ಕೇಂಧ್ರ ಸರ್ಕಾರ ಜಮ್ಮ ಮತ್ತು ಕಾಶ್ಮೀರದ 370 ನೇ ವಿಧಿಯನ್ನು ತೆಗೆದು ಹಾಕಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ನಂತರ ಕಣಿವೆ ರಾಜ್ಯವು ಇನ್ನೂ ಸಹಜ ಸ್ಥಿತಿಗೆ ಮರಳಿಲ್ಲ. ಕಾಶ್ಮೀರದಲ್ಲಿ ನಾಗರಿಕರು ಎಂದಿನಂತೆ ಕೇಂದ್ರ ಸರ್ಕಾರದ ಕ್ರಮದ ವಿರುದ್ದ ಪ್ರತಿರೋಧವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಸರ್ಕಾರದ ಆದೇಶವನ್ನು ಜಾರಿಗೆ ತರುವುದಕ್ಕಾಗಿ ಕಾಶ್ಮೀರದ ಆಡಳಿತ ನೂತನ ನೋಂದಾವಣೆ ಇಲಾಖೆಯನ್ನು ಸ್ಥಾಪಿಸುವುದಾಗಿ ಕಳೆದ ಅಕ್ಟೋಬರ್ 22 ರಂದು ಘೋಷಿಸಿದೆ.
ಈ ಇಲಾಖೆಯನ್ನು ಸ್ಥಾಪಿಸುವ ಮೂಲಕ ಆಡಳಿತವು ನಾಗರಿಕರಿಗೆ ತಮ್ಮ ಸ್ಥಿರಾಸ್ಥಿಗಳ ನೋಂದಣಿ, ಮಾರಾಟ, ಭೋಗ್ಯ ಹಾಗೂ ಇನ್ನಿತರ ವ್ಯವಹಾರಗಳಿಗೆ ಅನುಕೂಲವಾಗಲಿದೆ ಎಂದು ಅಕ್ಟೋಬರ್ 23 ರಂದು ಬಿಡುಗಡೆ ಮಾಡಲಾಗಿದೆ. ಇದಕ್ಕೆ ರಾಜ್ಯಪಾಲರು 464 ನೂತನ ಸಿಬ್ಬಂದಿ ಹಾಗೂ ಅಧಿಕಾರಿಗಳ ನೇಮಕಕ್ಕೂ ಅನುಮೋದನೆಯನ್ನು ನೀಡಿದ್ದಾರೆ. ಈ ಬದಲಾವಣೆಯು ಜಮ್ಮು ಕಾಶ್ಮೀರ ರಾಜ್ಯವು ಅನುಭವಿಸುತಿದ್ದ ಸಂವಿಧಾನದ 370 ನೇ ವಿಧಿಯಲ್ಲಿನ ವಿಶೇಷ ಸವಲತ್ತನ್ನು ರದ್ದುಗೊಳಿಸಿ ಅದನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾರ್ಪಡಿಸುವ ಪ್ರಯತ್ನದ ಮೊದಲ ಆಡಳಿತಾತ್ಮಕ ಕ್ರಮ ಆಗಿತ್ತು. ಇದರಲ್ಲಿ ಸಂವಿಧಾನದ 370 ನೇ ವಿಧಿಯನ್ವಯ ಇದ್ದ ರಾಜ್ಯದ ಅಧಿಕಾರ , ಅಲ್ಲದೆ ರಾಜ್ಯಕ್ಕೆ 35 ನೇ ಎ ಅನ್ವಯ ಇದ್ದ ರಾಜ್ಯದ ಪರಮಾಧಿಕಾರ ಹೊಂದಿದ್ದ ಆಸ್ತಿಯನ್ನು ಹೊಂದುವ ಹಕ್ಕೂ ಒಳಗೊಂಂಡಂತೆ ಕೆಲವು ವಿಷಯಗಳ ಎಲ್ಲ ಅಧಿಕಾರವನ್ನೂ ಮೊಟಕುಗೊಳಿಸುವುದಾಗಿತ್ತು.
ಸಂಸತ್ತು ಅನುಮೋದನೆ ಮಾಡಲಾದ ಜಮ್ಮು ಕಾಶ್ಮೀರ ದ ಪುನರ್ವಿಂಗಡನೆ ಕಾಯ್ದೆ ಯು ಇದು ಈ ಬೃಹತ್ ಆಡಳಿತಾತ್ಮಕ ಕೂಲಂಕುಷ ಬದಲಾವಣೆಗೆ ಮಾರ್ಗಸೂಚಿಯನ್ನು ನೀಡುತ್ತದೆ. ರದ್ದುಗೊಳಿಸಬೇಕಾದ 153 ರಾಜ್ಯ ಕಾನೂನುಗಳು ಮತ್ತು ಹೊಸ ಕೇಂದ್ರ ಪ್ರದೇಶಗಳ ಮೇಲೆ ವಿಧಿಸಲಾದ 106 ಕೇಂದ್ರ ಕಾನೂನುಗಳನ್ನು ಇದು ಪಟ್ಟಿ ಮಾಡಿದೆ. ಪಟ್ಟಿ ಮಾಡಲಾದ ರಾಜ್ಯ ಕಾನೂನುಗಳಲ್ಲಿ ಒಂದು ಜಮ್ಮು ಮತ್ತು ಕಾಶ್ಮೀರ ನೋಂದಣಿ ಕಾಯ್ದೆ, ಇದನ್ನು ಕೇಂದ್ರ ಕಾನೂನು 1908 ರ ನೋಂದಣಿ ಕಾಯ್ದೆಯಾಗಿ ಬದಲಾಯಿಸಲಾಗಿದೆ.
ಇದು ಆಗಸ್ಟ್ 5 ರ ನಿರ್ಧಾರದಿಂದ ಉಂಟಾದ ಪ್ರಮುಖ ಬದಲಾವಣೆಗಳಲ್ಲಿ ಮುಖ್ಯವಾದುದು ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಮಿ ಖರೀದಿ ಮತ್ತು ಮಾರಾಟಕ್ಕೆ ನೀಡಿರುವ ಹಕ್ಕು. ಈಗಾಗಲೇ, ಇದು ರಾಜ್ಯದ ವಕೀಲರಲ್ಲಿ ಪ್ರತಿಭಟನೆಗೆ ಕಾರಣವಾಗಿದೆ.
ನೂತನ ಪುನರ್ವಿಂಗಡಣಾ ಕಾಯ್ದೆಯ ಪ್ರಕಾರ ರಾಜ್ಯವು ಪರಮಾಧಿಕಾರ ಹೊಂದಿದ್ದ ಆಸ್ತಿಯನ್ನು ಹೊರಗಿನವರಿಗೆ ಮಾರಾಟ ಮಾಡುವ ಹಕ್ಕನ್ನು ಕಿತ್ತುಕೊಂಡಿದೆ. ಈಗ ದೇಶದ ಯಾವನೇ ಪ್ರಜೆ ಆಸ್ತಿಯನ್ನು ಖರೀದಿಸಬಹುದಾಗಿದೆ . ನೂತನ ನೋಂದಣಿ ಕಾಯ್ದೆಯೂ ಆಡಳಿತಕ್ಕೆ ಭೂ ವ್ಯವಹಾರಗಳನ್ನು ನಿಯಂತ್ರಿಸುವ ಅಧಿಕಾರವನ್ನು ನೀಡಿದೆ. ಮೊದಲು ಇದು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿದ್ದು ನ್ಯಾಯಾಂಗವೂ ಪರಮಾಧಿಕಾರವನ್ನು ಹೊಂದಿತ್ತು.
ಜಮ್ಮು ಮತ್ತು ಕಾಶ್ಮೀರದ ಮುಖ್ಯ ನ್ಯಾಯ ಮೂರ್ತಿಗಳು ರಾಜ್ಯದ ಇನ್ಸ್‌ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ಸ್ ಗೆ ಸಮನಾದ ಹಕ್ಕು ಮತ್ತು ಅಧಿಕಾರವನ್ನು ಹೊಂದಿದ್ದರು. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಜಿಲ್ಲಾ ನೋಂದಾವಣಾಧಿಕಾರಿಗಳ ಅಧಿಕಾರವನ್ನೂ ಹೊಂದಿದ್ದರು. ಹಿಂದಿದ್ದ ರಾಜ್ಯದ ಕಾನೂನು ಇಲಾಖೆ ನೋಂದಾವಣೆಯ ಆಡಳಿತ ನಿಯಂತ್ರಣವನ್ನು ಹೊಂದಿತ್ತು. ಆಡಳಿತವು ಆಸ್ತಿತ್ವಕ್ಕೆ ತಂದಿರುವ ನೂತನ ನೋಂದಾವಣೆ ಇಲಾಖೆಯು ಕಂದಾಯ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸಲಿದ್ದು ಹೆಚ್ಚುವರಿ ಜಿಲ್ಲಾಧಿಕಾರಿಗಳು ನೋಂದಾವಣಾಧೀಕಾರಿಗಳಾಗಿಯೂ ಉಪ ವಿಭಾಗೀಯ ದಂಢಾಧಿಕಾರಿ ಮತ್ತು ಸಹಾಯಕ ಕಮೀಷನರ್ ಗಳು ಸಬ್ ರಿಜಿಸ್ಟ್ರಾರ್ ಗಳ ಕರ್ತವ್ಯವನ್ನೂ ನಿರ್ವಹಿಸಲಿದ್ದಾರೆ. ಕಂದಾಯ ಇಲಾಖೆಯ ಹಣಕಾಸು ವಿಭಾಗದ ಕಮೀಷನರ್ ಆಗಿದ್ದ ಪವನ್ ಕೋಟ್ವಲ್ ಅವರು ಈಗ ಇನ್ಸ್‌ಪೆಕ್ಟರ್ ಜನರಲ್ ಆಪ್ ರಿಜಿಸ್ಟ್ರೇಷನ್ಸ್ ಆಗಿ ಕಾರ್ಯ ವಹಿಸಿಕೊಂಡಿದ್ದಾರೆ.
ನ್ಯಾಯಾಂಗದಿಂದ ಕಾರ್ಯಾಂಗಕ್ಕೆ ಸಂಪೂರ್ಣ ಹಕ್ಕನ್ನು ವರ್ಗಾಯಿಸಿರುವುದು ಕೆಲವೊಂದು ಅನುಮಾನಗಳನ್ನೂ ಹುಟ್ಟು ಹಾಕಿದೆ ಎಂದು ಕೇಂದ್ರ ಕಾಶ್ಮೀರದ ಗಂಢೆರ್ ಬಾಲ್ ಜಿಲ್ಲೆಯ ಸಿವಿಲ್ ನ್ಯಾಯಾಲಯದ ವಕೀಲರ ಅಭಿಪ್ರಾಯವಾಗಿದೆ. ಏಕೆಂದರೆ ನ್ಯಾಯಾಂಗ ಇಲಾಖೆಯ ಪರಿಶೀಲನೆ ಅತ್ಯಂತ ಕಟ್ಟು ನಿಟ್ಟಿನಿಂದ ಕೂಡಿದ್ದು ಇದನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಮಾಡಲು ಸಾದ್ವವಿಲ್ಲ ಎನ್ನುತ್ತಾರೆ. ಈ ಅಧಿಕಾರವನ್ನು ನೀಡಿರುವುದಕ್ಕೆ ಜಮ್ಮು ವಕೀಲರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ. ಜಮ್ಮು ವಕೀಲರ ಸಂಘದ ಅದ್ಯಕ್ಷ ಅಭಿನವ್ ಶರ್ಮ ರ ನೇತೃತ್ವದಲ್ಲಿ ಎಲ್ಲ ವಕೀಲರೂ ನವೆಂಬರ್ ಒಂದರಂದು ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಪ್ರತಿಭಟಿಸಿದರು.
ಈ ಅಧಿಕಾರದ ವರ್ಗಾವಣೆಯಿಂದ ಸರ್ಕಾರ ಯಾವುದೇ ಅಧಿಕಾರಿಗೆ ಸ್ಥಿರಾಸ್ತೀ ವರ್ಗಾಯಿಸುವ ಅಧಿಕಾರ ನೀಡಬಹುದಾಗಿದೆ . ವಕೀಲರು ವಿರೋಧಿಸುತ್ತಿರುವ ಮೊದಲ ಕಾರಣವೆಂದರೆ ನ್ಯಾಯಾಂಗ ಇಲಾಖೆಯ ಅಧೀನದಲ್ಲಿ ಇದ್ದರೆ ಪಾರದರ್ಶಕತೆ ಇರುತ್ತದೆ ಜತೆಗೇ ಸಾರ್ವಜನಿಕರಿಗೂ ಹೆಚ್ಚಿನ ಅನುಕೂಲವಾಗುತ್ದದೆ. ಕಳೆದ ನವೆಂಬರ್ 21 ರಂದು ಜಮ್ಮುವಿನ ವಕೀಲರು ಈ ಹಕ್ಕನ್ನು ನ್ಯಾಯಾಂಗ ಇಲಾಖೆಗೆ ನೀಡದಿದ್ದರೆ ರಾಜ್ಯಾದ್ಯಂತ ಉಗ್ರ ಪ್ತತಿಭಟನೆ ಆರಂಬಿಸುವ ಎಚ್ಚರಿಕೆ ನೀಡಿದ್ದಾರೆ .
ಜಮ್ಮುವಿನ ಬಿಜೆಪಿ ವಕ್ತಾರ ಸುನಿಲ್ ಸೇಥಿ ಅವರೂ ಕೇಂದ್ರ ಗೃಹ ಸಚಿವರಿಗೆ ಈಗಾಗಲೇ ಪತ್ರ ಬರೆದಿದ್ದಾರೆ. ಜಮ್ಮು ಕಾಶ್ಮೀರದ ಬಾರ್ ಅಸೋಸಿಯೇಷನ್ ಕೂಡ ಪ್ರತಿಭಟನೆ ನಡೆಸುತಿದ್ದು ನ್ಯಾಯಾಂಗ ಇಲಾಖೆಗೆ ಆಸ್ತಿ ವರ್ಗಾವಣೆ ಅಧಿಕಾರ ನೀಡಬೇಕೆಂದು ಒತ್ತಾಯಿಸುತ್ತಿದೆ. ಅಲ್ಲದೆ ಭದ್ರತಾ ಕಾಯ್ದೆಯಡಿಯಲ್ಲಿ ಇಬ್ಬರು ಹಿರಿಯ ವಕೀಲರನ್ನು ಬಂಧಿಸಿ ಜಮ್ಮು ಕಾಶ್ಮೀರದ ಹೊರೆ ಜೈಲಿನಲ್ಲಿ ಇಟ್ಟಿರುವುದನ್ನೂ ವಿರೋಧಿಸಿ ಅವರ ಬಿಡುಗಡೆಗಾಗಿ ಒತ್ತಾಯಿಸುತ್ತಿದೆ.
ಕಾಶ್ಮೀರ ಕಣಿವೆಯಾದ್ಯಂತ ಬಹು ಸಂಖ್ಯಾತ ಮುಸ್ಲಿಂರ ಭೌಗೋಳಿಕೆ ಹಿನ್ನೆಲೆಯನ್ನೇ ಬದಲಾಯಿಸಲು ಈ ಅಧಿಕಾರವನ್ನು ಕಸಿಯಲಾಗಿದೆ ಎಂಬುದು ನಾಗರಿಕರ ಆರೋಪವಾಗಿದೆ.. ಸರ್ಕಾರವು ಹೊರಗಿನಿಂದ ಬಂಡವಾಳ ಹೂಡಿಕೆದಾರರನ್ನು ಮತ್ತು ಹೊರಗಿನ ನಾಗರಿಕರನ್ನು ಕರೆ ತಂದು ಅವರನ್ನು ಸುಲಭವಾಗಿ ಕಾಶ್ಮೀರದ ನಾಗರಿಕರನ್ನಾಗಿ ಮಾಡಬಹುದು ಎಂದು ಅವರು ಆತಂಕ ವ್ಯಕ್ತಪಡಿಸುತಿದ್ದಾರೆ. ಏಕೆಂದರೆ ನ್ಯಾಯಾಂಗ ಇಲಾಖೆಯ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಿ ಕೆಲಸ ಮಾಡಿಸಿಕೊಳ್ಳುವುದು ಅತ್ಯಂತ ಕಷ್ಟಕರ ಮತ್ತು ಅಸಾದ್ಯ ಆದರೆ ಕಂದಾಯ ಇಲಾಖೆಯ ನೌಕರರ ಮೂಲಕ ಇದು ಸುಲಭ ಸಾದ್ಯ ಎಂದೂ ಅವರು ಹೇಳುತ್ತಾರೆ.
ಆಸ್ತಿಯ ಮಾರಾಟ , ಭೋಗ್ಯ ಇನ್ನಿತರ ದಾಖಲೆ ಪತ್ರಗಳು ಸಂಪೂರ್ಣ ಕಾನೂನಿನ ದಾಖಲೆಗಳಾಗಿವೆ ಇವುಗಳನ್ನು ಕಂದಾಯ ಅಧಿಕಾರಿಗಳು ಪರಿಶೀಲನೆ ನಡೆಸುವುದು ಸಾದ್ಯವೇ ಇಲ್ಲ ಏಕೆಂದರೆ ಹೊಸದಾಗಿ ಸೃಷ್ಟಿಸಲಾದ ಇಲಾಖೆಯ ಅಧಿಕಾರಿಗಳಿಗೆ ಇನ್ನೂ ಅನುಭವವೂ ಇರುವುದಿಲ್ಲ ಎಂದು ನಅಗರಿಕರು ಆರೋಪಿಸುತ್ತಾರೆ.
ವಕೀಲ ವೃಂದದ ಪ್ರಕಾರ ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ವಕೀಲರಿಗೆ ಸಿಗುತ್ತಿರುವ ಸಂಭಾವನೆಯ ಶೇಕಡಾ 60 ರಷ್ಟು ಸ್ಥಿರಾಸ್ಥಿ ನೋಂದಾವಣೆ ಹಾಗೂ ಈ ದಾಖಲಾತಿಯನ್ನು ಸಿದ್ದಪಡಿಸುವುದರಿಂದಲೇ ಬರುತ್ತಿದೆ. ಈ ಅಧಿಕಾರವನ್ನು ಕಸಿದುಕೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಭ್ರಷ್ಟಾಚಾರ ಹೆಚ್ಚಲಿದೆ ಅಲ್ಲದೆ ದಾಖಲಾತಿಯ ಲ್ಲಿ ಅಕ್ರಮಗಳು ಆಗುವ ಸಾಧ್ಯತೆಯೂ ಇದೆ ಎಂದು ಅವರು ಹೇಳುತ್ತಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆಯ ಅಧಿಕಾರಶಾಹಿ ವರ್ತನೆಯಿಂದಾಗಿ ಕಕ್ಷಿದಾರರು ಪದೇ ಪದೇ ಕಚೇರಿಗಳಿಗೆ ಎಡತಾಕಬೇಕಾಗುತ್ತದೆ . ಇದನ್ನು ತಪ್ಪಿಸಲು ಕಚೇರಿಯಲ್ಲಿ ಮದ್ಯವರ್ತಿಗಳು ಬ್ರೋಕರ್ ಗಳೂ ಹುಟ್ಟಿಕೊಳ್ಳುತ್ತಾರೆ ಇದರಿಂದ ಕಕಿದಾರರು ಮತ್ತಷ್ಟು ತೊಂದರೆಗೀಡಾಗುತ್ತಾರೆ ಎಂದೂ ಅವರು ಆರೋಪಿಸುತ್ತಾರೆ.