ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ನಡೆಯುತ್ತಿರುವ ತನಿಖೆಯ ಬಗ್ಗೆ ಮುಂಬೈ ಪೊಲೀಸರು ಮತ್ತು ಮಹಾರಾಷ್ಟ್ರ ಸರ್ಕಾರವನ್ನು ಅಪಖ್ಯಾತಿಗೊಳಿಸಲು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ 80,000 ಕ್ಕೂ ಹೆಚ್ಚು ನಕಲಿ ಖಾತೆಗಳನ್ನು ರಚಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸುವಂತೆ ಹಾಗೂ ತನಿಖೆ ಮಾಡುವಂತೆ ಮುಂಬೈ ಪೊಲೀಸ್ ಆಯುಕ್ತರು ಸೈಬರ್ ಸೆಲ್‌ಗೆ ಸೂಚಿಸಿದ್ದಾರೆ.
Also Read: ಬಿಹಾರ ಚುನಾವಣೆ ಹಿನ್ನೆಲೆಯಲ್ಲಿ ಸುಶಾಂತ್ ಪೋಸ್ಟರ್: ಸಾವನ್ನು ಪ್ರಚಾರಕ್ಕೆ ಬಳಸಿದ ಬಿಜೆಪಿ

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮುಂಬೈ ಪೊಲೀಸರ ಸೈಬರ್ ಘಟಕವು- ಇಟಲಿ, ಜಪಾನ್, ಪೋಲೆಂಡ್, ಸ್ಲೊವೇನಿಯಾ, ಇಂಡೋನೇಷ್ಯಾ, ಟರ್ಕಿ, ಥೈಲ್ಯಾಂಡ್, ರೊಮೇನಿಯಾ ಮತ್ತು ಫ್ರಾನ್ಸ್‌ನ ಮೊದಲಾದ ವಿವಿಧ ದೇಶಗಳಿಂದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡಲಾಗಿದೆ ಎಂದು ಹೇಳಿದೆ.
“#Justiceforsushant #sushantsinghrajput ಮತ್ತು #SSR ನಂತಹ ಹ್ಯಾಶ್‌ಟ್ಯಾಗ್‌ಗಳ ಕಾರಣದಿಂದಾಗಿ ನಾವು ವಿದೇಶಿ ಭಾಷೆಗಳಲ್ಲಿರುವ ಪೋಸ್ಟ್‌ಗಳನ್ನು ಗುರುತಿಸಿದ್ದೇವೆ. ಇನ್ನೂ ಹೆಚ್ಚಿನ ಖಾತೆಗಳನ್ನು ಪರಿಶೀಲಿಸುವ ಪ್ರಕ್ರಿಯೆಯಲ್ಲಿದ್ದೇವೆ”ಎಂದು ಹಿರಿಯ ಐಪಿಎಸ್ ಅಧಿಕಾರಿ ಹೇಳಿದ್ದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
Also Read: ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆ; ಕೊಲೆಯಲ್ಲ- AIIMS ಮುಖ್ಯಸ್ಥ
ಸಾಂಕ್ರಾಮಿಕ ರೋಗದಿಂದಾಗಿ 84 ಪೊಲೀಸರು ಸಾವನ್ನಪ್ಪಿರುವಾಗ ಹಾಗೂ 6,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ವೈರಸ್ ಸೋಂಕಿಗೆ ಒಳಗಾಗಿದ್ದ ಸಮಯದಲ್ಲಿ ನಮ್ಮನ್ನು ನಿರಾಶೆಗೊಳಿಸಲು ಮುಂಬೈ ಪೊಲೀಸರ ವಿರುದ್ಧ ಅಭಿಯಾನ ನಡೆಸಲಾಯಿತು. ಇದು ಮುಂಬೈ ಪೊಲೀಸರ ಚಿತ್ರಣವನ್ನು ಕೆಡಿಸಲು ಮತ್ತು ನಮ್ಮ ತನಿಖೆಯ ಹಾದಿಯನ್ನು ತಪ್ಪಿಸಲು ಪಟ್ಟಭದ್ರ ಹಿತಾಸಕ್ತಿ ಪ್ರೇರೇಪಿತ ಅಭಿಯಾನವಾಗಿತ್ತು. ಮುಂಬೈ ಪೊಲೀಸರನ್ನು ನಿಂದಿಸಲು ಸೋಷಿಯಲ್ ಮೀಡಿಯಾದಲ್ಲಿ ಅನೇಕ ನಕಲಿ ಖಾತೆಗಳನ್ನು ರಚಿಸಲಾಗಿದೆ. ನಮ್ಮ ಸೈಬರ್ ಸೆಲ್ ಈ ವಿಷಯದ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದೆ ಮತ್ತು ಕಾನೂನು ಉಲ್ಲಂಘಿಸಿದ ಎಲ್ಲರನ್ನೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲಾಗುತ್ತದೆ ” ಎಂದು ಮುಂಬೈ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಹೇಳಿದ್ದಾರೆ.
Also Read: ಸುಶಾಂತ್ ಇದ್ದಿದ್ದರೆ, ತನ್ನ ಸಾವಿನ ಸುತ್ತ ನಡೆಯುತ್ತಿರುವ ‘ಸರ್ಕಸ್’ ನೋಡಿ ನಗುತ್ತಿದ್ದರು- ಸೋನು ಸೂದ್