Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಪಶ್ಚಿಮ ಬಂಗಾಳಕ್ಕೆ ಹಬ್ಬಲಿದೆಯೇ ಪೌರತ್ವದ ಕಿಚ್ಚು?

ಪಶ್ಚಿಮ ಬಂಗಾಳಕ್ಕೆ ಹಬ್ಬಲಿದೆಯೇ ಪೌರತ್ವದ ಕಿಚ್ಚು?
ಪಶ್ಚಿಮ ಬಂಗಾಳಕ್ಕೆ ಹಬ್ಬಲಿದೆಯೇ ಪೌರತ್ವದ ಕಿಚ್ಚು?

March 2, 2020
Share on FacebookShare on Twitter

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದ ಬಳಿಕ ದೇಶ ಹೊತ್ತಿ ಉರಿಯುತ್ತಿದೆ. ದೆಹಲಿಯಲ್ಲಿ ಇಲ್ಲೀವರೆಗೂ 43ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 300ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಸದ್ಯ ದೆಹಲಿ ಬೂದಿ ಮುಚ್ಚಿದ ಕೆಂಡದಂತಿದ್ದು, ಮತ್ತೆ ಯಾವುದೇ ಕ್ಷಣದಲ್ಲಿ ಗಲಭೆ ನಡೆದರೂ ನಡೆಯಬಹುದು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಭದ್ರತೆ ಹೆಚ್ಚಳ ಮಾಡಿದೆ. ದೆಹಲಿಯಲ್ಲಿ ಅಕ್ಕಪಕ್ಕದ ರಾಜ್ಯಗಳ ಜನರು ತಾತ್ಕಾಲಿಕವಾಗಿ ದೆಹಲಿ ತೊರೆದು ಸ್ವಂತ ರಾಜ್ಯಗಳಿಗೆ ತೆರಳುತ್ತಿದ್ದಾರೆ. ಈ ನಡುವೆ ಒಂದೊಂದು ಹೊಸ ಪ್ರಕರಣಗಳು ಪತ್ತೆಯಾಗುತ್ತಿದ್ದು, ದೆಹಲಿಯ ಶಿವ್ ವಿಹಾರ ನಗರದ ಮನೆಯೊಂದರಲ್ಲಿ ಪೆಟ್ರೋಲ್ ಬಾಂಬ್ಗಳು ಪತ್ತೆಯಾಗಿವೆ. ಮನೆ ಒಳಗೆ ಜನರು ಇಟ್ಟಿಗೆ ಕಲ್ಲು, ದೊಣ್ಣೆ ಸಂಗ್ರಹ ಮಾಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ದೆಹಲಿಯಲ್ಲಿ ಹಿಂಸೆಗೆ ತುತ್ತಾದ ಪ್ರದೇಶಗಳಿಗೆ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ನ ರವಿಶಂಕರ್ ಗುರೂಜಿ ಭೇಟಿ ನೀಡಿದ್ದಾರೆ. ಶಾಂತಿ ಕಾಪಾಡುವಂತೆ ಮುಸ್ಲಿಂ ಸಮುದಾಯದ ಯುವಕರಿಗೆ ಕರೆ ನೀಡಿದ್ದಾರೆ. ಇನ್ನು ಹಿಂದೂ ಸಂಘಟನೆಗಳು ದೆಹಲಿಯ ಶಾಹೀನ್ ಬಾಗ್ನಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದರಿಂದು, 144 ಸೆಕ್ಷನ್ ಜಾರಿ ಮಾಡಲಾಗಿದೆ.

ಹೆಚ್ಚು ಓದಿದ ಸ್ಟೋರಿಗಳು

ಕೆಲವು ರಾಷ್ಟ್ರಗಳು ಅಜೆಂಡಾ ನಿರ್ಧರಿಸಿ, ಉಳಿದವರು ಅನುಸರಿಸುವ ಕಾಲ ಮುಗಿದಿದೆ: ಜೈಶಂಕರ್

ಸುಪ್ರೀಂ ಕೋರ್ಟ್ ಗಮನ ಸೆಳೆಯಲು ಬೀದಿಗಿಳಿದು ಹೋರಾಟ ಅನಿವಾರ್ಯ: ಬಸವರಾಜ ಬೊಮ್ಮಾಯಿ

ತಮಿಳುನಾಡಿನಲ್ಲಿ ಬಿಜೆಪಿ ಜತೆಗಿನ ಬಾಂಧವ್ಯವನ್ನು ಕಳೆದುಕೊಳ್ಳುತ್ತೇನೆ : ಉದಯನಿಧಿ ಸ್ಟಾಲಿನ್

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವ ಜನರಿಗೆ ಗೋಲಿ ಮಾರೋ ಎಂದಿದ್ದರು ಕೇಂದ್ರ ಹಣಕಾಸು ಸಚಿವ ಅನುರಾಗ್ ಠಾಕೂರ್. ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಈ ಮಾತು ಹೇಳಿದ ಬಳಿಕ ಕೆಲವೇ ದಿನಗಳಲ್ಲಿ ಶೂಟೌಟ್ ನಡೀತು. ಆ ನಂತರ ಇಡೀ ದೆಹಲಿಯೇ ಹೊತ್ತಿ ಉರಿದಿತ್ತು. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಷಾ ಪಶ್ಚಿಮ ಬಂಗಾಳ ಪ್ರವಾಸದಲ್ಲಿದ್ದು, ಕೋಲ್ಕತ್ತಾದಲ್ಲಿ ಬೃಹತ್ ಱಲಿ ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ಮಾಡಿರುವ ಅಮಿತ್ ಷಾ, ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಚಿನ್ನದ ಬಂಗಾಳ ಮಾಡಲು ಸಾಧ್ಯವೇ ಇಲ್ಲ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡದೆ ಇರಲಿಕ್ಕೂ ಆಗಲ್ಲ ಎಂದು ಸವಾಲು ಎಸೆದಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಷಾ ಕೋಲ್ಕತ್ತಾ ಭೇಟಿಗೆ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು, ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿವೆ. ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಗೋ ಬ್ಯಾಕ್ ಅಮಿತ್ ಷಾ ಪ್ಲಕಾರ್ಡ್ ತೋರಿಸುವ ಮೂಲಕ ಅಮಿತ್ ಷಾ ಭೇಟಿಯನ್ನು ವಿರೋಧಿಸಿದ್ದಾರೆ. ಇನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಏರ್ಪೋರ್ಟ್ನಲ್ಲೇ ಅಮಿತ್ ಷಾ ಭೇಟಿಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಅಮಿತ್ ಆಗಮಿಸುತ್ತಿದ್ದಂತೆ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ ಕಾರ್ಯಕರ್ತರು, ಅಮಿತ್ ಷಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಪ್ಪು ಬಾವುಟ ಹಾರಿಸಿದ್ದಾರೆ. ಜೊತೆಗೆ ಕಪ್ಪು ಬಣ್ಣದ ಬಲೂನ್ಗಳನ್ನು ಆಕಾಶಕ್ಕೆ ಹಾರಿ ಬಿಡುವ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕಿಡಿಕಾರಿದ್ದಾರೆ. ಗೋ ಬ್ಯಾಕ್ ಅಮಿತ್ ಷಾ ಎಂದು ಘೋಷಣೆ ಕೂಗಿದ್ದಾರೆ.

ದೆಹಲಿಯ ಬಳಿಕ ಅಗ್ನಿಕುಂಡವಾಗಿರುವ ಮೇಘಾಲಯದಲ್ಲಿ ಪೌರತ್ವ ತಿದ್ದುಪಡಿ ವಿರೋಧಿಸಿ ಹೋರಾಟ ನಡೆಯುತ್ತಿದೆ. ಈಗಾಗಲೇ ಮೂವರು ಸಾವನ್ನಪ್ಪಿದ್ದಾರೆ. 10ಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಪೂರ್ವ ಕಾಶಿ ಹಿಲ್ಸ್ ಜಿಲ್ಲೆಯಲ್ಲಿ ಹಿಂಸಾಚಾರ ನಡೆದಿದ್ದು, 37 ವರ್ಷದ ಉಫಾಸ್ ಉದ್ದೀನ್ ಎಂಬ ವ್ಯಕ್ತಿಯನ್ನು ಮೂವರು ಅನಾಮಿಕರು ಹೊಡೆದು ಸಾಯಿಸಿದ್ದಾರೆ. ಇಲ್ಲೀವರೆಗೂ 8 ಜನರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಆದರೂ ಅಲ್ಲಲ್ಲಿ ಹೋರಾಟಗಳು ನಡೆಯುತ್ತಲೇ ಇವೆ. ಒಟ್ಟು 11 ಜಿಲ್ಲೆಗಳ ಪೈಕಿ 6 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ ಮಾಡಲಾಗಿದೆ. ರಾಜ್ದಯಾದ್ಯಂತ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ದೇಹಲಿ, ಮೇಘಾಲಯದ ಬಳಿಕ ಪಶ್ಚಿಮ ಬಂಗಾಳದಲ್ಲಿ ಗಲಭೆ ಶುರುವಾಗುತ್ತಾ..? ಎನ್ನುವ ಅನುಮಾನ ಮೂಡುವಂತಾಗಿದೆ. ಯಾಕಂದರೆ, ಕೋಲ್ಕತ್ತಾದ ಶಾಹಿದ್ ಮಿನಾರ್ ಕ್ರೀಡಾಂಗಣದಲ್ಲಿ ನಡೆದ ಸಮಾವೇಶದ ವೇಳೆ ಅಮಿತ್ ಷಾ ಭಾಷಣ ಮಾಡುತ್ತಿರುವಾಗ, ಬಿಜೆಪಿ ಕಾರ್ಯಕರ್ತರು ಗೋಲಿ ಮಾರೋ ಘೋಷಣೆ ಕೂಗುತ್ತಿದ್ದರು. ಈ ಬಗ್ಗೆ ಪಶ್ಚಿಮ ಬಂಗಾಳ ಪೊಲೀಸರು ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ಇದೇ ರೀತಿ ಪ್ರಚೋದನಾ ಹೇಳಿಕೆಯಿಂದಲೇ ದೆಹಲಿಯಲ್ಲಿ ಗಲಭೆ ಶುರುವಾಗಿತ್ತು. ಇದೀಗ ಪಶ್ಚಿಮ ಬಂಗಾಳದಲ್ಲಿ ಕಾರ್ಯಕರ್ತರೇ ಗೋಲಿ ಮಾರೋ ಎಂದು ಘೋಷಣೆ ಕೂಗಿರುವುದು ಮುಂದಿನ ಘಟನೆ ಬಗ್ಗೆ ಅನುಮಾನ ಸೃಷ್ಟಿಸುತ್ತಿದೆ.

RS 500
RS 1500

SCAN HERE

Pratidhvani Youtube

«
Prev
1
/
5518
Next
»
loading
play
Congress | DCM ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ.
play
D K Shivakumar | ಯಾವುದೇ ಕಾರಣಕ್ಕೂನಾವು ಕೆ ಆರ್ ಎಸ್ ಇಂದ ನೀರು ಕೊಡುವ ಸ್ಥಿತಿ ಉದ್ಭವಿಸುವುದಿಲ್ಲ|
«
Prev
1
/
5518
Next
»
loading

don't miss it !

ನಾನು ಮಂಡ್ಯ ಕ್ಷೇತ್ರದ ಚುನಾವಣಾ ಸ್ಪರ್ಧಾಕಾಂಕ್ಷಿಯಲ್ಲ: ನಿಖಿಲ್‌ ಕುಮಾರಸ್ವಾಮಿ
Top Story

ನಾನು ಮಂಡ್ಯ ಕ್ಷೇತ್ರದ ಚುನಾವಣಾ ಸ್ಪರ್ಧಾಕಾಂಕ್ಷಿಯಲ್ಲ: ನಿಖಿಲ್‌ ಕುಮಾರಸ್ವಾಮಿ

by ಪ್ರತಿಧ್ವನಿ
September 24, 2023
ಕಾವೇರಿ ನೀರಿ ನಿಯಂತ್ರಣ ಸಮಿತಿ ಸಭೆ: ಕರ್ನಾಟಕದ ಪರವಾಗಿ ಅಧಿಕಾರಿಗಳು ವಾದ ಮಂಡನೆ 
Top Story

ಕಾವೇರಿ ನೀರಿ ನಿಯಂತ್ರಣ ಸಮಿತಿ ಸಭೆ: ಕರ್ನಾಟಕದ ಪರವಾಗಿ ಅಧಿಕಾರಿಗಳು ವಾದ ಮಂಡನೆ 

by ಪ್ರತಿಧ್ವನಿ
September 26, 2023
ಅಧಿಕಾರದ ಅಮಲಿನಲ್ಲಿ ಕಾಂಗ್ರೆಸ್ ನವರು ತೇಲ್ತಿದ್ದಾರೆ: ಜಿಟಿ ದೇವೇಗೌಡ
Top Story

ಅಧಿಕಾರದ ಅಮಲಿನಲ್ಲಿ ಕಾಂಗ್ರೆಸ್ ನವರು ತೇಲ್ತಿದ್ದಾರೆ: ಜಿಟಿ ದೇವೇಗೌಡ

by ಪ್ರತಿಧ್ವನಿ
September 27, 2023
ಮೋಜು-ಮಸ್ತಿಗಾಗಿ ದಾಳಿಂಬೆ ಹಣ್ಣು ಕದ್ದು, ರೈತರ ನಿದ್ದೆಗೆಡಿಸಿದ್ದ ಕಳ್ಳರು ಅಂದರ್‌..!
ಇದೀಗ

ಮೋಜು-ಮಸ್ತಿಗಾಗಿ ದಾಳಿಂಬೆ ಹಣ್ಣು ಕದ್ದು, ರೈತರ ನಿದ್ದೆಗೆಡಿಸಿದ್ದ ಕಳ್ಳರು ಅಂದರ್‌..!

by ಪ್ರತಿಧ್ವನಿ
September 21, 2023
ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ರಾಜ್ಯ ಹಾಳಾಗುವುದು ನಿಶ್ಚಿತ: ಪ್ರಧಾನಿ ನರೇಂದ್ರ ಮೋದಿ
Top Story

ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ರಾಜ್ಯ ಹಾಳಾಗುವುದು ನಿಶ್ಚಿತ: ಪ್ರಧಾನಿ ನರೇಂದ್ರ ಮೋದಿ

by ಪ್ರತಿಧ್ವನಿ
September 25, 2023
Next Post
ಮನುಕುಲಕ್ಕೆ ಮಾರಕವಾಗಿರುವ ವೈರಸ್‌ಗಳು ಯಾವುವು ಗೊತ್ತೇ?

ಮನುಕುಲಕ್ಕೆ ಮಾರಕವಾಗಿರುವ ವೈರಸ್‌ಗಳು ಯಾವುವು ಗೊತ್ತೇ?

ದೆಹಲಿ ಹಿಂಸಾಚಾರ: ಹಿಂದೂ ಮುಸ್ಲಿಂ ಸಾಮರಸ್ಯದ ನಡುವೆ ಶಾಂತಿ ಕದಡಿದ ಮೂರನೇ ಗುಂಪು ಯಾವುದು?

ದೆಹಲಿ ಹಿಂಸಾಚಾರ: ಹಿಂದೂ ಮುಸ್ಲಿಂ ಸಾಮರಸ್ಯದ ನಡುವೆ ಶಾಂತಿ ಕದಡಿದ ಮೂರನೇ ಗುಂಪು ಯಾವುದು?

ಕೇಂದ್ರದಿಂದ ತೆರಿಗೆ ಹಂಚಿಕೆ  ಕಡಿತ; ಕೊರತೆ ನೀಗಿಸಲು  ಸಾಲ ಪಡೆಯಬೇಕಿದೆ ರಾಜ್ಯ ಸರ್ಕಾರ

ಕೇಂದ್ರದಿಂದ ತೆರಿಗೆ ಹಂಚಿಕೆ ಕಡಿತ; ಕೊರತೆ ನೀಗಿಸಲು ಸಾಲ ಪಡೆಯಬೇಕಿದೆ ರಾಜ್ಯ ಸರ್ಕಾರ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist