊರು ಎಂಬ ಅಭಿಮಾನ ಹೀಗೆ ಹತ್ತು ಹಲವು ಸವಿ ಸವಿ ನೆನಪುಗಳಿವೆ…..

ಹೆಚ್ಚು ಓದಿದ ಸ್ಟೋರಿಗಳು

29 ಮತ್ತು 30ರಂದು ಮುಂಬೈ ಲೋಕಮಾನ್ಯ ತಿಲಕ್ ಮಂಗಳೂರು ಜಂಕ್ಷನ್ ರೈಲಿಗೆ ಹೆಚ್ಚುವರಿ ಕೋಚ್

ಕರ್ನಾಟಕದ ಕಡೆಗೆ ಬರುವ ತಮಿಳುನಾಡು ಬಸ್‌ಗಳ ಸಂಚಾರ ಸ್ಥಗಿತ!

ರ‍್ಯಾಲಿ ನಡೆಸಿದರೆ ಬಂಧಿಸುವ ಸರ್ಕಾರದ ಎಚ್ಚರಿಕೆಗೆ ಹೆದರಲ್ಲ: ಕುರುಬೂರು ಶಾಂತಕುಮಾರ್, ರೈತ ನಾಯಕ

ಅದು ಧಾರವಾಡದ ರೈಲು ನಿಲ್ದಾಣದ ಕಟ್ಟಡ. 1924 ರಲ್ಲಿ ಬ್ರಿಟೀಷರು ಕಟ್ಟಿದ್ದು. ಅದರ ಮೇಲಿರುವ ಗಡಿಯಾರವೇ ಹಲವರ ಪಾಲಿಗೆ ವಾಚು. 1924 ರ ನಂತರ ಹಳೆಯ ಕಟ್ಟಡ್ಕಕೆ ಹೊಸ ಸ್ಪರ್ಶ ನೀಡಿದ್ದರೂ ಕಟ್ಡ ಕೆಡವಿರಲಿಲ್ಲ. ಅದರ ಮುಂದೆ ಹಾಗೂ ಅಕ್ಕ ಪಕ್ಕ ಹಲವಾರು ನಿವೃತ್ತರು ತಮ್ಮ ತಮ್ಮ ಜೀವನದ ಸಿಹಿ ಕಹಿ ಕ್ಷಣಗಳನ್ನು ಮೆಲುಕುಗಳನ್ನು ಹಾಕುತ್ತ ಕೂಡುತ್ತಿದ್ದರು. ಕಟ್ಟಡದ ಪಾರಂಪರಿಕ ವಿನ್ಯಾಸ, ಧಾರವಾಡದ ಜಿಟಿಜಿಟಿ ಮಳೆ, ತಂಪಾದ ಇಳೆ, ಆ ಇಳೆ ಸಮಯ… ಇನ್ನೂ ಮನದಲ್ಲಿ ಅಚ್ಚು ಮೂಡಿದೆ.

ಹೊಸತು, ನೂತನ ಎಂಬಿತ್ಯಾದಿ ಕಾರಣಗಳಿಂದ ಆ ಕಟ್ಟಡ 90 ವರ್ಷಗಳ ನಂತರ ಕೆಡವಲಾಗುತ್ತಿದೆ. ಇನ್ನೂ ಅದು ಬರಿ ನೆನಪು ಮಾತ್ರ. ವಿಮಾನ ನಿಲ್ದಾಣ ರೀತಿಯಲ್ಲಿ ನೂತನ ಕಟ್ಟಡ ವನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು ಖುಷಿ ವಿಷಯವೇ ಸರಿ. ಆದರೆ ಧಾರವಾಡದ ಸಹಸ್ರಾರು ಸಂಖ್ಯೆಯ ಜನರಿಗೆ ಇಂದು ತಮ್ಮ ಒಲವಿನ ವಸ್ತುವನ್ನೊಂದು ಕಳೆದುಕೊಂಡ ಅನುಭವ. ಆ ಕಟ್ಟಡದೊಂದಿಗೆ ಅವರಿಗೆಲ್ಲ ಎಮೋಷನಲ್ ಅಟ್ಯಾಚ್ ಮೆಂಟ್ ಇದೆ. ಹಲವಾರು ನೆನಪಿನ ತಳುಕುಗಳಿವೆ. ಬೇಸರವಾದಾಗ ರೈಲುಗಳನ್ನು ನೋಡುತ್ತ ಕುಳಿತಿದ್ದು, ಪಾಸಾದ ಸ್ನೇಹಿತರ ಜತೆಗೆ ಇಲ್ಲಿ ಸಂಭ್ರಮಿಸಿದ್ದು. ಅದೇ ನೌಕರಿ ಸಿಕ್ಕಾಗ ಇಲ್ಲಿದ್ದ ಹಿರಿಯರ ಆಶೀರ್ವಾದ ಪಡೆದಿದ್ದು. ನಿವೃತ್ತರಾದಾಗ ಇಲ್ಲಿ ಸ್ನೇಹಿತರ ಸಂಘ ಬೆಳೆದಿದ್ದು ಹೀಗೆ ಹತ್ತು ಹಲವಾರು ಸಂಗತಿಗಳು ಮನದಲ್ಲಿ ಸುಳಿದು ಹೋಗುವಂತ ಜಾಗವಿದು.

ಈ ಜಾಗವೇ ಅಂತದ್ದು. ಸುತ್ತಲೂ ವಿಶಾಲವಾದ ಗಿಡಮರಗಳು, ರೈಲು ಬಂದಾಗ ಮಾತ್ರ ಸದ್ದು. ಉಳಿದ ಸಮಯ ಹಕ್ಕಿಪಿಕ್ಕಿಗಳ ಚಿಲಿಪಿಲಿ, ಸಂಜೆಯ ಹರಟೆ ಇದಕ್ಕಾಗಿ ಇಲ್ಲಿ ಒಂದು ಹಲವು ಸ್ನೇಹಿತರ ಗುಂಪುಗಳಿವೆ. ಸಮಯ ಬದಲಾದಂತೆ ಸದಸ್ಯರು ಬದಲಾದರೆ ಹೊರತು ನಿಲ್ದಾಣದ ಎದುರಿನ ಕಟ್ಟೆಗಳು ಮಾತ್ರ ಖಾಲಿ ಇರುತ್ತಿರಲಿಲ್ಲ. ಈ ನಿಲ್ದಾಣದ ಹಳಿಯ ಹಾದಿ ಹಿಡಿದು ಮುಂದೆ ಸಾಗಿದರೆ ಧಾರವಾಡ ವಿಶ್ವವಿದ್ಯಾಲಯ. ನಿಲ್ದಾಣದ ಎದುರಿಗೆ ಬಂದು ಎಡಕ್ಕೆ ಸಾಗಿದರೆ ಕರ್ನಾಟಕ ಕಾಲೇಜು. ಪರ ಊರಿನವರು ಇಲ್ಲಿ ಬಂದರೆ ಇಲ್ಲಿಯವರಾಗಿಬಿಡುತ್ತಿದ್ದರು. ಈಗಿನ್ನೂ ಧಾರವಾಡ ಬದಲಾಗಿದೆ. ಮೊದಲು ಯಾವಾಗಲೂ ಬಿಡದೇ ಮಳೆ ಸುರಿಯುತ್ತಿತ್ತು. ಅಲ್ಲಲ್ಲಿ ಹಸಿರು, ಅಲ್ಲಲ್ಲಿ ಕೆಸರು…ಒಟ್ಟಾರೆ ಈ ಪರಿಸರ ಅದ್ಭುತ….

ಏನೇನಾಗುತ್ತೇ ಇಲ್ಲಿ?

ಈಗಾಗಲೇ ಕಟ್ಟಡದಲ್ಲಿರುವ ಟೆಲ್ಲರ್ ಮಶಿನ್ ಹಾಗೂ ಟಿಕೆಟ್ ಕೌಂಟರ್ ಅನ್ನು ಪಕ್ಕದ ಹೊಸ ಕಟ್ಟಡದಲ್ಲಿ ಸ್ಥಳಾಂತರಿಸಲಾಗಿದೆ. ಇಲ್ಲಿ ಸಂಪೂರ್ಣ ನೂತನ ಕಟ್ಟಡ ಬರಲಿದ್ದು, ಇದು ವಿಮಾನ ನಿಲ್ದಾಣದ ಲಾಂಜ್ ಹಾಗೆ ಇರಲಿದೆ. ಅಧುನಿಕತೆ ಸ್ಪರ್ಶ ಇಲ್ಲಿರಲಿದ್ದು ಅನೇಕ ಅಂಗಡಿಗಳು ಬರಲಿವೆ. ಸಂಪೂರ್ಣ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರಲಿದ್ದು, ಸುರಕ್ಷತೆಗೆ ಹೆಚ್ಚು ಒತ್ತು ನೀಡಲಾಗುವುದು. ಹೆಚ್ಚು ಹೆಚ್ಚು ಪ್ರಯಾಣಿಕರು ಇಲ್ಲಿಗೆ ಬರುತ್ತಿದ್ದು ಅದಕ್ಕೆ ತಕ್ಕಂತೆ ಟಿಕೆಟ್ ಕೌಂಟರ್ ಗಳು ಹಾಗೂ ಇನ್ನಿತರ ನೂತನ ವ್ಯವಸ್ಥೆಗಳು ಅಗತ್ಯಕ್ಕೆ ತಕ್ಕಂತೆ ಬದಲಾಗುತ್ತಿವೆ.

ಧಾರವಾಡ ರೈಲು ನಿಲ್ದಾಣವನ್ನು ಆಧುನೀಕರಣಗೊಳಿಸಲು – ಹೊಸ ನಿಲ್ದಾಣದ ಕಟ್ಟಡ, ರೈಲು ನಿಲ್ದಾಣದ ಪ್ಲಾಟ್ ಫಾರಂ ನೆಲಹಾಸು ಆಧುನೀಕರಣ ಕಾಮಗಾರಿ, ಸರ್ಕ್ಯುಲೇಟಿಂಗ್ ಪ್ರದೇಶ, ಪಾರ್ಕಿಂಗ್ ಪ್ರದೇಶ ಮೊದಲಾದವುಗಳ ಸುಧಾರಣೆ, ನಿಲ್ದಾಣ ಸಂಪರ್ಕಿಸುವ ರಸ್ತೆಗಳ ಕಾಮಗಾರಿ, ಎರಡನೇ ಪಾದಚಾರಿ ಮೇಲ್ಸೇತುವೆಯ ನಿರ್ಮಾಣ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆಯನ್ನು ನೆರವೇರಿಸಿ ಚಾಲನೆ ನೀಡಲಾಗಿದೆ.

ಕೆ. ರಂಗನಾಥ, ನಿವೃತ್ತ ಬಿಎಸ್ ಎನ್ ಎಲ್ ಅಧಿಕಾರಿಯೊಬ್ಬರು ಹೇಳಿದ್ದು, “ಧಾರವಾಡದ ಈ ರೈಲು ನಿಲ್ದಾಣ ಹಲವರ ನೆನಪಿನ ಬುತ್ತಿ. ಇಂದು ಅದಿಲ್ಲ ಅನ್ನುವುದೇ ನಿಜಕ್ಕೂ ಬೇಸರ ಮೂಡಿಸಿದೆ. ಇರಲಿ ಬದಲಾವಣೇ ಜಗದ ನಿಯಮ. ಆದರೆ ಈ ನಿಲ್ದಾಣ ಬೇರೆ ನಿಲ್ದಾಣಗಳಿಗಿಂತ ಭಿನ್ನ. ಇಲ್ಲಿ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಬಂದು ಕಲಿತು ಹೋದವರಿದ್ದಾರೆ. ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಬರುತ್ತಲೇ ಇರುತ್ತಾರೆ. ಪ್ರತಿಯೊಬ್ಬರ ಜೀವನದಲ್ಲೂ ಈ ನಿಲ್ದಾಣ ಒಂದಿಲ್ಲೊಂದು ನೆನಪು ನೀಡುತ್ತದೆ”.

ಜಯಶ್ರೀ ಅರುಣಕುಮಾರ್ ಬೆಂಗಳೂರಿನ ಶಿಕ್ಷಕರು ಹೇಳಿದ್ದು ಹೀಗೆ, “ನಾವೆಲ್ಲ ಗೆಳತಿಯರು ವಿಶ್ವವಿದ್ಯಾಲಯ ಕ್ಲಾಸ್ ಗಳು ಮುಗಿದ ಮೇಲೆ ಸಂಜೆ ಚುರುಮರಿ ಚೂಡಾದೊಂದಿಗೆ ಧಾರವಾಡದ ನಿಲ್ದಾಣಕ್ಕೆ ಹೋಗುತ್ತಿದ್ದೆವು. ಪ್ರತಿದಿನ ಎರಡು ತಾಸು ಅಲ್ಲಿ ಹರಟುತ್ತ ಸಮಯ ಕಳೆಯುತ್ತಿದ್ದೆವು. ಆಗೆಲ್ಲ ಪ್ಲಾಟಫಾರ್ಮ್ ಟಿಕೇಟ್ ಇದ್ದರೂ ನಮಗೆಲ್ಲ ಖಾಯಂ ಗಿರಾಕಿಯಂತೆ ಟಿಸಿಗಳೂ ತಡೆಯುತ್ತಿರಲಿಲ್ಲ. ಇಂದು ರೈಲು ನಿಲ್ದಾಣದ ಪಾರಂಪರಿಕ ಕಟ್ಟಡ ಇಲ್ಲ ಎಂದು ಕೇಳಿದಾಗ ಮನದ ಮೂಲೆಯಲ್ಲಿದ್ದ ಅದೆಷ್ಟೋ ನೆನಪಿನ ಸುರಳಿಗಳು ಬಿಚ್ಚಿ ಎಕ್ಸ್ ಪ್ರೆಸ್ ರೈಲಿನಂತೆ ಕ್ಷಣಮಾತ್ರದಲ್ಲಿ ಹಾದು ಹೋದವು”.

RS 500
RS 1500

SCAN HERE

Pratidhvani Youtube

«
Prev
1
/
5498
Next
»
loading
play
Bengaluru Bandh: ಫ್ರೀಡಂಪಾರ್ಕ್​ನಲ್ಲಿ ಕನ್ನಡ ಪರ ಸಂಘಟನೆಗಳ ಧರಣಿ!
play
D Boss Darshan: ದರ್ಶನ್ ಭಾಷಣದ ವೇಳೆ ಸುದೀಪ್ ಅಂತಾ ಹೇಳ್ತಿದ್ದಂತೆ ಹುಚ್ಚೆದ್ದು ಕುಣಿದ ಫ್ಯಾನ್ಸ್ | D
«
Prev
1
/
5498
Next
»
loading

don't miss it !

ಎಲ್ಲೆಂದರಲ್ಲಿ ತ್ಯಾಜ್ಯ  ಎಸೆಯುವವರಿಗೆ ಬಿಬಿಎಂಪಿ ಖಡಕ್ ಎಚ್ಚರಿಕೆ!
Top Story

ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರಿಗೆ ಬಿಬಿಎಂಪಿ ಖಡಕ್ ಎಚ್ಚರಿಕೆ!

by ಲಿಖಿತ್‌ ರೈ
September 20, 2023
ಬಿಜೆಪಿ ಜೆಡಿಎಸ್ ಮೈತ್ರಿ ಹೆಚ್‌ ಡಿಕೆ ಮತ್ತು ಅಮಿತ್ ಶಾ ಮಧ್ಯೆ ಮಾತುಕತೆ ಅಂತಿಮ
Top Story

ಬಿಜೆಪಿ ಜೆಡಿಎಸ್ ಮೈತ್ರಿ ಹೆಚ್‌ ಡಿಕೆ ಮತ್ತು ಅಮಿತ್ ಶಾ ಮಧ್ಯೆ ಮಾತುಕತೆ ಅಂತಿಮ

by ಪ್ರತಿಧ್ವನಿ
September 22, 2023
ಮುಸ್ಲಿಂ ಸಮುದಾಯ ಮತ ಕೊಡಲಿಲ್ಲ ಎಂದು ಜೆಡಿಎಸ್ ಶಾಸಕರು ಬಹಿರಂಗವಾಗಿ ಹೇಳಲಿ: ಜಮೀರ್ ಅಹಮದ್ ಖಾನ್   
Top Story

ಮುಸ್ಲಿಂ ಸಮುದಾಯ ಮತ ಕೊಡಲಿಲ್ಲ ಎಂದು ಜೆಡಿಎಸ್ ಶಾಸಕರು ಬಹಿರಂಗವಾಗಿ ಹೇಳಲಿ: ಜಮೀರ್ ಅಹಮದ್ ಖಾನ್   

by ಪ್ರತಿಧ್ವನಿ
September 24, 2023
ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿ: ಸಂತೋಷ್ ಲಾಡ್
Top Story

ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ಶಕ್ತಿ: ಸಂತೋಷ್ ಲಾಡ್

by ಪ್ರತಿಧ್ವನಿ
September 20, 2023
ಕುತೂಹಲ ಹೆಚ್ಚಿಸಿದ ವಿಜಯ್ ರಾಘವೇಂದ್ರ ಹಾಗೂ ಸೋನು ಗೌಡ ಜೋಡಿಯ ಮರೀಚಿ ಸಿನಿಮಾದ ಟೀಸರ್..
Top Story

ಕುತೂಹಲ ಹೆಚ್ಚಿಸಿದ ವಿಜಯ್ ರಾಘವೇಂದ್ರ ಹಾಗೂ ಸೋನು ಗೌಡ ಜೋಡಿಯ ಮರೀಚಿ ಸಿನಿಮಾದ ಟೀಸರ್..

by ಪ್ರತಿಧ್ವನಿ
September 23, 2023
Next Post
ಯಶವಂತಪುರ ಉಪಚುನಾವಣೆ ಇಲ್ಲಿದೆ ಜನಮತ

ಯಶವಂತಪುರ ಉಪಚುನಾವಣೆ ಇಲ್ಲಿದೆ ಜನಮತ

ಬಿಜೆಪಿಯಲ್ಲಿ ಯಡಿಯೂರಪ್ಪ ಹಿಡಿತ ಬಲಪಡಿಸಿದ ಮಹಾರಾಷ್ಟ್ರ ವಿದ್ಯಮಾನ

ಬಿಜೆಪಿಯಲ್ಲಿ ಯಡಿಯೂರಪ್ಪ ಹಿಡಿತ ಬಲಪಡಿಸಿದ ಮಹಾರಾಷ್ಟ್ರ ವಿದ್ಯಮಾನ

ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವ ಹೊಸಕೋಟೆ ಕ್ಷೇತ್ರದ ಮತದಾರರ ಅಭಿಮತ  

ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವ ಹೊಸಕೋಟೆ ಕ್ಷೇತ್ರದ ಮತದಾರರ ಅಭಿಮತ  

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist