• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, September 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿರಲು ಬಿಡಿ – ಸುಪ್ರಿಂ ಕೋರ್ಟ್

by
October 30, 2020
in ದೇಶ
0
ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿರಲು ಬಿಡಿ – ಸುಪ್ರಿಂ ಕೋರ್ಟ್
Share on WhatsAppShare on FacebookShare on Telegram

ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರವನ್ನು ಹಾಗೂ ರಾಜಕೀಯ ಘಟನೆಗಳನ್ನು ಟೀಕಿಸಿದವರ ವಿರುದ್ದ ದೇಶದ ಮೂಲೆ ಮೂಲೆಗಳಲ್ಲಿ ಪ್ರಕರಣಗಳು ದಾಖಲಾಗುತ್ತಿರುವುದರ ಕುರಿತು ಸುಪ್ರಿಂಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. ಭಾರತವನ್ನು ಸ್ವತಂತ್ರ ರಾಷ್ಟ್ರವಾಗಿ ಇರಲು ಬಿಡಿ ಎಂದು ಸರ್ಕಾರಕ್ಕೆ ಹಾಗೂ ಪೊಲೀಸರಿಗೆ ತಿಳಿಸಿದೆ.

ADVERTISEMENT

ಪಶ್ಚಿಮ ಬಂಗಾಳದಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ ಎಂಬದು ದೆಹಲಿ ಮೂಲದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಟೀಕಿಸಿದ್ದರು. ಈ ಕಾರಣಕ್ಕೆ ಅವರ ವಿರುದ್ದ ಪಶ್ಚಿ ಬಂಗಾಳದಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಜಸ್ಟೀಸ್‌ ಡಿ ವೈ ಚಂದ್ರಚೂಡ್‌ ಹಾಗೂ ಜಸ್ಟೀಸ್‌ ಇಂದಿರಾ ಬ್ಯಾನರ್ಜಿ ಅವರಿದ್ದ ಪೀಠವು, “ಭಾರತವನ್ನು ಸ್ವತಂತ್ರ ರಾಷ್ಟ್ರವಾಗಿರಲು ಬಿಡಿ. ಹದ್ದು ಮೀರಬೇಡಿ. ಸಾಮಾನ್ಯ ಜನರು ಸರ್ಕಾರಗಳಿಂದ ತೊಂದರೆಗೆ ಒಳಗಾಗಬಾರದು ಎಂಬ ಕಾರಣಕ್ಕೆ ಸಂವಿಧಾನವು ಸುಪ್ರಿಂಕೋರ್ಟ್‌ ಅನ್ನು ರೂಪಿಸಿದೆ,” ಎಂದು ಹೇಳಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ನಾಳೆ ಕೊಲ್ಕತ್ತಾ, ಮುಂಬೈ, ಚೆನ್ನೈ ಮತ್ತು ಮಣಿಪುರ ಪೊಲೀಸರು ದೇಶದ ಮೂಲೆ ಮೂಲೆಯ ನಾಗರಿಕರಿಗೆ ಸಮನ್ಸ್‌ ನೀಡುತ್ತಾರೆ. ನಿಮಗೆ ವಾಕ್‌ ಸ್ವಾತಂತ್ರ್ಯ ಬೇಕಲ್ಲವೇ, ನಾವು ನಿಮಗೆ ಬುದ್ದಿ ಕಲಿಸುತ್ತೇವೆ ಎಂದು ಸಂದೇಶ ನೀಡುತ್ತಾರೆ. ಇದು ತುಂಬಾ ಅಪಾಯಕಾರಿ. ಸರ್ಕಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ ಕಾರಣಕ್ಕೆ ದೇಶದ ನಾಗರಿಕರನ್ನು ಒಂದು ಮೂಲೆಯಿಂದ ಒನ್ನೊಂದು ಮೂಲೆ ಪದೇ ಪದೇ ಕರೆಸಿಕೊಳ್ಳುವುದು ತಪ್ಪು,” ಎಂದು ಸುಪ್ರಿಂ ಹೇಳಿದೆ.

ಸಂವಿಧಾನದ 19(1) ನೇ ವಿಧಿಯು ಪ್ರತಿಯೊಬ್ಬ ನಾಗರಿಕರಿಗೂ ವಾಕ್‌ ಸ್ವಾತಂತ್ರ್ಯವನ್ನು ನೀಡಿ, ಎಷ್ಟೇ ಕಷ್ಟವಾದರೂ ಆ ಹಕ್ಕನ್ನು ರಕ್ಷಿಸಬೇಕು ಎಂದು ಹೇಳುತ್ತದೆ, ಎಂದು ಎಲ್ಲಾ ರಾಜ್ಯ ಸರ್ಕಾರಗಳಿಗೂ ನೇರವಾದ ಹಾಗೂ ಸ್ಪಷ್ಟವಾದ ಸಂದೇಶವನ್ನು ರವಾನಿಸಿದೆ.

ದೆಹಲಿಯಿಂದ ಕೊಲ್ಕತ್ತಾಗೆ ಸಮನ್ಸ್‌ ನೀಡಿದ್ದು ದೌರ್ಜನ್ಯ

ಕೊಲ್ಕತ್ತಾದ ರಾಜಾ ಬಜಾ಼ರ್‌ ಪ್ರದೇಶದಲ್ಲಿ ಹೆಚ್ಚಿನ ಜನಸಂದಣಿ ಇರುವುದನ್ನು ದೆಹಲಿಯ ರೋಶನಿ ಬಿಸ್ವಾಸ್‌ ಎಂಬ ಮಹಿಳೆ ಫೇಸ್‌ಬುಕ್‌ನಲ್ಲಿ ಟೀಕಿಸಿದ್ದರು. ಇದನ್ನು ಗಮನಿಸಿದ ಕೊಲ್ಕತ್ತಾ ಪೊಲೀಸರು ರೋಶನಿ ವಿರುದ್ದ ಪ್ರಕರಣವನ್ನು ದಾಖಲಿಸಿದ್ದರು. ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಕೂಡಾ ಜಾರಿ ಮಾಡಿದ್ದರು. ಈ ಸಮನ್ಸ್‌ ವಿರುದ್ದ ರೋಶನಿ ಅವರು ಸುಪ್ರಿಂ ಮೆಟ್ಟಿಲೇರಿದ ಕಾರಣ, ಕೊಲ್ಕತ್ತಾ ಪೊಲೀಸರ ವಿರುದ್ದ ಸುಪ್ರಿಂ ಕೋರ್ಟ್‌ ಕಿಡಿಕಾರಿದೆ.

ಸುಪ್ರಿಂ ಕೋರ್ಟ್‌ನಲ್ಲಿ ವಿವರಣೆ ನೀಡಿದ ಪಶ್ಚಿಮ ಬಂಗಾಳದ ವಕೀಲರು, ರೋಶನಿ ಅವರನ್ನು ಕೇವಲ ವಿಚಾರಣೆಗಾಗಿ ಮಾತ್ರ ಕರೆಸಿಕೊಳ್ಳಲಾಗುವುದು. ಅವರರನ್ನು ಬಂಧಿಸುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್‌ “ಈ ಪ್ರಕ್ರಿಯೆಯು ನಾಗರಿಕರನ್ನು ಬೆದರಿಸಿದಂತಾಗುತ್ತದೆ. ಅವರ ವಾಕ್‌ ಸ್ವಾತಂತ್ರ್ಯವನ್ನು ಮೊಟಕುಗೊಳಿಸದಂತಾಗುತ್ತದೆ. ಕರೋನಾ ಸೋಂಕನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿಲ್ಲ ಎಂದು ಟೀಕಿಸಿದ ಕಾರಣಕ್ಕೆ ಅವರ ವಿರುದ್ದ ಪ್ರಕರಣ ದಾಖಲಿಸಲು ಆಗುವುದಿಲ್ಲ,” ಎಂದು ಹೇಳಿದೆ.

“ರೋಶನಿ ಅವರನ್ನು ದೆಹಲಿಯಿಂದ ಕೊಲ್ಕತ್ತಾಗೆ ಬರಲು ಸಮನ್ಸ್‌ ನೀಡಿದ್ದು ದೌರ್ಜನ್ಯ,” ಎಂದು ಸುಪ್ರಿಂಕೋರ್ಟ್‌ ಹೇಳಿದೆ.

Tags: ಸಂವಿಧಾನಸುಪ್ರಿಂ ಕೋರ್ಟ್‌ಸ್ವತಂತ್ರ ರಾಷ್ಟ್ರ
Previous Post

ಪ್ರತಿರೋಧದ ದನಿ ಬಗ್ಗುಬಡಿಯಲು ಸರ್ಕಾರಿ ನೌಕರರ ಮೇಲೆ ಹೊಸ ನಿಯಮ ಪ್ರಯೋಗ!

Next Post

ಹೊಸ ನೋಟಿನಲ್ಲಿ ತಪ್ಪಾದ ನಕ್ಷೆ ಮುದ್ರಿಸಿದ ಸೌದಿ ಅರೇಬಿಯ: ಭಾರತದಿಂದ ವಿರೋಧ

Related Posts

ಬಿಜೆಪಿಯಿಂದ ಕೋಮು ಭಾವನೆ ಪ್ರಚೋದನೆ : ಸಮಾಜಘಾತುಕ ಶಕ್ತಿಗಳ ಬಳಕೆ ; ಗುಡುಗಿದ ಸಿಎಂ ಡಿಕೆಶಿ..
Top Story

ಬಿಜೆಪಿಯಿಂದ ಕೋಮು ಭಾವನೆ ಪ್ರಚೋದನೆ : ಸಮಾಜಘಾತುಕ ಶಕ್ತಿಗಳ ಬಳಕೆ ; ಗುಡುಗಿದ ಸಿಎಂ ಡಿಕೆಶಿ..

by ಪ್ರತಿಧ್ವನಿ
September 13, 2026
0

ಶಾಂತಿಯುತ ಗಣೇಶ ಹಬ್ಬ ಆಚರಣೆ ಖಾತರಿಗೆ ಪೊಲೀಸರಿಗೆ ಸೂಚನೆ.. ಅಧಿಕಾರ ದುರುಪಯೋಗ ಮಾಡಲ್ಲ, ಯಾರಿಗೂ ನಿರ್ಬಂಧ ಹೇರಲ್ಲ.. ಬೆಂಗಳೂರು :  ಸಮಾಜದಲ್ಲಿ ಅಶಾಂತಿ ಮೂಡಿಸಲು ಕುತಂತ್ರ ನಡೆಯುತ್ತಿದ್ದು,...

Read moreDetails
ನಮ್ಮ ಕಥೆ ಏನು SIR ? ಹೊರಗುಳಿಯುವವರ ಪ್ರಶ್ನೆ

ನಮ್ಮ ಕಥೆ ಏನು SIR ? ಹೊರಗುಳಿಯುವವರ ಪ್ರಶ್ನೆ

September 13, 2026
ಪಂಚಾಯಿತಿಯಿಂದ ಸಂಸತ್ ವರೆಗೆ ಹೊಸ ನಾಯಕತ್ವ ಅಗತ್ಯ : ಸಿಎಂ ಡಿ ಕೆ ಶಿವಕುಮಾರ್..

ಪಂಚಾಯಿತಿಯಿಂದ ಸಂಸತ್ ವರೆಗೆ ಹೊಸ ನಾಯಕತ್ವ ಅಗತ್ಯ : ಸಿಎಂ ಡಿ ಕೆ ಶಿವಕುಮಾರ್..

September 11, 2026
ಬಳ್ಳಾರಿ ಚಲೋ : ವಿಜಯೇಂದ್ರ ನಾಯಕತ್ವಕ್ಕೆ ಅಗ್ನಿಪರೀಕ್ಷೆ!

ಬಳ್ಳಾರಿ ಚಲೋ : ವಿಜಯೇಂದ್ರ ನಾಯಕತ್ವಕ್ಕೆ ಅಗ್ನಿಪರೀಕ್ಷೆ!

September 11, 2026
ಕೆಐಎಡಿಬಿ ಕರ್ಮಕಾಂಡದಲ್ಲಿ ಅಧಿಕಾರಿಗಳ ಸರಮಾಲೆ!

ಕೆಐಎಡಿಬಿ ಕರ್ಮಕಾಂಡದಲ್ಲಿ ಅಧಿಕಾರಿಗಳ ಸರಮಾಲೆ!

September 10, 2026
Next Post
ಹೊಸ ನೋಟಿನಲ್ಲಿ ತಪ್ಪಾದ ನಕ್ಷೆ ಮುದ್ರಿಸಿದ ಸೌದಿ ಅರೇಬಿಯ: ಭಾರತದಿಂದ ವಿರೋಧ

ಹೊಸ ನೋಟಿನಲ್ಲಿ ತಪ್ಪಾದ ನಕ್ಷೆ ಮುದ್ರಿಸಿದ ಸೌದಿ ಅರೇಬಿಯ: ಭಾರತದಿಂದ ವಿರೋಧ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada