Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಬಜೆಟ್‌ ಅಧಿವೇಶನಕ್ಕೆ ಬಂದ ಶಾಸಕಿ ಎಂಟು ತಿಂಗಳ ಗರ್ಭಿಣಿ! 

ಬಜೆಟ್‌ ಅಧಿವೇಶನಕ್ಕೆ ಬಂದ ಶಾಸಕಿ ಎಂಟು ತಿಂಗಳ ಗರ್ಭಿಣಿ!
ಬಜೆಟ್‌ ಅಧಿವೇಶನಕ್ಕೆ ಬಂದ ಶಾಸಕಿ ಎಂಟು ತಿಂಗಳ ಗರ್ಭಿಣಿ! 

March 1, 2020
Share on FacebookShare on Twitter

ಎರಡು ವರ್ಷಗಳ ಹಿಂದೆ, ಆಸ್ಟ್ರೇಲಿಯಾದ ಸಂಸದೆ ಎರಡು ತಿಂಗಳ ಮಗುವಿಗೆ ಸಂಸತ್‌ನಲ್ಲಿ ಎದೆಹಾಲು ಕುಡಿಸಿದ ಫೋಟೋ ಜಗತ್ತಿನಾದ್ಯಂತ ಮೆಚ್ಚುಗೆ ಗಳಿಸಿತ್ತು, ಕೆಲಸದ ಬಗ್ಗೆ ಆಕೆಗೆ ಇರುವ ಬದ್ಧತೆಯನ್ನ ಎಲ್ಲರೂ ಕೊಂಡಾಡಿದ್ದರು, ಆಸ್ಟ್ರೇಲಿಯಾದ ಗ್ರೀನ್‌ ಪಾರ್ಟಿಯಿಂದ ಆಯ್ಕೆಯಾಗಿದ್ದ ಲಾರಿಸ್ಸಾ ವಾಟರ್ಸ್‌ ಗೆ ಅಂದು ಮಹತ್ವದ ದಿನವಾಗಿತ್ತು, ಹಸಿರು ನೀತಿ ಕುರಿತಾದ ಮಸೂದೆಯನ್ನ ತನ್ನ ಪಕ್ಷ ಮಂಡಿಸಿತ್ತು, ಮಸೂದೆಗೆ ಈಕೆಯ ಮತ ಬಹಳ ಮುಖ್ಯವಾಗಿತ್ತು, ಹಾಗಾಗಿ ತನ್ನ ಎರಡು ತಿಂಗಳ ಮಗಳು ಆಲಿಯಾ ಜಾಯ್‌ನೊಂದಿಗೆ ಸಂಸತ್‌ ಕಲಾಪದಲ್ಲಿ ಪಾಲ್ಗೊಂಡಿದ್ದಳು.

ಹೆಚ್ಚು ಓದಿದ ಸ್ಟೋರಿಗಳು

ಕಾಂಗ್ರೆಸ್​ ನಾಯಕಿಗೆ ಶೂರ್ಪನಖಿ ಎಂದಿದ್ದ ಪ್ರಧಾನಿ ಮೋದಿ : ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದ ರೇಣುಕಾ ಚೌಧರಿ

ಬಿಜೆಪಿಗೆ ಬಿಜೆಪಿಯೇ ಎದುರಾಳಿ..! ‘ನಾವಿಕನಿಲ್ಲದ ಹಡಗು’ ಭಾಗ – 02

ನಿಮ್ಮಂತಹ ಪುಕ್ಕಲು ಸರ್ವಾಧಿಕಾರಿಗೆ ಹೆದರಲ್ಲ: ಮೋದಿ ವಿರುದ್ಧ ಪ್ರಿಯಾಂಕ ಗುಡುಗು.!

ಇದಾಗಿ ವರ್ಷ ಕಳೆದಿತ್ತು, ನಾವೆಲ್ಲಾ ನೋಡುತ್ತಾ ಕುಳಿತ್ತಿದ್ವಿ, ನಮ್ಮ ರಾಜ್ಯದಲ್ಲಿ ಸರ್ಕಾರ ಏರುಪೇರಾಗಿ ಕಲಾಪಕ್ಕೆ ಹದಿನೇಳು ಶಾಸಕರು ಗೈರಾದರು, ಕೊನೆಗೆ ಸರ್ಕಾರವನ್ನೇ ಕೆಡುವಿಕೊಂಡು ಹೊಸ ಸರ್ಕಾರ ರಚಿಸಿದರು, ಈಗ ಹೊಸ ಹುರುಪಿನೊಂದಿಗೆ ಬಜೆಟ್‌ ಅಧಿವೇಶನಕ್ಕೆ ಕಾತರರಾಗಿದ್ದಾರೆ, ಇದರಲ್ಲಿ ಎಷ್ಟು ಶಾಸಕರು ಪಾಲ್ಗೊಳ್ಳುತ್ತಾರೆ, ಬಜೆಟ್‌ ಮೇಲೆ ಸುದೀರ್ಘ ಚರ್ಚೆಯಲ್ಲಿ ಎಷ್ಟು ಮಂದಿ ಇರುತ್ತಾರೋ ಗೊತ್ತಿಲ್ಲ, ಆದರೆ ಪಕ್ಕದ ರಾಜ್ಯ ಮಹಾರಾಷ್ಟ್ರದಲ್ಲಿ ಮಹಿಳಾ ಶಾಸಕಿಯೊಬ್ಬರು ಎಂಟು ತಿಂಗಳ ಗರ್ಭೀಣಿಯಾಗಿದ್ದರೂ ಬಜೆಟ್‌ ಅಧಿವೇಶನಕ್ಕೆ ಆಗಮಿಸಿ ಹೊಸ ಭಾಷ್ಯ ಬರೆದಿದ್ದಾರೆ.

ನಮಿತಾ ಮುಂಡದ ಮಹಾರಾಷ್ಟ್ರದ ಭೀಡ್‌ ಜಿಲ್ಲೆಯ ಕೈಜ್‌ ತಾಲೂಕಿನ ಶಾಸಕಿ, ಎಂಟು ತಿಂಗಳ ಗರ್ಭಿಣಿ. ಬಜೆಟ್‌ ಅಧಿವೇಶನದಲ್ಲಿ ತನ್ನ ಕ್ಷೇತ್ರದ ಸಾಕಷ್ಟು ಸಮಸ್ಯೆಗಳನ್ನ ಸದನದ ಗಮನಕ್ಕೆ ತರಬೇಕಿದೆ, ಈ ಅಧಿವೇಶನ ಬಿಟ್ಟರೆ ಮುಂಗಾರು ಅಧಿವೇಶನಕ್ಕೆ ಬರಲು ಸಾಧ್ಯವಾಗದೇ ಇರಬಹುದು ಎಂಬ ಕಾರಣಕ್ಕೆ ಅಧಿವೇಶನಕ್ಕೆ ಹಾಜರಾಗುತ್ತಿದ್ದಾರೆ. ಸಂಸತ್‌ ಅಧಿವೇಶನ ಇರಬಹುದು, ವಿಧಾನಸಭಾ ಅಧಿವೇಶನಗಳಿರಬಹುದು, ಮೊದಲ ದಿನದಿಂದಲೇ ಚಕ್ಕರ್‌ ಹಾಕುವ ಜನಪ್ರತಿನಿಧಿಗಳ ಮಧ್ಯೆ ಮಹಿಳಾ ಶಾಸಕಿಯೊಬ್ಬರ ಮಾದರಿ ಕೆಲಸ ಎಲ್ಲರಿಗೂ ಅನುಕರಣೀಯವಾಗಬೇಕು.

ಮಾಧ್ಯಮಗಳೂ ನಮಿತಾರನ್ನ ಪ್ರಶ್ನೆ ಮಾಡಿವೆ. ಇದಕ್ಕೆ ಆಕೆ ಪ್ರತಿಕ್ರಿಯಿಸಿ, ಈ ಅಧಿವೇಶನ ನನಗೆ ಬಹಳ ಮುಖ್ಯವಾದದ್ದು, ನನ್ನ ಕ್ಷೇತ್ರದ ಸಮಸ್ಯೆಗಳನ್ನ ನಾನು ಹೇಳಿ ಕೊಳ್ಳಲೇಬೇಕು. ಹೌದು ನಾನು ಗರ್ಭಿಣಿಯಾಗಿದ್ದೇನೆ ಆದರೆ ಅದು ಮಹಾವ್ಯಾದಿ ಎಂದೇಕೆ ಪರಿಗಣಿಸಬೇಕು, ಸಮಯ ಸಿಕ್ಕಾಗ ಸಭಾಂಗಣದ ಹೊರಗೆ ವಾಕ್‌ ಮಾಡುತ್ತೇನೆ, ಸರಿಯಾದ ಸಮಯಕ್ಕೆ ಊಟ ಮಾಡುತ್ತೇನೆ, ಚಕ್ಕರ್‌ ಹಾಕುವಷ್ಟು ಸಮಸ್ಯೆ ಏನಿಲ್ಲ, ಏಪ್ರಿಲ್‌ ನಲ್ಲಿ ನಾನು ತಾಯಿಯಾಗುತ್ತೇನೆ, ಮುಂದಿನ ಮಾನ್‌ಸೂನ್‌ ಅಧಿವೇಶನಕ್ಕೆ ನನಗೆ ಭಾಗವಹಿಸಲು ಆಗದೇ ಇರಬಹುದು ಹಾಗಾಗಿ ನಾನು ಬರಲೇಬೇಕಿತ್ತು ಎನ್ನುತ್ತಾರೆ. ನಮಿತಾ ಶಿಶುಹತ್ಯೆಗೆ ಕುಖ್ಯಾತಿ ಪಡೆದ ಭೀಡ್ ಜಿಲ್ಲೆಯವರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎನ್‌ಸಿಪಿಯಿಂದ ಬಿಜೆಪಿಗೆ ಪಲ್ಲಟಗೊಂಡು ವಿಧಾನಸಭೆಗೆ ಆಯ್ಕೆಯಾಗಿದ್ದರು, ಈಕೆಯ ತಾಯಿ ಎನ್‌ಸಿಪಿಯಿಂದ ಮಂತ್ರಿಯಾಗಿದ್ದವರು.

ನಮಿತಾ ಕಥೆ ಇಷ್ಟಾದರೆ, ನಮ್ಮ ಪುರುಷ ಶಾಸಕರು ತದ್ವಿರುದ್ಧ, ಇನ್ನೇನು ಮಾರ್ಚ್‌ ೫ ಬಂದೇ ಬಿಡ್ತು, ಮಾನ್ಯ ಮುಖ್ಯಮಂತ್ರಿಗಳಾದ ಬಿಎಸ್‌ ಯಡಿಯೂರಪ್ಪನವರ ಬಹು ನಿರೀಕ್ಷಿತ ಬಜೆಟ್‌ ಮಂಡನೆಗೆ ಚಾತಕ ಪಕ್ಷಿಗಳಂತೆ ಜನರೂ ಕಾದು ಕುಳಿತಿದ್ದಾರೆ, ಎಷ್ಟು ಜನ ಅಧಿವೇಶನದಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳುತ್ತಾರೆ, ಎಷ್ಟು ಗೈರಾಗುತ್ತಾರೆ, ಎಷ್ಟು ಜನರು ನಿದ್ದೆ ಮಾಡುತ್ತಾರೋ ಗೊತ್ತಿಲ್ಲ, ಈಗಾಗಲೇ ದೊರೆಸ್ವಾಮಿ ಮೇಲೆ ಬಸನಗೌಡ ಪಾಟೀಲ ಯತ್ನಾಳ ನೀಡಿರುವ ಹೇಳಿಕೆಯನ್ನ ಬಲವಾಗಿ ಹಿಡಿದುಕೊಂಡಿರುವ ಕಾಂಗ್ರೆಸ್‌ ಈಗಾಗಲೇ ಸದನ ಭಹಿಷ್ಕರಿಸುವ ಮಾತನ್ನಾಡಿದೆ. ಸದನದ ಪ್ರಾಮುಖ್ಯತೆಯನ್ನ ಕಳೆದುಕೊಂಡು ಸಿಎಎ, ಮೋದಿ, ದೊರೆಸ್ವಾಮಿ ಎಂದು ಕೆಸರೆರಚಾಡಲು ಸಿದ್ಧರಿರುವ ನಮ್ಮ ಶಾಸಕರನ್ನ ನೋಡಿದಾಗ ತುಂಬು ಗರ್ಭಿಣಿ ನಮಿತಾ ನೆನಪಾಗದೇ ಇರಲಾರಳು.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ಸುಮಲತಾ ಬಿಜೆಪಿಗೆ ಬೆಂಬಲ, ಈ ವಾರದಲ್ಲೇ ಶಿವರಾಮೇಗೌಡ ಬಿಜೆಪಿ ಸೇರ್ಪಡೆ :ಮಂಡ್ಯದಲ್ಲಿ ಜೆಡಿಎಸ್​ಗೆ ಈ ಬಾರಿ ಸಂಕಷ್ಟ..?
ಕರ್ನಾಟಕ

ಸುಮಲತಾ ಬಿಜೆಪಿಗೆ ಬೆಂಬಲ, ಈ ವಾರದಲ್ಲೇ ಶಿವರಾಮೇಗೌಡ ಬಿಜೆಪಿ ಸೇರ್ಪಡೆ :ಮಂಡ್ಯದಲ್ಲಿ ಜೆಡಿಎಸ್​ಗೆ ಈ ಬಾರಿ ಸಂಕಷ್ಟ..?

by ಮಂಜುನಾಥ ಬಿ
March 20, 2023
ಮೋದಿ ಉಪನಾಮ ಪ್ರಕರಣ : ಲೋಕಸಭಾ ಸದಸ್ಯತ್ವ ಸ್ಥಾನದಿಂದ ರಾಹುಲ್​ ಗಾಂಧಿ ಅನರ್ಹ
ಇದೀಗ

ಮೋದಿ ಉಪನಾಮ ಪ್ರಕರಣ : ಲೋಕಸಭಾ ಸದಸ್ಯತ್ವ ಸ್ಥಾನದಿಂದ ರಾಹುಲ್​ ಗಾಂಧಿ ಅನರ್ಹ

by ಮಂಜುನಾಥ ಬಿ
March 24, 2023
‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಬೇಕು’ : ಮುಸ್ಲಿಂ ವ್ಯಕ್ತಿಯ ವಿಡಿಯೋ ವೈರಲ್​
ಕರ್ನಾಟಕ

‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಬೇಕು’ : ಮುಸ್ಲಿಂ ವ್ಯಕ್ತಿಯ ವಿಡಿಯೋ ವೈರಲ್​

by ಮಂಜುನಾಥ ಬಿ
March 24, 2023
ನಟ ಚೇತನ್​ ಅಂಹಿಸಾಗೆ 14 ದಿನಗಳ ನ್ಯಾಯಾಂಗ ಬಂಧನ
Top Story

ನಟ ಚೇತನ್​ ಅಂಹಿಸಾಗೆ 14 ದಿನಗಳ ನ್ಯಾಯಾಂಗ ಬಂಧನ

by ಮಂಜುನಾಥ ಬಿ
March 21, 2023
ಉರಿಗೌಡ, ನಂಜೇಗೌಡ ವಿಚಾರದಲ್ಲಿ ಸಿ.ಟಿ ರವಿ ಹೊಸ ರಾಗ : ದಾಖಲೆ ಸದ್ಯದಲ್ಲೇ ತೋರಿಸುತ್ತೇವೆಂದು ಸವಾಲು
ಕರ್ನಾಟಕ

ಉರಿಗೌಡ, ನಂಜೇಗೌಡ ವಿಚಾರದಲ್ಲಿ ಸಿ.ಟಿ ರವಿ ಹೊಸ ರಾಗ : ದಾಖಲೆ ಸದ್ಯದಲ್ಲೇ ತೋರಿಸುತ್ತೇವೆಂದು ಸವಾಲು

by ಮಂಜುನಾಥ ಬಿ
March 21, 2023
Next Post
ಸಾಮಾಜಿಕ ತಾಣಗಳಲ್ಲಿ ನಕಲಿ ಸುದ್ದಿಗಳದ್ದೇ ಕಾರು ಬಾರು

ಸಾಮಾಜಿಕ ತಾಣಗಳಲ್ಲಿ ನಕಲಿ ಸುದ್ದಿಗಳದ್ದೇ ಕಾರು ಬಾರು

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು; ಭಾರತದಲ್ಲಿ ಈವರೆಗೆ ನೇಣಿಗೆ ಕೊರಳು ಕೊಟ್ಟವರ ಇತಿಹಾಸವೇನು?

ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು; ಭಾರತದಲ್ಲಿ ಈವರೆಗೆ ನೇಣಿಗೆ ಕೊರಳು ಕೊಟ್ಟವರ ಇತಿಹಾಸವೇನು?

ಪಶ್ಚಿಮ ಬಂಗಾಳಕ್ಕೆ ಹಬ್ಬಲಿದೆಯೇ ಪೌರತ್ವದ ಕಿಚ್ಚು?

ಪಶ್ಚಿಮ ಬಂಗಾಳಕ್ಕೆ ಹಬ್ಬಲಿದೆಯೇ ಪೌರತ್ವದ ಕಿಚ್ಚು?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist