Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ರಂಜನ್ ಗೋಗಯ್ ಪ್ರಕರಣ: ಕಟಕಟೆಯಲ್ಲಿರುವ ವಿಶ್ವಾಸಾರ್ಹತೆ, ತೀರ್ಪು ನೀಡಬೇಕಿರುವ ಆತ್ಮಸಾಕ್ಷಿ

ರಂಜನ್ ಗೋಗಯ್ ಪ್ರಕರಣ: ಕಟಕಟೆಯಲ್ಲಿರುವ ವಿಶ್ವಾಸಾರ್ಹತೆ, ತೀರ್ಪು ನೀಡಬೇಕಿರುವ ಆತ್ಮಸಾಕ್ಷಿ
ರಂಜನ್ ಗೋಗಯ್ ಪ್ರಕರಣ: ಕಟಕಟೆಯಲ್ಲಿರುವ ವಿಶ್ವಾಸಾರ್ಹತೆ

March 21, 2020
Share on FacebookShare on Twitter

ಇದೇ 16ನೇ ತಾರೀಖು ಸಂಜೆ ರಂಜನ್ ಗೋಗಾಯ್ ರಾಜ್ಯಸಭೆಗೆ ನಾಮನಿರ್ದೇಶನದ ಅಧಿಕೃತ ಆದೇಶ ಹೊರಬಂತು.‌ ಈ ಬಗ್ಗೆ ನೂರಾರು ರೀತಿಯ ಟೀಕೆಗಳು ಬರುತ್ತಿವೆ. ಕೇಂದ್ರ ಸರ್ಕಾರ ಮತ್ತು ರಂಜನ್ ಗೋಗಯ್ ಇಬ್ಬರ ಬಗ್ಗೆಯೂ ಟೀಕೆಗಳು ಬರುತ್ತಿವೆ. ಆದರೆ ಈವರೆಗೆ ಯಾರೊಬ್ಬರೂ ಕೂಡ, ಅದರಲ್ಲೂ ನ್ಯಾಯಾಂಗ ಮೂಲದವರು ರಂಜನ್ ಗೋಗಾಯ್ ನಾಮನಿರ್ದೇಶನವನ್ನು ಸಮರ್ಥಿಸಿ ಮಾತನಾಡಿಲ್ಲ. ಜಸ್ಟೀಸ್ ರಂಗನಾಥ್ ಮಿಶ್ರಾ ಪ್ರಕರಣವನ್ನು ಬಿಜೆಪಿ ಉಲ್ಲೇಖಿಸುತ್ತಿದೆಯಾದರೂ ಅದು ತಥಾಕಥಿತ ರಾಜಕೀಯ ಪಕ್ಷವೊಂದರ ‘ಸಮರ್ಥನೆಯ ಸಂಪ್ರದಾಯವೇ’ ಹೊರತು. ನಿಜ ಅರ್ಥದ ಸಮರ್ಥನೆ ಎಂಬಂತೆ ಧ್ವನಿಸುತ್ತಿಲ್ಲ.

ಹೆಚ್ಚು ಓದಿದ ಸ್ಟೋರಿಗಳು

ಸುಪ್ರೀಂ ಕೋರ್ಟ್ ಗಮನ ಸೆಳೆಯಲು ಬೀದಿಗಿಳಿದು ಹೋರಾಟ ಅನಿವಾರ್ಯ: ಬಸವರಾಜ ಬೊಮ್ಮಾಯಿ

ತಮಿಳುನಾಡಿನಲ್ಲಿ ಬಿಜೆಪಿ ಜತೆಗಿನ ಬಾಂಧವ್ಯವನ್ನು ಕಳೆದುಕೊಳ್ಳುತ್ತೇನೆ : ಉದಯನಿಧಿ ಸ್ಟಾಲಿನ್

ಕಾವೇರಿ ನೀರಿ ನಿಯಂತ್ರಣ ಸಮಿತಿ ಸಭೆ: ಕರ್ನಾಟಕದ ಪರವಾಗಿ ಅಧಿಕಾರಿಗಳು ವಾದ ಮಂಡನೆ 

ರಂಜನ್ ಗೋಗಾಯ್ ರಾಜ್ಯಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸುವ ವೇಳೆ ಕಾಂಗ್ರೆಸ್ ಕಲಾಪ ಬಹಿಷ್ಕರಿಸಿ, ‘ನಿಮಗೆ ನಾಚಿಕೆಯಾಗಬೇಕು’ ಎಂಬರ್ಥದ ‘ಶೇಮ್’ ಪದ ಬಳಸಿ ಮೂದಲಿಸಿದೆ. ಹೀಗೆ ಸಹೋದ್ಯೋಗಿ ಸಂಸದನೊಬ್ಬನ ಪ್ರಮಾಣವಚನವನ್ನು ಬಹಷ್ಕರಿಸಿದ್ದು ವಿರಳಾತಿವಿರಳ ಪ್ರಸಂಗ‌. ಇಷ್ಟು ದಿನ ಮಾತುಮಾತಿಗೂ ‘ಗೌರವಾನ್ವಿತ ನ್ಯಾಯಮೂರ್ತಿಗಳೇ…’ ಎಂದು ಕರೆಸಿಕೊಳ್ಳುತ್ತಿದ್ದ ರಂಜನ್ ಗೋಗಯ್ ಅವರನ್ನು ಈಗ ‘ನಿಮಗೆ ನಾಚಿಕೆಯಾಗಬೇಕು…’ ಎಂದು ಹೇಳಲಾಗಿದೆ.

ರಂಜನ್ ಗೋಗಾಯ್ 2018ರ ಅಕ್ಟೋಬರ್ 3ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗಿ ಅಧಿಕಾರವಹಿಸಿಕೊಂಡ ವೇಳೆ ‘ಸ್ವತಂತ್ರ ನ್ಯಾಯಮೂರ್ತಿಗಳು ಮತ್ತು ಸದ್ದು ಮಾಡುವ ಪತ್ರಕರ್ತರಷ್ಟೇಯಲ್ಲ, ಸದ್ದು ಮಾಡುವ ನ್ಯಾಯಮೂರ್ತಿಗಳು ಮತ್ತು ಸ್ವತಂತ್ರ ಪತ್ರಕರ್ತರು ಕೂಡ ಇರಬೇಕು’ ಎಂದಿದ್ದರು. ಈ ಮಾತಿಗೆ ಪೂರಕವಾಗಿ ಮುಖ್ಯ ನ್ಯಾಯಮೂರ್ತಿ ಆಗುವ ಕೆಲ ದಿನಗಳ ಹಿಂದೆ ತನ್ನ ಇತರೆ ಮೂವರು ಸಹುದ್ಯೋಗಿ ನ್ಯಾಯಮೂರ್ತಿಗಳೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ‘ಸದ್ದು ಮಾಡುವ’ ನ್ಯಾಯಮೂರ್ತಿ ಆಗಿದ್ದರು. ಆಗ ಆ ರೀತಿ ಸದ್ದು ಮಾಡಲು ಸಹಕರಿಸಿದವರು ಸ್ವತಂತ್ರ ಪತ್ರಕರ್ತರು ಎಂಬುದು ದೆಹಲಿ ಪತ್ರಿಕೋದ್ಯಮದ ಪಡಸಾಲೆಯಲ್ಲಿ ಎಲ್ಲರಿಗೂ ಗೊತ್ತಿರುವ ಸತ್ಯವೇ. ಆಗ ಸದ್ದು ಮಾಡುವ ನ್ಯಾಯಮೂರ್ತಿ ಆಗಿದ್ದ ಅವರು, ‘ಸ್ವತಂತ್ರ್ಯ ನ್ಯಾಯಮೂರ್ತಿ ಯಾವಾಗ ಆಗಿದ್ದರು?’ ಎಂಬ ಪ್ರಶ್ನೆ ಎದ್ದಿದೆ. ಏಕೆಂದರೆ ಈಗ ಅವರು ಕೊಟ್ಟಿರುವ ತೀರ್ಪುಗಳ ಮೇಲೂ ಅದರಲ್ಲೂ ಮುಖ್ಯ ನ್ಯಾಯಮೂರ್ತಿಯಾಗಿ ಕೊಟ್ಟಿರುವ ತೀರ್ಪುಗಳ ಮೆಲೆ ಅಪನಂಬಿಕೆಯ ಕರಿನೆರಳು ಕಾಣಿಸುತ್ತಿದೆ.

‘ಸದ್ದು ಮಾಡುವ’ ನ್ಯಾಯಮೂರ್ತಿಯಾಗಿದ್ದ, ಸ್ವತಂತ್ರ ನ್ಯಾಯಮೂರ್ತಿ ಆಗಲು ಸಾಧ್ಯವಾಗದ ರಂಜನ್ ಗೋಗಯ್ ಮುಂದೆ ಸ್ವತಂತ್ರವಾಗಿ ರಾಜ್ಯಸಭೆಯಲ್ಲಿ ಸದ್ದು ಮಾಡಲು ಸಾಧ್ಯವೇ? ದೇಶದ ಅತಿ ಎತ್ತರದ ನ್ಯಾಯಾಲಯದಿಂದ ಬಂದು ಪ್ರಜಾಪ್ರಭುತ್ವದ ಇನ್ನೊಂದು ಪವಿತ್ರ ಸ್ಥಾನದಲ್ಲಿ ತುಟಿ ಕಚ್ಚಿಕೊಂಡು ಯಾವ ‘ಕೊಡುಗೆ’ ನೀಡಬಲ್ಲರು? ಸಾಧ್ಯವಿಲ್ಲ ಎನ್ನುವುದಾದರೆ ನಿವೃತ್ತಿಯ ಬಳಿಕ ನಿರರ್ಥಕವಲ್ಲದೆ ಮತ್ತೆನೂ ಅಲ್ಲ.

‘ಬಹಳ ಬದ್ಧತೆಯಿಂದಲೇ ಇಲ್ಲಿಗೆ ಬಂದಿದ್ದೇನೆ. ಪ್ರಮಾಣವಚನ ಸ್ವೀಕರಿಸಿದ ಬಳಿಕ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ ಎಂಬ ಎರಡೇ ಎರಡು ಮಾತನಾಡಿ ಪಲಾಯನ ಮಾಡಿದ್ದ ರಂಜನ್ ಗೋಗಯ್ ಈಗ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ‘ರಾಜ್ಯಸಭೆಯಲ್ಲಿ ಪ್ರತಿಭಟಿಸಿದವರ ವಿರುದ್ಧ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ, ತಮ್ಮ ನಡೆ ಬಗ್ಗೆ ಯಾರ ವಿರೋಧವೂ ಇಲ್ಲ, ಎಲ್ಲರೂ ಸ್ವಾಗತಿಸಲಿದ್ದಾರೆ’ ಎಂಬ ಮತ್ತೆರಡು ಮಾತನಾಡಿ ಪ್ರಮಾಣವಚನ ಸ್ವೀಕರಿಸಿದ ಮರುಕ್ಷಣವೇ ತಾನು ಸದ್ದು ಮಾಡುವ ಅಥವಾ ಸ್ವತಂತ್ರ ನ್ಯಾಯಮೂರ್ತಿಯಲ್ಲ, ಕೇಂದ್ರ ಸರ್ಕಾರ ಕರುಣಿಸಿರುವ ರಾಜ್ಯಸಭಾ ಸದಸ್ಯತ್ವ ಪಡೆದಿರುವ ಪಲಾನುಭವಿ ಎಂಬುದನ್ನು ಸಾಬೀತು ಪಡಿಸಿದ್ದಾರೆ‌; ಅಕ್ಷರಶಃ ರಾಜಕಾರಣಿಗಳ ರೀತಿ. ಬಹುಶಃ ಇದಕ್ಕೆ ಇರಬೇಕು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು, ರಂಜನ್ ಗೋಗಯ್ ಬಗ್ಗೆ ಅವಹೇಳನಕಾರಿ ಪದ ಬಳಸಿರುವುದು.

ವಿಶ್ವಾಸಾರ್ಹತೆ ಹೇಗಿರಬೇಕು ಎಂಬುದಕ್ಕೆ ಇದೇ ರಂಜನ್ ಗೋಗಯ್ ಅವರ ಸಹೋದ್ಯೋಗಿಯಾಗಿದ್ದ ಮತ್ತು ಇವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ್ದ ಜಸ್ಟಿಸ್ ಚಲಮೇಶ್ವರ್ ಉದಾಹರಣೆ. ‌ನಿವೃತ್ತಿ ಆದ ತಕ್ಷಣ ಸುಪ್ರೀಂ ಕೋರ್ಟಿನ ಬಾರ್ ಅಸೋಸಿಯೇಷನ್ ‌ನೀಡುವ ಬಿಳ್ಕೋಡುಗೆ ಸಮಾರಂಭದಲ್ಲೂ ಭಾಗವಹಿಸದೆ ಮಾರನೇ ದಿನವೇ ತಮ್ಮ ಸರ್ಕಾರಿ ನಿವಾಸವನ್ನು ತ್ಯಜಿಸಿ ಹುಟ್ಟಿದ ಊರಿಗೆ ಮರಳಿದವರು ಜಸ್ಟೀಸ್ ಚಲಮೇಶ್ವರ್. ಅಂದು ಸದ್ದು ಮಾಡಿದ್ದ ಅವರೀಗ ನಿಜ ಅರ್ಥದ ಸ್ವತಂತ್ರ ನ್ಯಾಯಮೂರ್ತಿಗಳು.

ಆ ಐತಿಹಾಸಿಕ ಪತ್ರಿಕಾಗೋಷ್ಠಿಯಲ್ಲಿ ರಂಜನ್ ಗೋಗಯ್ ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂಬ ಆತಂಕ ವ್ಯಕ್ತಪಡಿಸಿದ್ದರು‌. ಅಂದಿನ ಮುಖ್ಯ ನ್ಯಾಯಮೂರ್ತಿಗಳು ಕೇಸುಗಳ ಹಂಚಿಕೆಯಲ್ಲಿ ತಪ್ಪು ಮಾಡುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದರು. ಇದರ ಮೂಲಕ ಆಳುವ ಪಕ್ಷಕ್ಕೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಕಂಟಕ ಬಂದೊದಗಿದೆ ಎಂದು ಹಳಹಳಿಸಿದ್ದರು. ಬದಲಾದ ಕಾಲಘಟ್ಟದಲ್ಲಿ ತಮ್ಮ ವಿರುದ್ಧವೇ ಬಂದಿದ್ದ ಆರೋಪವನ್ನು ತಾವೇ ವಿಚಾರಣೆ ನಡೆಸಿ ರಂಜನ್ ಗೋಗಯ್ ಈಗ ಅದೇ ಆಳುವ ಸರ್ಕಾರದೊಂದಿಗೆ ಸೇರಿಕೊಳ್ಳುವ ಮೂಲಕ‌ ಪ್ರಜಾಪ್ರಭುತ್ವದ ಮೌಲ್ಯವನ್ನು ಮುಗಿಲೆತ್ತರಕ್ಕೆ ಕೊಂಡೊಯ್ಯಬಯಸಿದ್ದಾರೆ.

ರಂಜನ್ ಗೋಗಯ್ ಅವರ ಪ್ರಹಸನದ ಪ್ರತಿ ಘಟ್ಟವೂ ವಿಶ್ವಾಸಾರ್ಹತೆ ಬಗೆಗೆ ಮೂಡಿರುವ ಅನುಮಾನಗಳೆಡೆಗೇ ಹೊರಳುತ್ತವೆ. ನ್ಯಾಯಮೂರ್ತಿಗಳಾದವರು ನಿವೃತ್ತರಾದ ಬಳಿಕ ರಾಜ್ಯಪಾಲ, ರಾಜ್ಯಸಭಾ ಸದಸ್ಯ, ಸಿಎಜಿ, ಯೂಪಿಎಸ್ ಸಿ, ಲೋಕಪಾಲ್ ಮತ್ತಿತರ ಹುದ್ದೆಗಳನ್ನು ಅಲಂಕರಿಸುವ ಬಗೆಗಿನ ಚರ್ಚೆ ಬಹಳ ಹಿಂದಿನದು. ನಿವೃತ್ತಿಯಾದ ಬಳಿಕ ಕನಿಷ್ಠ ಪಕ್ಷ 2 ವರ್ಷವಾದರೂ ಅಂತರ ಇರಬೇಕೆಂಬ ಮತ್ತೊಂದು ವಾದವಿದೆ. 2012ರಲ್ಲಿ ಬಿಜೆಪಿ ನಾಯಕ ಅರುಣ್ ಜೈಟ್ಲಿ ‘ಎರಡು ರೀತಿಯ ನ್ಯಾಯಾಧೀಶರಿರುತ್ತಾರೆ. ಒಂದು ಕಾನೂನನ್ನು ಚೆನ್ನಾಗಿ ಬಲ್ಲವರು, ಇನ್ನೊಂದು ಕಾನೂನು ಮಂತ್ರಿಯನ್ನು ಚೆನ್ನಾಗಿ ಬಲ್ಲವರು’ ಎಂದು ಹೇಳಿದ್ದರು. ಜೈಟ್ಲಿ ವಕೀಲರಾಗಿದ್ದರು ಮತ್ತು ಕಾನೂನು ಸಚಿವರಾಗಿದ್ದರು. ಇದೇ ರೀತಿ ಕೇಂದ್ರ ಸಚಿವ ನಿತಿನ್ ಗಡ್ಕರಿ ‘ನ್ಯಾಯಾಲಯದ ತೀರ್ಪುಗಳ ಮೇಲೆ ಸರ್ಕಾರದ ಪ್ರಭಾವ ಇರುತ್ತೆ’ ಎಂದು ಹೇಳಿದ್ದರು. ಇಬ್ಬರು ನ್ಯಾಯಾಧೀಶರ ಬಗೆಗೆ ಆಡಿರುವ ಮಾತುಗಳು ಉಪೇಕ್ಷೆ ಮಾಡುವಂಥದ್ದಲ್ಲ. ವಿಶ್ವಾಸಾರ್ಹತೆ. ವಿಶ್ವಾಸಾರ್ಹತೆ ಕರಗಿರುವ ಹೊತ್ತಿನಲ್ಲಿ ಆತ್ಮಸಾಕ್ಷಿಯೊಂದರಿಂದ ಮಾತ್ರ ನ್ಯಾಯ ನಿರೀಕ್ಷೆ ಮಾಡಬಹುದು.

RS 500
RS 1500

SCAN HERE

Pratidhvani Youtube

«
Prev
1
/
5515
Next
»
loading
play
Tamil Naduನಲ್ಲಿ Siddaramaiah ಫೋಟೋಗೆ ಹಾರ ಹಾಕಿ ಧರಣಿ | ರಾಮನಗರದಲ್ಲಿ ತಮಿಳುನಾಡು ಸಿಎಂ Stalin​ಗೆ ತಿಥಿ!
play
Mandya : ರಾಮನಗರದಲ್ಲಿ ತಮಿಳುನಾಡು ಸಿಎಂ Stalin​ಗೆ ತಿಥಿ!
«
Prev
1
/
5515
Next
»
loading

don't miss it !

ಪ್ರಕಾಶ್ ರಾಜ್ ಮೇಲೆ ಜೀವ ಬೆದರಿಕೆ: ಯೂ ಟ್ಯೂಬ್‌  ಚಾನೆಲ್ ವಿರುದ್ಧ ದೂರು
Top Story

ಪ್ರಕಾಶ್ ರಾಜ್ ಮೇಲೆ ಜೀವ ಬೆದರಿಕೆ: ಯೂ ಟ್ಯೂಬ್‌ ಚಾನೆಲ್ ವಿರುದ್ಧ ದೂರು

by ಪ್ರತಿಧ್ವನಿ
September 20, 2023
ಲೋಕಸಭೆಗೆ ಅಸ್ತ್ರ ಆಯಿತೇ ಕಾವೇರಿದ ಹೋರಾಟ..? ಕನ್ನಡಿಗರಿಗೆ ಲಾಭ ತರುತ್ತಾ..?
Top Story

ಲೋಕಸಭೆಗೆ ಅಸ್ತ್ರ ಆಯಿತೇ ಕಾವೇರಿದ ಹೋರಾಟ..? ಕನ್ನಡಿಗರಿಗೆ ಲಾಭ ತರುತ್ತಾ..?

by ಕೃಷ್ಣ ಮಣಿ
September 26, 2023
ಇದೀಗ

ಕಾಂಗ್ರೆಸ್‌ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ವಿಷಪ್ರಾಶನ ಮಾಡಿದೆ: ಮಾಜಿ ಸಿಎಂ ಹೆಚ್‌.ಡಿ.ಕೆ

by Prathidhvani
September 20, 2023
ನಾವು ಹುಡುಗಾಟಕ್ಕಾಗಿ ಬಂದ್‌ ಮಾಡಿಲ್ಲ: ವಾಟಾಳ್‌ ನಾಗರಾಜ್‌
Top Story

ನಾವು ಹುಡುಗಾಟಕ್ಕಾಗಿ ಬಂದ್‌ ಮಾಡಿಲ್ಲ: ವಾಟಾಳ್‌ ನಾಗರಾಜ್‌

by ಪ್ರತಿಧ್ವನಿ
September 25, 2023
“ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತದ ಮಹಿಳಾ ಧ್ವನಿ” ಭಾರತದ ಬಾಹ್ಯಾಕಾಶ ವಿಜ್ಞಾನದ ನಡಿಗೆಯಲ್ಲಿ ಮಹಿಳಾ ವಿಜ್ಞಾನಿಗಳ ಸಾಧನೆ ಹಿರಿದು
ಅಂಕಣ

“ಬಾಹ್ಯಾಕಾಶ ವಿಜ್ಞಾನದಲ್ಲಿ ಭಾರತದ ಮಹಿಳಾ ಧ್ವನಿ” ಭಾರತದ ಬಾಹ್ಯಾಕಾಶ ವಿಜ್ಞಾನದ ನಡಿಗೆಯಲ್ಲಿ ಮಹಿಳಾ ವಿಜ್ಞಾನಿಗಳ ಸಾಧನೆ ಹಿರಿದು

by ನಾ ದಿವಾಕರ
September 23, 2023
Next Post
ಆಪರೇಷನ್ ಕಮಲ ಎಂಬುದು ಕೇವಲ ರಾಜಕೀಯ ತಂತ್ರಗಾರಿಕೆಯೇ?

ಆಪರೇಷನ್ ಕಮಲ ಎಂಬುದು ಕೇವಲ ರಾಜಕೀಯ ತಂತ್ರಗಾರಿಕೆಯೇ?

ಆರ್ಥಿಕ ಸಮಸ್ಯೆಯಾಗಿ ಕರೋನಾ

ಆರ್ಥಿಕ ಸಮಸ್ಯೆಯಾಗಿ ಕರೋನಾ, ವಿಶ್ವ ನಾಯಕರ ಆಡಳಿತ ಕ್ರಮಗಳ ಅವಲೋಕನ

ಪರಿಸರ ಮಾರಕ ನಿರ್ಧಾರ ಕೈಗೊಳ್ಳುವುದಾದರೆ ವನ್ಯಜೀವಿ ಮಂಡಳಿ ಅಗತ್ಯವೇನು?

ಪರಿಸರ ಮಾರಕ ನಿರ್ಧಾರ ಕೈಗೊಳ್ಳುವುದಾದರೆ ವನ್ಯಜೀವಿ ಮಂಡಳಿ ಅಗತ್ಯವೇನು?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist