ರಾಜ್ಯದಲ್ಲಿ ರೈತರಿಗೆ ಲಾಕ್ಡೌನ್ ಸಂಕಷ್ಟ ಬಗೆಹರಿದಂತೆ ಕಾಣುತ್ತಿಲ್ಲ. ಸರ್ಕಾರ ಲಾಕ್ಡೌನ್ನಿಂದ ಕೃಷಿ ಚಟುವಟಿಕೆಗಳಿಗೆ ಎಷ್ಟೇ ವಿನಾಯಿತಿ ನೀಡಿದರೂ, ಬೆಲೆ ಇಲ್ಲದೇ ಅಥವಾ ಕೊಳ್ಳುವವರಿಲ್ಲದೇ ರೈತರ ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತಿಲ್ಲ.
ಇದೇ ಪರಿಸ್ಥಿತಿ ರಾಮನಗರ ಜಿಲ್ಲೆಯ ಮಾವು ಬೆಳೆಗಾರರದು. ಇನ್ನೇನು ಬೆಳೆದಿರುವ ಮಾವನ್ನು ಮಾರುಕಟ್ಟೆಗೆ ಮಾರಿ ಸಮಾಧಾನದ ಬದುಕು ನಡೆಸಬೇಕು ಎಂದುಕೊಂಡಿದ್ದ ಬಹಳಷ್ಟು ರೈತರ ಬದುಕು ಇಂದು ನೋವಿನಿಂದ ಕೂಡಿದೆ. ಮಾವು ಕೊಳೆತು ಹೋದರೂ ಅದನ್ನು ನೋಡಿ ನಿಟ್ಟುಸಿರು ಬಿಡುತ್ತಿದ್ದಾರೆಯೇ ಹೊರತು ಬೇರೇನೂ ದಾರಿ ತೋಚದಾಗಿದೆ.