ಲೋಕಸಭೆಯಲ್ಲಿ ಶನಿವಾರ ಮಂಡಿಸಲಾದ ಹೊಸ ಮಸೂದೆಯಲ್ಲಿ 300 ಕ್ಕಿಂತ ಕಡಿಮೆ ಕಾರ್ಮಿಕರನ್ನು ಹೊಂದಿರುವ ಕಂಪನಿಗಳಿಗೆ ಸರ್ಕಾರದ ಪೂರ್ವ ಅನುಮತಿ ಪಡೆಯದೆ ಕೆಲಸಗಾರರನ್ನು ನೇಮಿಸಿಕೊಳ್ಳಲು ಮತ್ತು ಕೆಲಸದಿಂದ ತೆಗೆದುಹಾಕಲು ಶೀಘ್ರದಲ್ಲೇ ಅವಕಾಶ ನೀಡಲಾಗುವುದು.
ಪ್ರಸ್ತುತ, 100 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಕೈಗಾರಿಕಾ ಸಂಸ್ಥೆಗಳಿಗೆ ಮಾತ್ರ ಸರ್ಕಾರದ ಅನುಮತಿಯಿಲ್ಲದೆ ತಮ್ಮ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಮತ್ತು ಕೆಲಸದಿಂದ ತೆಗೆದುಹಾಕಲು ಅನುಮತಿ ಇದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಾಂಗ್ರೆಸ್ ಮತ್ತು ಇತರ ಕೆಲವು ಪಕ್ಷಗಳ ವಿರೋಧದ ಮಧ್ಯೆ ಈ ಮಸೂದೆಯನ್ನು ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಪರಿಚಯಿಸಿದ್ದಾರೆ. ಈ ಸಂಹಿತೆಯ ಹೊರತಾಗಿ, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ, 2020 ಮತ್ತು ಸಾಮಾಜಿಕ ಭದ್ರತೆ, 2020 – ಅನ್ನು ಕೂಡಾ ಸಚಿವರು ಲೋಕಸಭೆಯಲ್ಲಿ ಪರಿಚಯಿಸಿದ್ದಾರೆ.
ಕಾಂಗ್ರೆಸ್ ನಾಯಕರಾದ ಮನೀಶ್ ತಿವಾರಿ ಮತ್ತು ಶಶಿ ತರೂರ್ ಹಾಗೂ ಇತರ ವಿರೋಧ ಪಕ್ಷದ ನಾಯಕರು ಈ ಮೂರು ಮಸೂದೆಗಳನ್ನು ಪರಿಚಯಿಸುವುದನ್ನು ವಿರೋಧಿಸಿದ್ದಾರೆ.
ಈ ಮೂರು ಮಸೂದೆಗಳು ತಮ್ಮ ಹಿಂದಿನ ಸ್ವರೂಪಗಳ ಮೂಲಭೂತವಾಗಿ ಬದಲಾದ ಆವೃತ್ತಿಗಳಾಗಿವೆ ಎಂದು ಮನೀಶ್ ತಿವಾರಿ ಹೇಳಿದ್ದಾರೆ ಮತ್ತು ಅವುಗಳನ್ನು ಹಿಂಪಡೆಯಲು ಮತ್ತು ಅವುಗಳನ್ನು ಪರಿಚಯಿಸುವ ಮೊದಲು ವ್ಯಾಪಕವಾದ ಸಮಾಲೋಚನೆಗಳನ್ನು ನಡೆಸುವಂತೆ ಸಚಿವರನ್ನು ಒತ್ತಾಯಿಸಿದ್ದಾರೆ. ಅಲ್ಲದೆ ಈ ಮಸೂದೆಗಳು ಕೈಗಾರಿಕಾ ಸಂಬಂಧ ಸಂಹಿತೆಗೆ ಸಂಬಂಧಿಸಿದಂತೆ, ಇದು ಕಾರ್ಮಿಕರ ಮುಷ್ಕರ ಹಕ್ಕನ್ನು ತೀವ್ರವಾಗಿ ನಿರ್ಬಂಧಿಸುತ್ತದೆ. ಇದು ಕಾರ್ಮಿಕರ ಹಕ್ಕುಗಳಿಗೆ ಹೊಡೆತವಾಗಿದೆ ಎಂದಿದ್ದಾರೆ.