Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಸಂವಿಧಾನ ಪೀಠಿಕೆಯಿಂದ ʼಸಮಾಜವಾದʼ ಪದ ತೆಗೆದುಹಾಕಲು ಬಿಜೆಪಿ ರಾಜ್ಯಸಭಾ ಸದಸ್ಯನ ಒತ್ತಾಯ!  

ಸಂವಿಧಾನ ಪೀಠಿಕೆಯಿಂದ ʼಸಮಾಜವಾದʼ ಪದ ತೆಗೆದುಹಾಕಲು ಬಿಜೆಪಿ ರಾಜ್ಯಸಭಾ ಸದಸ್ಯನ ಒತ್ತಾಯ!
ಸಂವಿಧಾನ ಪೀಠಿಕೆಯಿಂದ ʼಸಮಾಜವಾದʼ ಪದ ತೆಗೆದುಹಾಕಲು ಬಿಜೆಪಿ ರಾಜ್ಯಸಭಾ ಸದಸ್ಯನ ಒತ್ತಾಯ!  

March 20, 2020
Share on FacebookShare on Twitter

ಭಾರತದ ಸಂವಿಧಾನದ ಪೀಠಿಕೆಯಲ್ಲಿರುವ ʼಸಮಾಜವಾದʼ ಪದವನ್ನು ಕೈಬಿಡುವಂತೆ ನಿರ್ಣಯ ಮಂಡಿಸಲು ಬಿಜೆಪಿ ರಾಜ್ಯಸಭಾ ಸದಸ್ಯ ರಾಕೇಶ್‌ ಸಿನ್ಹಾ ಮೇಲ್ಮನೆಯನ್ನು ಆಗ್ರಹಿಸಿದ್ದಾರೆ. ಸಮಾಜವಾದ ಪದವನ್ನು ಸಂವಿಧಾನದಲ್ಲಿ ಬಳಸುವ ಅಗತ್ಯವಿಲ್ಲ ಅಂತಾ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ʼಇದೊಂದು ನಿರ್ದಿಷ್ಟತೆಯಿಲ್ಲದ ಆರ್ಥಿಕ ಚಿಂತನೆಯಾಗಿದೆʼ ಎಂದು ಅವರು ತಿಳಿಸಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಕೆಲವು ರಾಷ್ಟ್ರಗಳು ಅಜೆಂಡಾ ನಿರ್ಧರಿಸಿ, ಉಳಿದವರು ಅನುಸರಿಸುವ ಕಾಲ ಮುಗಿದಿದೆ: ಜೈಶಂಕರ್

ಸುಪ್ರೀಂ ಕೋರ್ಟ್ ಗಮನ ಸೆಳೆಯಲು ಬೀದಿಗಿಳಿದು ಹೋರಾಟ ಅನಿವಾರ್ಯ: ಬಸವರಾಜ ಬೊಮ್ಮಾಯಿ

ತಮಿಳುನಾಡಿನಲ್ಲಿ ಬಿಜೆಪಿ ಜತೆಗಿನ ಬಾಂಧವ್ಯವನ್ನು ಕಳೆದುಕೊಳ್ಳುತ್ತೇನೆ : ಉದಯನಿಧಿ ಸ್ಟಾಲಿನ್

ಸಂವಿಧಾನ ರಚನೆ ಸಂದರ್ಭ ವೇಳೆಯೂ ಇಂತಹ ಪ್ರಸ್ತಾಪಗಳು ಬಂದಾಗ ಡಾ.ಬಿ.ಆರ್‌ ಅಂಬೇಡ್ಕರ್‌ ನಿರಾಕರಿಸಿದ್ದರು. ಸಮಿತಿಯಲ್ಲಿದ್ದ ಅರ್ಥಶಾಸ್ತ್ರಜ್ಞ ಕೆಟಿ ಶಾ, “ಫೆಡರಲ್ ಸೆಕ್ಯುಲರ್ ಸೋಷಿಯಲಿಸ್ಟ್ ಯೂನಿಯನ್ ಆಫ್ ಸ್ಟೇಟ್ಸ್” ಎಂಬ ಪದಗಳನ್ನು ಪ್ರಸ್ತಾಪಿಸಿದ್ದರು, ಆದರೆ ಅಂಬೇಡ್ಕರ್ ಈ ಪ್ರಸ್ತಾಪವನ್ನು ವಿರೋಧಿಸಿದ್ದರು ಎಂದಿದ್ದಾರೆ. ಆದರೆ 1976 ರಲ್ಲಿ ತುರ್ತು ಪರಿಸ್ಥಿತಿಯ ನಂತರ ರಾಜಕೀಯ ಉದ್ದೇಶದಿಂದ ಇಂದಿರಾ ಗಾಂಧಿ ಅವರು ಸಮಾಜವಾದ ಮತ್ತು ಜಾತ್ಯತೀತ ಪದವನ್ನು ಸಂವಿಧಾನದ ಪೀಠಿಕೆಯಲ್ಲಿ ಸೇರಿಸಿದ್ದಾಗಿ ಅವರು ಆರೋಪಿಸಿದ್ದಾರೆ.

ಇನ್ನು ನರೇಂದ್ರ ಮೋದಿ ಆಡಳಿತಕ್ಕೆ ಬಂದ ನಂತರ ದೇಶದಲ್ಲಿ ಅಮೂಲಾಗ್ರ ಬದಲಾವಣೆ ಕಂಡಿದೆ. ಕಳೆದ ಏಳು ದಶಕಗಳಲ್ಲಿ ಕಾಂಗ್ರೆಸ್‌ ಆಡಳಿತವಿದ್ದಾಗ ಸಮಾಜವಾದದಿಂದ ಕಾಂಗ್ರೆಸ್‌ ಪಕ್ಷ ನವ ಉದಾರವಾದಕ್ಕೆ ಬದಲಾಗಿತ್ತು ಎಂದು ತಿಳಿಸಿದ್ದಾರೆ.

ಸದ್ಯ ದೇಶಾದ್ಯಂತ ರಾಕೇಶ್‌ ಸಿನ್ಹಾ ಎತ್ತಿರುವ ಪ್ರಶ್ನೆ ಸಾಕಷ್ಟು ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ. ಯಾಕೆಂದರೆ ಈ ಹಿಂದೆ 2015 ರಲ್ಲಿ ಗಣರಾಜ್ಯೋತ್ಸವ ದಿನ ಪತ್ರಿಕೆಗಳಲ್ಲಿ ಅಚ್ಚು ಹಾಕಲಾದ ಜಾಹೀರಾತಿನಲ್ಲಿ ಎನ್‌ಡಿಎ ಸರಕಾರವು ಸಮಾಜವಾದ ಮತ್ತು ಜಾತ್ಯತೀತ ಪದವನ್ನು ಕೈ ಬಿಟ್ಟಿರುವುದು ವಿವಾದಕ್ಕೆ ಕಾರಣವಾಗಿತ್ತು.

ಆ ನಂತರ 2017 ರಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತಾಡುತ್ತಿದ್ದಂತೆ ಸಂಸದ ಅನಂತ್‌ ಕುಮಾರ್‌ ಹೆಗ್ಡೆ, ʼನಾವು ಬಂದಿರೋದೆ ಸಂವಿಧಾನ ಬದಲು ಮಾಡಲುʼ ಅನ್ನೋ ಹೇಳಿಕೆ ನೀಡಿ ಇನ್ನಷ್ಟು ವಿವಾದಕ್ಕೆ ಕಾರಣರಾಗಿದ್ದರು. ಅಲ್ಲದೇ ನಂತರ ಲೋಕಸಭೆಯಲ್ಲೂ ಗದ್ದಲವೇರ್ಪಟ್ಟಾಗ, ವಿಪಕ್ಷಗಳ ಪ್ರತಿಭಟನೆ ನಂತರ ಸಂಸದರು ಕ್ಷಮೆಯಾಚಿಸಿದ್ದರು. ಇದೀಗ ರಾಕೇಶ್‌ ಸಿನ್ಹಾ ಅವರು ʼಸಮಾಜವಾದʼ ಅನ್ನೋ ಪದ ಪೀಠಿಕೆಯಿಂದ ತೆಗೆಯುವಂತೆ ಮಾಡಿರುವ ಒತ್ತಾಯ ಇನ್ಯಾವ ರೂಪ ಪಡೆಯುತ್ತೆ ಅನ್ನೋದನ್ನು ಕಾದು ನೋಡಬೇಕಿದೆ. ಜೊತೆಗೆ ʼಜಾತ್ಯತೀತʼ ಪದವನ್ನು ತೆಗೆಯಲು ಒತ್ತಾಯಿಸುವ ಸಾಧ್ಯತೆ ಬಗ್ಗೆಯೂ ಚರ್ಚೆಗಳು ಹುಟ್ಟಬಹುದು. ಕಾರಣ ಈ ಎರಡೂ ಪದಗಳು ಸಂವಿಧಾನದ 42 ನೇ ತಿದ್ದುಪಡಿ ಪ್ರಕಾರ 1976 ರಲ್ಲಿ ಅಳವಡಿಸಲಾಗಿತ್ತು.

ಸಂವಿಧಾನದ ಸಮಾಜವಾದ ಏನನ್ನುತ್ತೆ..?

ಸಾಮಾಜಿಕ ಸಮಾನತೆ ಅಡಿಯಲ್ಲಿ ಪ್ರತಿಯೊಬ್ಬರಿಗೂ ಸಮಾನ ಅವಕಾಶ ಹಾಗೂ ಸ್ಥಾನಮಾನ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆ, ಹಾಗೂ ದೇಶದಲ್ಲಿ ಸಮಾನತೆ ತರಲು ಸರಕಾರ ತೆಗೆದುಕೊಂಡ ಕಾನೂನುಗಳ ಬಗ್ಗೆ ಉಲ್ಲೇಖಿಸುವ ಪ್ರಮುಖ ಉದ್ದೇಶ ಹೊಂದಿದೆ. ಈ ಪದವು ಆರಂಭದ ದಿನಗಳಲ್ಲಿ ಇರಲಿಲ್ಲ, ನಂತರ 42ನೇ ತಿದ್ದುಪಡಿ ಮೂಲಕ ಸಂವಿಧಾನದ ಪೀಠಿಕೆಯಲ್ಲಿ ಸೇರಿಸಲಾಗಿತ್ತು. 1950 ರ ಜನವರಿ 26 ರಂದು ಸಂವಿಧಾನ ಅಂಗೀಕರಿಸುವ ಹೊತ್ತಿಗೆ ಭಾರತದ ಸಂವಿಧಾನದ ಮೂಲ ಪೀಠಿಕೆಯಲ್ಲಿ ʼಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯʼ ಅನ್ನೋದಾಗಿ ಇತ್ತು. ಆ ನಂತರ ತುರ್ತು ಪರಿಸ್ಥಿತಿ ಸಂದರ್ಭ ʼಸಮಾಜವಾದʼ ಮತ್ತು ʼಜಾತ್ಯತೀತʼ ಪದವನ್ನು ಸೇರ್ಪಡೆಗೂ ಅದಾಗಲೇ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೆ ಆ ನಂತರ ತಿದ್ದುಪಡಿ ಅಂಗೀಕರಿಸಲಾಗಿತ್ತು. ಈ ಮೂಲಕ ಭಾರತದ ಸಂವಿಧಾನದ ಪೀಠಿಕೆಯಲ್ಲಿ ʼಸಾರ್ವಭೌಮ ಸಮಾಜವಾದ ಜಾತ್ಯತೀತ ಗಣರಾಜ್ಯ ಪ್ರಜಾಪ್ರಭುತ್ವʼ ಭಾರತ ಅನ್ನೋದಾಗಿ ಕರೆಯಲ್ಪಡುತ್ತಿದೆ. ಇದೀಗ ಆ ಪದಗಳಿಗೆ ರಾಕೇಶ್‌ ಸಿನ್ಹಾ ಅಭಿಪ್ರಾಯ ಭೇದ ವ್ಯಕ್ತಪಡಿಸಿದ್ದು ಮೇಲ್ಮನೆಯಲ್ಲಿ ವೈಯಕ್ತಿಕವಾಗಿ ʼಸಮಾಜವಾದʼ ಪದ ಬಿಡುವಂತೆ ನಿರ್ಣಯ ಮಂಡಿಸಲಿದ್ದಾರೆ.

ʼಸಮಾಜವಾದʼ ಪದವನ್ನು ಕೈ ಬಿಡಲು ಸಾಧ್ಯವೇ..?

ಸಂವಿಧಾನದಲ್ಲಿ ಇದುವರೆಗೂ ನೂರಕ್ಕೂ ಹೆಚ್ಚು ತಿದ್ದುಪಡಿಗಳಾಗಿವೆ. ಆದರೆ ಸಂವಿಧಾನ ಪೀಠಿಕೆಯಲ್ಲಿ ಇದುವರೆಗೂ ಒಂದು ಬಾರಿ ಮಾತ್ರ ತಿದ್ದುಪಡಿ ಮಾಡಲಾಗಿದೆ. ಸಂವಿಧಾನದ ತಿದ್ದುಪಡಿಯಲ್ಲಿ ಕೆಲವನ್ನು ಸೇರಿಸಿದರೆ, ಇನ್ನು ಕೆಲವನ್ನ ಅದರ ಮಹತ್ವ ಇದೆಯೇ, ಇಲ್ಲವೇ ಅನ್ನೋದನ್ನ ಪರಿಶೀಲಿಸಿ ʼಇಲ್ಲʼ ಅನ್ನೋದಾಗಿದ್ದರೆ ತೆಗೆದು ಹಾಕಲಾಗಿತ್ತು. ಆದರೆ ಸಂವಿಧಾನದ ಪೀಠಿಕೆ ವಿಚಾರದಲ್ಲಿ ಮಾತ್ರ ಇದು ಅಸಾಧ್ಯ. ಯಾಕೆಂದರೆ ಕಾನೂನು ಹಾಗೂ ಸಂವಿಧಾನ ತಜ್ಞರ ಪ್ರಕಾರ, ಸಂವಿಧಾನದ ಪೀಠಿಕೆಯಲ್ಲಿ ತಿದ್ದುಪಡಿ ತಂದು ಸೇರ್ಪಡೆಗೊಳಿಸಲಷ್ಟೇ ಸಾಧ್ಯ. ಆದರೆ ಅದನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಅಲ್ಲದೇ ಸುಪ್ರೀಂ ಕೋರ್ಟ್‌ ಸಂವಿಧಾನದ ಪೀಠಿಕೆಯನ್ನು ಮೂಲರಚನೆ ಎಂದೂ ಕರೆದಿದೆ. ಆದ್ದರಿಂದ ಸುಪ್ರೀಂ ಕೋರ್ಟ್‌ ಪೀಠಿಕೆಯಲ್ಲಿದ್ದ ಪದವನ್ನು ತೆಗೆದುಹಾಕಲು ಒಪ್ಪುವುದಿಲ್ಲ.

ಆದರೆ ಸದ್ಯ ಬಿಜೆಪಿ ರಾಜ್ಯಸಭಾ ಸದಸ್ಯ ರಾಕೇಶ್‌ ಸಿನ್ಹಾ ಮುಂದಿಟ್ಟಿರುವ ಪ್ರಸ್ತಾಪ ದೇಶದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಚರ್ಚೆಗೂ ಕಾರಣವಾಗುವುದರಲ್ಲಿ ಸಂಶಯವಿಲ್ಲ.

RS 500
RS 1500

SCAN HERE

Pratidhvani Youtube

«
Prev
1
/
5516
Next
»
loading
play
Siddaramaiah | 3,000 ಕ್ಯೂಸೆಕ್ಸ್ ನೀರು ಬಿಡೋದನ್ನ ನಾವು ಚಾಲೆಂಜ್ ಮಾಡ್ತೀವಿ..!
play
LIVE: HD DeveGowda Press Meet | JDS | HD Kumaraswamy | Politics | Cauvery #pratidhvani #hddevegowda
«
Prev
1
/
5516
Next
»
loading

don't miss it !

ಬೆಂಗಳೂರಿನಾದ್ಯಂತ ‘ಕಾವೇರಿ’ ಹೋರಾಟದ ಕಿಚ್ಚು: ಪ್ರತಿಭಟನಾಕಾರರ ಬಂಧನಕ್ಕೆ ಮುಖ್ಯಮಂತ್ರಿ ಚಂದ್ರು ಕಿಡಿ
Top Story

ಬೆಂಗಳೂರಿನಾದ್ಯಂತ ‘ಕಾವೇರಿ’ ಹೋರಾಟದ ಕಿಚ್ಚು: ಪ್ರತಿಭಟನಾಕಾರರ ಬಂಧನಕ್ಕೆ ಮುಖ್ಯಮಂತ್ರಿ ಚಂದ್ರು ಕಿಡಿ

by ಪ್ರತಿಧ್ವನಿ
September 26, 2023
ಸರ್ಕಾರದ ನಡೆಗೆ ಕಿಡಿಕಾರಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
Top Story

ಸರ್ಕಾರದ ನಡೆಗೆ ಕಿಡಿಕಾರಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

by ಪ್ರತಿಧ್ವನಿ
September 25, 2023
ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ರಾಜ್ಯ ಹಾಳಾಗುವುದು ನಿಶ್ಚಿತ: ಪ್ರಧಾನಿ ನರೇಂದ್ರ ಮೋದಿ
Top Story

ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ರಾಜ್ಯ ಹಾಳಾಗುವುದು ನಿಶ್ಚಿತ: ಪ್ರಧಾನಿ ನರೇಂದ್ರ ಮೋದಿ

by ಪ್ರತಿಧ್ವನಿ
September 25, 2023
29 ಮತ್ತು 30ರಂದು ಮುಂಬೈ ಲೋಕಮಾನ್ಯ ತಿಲಕ್ ಮಂಗಳೂರು ಜಂಕ್ಷನ್ ರೈಲಿಗೆ ಹೆಚ್ಚುವರಿ ಕೋಚ್
Top Story

29 ಮತ್ತು 30ರಂದು ಮುಂಬೈ ಲೋಕಮಾನ್ಯ ತಿಲಕ್ ಮಂಗಳೂರು ಜಂಕ್ಷನ್ ರೈಲಿಗೆ ಹೆಚ್ಚುವರಿ ಕೋಚ್

by ಪ್ರತಿಧ್ವನಿ
September 26, 2023
ಟೀಸರ್ ನಲ್ಲೇ ಕುತೂಹಲ ಮೂಡಿಸಿದ “ಅಲೆಕ್ಸಾ” : ಪವನ್ ತೇಜ್ – ಅದಿತಿ ಪ್ರಭುದೇವ ಅಭಿನಯದ ಈ ಚಿತ್ರ ನವೆಂಬರ್ ನಲ್ಲಿ ತೆರೆಗೆ
Top Story

ಟೀಸರ್ ನಲ್ಲೇ ಕುತೂಹಲ ಮೂಡಿಸಿದ “ಅಲೆಕ್ಸಾ” : ಪವನ್ ತೇಜ್ – ಅದಿತಿ ಪ್ರಭುದೇವ ಅಭಿನಯದ ಈ ಚಿತ್ರ ನವೆಂಬರ್ ನಲ್ಲಿ ತೆರೆಗೆ

by ಪ್ರತಿಧ್ವನಿ
September 23, 2023
Next Post
ಮೋದಿ ಹೇಳಿದ ʼಜನತಾ ಕರ್ಫ್ಯೂʼ ಮತ್ತು ಪಿಣರಾಯಿ ಘೋಷಿಸಿದ ʼವಿಶೇಷ ಪ್ಯಾಕೆಜ್ʼ!‌

ಮೋದಿ ಹೇಳಿದ ʼಜನತಾ ಕರ್ಫ್ಯೂʼ ಮತ್ತು ಪಿಣರಾಯಿ ಘೋಷಿಸಿದ ʼವಿಶೇಷ ಪ್ಯಾಕೆಜ್ʼ!‌

ರಂಜನ್ ಗೋಗಯ್ ಪ್ರಕರಣ: ಕಟಕಟೆಯಲ್ಲಿರುವ ವಿಶ್ವಾಸಾರ್ಹತೆ

ರಂಜನ್ ಗೋಗಯ್ ಪ್ರಕರಣ: ಕಟಕಟೆಯಲ್ಲಿರುವ ವಿಶ್ವಾಸಾರ್ಹತೆ, ತೀರ್ಪು ನೀಡಬೇಕಿರುವ ಆತ್ಮಸಾಕ್ಷಿ

ಆಪರೇಷನ್ ಕಮಲ ಎಂಬುದು ಕೇವಲ ರಾಜಕೀಯ ತಂತ್ರಗಾರಿಕೆಯೇ?

ಆಪರೇಷನ್ ಕಮಲ ಎಂಬುದು ಕೇವಲ ರಾಜಕೀಯ ತಂತ್ರಗಾರಿಕೆಯೇ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist