• Home
  • About Us
  • ಕರ್ನಾಟಕ
Tuesday, November 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಬಿಕ್ಕಟ್ಟಿನ ಹೊತ್ತಲ್ಲಿ ಮತ್ತೆ ಮತ್ತೆ ಕಾಂಗ್ರೆಸ್ ‘ಅಡ್ಡಗೋಡೆ ಮೇಲೆ ದೀಪ’ ಇಡುವುದು ಯಾಕೆ?

by
August 20, 2020
in ದೇಶ
0
ಬಿಕ್ಕಟ್ಟಿನ ಹೊತ್ತಲ್ಲಿ ಮತ್ತೆ ಮತ್ತೆ ಕಾಂಗ್ರೆಸ್ ‘ಅಡ್ಡಗೋಡೆ ಮೇಲೆ ದೀಪ’ ಇಡುವುದು ಯಾಕೆ?
Share on WhatsAppShare on FacebookShare on Telegram

“ಎಲ್ಲದಕ್ಕೂ ಒಂದು ಲಕ್ಷ್ಮಣ ರೇಖೆ ಎಂಬುದಿದೆ. ಆ ಮಿತಿಯನ್ನು ಮೀರುವುದು ಏಕೆ? ವಾಕ್ ಸ್ವಾತಂತ್ರ್ಯ ಎಂಬುದು ಸ್ವೇಚ್ಛೆಯಾಗಬಾರದು. ನಮಗಾಗಲೀ, ಮಾಧ್ಯಮಗಳಿಗಾಗಲಿ ಎಲ್ಲರಿಗೂ ಈ ಮಾತು ಅನ್ವಯಿಸುತ್ತದೆ. ಎಲ್ಲದಕ್ಕೂ ಒಂದು ಮಿತಿ ಇರುತ್ತದೆ ಎಂಬುದನ್ನು ನೆನಪಿಸಲು ಬಯಸುತ್ತೇವೆ. ಹಾಗಾಗಿ ನಿಮ್ಮ ಹೇಳಿಕೆಯನ್ನು ಪುನರ್ ಪರಿಶೀಲಿಸಲು ಪೀಠ, ನಿಮಗೆ ಎರಡು-ಮೂರು ದಿನಗಳ ಕಾಲಾವಕಾಶ ನೀಡಲಿದೆ” ಎಂದು ಹೇಳಿರುವ ಸುಪ್ರೀಂಕೋರ್ಟ್, ಬಹುಚರ್ಚಿತ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಒಂದು ಅವಕಾಶ ನೀಡಿದೆ.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಸಾಮಾಜಿಕ ಹೋರಾಟಗಾರ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ತಪ್ಪಿತಸ್ಥರು ಎಂದು ಹೇಳಿದ್ದ ನ್ಯಾಯಪೀಠ, ನಿಗದಿಯಂತೆ ಗುರುವಾರ ಶಿಕ್ಷೆ ಪ್ರಮಾಣ ಘೋಷಿಸಬೇಕಿತ್ತು. ಆದರೆ, ಈ ನಡುವೆ ತಮ್ಮ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ ಎಂದಿರುವ ಪ್ರಶಾಂತ್ ಭೂಷಣ್ ಅವರು, ಪ್ರಕರಣದ ತೀರ್ಪಿನ ಪುನರ್ ಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ವಿಸ್ತೃತ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಬೇಕು ಎಂದೂ ಕೋರಿದ್ದರು. ಗುರುವಾರ ಬೆಳಗ್ಗೆ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾವಣೆಗೆ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ, ತೀರ್ಪಿನ ಪುನರ್ ಪರಿಶೀಲನೆ ಕೋರಿದ್ದ ಅರ್ಜಿಯ ಕುರಿತು ತೀರ್ಮಾನ ಕೈಗೊಳ್ಳುವವರೆಗೆ ಶಿಕ್ಷೆ ತೀರ್ಮಾನ ಮಾಡುವುದಿಲ್ಲ ಎಂದು ಹೇಳಿದೆ.

Also Read: ಪ್ರಶಾಂತ್ ಭೂಷಣ್ ಗೆ ಆತ್ಮಾವಲೋಕನ ಮಾಡಿಕೊಂಡು ಬನ್ನಿ ಎಂದ ಸುಪ್ರೀಂಕೋರ್ಟ್

ಈ ನಡುವೆ, ತಮ್ಮ ಹೇಳಿಕೆಯ ಕುರಿತು ಆತ್ಮಾವಲೋಕನ ಮಾಡಿಕೊಂಡು ತಪ್ಪು ಒಪ್ಪಿಕೊಳ್ಳಿ ಎಂಬ ನ್ಯಾಯಪೀಠದ ಸೂಚನೆಗೆ ಪ್ರಶಾಂತ್ ಭೂಷಣ್ ಅವರು, “ಖಂಡಿತಾ ಆ ಬಗ್ಗೆ ಯೋಚಿಸುವೆ. ಆದರೆ, ಎರಡು ದಿನಗಳ ಬಳಿಕವೂ ನನ್ನ ನಿಲುವಿನಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎನಿಸದು. ದೇಶದ ಪ್ರಜೆಯಾಗಿ ಪ್ರಜಾಪ್ರಭುತ್ವ ರಕ್ಷಣೆಯ ಹೊಣೆ ಇದೆ. ಅಂತಹ ಹೊಣೆಗಾರಿಕೆಯ ಒಂದು ಚಿಕ್ಕ ಪ್ರಯತ್ನವಾಗಿ ಆ ಎರಡು ಟ್ವೀಟ್ ಇವೆ ಅಷ್ಟೇ. ನ್ಯಾಯಾಂಗದ ಘನತೆಯ ಮೇಲಿನ ಕಾಳಜಿಯಿಂದಲೇ ನಾನು ಆ ಮಾತುಗಳನ್ನು ಆಡಿದ್ದು. ಆ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ” ಎಂದಿದ್ದಾರೆ. ಅದಕ್ಕೆ ಪ್ರತಿಯಾಗಿ, ಪೀಠದ ನೇತೃತ್ವ ವಹಿಸಿರುವ ನ್ಯಾ. ಅರುಣ್ ಮಿಶ್ರಾ ಅವರು, “ಯಾವುದೇ ತಪ್ಪು ಮಾಡದ ಯಾವುದೇ ವ್ಯಕ್ತಿ ಭೂಮಿ ಮೇಲಿರಲು ಸಾಧ್ಯವಿಲ್ಲ. ನೀವು ನೂರು ಒಳ್ಳೆಯ ಕೆಲಸ ಮಾಡಿದ ಮಾತ್ರಕ್ಕೆ ಅದು ನಿಮ್ಮ 10 ಅಪರಾಧಗಳಿಗೆ ರಹದಾರಿಯಾಗಲಾರದು. ಆದದ್ದು ಆಯಿತು. ಆದರೆ, ಸಂಬಂಧಪಟ್ಟವರು ಕನಿಷ್ಟ ಆದ ತಪ್ಪಿಗೆ ಪಶ್ಚಾತ್ತಾಪವನ್ನಾದರೂ ವ್ಯಕ್ತಪಡಿಸಬೇಕು ಎಂಬುದು ನಮ್ಮ ನಿರೀಕ್ಷೆ. ನೀವು ನಿಮ್ಮ ಕಾನೂನು ಪ್ರಜ್ಞೆಯನ್ನು ಅನ್ವಯಿಸದೆ, ನಮ್ಮ ಸಲಹೆಯನ್ನು ಒಪ್ಪಿಕೊಳ್ಳಿ” ಎಂದು ಸಲಹೆ ನೀಡಿದರು.

ಈ ನಡುವೆ, ವಿಚಾರಣೆಯ ವೇಳೆ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ಮಧ್ಯಪ್ರವೇಶಿಸಿ, “ಹಿರಿಯ ವಕೀಲರಿಗೆ ಶಿಕ್ಷೆ ವಿಧಿಸಬಾರದು. ಈಗಾಗಲೇ ಅವರು ಶಿಕ್ಷೆ ಅನುಭವಿಸಿದ್ದಾರೆ” ಎಂದು ಕೋರಿದ್ದಾರೆ. ಆದರೆ, ಅವರ ಕೋರಿಕೆಗೆ ಪೀಠವು, “ಅವರು(ಪ್ರಶಾಂತ್ ಭೂಷಣ್) ತಮ್ಮ ಹೇಳಿಕೆ ಕುರಿತು ಪುನರ್ ಪರಿಶೀಲನೆ ನಡೆಸದೇ ನಾವು ನಿಮ್ಮ ಅಹವಾಲನ್ನು ಪರಿಗಣಿಸಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದರು.

ಒಂದು ಕಡೆ ನ್ಯಾಯಾಲಯದ ಒಳಗೆ ಪ್ರಶಾಂತ್ ಭೂಷಣ್ ಮತ್ತು ನ್ಯಾಯಪೀಠದ ನಡುವೆ ಕ್ಷಮೆಯಾಚನೆಯ ವಿಷಯದಲ್ಲಿ ವಾದಗಳು ಬಿರುಸಾಗಿದ್ದಾಗ, ಹೊರಗೆ; ದೇಶಾದ್ಯಂತ ವಿವಿಧ ವಕೀಲರ ಸಂಘಗಳು, ಸಾಮಾಜಿಕ ಸಂಘಟನೆಗಳು, ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ಸಾವಿರಾರು ಮಂದಿ ಜನಸಾಮಾನ್ಯರ ಪರ ಹೋರಾಟಗಾರರಾದ ಭೂಷಣ್ ಅವರ ರಚನಾತ್ಮಕ ಟೀಕೆಯನ್ನು, ಕಾಳಜಿಯ ಮಾತನ್ನು ತಪ್ಪಾಗಿ ಅರ್ಥೈಸಿ ಅವರಿಗೆ ಶಿಕ್ಷೆ ವಿಧಿಸುವಂತಹ ತೀವ್ರತರದ ನಿರ್ಧಾರವನ್ನು ನ್ಯಾಯಾಲಯ ಕೈಗೊಳ್ಳಬಾರದು ಎಂದು ಮನವಿ ಮಾಡಲಾಯಿತು. ಅದರಲ್ಲೂ ಮುಖ್ಯವಾಗಿ, “ಈ ಪ್ರಕರಣದಲ್ಲಿ ವಿಪರೀತದ ನಿರ್ಧಾರ ಕೈಗೊಳ್ಳುವ ಮೂಲಕ ನ್ಯಾಯಾಂಗ ತನಗೆ ತಾನೇ ನಿಂದನೆ ಮಾಡಿಕೊಳ್ಳುತ್ತಿದೆ” ಎಂಬ ಅಭಿಪ್ರಾಯವನ್ನೂ ಹಲವು ನಿವೃತ್ತ ನ್ಯಾಯಾಧೀಶರು, ವಕೀಲರು ಕೂಡ ವ್ಯಕ್ತಪಡಿಸಿದ್ದಾರೆ.

ಇತರೆಲ್ಲಾ ಪ್ರತಿಪಕ್ಷಗಳಂತೆ ಕಾಂಗ್ರೆಸ್ಸಿನ ಕೆಲವು ನಾಯಕರು ಕೂಡ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ್ದು, “ನ್ಯಾಯ ಎಲ್ಲರಿಗೂ ಸಮನಾಗಿರಬೇಕು. ನಿಷ್ಪಕ್ಷಪಾತವಾಗಿರಬೇಕು ಮತ್ತು ಯಾವುದೇ ತರತಮವಿಲ್ಲದಂತಿರಬೇಕು. ಈ ಪ್ರಕರಣದ ಕುರಿತು ಸುಪ್ರೀಂಕೋರ್ಟಿನ ನಿವೃತ್ತ ಸಿಜೆಐಗಳು ದನಿ ಎತ್ತಿದ್ದಾರೆ ಎಂಬುದು ಗಮನಾರ್ಹ” ಎಂದಿದ್ದಾರೆ. ಸಿಪಿಎಂನ ಸೀತಾರಾಂ ಯೆಚೂರಿ, ಬಿಜೆಪಿ ಮಾಜಿ ನಾಯಕ ಯಶವಂತ ಸಿನ್ಹಾ, ನ್ಯಾಷನಲ್ ಕಾನ್ಫರೆನ್ಸ್ ಫಾರೂಕ್ ಅಬ್ದುಲ್ಲಾ ಅವರಂತೆಯೇ ಕಾಂಗ್ರೆಸ್ಸಿನ ಅಭಿಷೇಕ್ ಸಿಂಘ್ವಿ, ಶಶಿ ತರೂರು ಮತ್ತಿತರ ಬೆರಳೆಣಿಕೆ ನಾಯಕರು ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ್ದಾರೆ. ಆದರೆ, ವ್ಯತ್ಯಾಸವೆಂದರೆ, ಕಾಂಗ್ರೆಸ್ ನಾಯಕರ ವರಸೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತಿದೆ!

Also Read: ನ್ಯಾಯಾಂಗ ನಿಂದನೆ ಪ್ರಕರಣ: ಕ್ಷಮೆ ಯಾಚಿಸಲು ಒಪ್ಪದ ವಕೀಲ ಪ್ರಶಾಂತ್ ಭೂಷಣ್

ಕಳೆದ ಕೆಲವು ದಿನಗಳಿಂದ ದೇಶದ ಪ್ರಜಾಪ್ರಭುತ್ವ, ನಾಗರಿಕ ಹಕ್ಕುಗಳು ಮತ್ತು ನ್ಯಾಯಾಂಗದ ಘನತೆಯಂತಹ ಗಹನ ಸಂಗತಿಗಳ ಕುರಿತ ಸಾರ್ವಜನಿಕ ಕಾಳಜಿ ಮತ್ತು ಆತಂಕಕ್ಕೆ ಕಾರಣವಾಗಿರುವ ಈ ಪ್ರಕರಣದ ವಿಷಯದಲ್ಲಿ ದೇಶದ ಪ್ರಮುಖ ಪ್ರತಿಪಕ್ಷವಾಗಿ ಕಾಂಗ್ರೆಸ್ಸಿನಿಂದ ಜನರ ನಿರೀಕ್ಷೆ ಬೇರೆಯೇ ಇತ್ತು. ಸರ್ಕಾರಿ ಉದ್ಯಮ ಮತ್ತು ಸೇವಾ ವಲಯಗಳನ್ನು ಖಾಸಗೀಕರಣ ಮಾಡುವ ಮೂಲಕ ಪ್ರಜಾಪ್ರಭುತ್ವದ ಬೇರುಗಳನ್ನು ಕಡಿಯುತ್ತಿರುವಾಗ, ಸಾರ್ವಜನಿಕ ಆಸ್ತಿಗಳನ್ನು ತಮ್ಮ ಪರಮಾಪ್ತ ಕೋರ್ಪೊರೇಟ್ ಕುಳಗಳ ತೆಕ್ಕೆಗೆ ಒಪ್ಪಿಸುತ್ತಿರುವಾಗ ಮತ್ತು ಅಂತಹ ಅಕ್ರಮಗಳ ವಿರುದ್ಧ ದನಿ ಎತ್ತದಂತೆ ಜನರ ನಾಗರಿಕ ಹಕ್ಕುಗಳನ್ನು ಹತ್ತಿಕ್ಕುತ್ತಿರುವಾಗ, ತನ್ನ ಜನ ವಿರೋಧಿ ನೀತಿ- ನಿಲುವುಗಳನ್ನು ಪ್ರಶ್ನಿಸುವವರನ್ನು, ದನಿ ಎತ್ತುವವರನ್ನು ಪೊಲೀಸ್, ಸಿಬಿಐ, ಐಟಿ, ಇಡಿ ಮತ್ತು ಕೊನೆಗೆ ‘ನ್ಯಾಯಾಂಗದ’ ಅಸ್ತ್ರವನ್ನೂ ಬಳಸಿ ಬಗ್ಗುಬಡಿಯುತ್ತಿರುವಾಗ ಪ್ರತಿಪಕ್ಷವೊಂದು ಪ್ರತಿಕ್ರಿಯಿಸಬೇಕಾದ ವರಸೆ ಇದಲ್ಲ ಎಂಬುದು ಅದೇ ಕಾಂಗ್ರೆಸ್ಸಿನ ದಬ್ಬಾಳಿಕೆಯ ವಿರುದ್ಧದ ಜನಹೋರಾಟಗಳ ಚರಿತ್ರೆ ನಮಗೆ ತೋರಿಸಿಕೊಟ್ಟಿದೆ.

1970ರ ಇಂದಿರಾ ಗಾಂಧಿಯ ತುರ್ತುಪರಿಸ್ಥಿತಿಯ ಕಾಲದ ನಾಗರಿಕ ಹಕ್ಕುಗಳ ದಮನ ಮತ್ತು ಜನರ ದನಿಯ ಹತ್ತಿಕ್ಕುವ ವರಸೆಗಳೇ ಈಗ ಇನ್ನಷ್ಟು ಬಿರುಸಿನಿಂದ, ದಾಷ್ಟ್ರ್ಯದಿಂದ ಪ್ರಯೋಗವಾಗುತ್ತಿವೆ ಎಂಬುದು ಹೊಸ ಸಂಗತಿಯೇನಲ್ಲ. ನ್ಯಾಯಾಂಗ ಘನತೆ ಮತ್ತು ಪ್ರಜಾಸತ್ತಾತ್ಮಕ ನಾಗರಿಕ ಹಕ್ಕುಗಳ ಸಂಘರ್ಷದ ವಿಷಯದಲ್ಲಿ ಕೂಡ ಕಳೆದ ಶತಮಾನದ 70ರ ದಶಕ ಮತ್ತೊಮ್ಮೆ ಪುನರಾವರ್ತನೆಯಾಗುತ್ತಿದೆ ಎಂಬುದು ಕೂಡ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗದ ಸಂಗತಿಯೇನಲ್ಲ. ಆದರೆ, ಒಂದೇ ವ್ಯತ್ಯಾಸವೆಂದರೆ; ಅಂದು ಕಾಂಗ್ರೆಸ್ ಆಡಳಿತದ ಸರ್ವಾಧಿಕಾರಿ ಧೋರಣೆಯ ವಿರುದ್ಧ, ಪ್ರಜಾಪ್ರಭುತ್ವದ ಕತ್ತು ಹಿಸುಕುವ ಪ್ರಯತ್ನಗಳ ವಿರುದ್ಧ ದೇಶದ ಬಹುತೇಕ ಪ್ರತಿಪಕ್ಷಗಳು ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಬೀದಿಗಿಳಿದಿದ್ದವು. ರಾಷ್ಟ್ರವ್ಯಾಪಿ ಜನಾಂದೋಲನದ ನೇತೃತ್ವ ವಹಿಸಿದ್ದವು. ಆದರೆ, ಇಂದು ಸರ್ವಾಧಿಕಾರಿ ಆಡಳಿತ, ಪ್ರಜಾಪ್ರಭುತ್ವದ ಕತ್ತು ಹಿಸುಕುವ ಯತ್ನಗಳು ಹಿಂದೆಂದಿಗಿಂತ ಹೆಚ್ಚು ಪ್ರಬಲವಾಗಿ ಮತ್ತು ಅತ್ಯಂತ ಬಿರುಸಿನಿಂದ ನಡೆಯುತ್ತಿವೆ ಎಂಬ ಆತಂಕದ ಸ್ಥಿತಿಯಲ್ಲಿ ಕೂಡ, ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಮಾತ್ರ, ಅತ್ತ ಗಟ್ಟಿ ಪ್ರತಿರೋಧವನ್ನೂ ದಾಖಲಿಸದೆ, ಇತ್ತ ಎಲ್ಲದಕ್ಕೂ ಸಹಮತವನ್ನೂ ವ್ಯಕ್ತಪಡಿಸದೆ, ಅಡ್ಡ ಗೋಡೆ ಮೇಲೆ ದೀಪವಿಡುವ ವರಸೆಯನ್ನೇ ಪ್ರದರ್ಶಿಸುತ್ತಿದೆ.

ಕಾಂಗ್ರೆಸ್ಸಿನ ಈ ಧೋರಣೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೂಡ ಸಾಕಷ್ಟು ಚರ್ಚೆಯಾಗಿದ್ದು, ಹಲವರು ಕಾಂಗ್ರೆಸ್ ಈಗಲೂ ತನ್ನನ್ನು ತಾನು ಸ್ಪಷ್ಟಪಡಿಸಿಕೊಳ್ಳದೇ ಹೋದರೆ, ಕೇವಲ ಜಯಂತಿ, ಪುಣ್ಯತಿಥಿಗಳಲ್ಲೇ ಮುಳುಗಿದ್ದರೆ, ಪಕ್ಷದ ಅಧ್ಯಕ್ಷರ ಆಯ್ಕೆಯಲ್ಲೇ ವರ್ಷಗಳನ್ನು ಕಳೆಯುತ್ತಿದ್ದರೆ, ಐತಿಹಾಸಿಕ ಅವಕಾಶಗಳನ್ನು ಕೈಚೆಲ್ಲಿದಂತೆಯೇ ಎಂದು ಟೀಕಿಸಿದ್ದಾರೆ. ಹಿರಿಯ ಪತ್ರಕರ್ತ ಮತ್ತು ರಾಜಕೀಯ ವಿಶ್ಲೇಷಕ ಸುಗತ ಶ್ರೀನಿವಾಸ ರಾಜು ಅವರು, “ಹತ್ತಾರು ಲಕ್ಷ ರೂ. ಶುಲ್ಕ ಪಡೆಯುವ ಕಾಂಗ್ರೆಸ್ಸಿನ ಖ್ಯಾತ ವಕೀಲರಲ್ಲಿ ಯಾರಾದರೂ ಇಂದು ಪ್ರಶಾಂತ್ ಭೂಷಣ್ ಅವರ ಪರ ನಿಂತಿದ್ದಾರೆಯೇ? ಅಥವಾ ಆ ಪಕ್ಷ ಬೆಂಬಲವಾಗಿ ನಿಂತಿದೆಯೇ? ಬಹುಶಃ ಅವರೆಲ್ಲಾ ರಾಜೀವ್ ಗಾಂಧಿ ಜನ್ಮದಿನಾಚರಣೆಯಲ್ಲಿ ವ್ಯಸ್ತರಾಗಿರಬೇಕು. ಆದರೆ, ಅಂತಹ ಹಳಹಳಿಕೆಯ ಸಂಗತಿಗಿಂತ, ಈ ಕ್ಷಣ ಸುಪ್ರೀಂಕೋರ್ಟಿನಲ್ಲಿ ನಡೆಯುತ್ತಿರುವುದು ಮಹತ್ವದ್ದು ಅಲ್ಲವೆ?” ಎಂದು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ಸಿನ ವರಸೆಯ ಬಗ್ಗೆ ಗಮನ ಸೆಳೆದಿದ್ದಾರೆ. ಹಾಗೇ, “ಈ ಹೊತ್ತು 70ರ ದಶಕದ ಪುನರಾವರ್ತನೆಯಂತೆ ಕಾಣುತ್ತಿದೆ. ಆದರೆ ಅಂದು ಕಾಂಗ್ರೆಸ್ ವಿರುದ್ಧ ಎಲ್ಲವೂ ನಡೆದಿತ್ತು. ಇಂದು ಆ ಪಕ್ಷ ತನ್ನ ನೀತಿ-ನಿಲುವು ಪ್ರಸ್ತುತಗೊಳಿಸಿಕೊಳ್ಳದೇ ಹೋದರೆ, ಅದರ ಹೊರತಾಗಿಯೇ ಬದಲಾವಣೆ ಸಂಭವಿಸಬಹುದು. ಸೈದ್ಧಾಂತಿಕವಾಗಿ ರಾಜೀವ್ ಗಾಂಧಿ ಹಂತಕರೊಂದಿಗೆ ಸಾಮ್ಯತೆ ಹೊಂದಿರುವವರೊಂದಿಗೇ ಅಧಿಕಾರಕ್ಕಾಗಿ ಕೈಜೋಡಿವುದಾದರೆ, ಆ ಪಕ್ಷಕ್ಕೆ ಪ್ರಶಾಂತ್ ಭೂಷಣ್ ಅಂತಹವರು ಅಪಥ್ಯವಾಗದೇ ಇರುವರೆ?” ಎಂದೂ ಅವರು ಪ್ರಶ್ನಿಸಿದ್ದಾರೆ. ಇದು ನಿಜಕ್ಕೂ ಕಾಂಗ್ರೆಸ್ ಪಕ್ಷ ತನಗೆ ತಾನೇ ಕೇಳಿಕೊಳ್ಳಬೇಕಾದ ತುರ್ತು ಪ್ರಶ್ನೆ.

ದಿಟ್ಟ ನಿಲುವು ಪ್ರದರ್ಶಿಸಿ, ಬೀದಿಗಿಳಿದು ಪ್ರತಿಭಟಿಸುವ ಹೊತ್ತಲ್ಲಿ ಕೇವಲ ಒಂದು ಹಾರಿಕೆಯ ಪ್ರತಿಕ್ರಿಯೆ ನೀಡಿ, ಇಲ್ಲವೇ ಒಂದು ಪತ್ರಿಕಾಗೋಷ್ಠಿ ನಡೆಸಿ ಜಾರಿಕೊಳ್ಳುತ್ತಿದೆ. ಅದರ ಇಂತಹ ನಡೆಗೆ ಇತ್ತೀಚಿನ ವರ್ಷಗಳಲ್ಲಿ ಸಾಲು ಸಾಲು ನಿದರ್ಶನಗಳಿವೆ. ಆ ಪೈಕಿ ಸಿಎಎ- ಎನ್ ಆರ್ ಸಿ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ನಡೆದುಕೊಂಡು ರೀತಿಯಂತೂ ಜನರ ಹಕ್ಕುಗಳ ಬಗ್ಗೆ, ಪ್ರಜಾಪ್ರಭುತ್ವದ ಹಿತರಕ್ಷಣೆಯ ಬಗ್ಗೆ ಆ ಪಕ್ಷಕ್ಕೆ ಎಷ್ಟು ಬದ್ಧತೆ ಇದೆ ಮತ್ತು ಅಂತಹ ವಿಷಯಗಳಲ್ಲಿ ಎಂತಹ ಸ್ಪಷ್ಟತೆ ಇದೆ ಎಂಬುದಕ್ಕೆ ಸಾಕ್ಷಿಯಾಗಿತ್ತು. ನಂತರದ ದೆಹಲಿ ಗಲಭೆಯ ವಿಷಯದಲ್ಲಿ ಕೂಡ ಕಾಂಗ್ರೆಸ್ ನಿಲುವು ಇಂತಹ ಅಪವಾದಕ್ಕೆ ಹೊರತಾಗೇನೂ ಇರಲಿಲ್ಲ.

ಪ್ರಶಾಂತ್ ಭೂಷಣ್ ವಿಷಯದಲ್ಲಂತೂ ಪ್ರಮುಖ ಪ್ರತಿಪಕ್ಷವಾಗಿ ಕಾಂಗ್ರೆಸ್, ಸಾಮಾಜಿಕ ಹೋರಾಟಗಾರ, ಜನಪರ ಕಾಳಜಿಯ ವಕೀಲರೊಬ್ಬರ ರಚನಾತ್ಮಕ ಟೀಕೆ, ಕಾಳಜಿಯ ಮಾತುಗಳ ವಿಷಯದಲ್ಲಿ ವಿಪರೀತದ, ಕಠಿಣ ಕ್ರಮ ಬೇಡ ಎಂದು ಸುಪ್ರೀಂಕೋರ್ಟಿಗೆ ಸಾರ್ವಜನಿಕವಾಗಿ ಮನವಿ ಮಾಡುವ ದಿಟ್ಟತನವನ್ನು ಕೂಡ ತೋರಲಿಲ್ಲ. ಕನಿಷ್ಟ ಪಕ್ಷದ ಘಟಾನುಘಟಿ ವಕೀಲರ ದಂಡು ಕೂಡ ಪ್ರಶಾಂತ್ ಪರವಾಗಿ ವಕಾಲತು ವಹಿಸಲು ಮುಂದೆ ಬರಲಿಲ್ಲ. ಅವರಿಗೆ ಈ ಹೊತ್ತಿನಲ್ಲಿ ಬೇಕಾಗಿದ್ದ ನೈತಿಕ ಬೆಂಬಲ ವ್ಯಕ್ತಪಡಿಸುವ ವಿಷಯದಲ್ಲೂ ಕಾಂಗ್ರೆಸ್ ಹೆಚ್ಚಿನ ಆಸಕ್ತಿ ವಹಿಸಲಿಲ್ಲ ಎಂಬುದು ಈ ಕೆಲವು ದಿನಗಳ ಅದರ ವರಸೆಯಲ್ಲೇ ಗೊತ್ತಾಗುತ್ತಿದೆ.

ಆಳುವ ವ್ಯವಸ್ಥೆಯ ದಮನ ನೀತಿಯ ವಿರುದ್ಧ ಸಮಾಜದ ವಿವಿಧ ವಲಯಗಳಲ್ಲಿ ಅಸಮಾಧಾನ, ಅಸಹನೆ ಮತ್ತು ಪ್ರತಿರೋಧಗಳು ಹರಳುಗಟ್ಟುತ್ತಿರುವ ಹೊತ್ತಿನಲ್ಲೂ ಪ್ರತಿಪಕ್ಷವೊಂದು ಅಂತಹ ಜನಾತಂಕಕ್ಕೆ, ಜನಾಗ್ರಹಕ್ಕೆ ನೇತೃತ್ವ ನೀಡುವ ಅವಕಾಶವನ್ನು ಪದೇಪದೇ ಕೈಚೆಲ್ಲುತ್ತಿದೆ ಎಂದರೆ; ಅದು ಆ ಪಕ್ಷದ ಸೈದ್ಧಾಂತಿಕ ಗೊಂದಲ, ಸಮಕಾಲೀನ ಬದುಕಿನ ಕುರಿತ ಅಸ್ಪಷ್ಟತೆಗೆ ಸಾಕ್ಷಿಯೇ? ಅಥವಾ ತನ್ನದೇ ಆಡಳಿತದ ಇತಿಹಾಸದಲ್ಲಿ ಹೂತುಹೋಗಿರುವ ಭೂತದ ಶವಪೆಟ್ಟಿಗೆ ಕಿರುಗುಟ್ಟಬಹುದು ಎಂಬ ಭೀತಿ ಕಾರಣವೆ?

ಆದರೆ, ಸದ್ಯ ಸ್ಥಿತಿಯಲ್ಲಿ ಅಂತಹ ಭೂತಗಳ ಭೀತಿಯನ್ನು ಮೀರದೆ, ಗೊಂದಲ ಮತ್ತು ಅಸ್ಪಷ್ಟತೆಗಳಿಂದ ಹೊರಬರದೇ ಇದ್ದಲ್ಲಿ ಆ ಪಕ್ಷವನ್ನು ಇತಿಹಾಸ ಕ್ಷಮಿಸಲಾರದು ಮತ್ತು ಅದು ಕೇವಲ ಜಯಂತಿ ಮತ್ತು ಪುಣ್ಯತಿಥಿಗಳ ಆಚರಣೆಗೆ ಮಾತ್ರ ಸೀಮಿತವಾಗಬೇಕಾಗಬಹುದು ಎಂಬುದು ಕಟುವಾಸ್ತವ!

Tags: ಕಾಂಗ್ರೆಸ್ನ್ಯಾಯಾಂಗ ನಿಂದನೆ ಪ್ರಕರಣಪ್ರಜಾಪ್ರಭುತ್ವಪ್ರತಿಪಕ್ಷಪ್ರಶಾಂತ್ ಭೂಷಣ್
Previous Post

ಕರ್ನಾಟಕ: 7,385 ಹೊಸ ಕರೋನಾ ಪ್ರಕರಣಗಳು ದಾಖಲು

Next Post

ʼಸಂಘಿ ನಿಷ್ಟೆ ತೋರಿಸುತ್ತಿರುವ ರೋಷನ್‌ ಬೇಗ್ʼ: ಝಮೀರ್ ಮಾತಿನ ತಾತ್ಪರ್ಯವೇನು?

Related Posts

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
0

ಡಾ.ರಾಜ್ ಪರದೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಅದೇ ಮೌಲ್ಯಗಳನ್ನು ಪಾಲಿಸಿದರು: ಸಿ.ಎಂ ಸಿದ್ದರಾಮಯ್ಯ ಅಪಾರ ಮೆಚ್ಚುಗೆ ಸಿನಿಮಾ ತಾರೆಯರು ಪರದೆ ಮೇಲೆ ಕಾಣುವಷ್ಟೇ ಮೌಲ್ಯಯುತವಾಗಿ ನಿಜ...

Read moreDetails

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

November 3, 2025

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

November 3, 2025

Rahul Gandhi: ಚುನಾವಣೆ ಪ್ರಚಾರದ ಬಳಿಕ ನೀರಿಗೆ ಧುಮುಕಿ ಮೀನು ಹಿಡಿದ ರಾಹುಲ್‌..

November 3, 2025
Next Post
ʼಸಂಘಿ ನಿಷ್ಟೆ ತೋರಿಸುತ್ತಿರುವ ರೋಷನ್‌ ಬೇಗ್ʼ: ಝಮೀರ್ ಮಾತಿನ ತಾತ್ಪರ್ಯವೇನು?

ʼಸಂಘಿ ನಿಷ್ಟೆ ತೋರಿಸುತ್ತಿರುವ ರೋಷನ್‌ ಬೇಗ್ʼ: ಝಮೀರ್ ಮಾತಿನ ತಾತ್ಪರ್ಯವೇನು?

Please login to join discussion

Recent News

Top Story

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

by ಪ್ರತಿಧ್ವನಿ
November 3, 2025
Top Story

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

by ಪ್ರತಿಧ್ವನಿ
November 3, 2025
Top Story

CM Siddaramaiah: ಬಿಹಾರ ವಿಧಾನಸಭಾ ಚುನಾವಣೆ: ಪ್ರತಿಪಕ್ಷಗಳ ಮಹಾ ಮೈತ್ರಿಕೂಟ ಗೆಲ್ಲುವ ಭರವಸೆಯಿದೆ..

by ಪ್ರತಿಧ್ವನಿ
November 3, 2025
Top Story

Minister KJ George: ಜಾಗ ನೀಡಿದರೆ ಹೆಚ್ಚುವರಿ ವಿದ್ಯುತ್ ಉಪಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
November 3, 2025
Top Story

CM Siddaramaiah: ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು..!!

by ಪ್ರತಿಧ್ವನಿ
November 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

CM Siddaramaiah: ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ, ಒಳ್ಳೆ ಸಿನಿಮಾ ಮಾಡಿ ಸಬ್ಸಿಡಿ ಪಡೆಯಿರಿ..!!

November 3, 2025

Darshan Case: ನಮ್ಮ ಮೇಲಿರುವ ಆರೋಪಗಳೆಲ್ಲಾ ಸುಳ್ಳೆಂದ ದರ್ಶನ್ ಗ್ಯಾಂಗ್‌..!!‌

November 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada