ಕೋವಿಡ್- 19 ಸಂಕಷ್ಟದಿಂದ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ವಾಪಾಸ್ಸು ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಮೇ 7ರಿಂದ ಆರಂಭಿಸಲಾಗುವುದೆಂದು ಕೇಂದ್ರ ಗೃಹ ಇಲಾಖೆಯು ತಿಳಿಸಿದೆ.
ವಿದೇಶಗಳಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಸಂಕಷ್ಟದಲ್ಲಿರುವ ಭಾರತೀಯರನ್ನು ಗುರುತಿಸಿ ಅವರನ್ನು ಭಾರತಕ್ಕೆ ಹಂತ ಹಂತವಾಗಿ ವಾಪಾಸ್ಸು ಕರೆತರಲು ಸಹಾಯ ಮಾಡಲಿವೆ. ಮೇ 7ರಿಂದ ಆರಂಭವಾಗಲಿರುವ ಈ ಸೇವೆಗಾಗಿ, ವಾಣಿಜ್ಯಿಕ ವಿಮಾನಗಳನ್ನು ಮತ್ತು ನೌಕಾ ಸೇನೆಯನ್ನು ಬಳಸಲಾಗುವುದು ಹಾಗೂ ಪ್ರಯಾಣಿಸಲು ಇಚ್ಚಿಸುವವರು ಇದಕ್ಕಾಗಿ ಹಣ ತೆರಬೇಕಾಗುತ್ತದೆ, ಎಂದು ಗೃಹ ಇಲಾಖೆ ಸೂಚಿಸಿದೆ.
Government of India to facilitate return of Indian Nationals stranded abroad.
Process to begin from May 7 in a phased manner.@MEAIndia & @MoCA_GoI to soon share detailed info on their websites.#COVIDー19#IndiaFightsCoronavirus
Press Release https://t.co/XPYsKYoiJ9 pic.twitter.com/cBrYUKT6Yl
— Spokesperson, Ministry of Home Affairs (@PIBHomeAffairs) May 4, 2020
ಪ್ರಯಾಣಕ್ಕೂ ಮುಂಚಿತವಾಗಿ ಎಲ್ಲರಿಗೂ ವೈದ್ಯಕೀಯ ಪರೀಕ್ಷೆಗಳನ್ನು ಮಾಡುವುದು ಕಡ್ಡಾಯವೆಂದು ಹೇಳಿರುವ ಇಲಾಖೆ, ಕೋವಿಡ್ – 19ನ ರೋಗ ಲಕ್ಷಣಗಳನ್ನು ಹೊಂದಿರದವರಿಗೆ ಮಾತ್ರ ಭಾರತಕ್ಕೆ ಮರಳಲು ಅವಕಾಶ ಮಾಡಿಕೊಡಲಾಗಿದೆ.
ಇನ್ನು ಇವರೆಲ್ಲರೂ ಭಾರತಕ್ಕೆ ಬಂದಿಳಿದ ನಂತರ ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಎಲ್ಲರಿಗೂ ಭಾರತದಲ್ಲಿ ಮತ್ತೊಮ್ಮೆ ವೈದ್ಯಕೀಯ ಪರೀಕ್ಷೆ ನಡೆಸಿ ಮುಂದಿನ 14 ದಿನಗಳ ಕಾಲ ಆಸ್ಪತ್ರೆ ಅಥವಾ ಯಾವುದಾದರೂ ಸಂಸ್ಥೆಯಲ್ಲಿ ಕ್ವಾರೆಂಟೈನ್‌ನಲ್ಲಿ ಇಡಲಾಗುವುದು ಮತ್ತು ಈ ಸೇವೆಗೂ ಹಣ ಪಾವತಿಸಬೇಕಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಕ್ವಾರೆಂಟೈನ್‌ನಲ್ಲಿದ್ದವರಿಗೆ 14 ದಿನಗಳ ನಂತರ ಕೋವಿಡ್ – 19 ಪರೀಕ್ಷೆ ನಡೆಸಿ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಈ ಕುರಿತು ರಾಜ್ಯ ಸರ್ಕಾರಗಳಿಗೆ ಆದೇಶ ನೀಡಲಾಗಿದ್ದು ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕೆಂದು ಸೂಚಿಸಲಾಗಿದೆ.


