• Home
  • About Us
  • ಕರ್ನಾಟಕ
Tuesday, November 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಮೋದಿ, ನಿರ್ಮಲಾ ಸೀತಾರಾಮನ್ ಭೇಟಿ: ಬೇಕಿದೆ ಇನ್ನೊಂದು ಪರಿಣಾಮಕಾರಿ ಪ್ಯಾಕೇಜ್

by
April 16, 2020
in ದೇಶ
0
ಮೋದಿ
Share on WhatsAppShare on FacebookShare on Telegram

ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಇಂದು ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದಾರೆ. ಪ್ರಧಾನಿ ಮತ್ತು ಹಣಕಾಸು ಸಚಿವರ ಭೇಟಿ ಬಹಳ ಮಹತ್ವ ಪಡೆದುಕೊಂಡಿದೆ. ಕುತೂಹಲವನ್ನೂ ಹುಟ್ಟಿಸಿದೆ. ಎರಡನೇ ಹಂತದ ಲಾಕ್‌ಡೌನ್ ನಿರ್ವಹಣೆಗೆ ವಿಶೇಷ ಪ್ಯಾಕೇಜ್ ಘೋಷಿಸಬಹುದೆಂಬ ನಿರೀಕ್ಷೆಗಳೂ ಇವೆ. ಮೊದಲ ಹಂತದ ಲಾಕ್‌ಡೌನ್ ಘೋಷಣೆ ಬಳಿಕ 1.70 ಕೋಟಿ ರೂಪಾಯಿ ಮೌಲ್ಯದ ವಿಶೇಷ ಪ್ಯಾಕೇಜ್ ನೀಡಲಾಗಿತ್ತು. ಹಾಗಾಗಿ ಈಗಲೂ ಇನ್ನೊಂದು ಪ್ಯಾಕೇಜ್ ನೀಡಬಹುದೆಂಬ ನಿರೀಕ್ಷೆಗಳಿವೆ.

ADVERTISEMENT

ಪ್ರಧಾನ ಮಂತ್ರಿ ಮೋದಿ ಎರಡನೇ ಹಂತದ ಲಾಕ್‌ಡೌನ್ ಘೋಷಣೆ ಮಾಡುವ ಸಂದರ್ಭದಲ್ಲಿ ‘ಇದರಿಂದ ಬಹಳಷ್ಟು ಜನಕ್ಕೆ ತೊಂದರೆ ಆಗಲಿದೆ. ನಮ್ಮ ನಡುವಿನ ಬಡವರು ಹಸಿವಿನಿಂದ ಸಾಯುವಂತಾಗಬಾರದು. ಹಾಗೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಅವರಿಗೆ ನೆರವು ನೀಡಿ’ ಎಂದು ಮನವಿ ಮಾಡಿಕೊಂಡಿದ್ದರು. ಜೊತೆಗೆ ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ್ ಯೋಜನೆಯಿಂದ ಬಡವರಿಗೆ ನೆರವು ನೀಡಲಾಗುವುದು ಎಂಬ ಭರವಸೆ ನೀಡಿದ್ದರು. ಮೊದಲ ಹಂತದಲ್ಲಿ ಘೋಷಣೆ ಮಾಡಿದ ಪ್ಯಾಕೇಜ್ ಕೂಡ ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ್ ಯೋಜನೆಯಡಿಯಲ್ಲೇ ಬರಲಿದೆ. ಆದುದರಿಂದ ಈಗಲೂ ಇದೇ ಯೋಜನೆಯಡಿ ಇನ್ನೊಂದು ಪ್ಯಾಕೇಜ್ ನಿರೀಕ್ಷೆ ಮಾಡಲಾಗಿದೆ.

ಮೊದಲ ಪ್ಯಾಕೇಜ್ ವ್ಯಾಪ್ತಿ ಕಿರಿದಾಗಿತ್ತು. ಮೊದಲ ಪ್ಯಾಕ್‌ಜ್‌ನಲ್ಲಿ ದಿಢೀರನೇ ಲಾಕ್‌ಡೌನ್ ಘೋಷಿಸಿದ್ದರಿಂದ ತತ್‌ಕ್ಷಣಕ್ಕೆ ತೊಂದರೆಗೊಳಗಾದ ಬಡವರು, ಮಧ್ಯಮ ವರ್ಗದವರು ಮತ್ತು ಕಾರ್ಮಿಕರ ಬಗ್ಗೆ ಮಾತ್ರ ಗಮನಹರಿಸಲಾಗಿತ್ತು. ಬಡವರಿಗೆ ಪ್ರೋತ್ಸಾಹಧನ ನೀಡಲು ನಿಶ್ಚಯಿಸಲಾಗಿತ್ತು. ರೈತರಿಗೆ ಫಸಲ್ ಭೀಮಾ ಯೋಜನೆಯ ವಾರ್ಷಿಕ ಹಣವನ್ನು ಸ್ವಲ್ಪ ಹೆಚ್ಚು ಮಾಡಿ ತ್ವರಿತವಾಗಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿತ್ತು. ಕಾರ್ಮಿಕರ ಪ್ರಾವಿಡೆಂಟ್ ಫಂಡ್ ಅನ್ನು ಸರ್ಕಾರವೇ ತುಂಬಿತ್ತು. ಬಿಪಿಎಲ್ ಕಾರ್ಡ್‌ದಾರರಿಗೆ ತಕ್ಷಣವೇ ಆಹಾರ ಸಾಮಗ್ರಿಗಳನ್ನು ನೀಡಲಾಗಿತ್ತು. ಮಧ್ಯಮ ವರ್ಗದವರಿಗೆ ಗ್ಯಾಸ್ ಸಿಲಿಂಡರ್ ನೀಡಲು ಆದೇಶಿಸಲಾಗಿತ್ತು. ಹಿರಿಯ ನಾಗರಿಕರು, ವಿಧವೆಯರು, ಒಂಟಿ ಮಹಿಳೆಯರು ಮತ್ತು ಅಂಗವಿಕಲರಿಗೆ ಮಾಸಾಶನ ಬಿಡುಗಡೆ ಮಾಡಲಾಗಿತ್ತು. ಆದರೆ ಈ ಬಾರಿಯ ಪ್ಯಾಕೇಜ್ ವ್ಯಾಪ್ತಿ ದೊಡ್ಡದಾಗಬೇಕಿದೆ.

ಹೇಗೆಂದರೆ, ಲಾಕ್‌ಡೌನ್‌ನಿಂದ ತೀವ್ರ ತೊಂದರೆ ಅನುಭವಿಸುತ್ತಿರುವ ವಲಸಿಗರು, ದಿನಗೂಲಿ ನೌಕರರು, ರಸ್ತೆಬದಿ ಮಾರಾಟಗಾರರು, ರೈತರೂ ಸೇರಿದಂತೆ ಎಲ್ಲಾ ರೀತಿಯ ಬಡವರಿಗೆ ಇನ್ನೂ ಒಂದು ಸಲ ಪ್ರೋತ್ಸಾಹಧನ ಕೊಡುವ ಮೂಲಕ ನೆರವು ನೀಡಬೇಕು. ಹಣ ಕೊಡುವುದು ಮಾತ್ರವಲ್ಲದೆ ‘ಅವತ್ತಿನ ಅನ್ನವನ್ನು ಅವತ್ತೇ ದುಡಿದು ತಿನ್ನುತ್ತಿದ್ದ’ ಈ ವರ್ಗಕ್ಕೆ ಉದ್ಯೋಗವಕಾಶಗಳನ್ನೂ ತೆರದಿಡಬೇಕು. ಏಪ್ರಿಲ್ 20ರ ಬಳಿಕ ಹಂತಹಂತವಾಗಿ ಲಾಕ್‌ಡೌನ್ ನಿಯಮಾವಳಿಗಳನ್ನು ಸಡಿಲಿಸಿದಾಗ ಈ ವರ್ಗಕ್ಕೆ ದುಡಿಯಲು ಅವಕಾಶ ನೀಡಬೇಕು. ಇದಕ್ಕೆ ಪೂರಕವಾಗಿ ಪ್ಯಾಕೇಜ್ ರೂಪಿಸಬೇಕು. ಈ ಹಿನ್ನೆಲೆಯಲ್ಲಿ ಅತಿಸಣ್ಣ, ಸಣ್ಣ, ಮಧ್ಯಮ ಮಟ್ಟದ ಕೈಗಾರಿಕೆಗಳೆಲ್ಲವೂ ಕಾರ್ಯಾರಂಭವಾಗುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಮೊದಲ ಹಂತದ ಲಾಕ್‌ಡೌನ್ ವೇಳೆ ಉತ್ಪಾದನೆ ಇಲ್ಲದೆ ಕಂಗೆಟ್ಟಿರುವ ಈ ಕೈಗಾರಿಕಾ ಘಟಕಗಳಿಗೆ ಎರಡನೇ ಹಂತದ ವೇಳೆ (ನೀತಿ-ನಿಯಮಗಳಲ್ಲಿ ರಿಯಾಯಿತಿ, ವ್ಯಾಪಾರ ವಹಿವಾಟಿಗೆ ವಿನಾಯಿತಿ, ಸಾಲ ಸೌಲಭ್ಯ, ಗ್ಯಾರಂಟಿ ನೀಡುವ ಮುಖಾಂತರ) ಹುರಿದುಂಬಿಸುವ ಕೆಲಸ ಆಗಬೇಕು.

ಲಾಕ್‌ಡೌನ್ ಸಮಯ ಬಹಳ ಸಂಕಷ್ಟದಿಂದ ಕೂಡಿರುವುದರಿಂದ ಕಂಪನಿಗಳು ಕಾರ್ಮಿಕರನ್ನು ಕೆಲಸದಿಂದ ತೆಗೆಯಬಾರದೆಂದು ಮತ್ತು ವೇತನ ಕಡಿತಗೊಳಿಸಬಾರದೆಂದು ಪ್ರಧಾನಿ ಮೋದಿ ಮತ್ತು ಕೇಂದ್ರ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಇಬ್ಬರೂ ಸ್ಪಷ್ಟಪಡಿಸಿದ್ದಾರೆ. ಕಾರ್ಮಿಕರ ಹಿತದೃಷ್ಟಿಯಿಂದ ಇದು ಬಹಳ ಒಳ್ಳೆಯ ಮತ್ತು ಸೂಕ್ತವಾದ ನಿರ್ಣಯ. ಆದರೆ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿ ಪದ್ಧತಿ ಜಾರಿಗೆ ಬಂದಮೇಲೆ ನಿರೀಕ್ಷಿತ ವ್ಯವಹಾರ ಇಲ್ಲದೆ ಕಂಗೆಟ್ಟಿರುವ ಕೈಗಾರಿಕೆಗಳಿಗೆ ಇದು ಭರಿಸಲಾರದ ಹೊರೆಯಾಗಿದೆ. ಕರೋನಾ ಪರಿಸ್ಥಿತಿಯ ಹೊರತಾಗಿಯೂ ವೆಚ್ಛ ತಗ್ಗಿಸುವ ಕೆಲಸಕ್ಕೆ ಕೈಗಾರಿಕೆಗಳು ಕೈಹಾಕಿದ್ದವು. ಆದರೀಗ ಕೇಂದ್ರ ಸರ್ಕಾರದ ಆದೇಶದಿಂದಾಗಿ ಕಾರ್ಮಿಕರನ್ನು ಕೆಲಸದಿಂದ ತೆಗೆಯಲೂ ಆಗದ, ಅವರಿಗೆ ಸಂಬಳ ಕೊಡಲೂ ಆಗದ ಸ್ಥಿತಿ ತಲುಪಿವೆ. ಈ ಸಂಕೀರ್ಣ ಸಮಸ್ಯೆಗೆ ಕೇಂದ್ರ ಸರ್ಕಾರವೇ ಪರಿಹಾರ ಹುಡುಕಬೇಕಾಗಿದೆ. ಹೊಸದಾಗಿ ಘೋಷಿಸುವ ಪ್ಯಾಕೇಜ್‌ನಲ್ಲಿ ಕೈಗಾರಿಕೆಗಳಿಗೆ ಪೂರಕವಾದ ಕ್ರಮಗಳನ್ನು ಕೈಗೊಂಡರೆ ಇದು ಕಾರ್ಮಿಕರಿಗೂ ಅನುಕೂಲವಾಗಲಿದೆ.

ಲಾಕ್‌ಡೌನ್‌ನಿಂದಾಗಿ ದೇಶದ ಒಟ್ಟೂ ಉತ್ಪಾದನೆಯ ಶೇಕಡ 80ರಷ್ಟು ಸ್ಥಗಿತಗೊಂಡಿದೆ ಎಂದು ಹೇಳಲಾಗುತ್ತಿದೆ. ಸದ್ಯದ ಈ ನಿರುತ್ಪಾದನೆಯು ಭವಿಷ್ಯದಲ್ಲಿ ಆರ್ಥಿಕತೆ ಮೇಲೆ ಸುಧಾರಿಸಿಕೊಳ್ಳಲಾರದಂತಹ ಪೆಟ್ಟು ನೀಡಲಿದೆ. ಈಗಾಗಲೇ ದೇಶ 22 ದಿನ ನಿರುತ್ಪಾದನಾ ಸ್ಥಿತಿಯಲ್ಲೇ ಸಾಗಿದೆ. ಏಪ್ರಿಲ್ 20ರವರೆಗೂ ಹೀಗೆ ಸಾಗಲಿದೆ. ಏಪ್ರಿಲ್ 20ರ ಬಳಿಕವಾದರೂ ಉತ್ಪಾದನಾ ವಲಯ ಸಕ್ರೀಯಗೊಳ್ಳಬೇಕಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವುದರಿಂದ ಮತ್ತು ಲಾಕ್‌ಡೌನ್ ನಿಯಮಗಳು ಇರುವುದರಿಂದ ಏಪ್ರಿಲ್ 20ರ ಬಳಿಕವೂ ಏಕಾಏಕಿ ಉತ್ಪಾದನೆಯ ಪ್ರಮಾಣ ಮೊದಲಿನಷ್ಟು ಆಗಲು ಸಾಧ್ಯವಿಲ್ಲ. ಕನಿಷ್ಟ ಶೇಕಡಾ 50ರಷ್ಟು ಆಗುವಂತೆ ನೋಡಿಕೊಳ್ಳಬೇಕು ಎಂದು ಕೈಗಾರಿಕಾ ಮತ್ತು ಉತ್ಪದನಾ ವಲಯ ಯೋಚಿಸುತ್ತಿದೆ. ಇದು ಕೂಡ ಕೇಂದ್ರ ಸರ್ಕಾರ ನೀಡುವ ನೆರವನ್ನು ಆಧರಿಸಿರುತ್ತದೆ.

ಇದೇ ಮಾದರಿಯಲ್ಲಿ ಕೃಷಿ ಕ್ಷೇತ್ರವನ್ನೂ ಗಂಭೀರವಾಗಿ ಪರಿಗಣಿಸಬೇಕಾಗಿದೆ. ರೈತರೀಗ ಎರಡು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಂದು, ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಲಾಗದೆ, ಮಾರುಕಟ್ಟೆಗೆ ಕೊಂಡೊಯ್ದರೂ ಸೂಕ್ತ ಬೆಲೆ ಇಲ್ಲದೆ. ಇನ್ನೊಂದು, ಹೊಸದಾಗಿ ಬಿತ್ತನೆ ಕಾರ್ಯ ಮಾಡಲು ಬೀಜ, ರಸಗೊಬ್ಬರ ಮತ್ತು ಔಷಧಿಗಳು ಸಿಗದೆ. ಉತ್ತರ ಪ್ರದೇಶ ಸರ್ಕಾರ ಬಾಯಿಮಾತಿಗೆ ‘ರೈತರ ಎಲ್ಲಾ ಬೆಳೆಗಳನ್ನು ಕನಿಷ್ಟ ಬೆಂಬಲ ಬೆಲೆ ಕೊಟ್ಟು ಸರ್ಕಾರವೇ ಖರೀದಿಸಲಿದೆ’ ಎಂದು ಹೇಳಿದೆ. ಆದರೆ ಅದು ವಾಸ್ತವದಲ್ಲಿ ಸಾಧ್ಯವಾಗುತ್ತಿಲ್ಲ. ಬೇರೆ ರಾಜ್ಯಗಳಲ್ಲಿ ಇಂತಹ ಮಹತ್ವದ ನಿರ್ಧಾರ ಬಾಯಿಮಾತಿಗೂ ಸಾಧ್ಯವಾಗಿಲ್ಲ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ‘ಇಡೀ ದೇಶದಲ್ಲಿ ರಸಗೊಬ್ಬರದ ಸಮಸ್ಯೆ ಇಲ್ಲ’ ಎಂದು ನಗುನಗುತ್ತಾ ಹೇಳಿದ್ದಾರೆ. ಆದರದು ಸರ್ಕಾರಿ ಉಗ್ರಾಣದಿಂದ ರೈತರ ಜಮೀನಿಗೆ ತಲುಪಲು ನೂರಾರು ರೀತಿಯ ಅಡ್ಡಿ ಆತಂಕಗಳಿವೆ. ಜೊತೆಗೆ ರೈತರಿಗೆ ಬೀಜ, ರಸಗೊಬ್ಬರ, ಔಷಧಿಗಳನ್ನು ಕೊಳ್ಳಲು ಹಣದ ಸಹಯ ಬೇಕಾಗಿದೆ. ಮೊದಲೆಲ್ಲಾ ಸಹಕಾರಿ ಬ್ಯಾಂಕುಗಳಿಂದ ಸಿಗುತ್ತಿದ್ದ ಸಾಲದ ಪ್ರಮಾಣ ನೋಟು ಅಮಾನ್ಯೀಕರಣದ ಬಳಿಕ ಕಡಿಮೆ ಆಗಿದೆ. ಜನರಲ್ಲೂ ಹಣದ ಲಿಕ್ವಿಡಿಟಿ ಇಲ್ಲವಾಗಿದೆ. ಆದುದರಿಂದ ಕೃಷಿ ವಲಯ ಕೂಡ ಸರ್ಕಾರಗಳು ಸಹಾಯಕ್ಕೆ ಧಾವಿಸಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿವೆ. ಕೇಂದ್ರ ಸರ್ಕಾರ ತಮಗೆ ಪೂರಕವಾದ ಇನ್ನೊಂದು ಪ್ಯಾಕೇಜ್ ಘೋಷಿಸಬಹುದೆಂದ ನಿರೀಕ್ಷೆಯನ್ನು ಹೊಂದಿದೆ.

ಕೃಷಿ ವಲಯದ ಬಿಕ್ಕಟ್ಟು ಮುಂದುವರೆದರೆ ಮುಂದೆ ದೇಶದಲ್ಲಿ ಆಹಾರದ ಕೊರತೆಯೂ ನಿರ್ಮಾಣವಾಗಲಿದೆ. ಈ ಕೃಷಿ ಬಿಕ್ಕಟ್ಟಿನ ಬಗ್ಗೆ, ಕೈಗಾರಿಕಾ ವಲಯದ ಉತ್ಪಾದನೆ ಕುಸಿಯುತ್ತಿರುವ ಬಗ್ಗೆ ಮತ್ತು ಉತ್ಪಾದನೆ ಕುಸಿಯುತ್ತಿರುವುದರಿಂದ ಆರ್ಥಿಕತೆಯೂ ಕುಸಿಯುತ್ತಿರುವ ಬಗ್ಗೆ ನಿರ್ಮಲಾ ಸೀತಾರಾಮನ್ ಪ್ರಧಾನಿ ಜೊತೆ ಚರ್ಚಿಸಿದ್ದಾರೆ. ಎಲ್ಲಾ ಕಷ್ಟಗಳ ನಡುವೆಯೂ ಉತ್ಪಾದನಾ ವಲಯಕ್ಕೆ ಆದ್ಯತೆ ನೀಡಲೇಬೇಕಾದ ಅನಿವಾರ್ಯವಿದೆ ಎಂಬ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದ್ದಾರೆ ಎಂದು ಕೇಂದ್ರ ಹಣಕಾಸು ಇಲಾಖೆಯ ಮೂಲಗಳು ತಿಳಿಸುತ್ತಿವೆ. ಒಟ್ಟಿನಲ್ಲಿ ಕೃಷಿ, ಕೈಗಾರಿಕೆ ಸೇರಿದಂತೆ ಅದಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಂಬಂಧಿಸಿದ ಎಲ್ಲರೂ, ವಿಶೇಷವಾಗಿ ಬಡವರು ಮತ್ತು ಮಧ್ಯಮ ವರ್ಗ ಇನ್ನೊಂದು ಪ್ಯಾಕೇಜ್ ನಿರೀಕ್ಷೆಯಲ್ಲಿದೆ. ಜೊತೆಗೆ ಮೊದಲಿಗಿಂತಲೂ ಪರಿಣಾಮಕಾರಿಯಾದ ಪ್ಯಾಕೇಜ್ ನಿರೀಕ್ಷೆಯಲ್ಲಿದೆ.

Tags: Covid 19Narendra ModiNirmala SitharamanRelief Packageನಿರ್ಮಲಾ ಸೀತಾರಾಮನ್ಪ್ಯಾಕೇಜ್ಮೋದಿ
Previous Post

ಅಸಲಿಗೆ ಈ ‘ಹೆಲಿಕಾಪ್ಟರ್ ಮನಿ’ ಎಂದರೇನು?

Next Post

ಕನ್ನಡ ಪತ್ರಿಕೋದ್ಯಮಕ್ಕೂ ತಟ್ಟಿತೇ ಲಾಕ್ ಡೌನ್ ಆರ್ಥಿಕ ಸಂಕಷ್ಟ!

Related Posts

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
0

ಡಾ.ರಾಜ್ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು: ಸಿ.ಎಂ ಸಿದ್ದರಾಮಯ್ಯ ಅಪಾರ ಮೆಚ್ಚುಗೆ ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ...

Read moreDetails

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025

Rahul Gandhi: ಚುನಾವಣೆ ಪ್ರಚಾರದ ಬಳಿಕ ನೀರಿಗೆ ಧುಮುಕಿ ಮೀನು ಹಿಡಿದ ರಾಹುಲ್‌..

November 3, 2025
Next Post
ಕನ್ನಡ ಪತ್ರಿಕೋದ್ಯಮಕ್ಕೂ ತಟ್ಟಿತೇ ಲಾಕ್ ಡೌನ್ ಆರ್ಥಿಕ ಸಂಕಷ್ಟ!

ಕನ್ನಡ ಪತ್ರಿಕೋದ್ಯಮಕ್ಕೂ ತಟ್ಟಿತೇ ಲಾಕ್ ಡೌನ್ ಆರ್ಥಿಕ ಸಂಕಷ್ಟ!

Please login to join discussion

Recent News

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

November 3, 2025

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada