ಭಾರತ ಮತ್ತು ಚೀನಾ ನಡುವೆ ಗಡಿ ವಿವಾದ ತಾರಕಕ್ಕೇರುತ್ತಿರುವ ಸಂದರ್ಭದಲ್ಲಿ ಮಾತನಾಡಿರುವ ಕೇಂದ್ರ ಮಂತ್ರಿ ನಿತಿನ್ ಗಡ್ಕರಿ ಚೀನಾ ಅಥವಾ ಪಾಕಿಸ್ತಾನದ ಯಾವುದೇ ಭೂ ಪ್ರದೇಶ ನಮಗೆ ಬೇಕಾಗಿಲ್ಲ, ಭಾರತ ಶಾಂತಿಪ್ರಿಯರ ರಾಷ್ಟ್ರ ಎಂದು ಹೇಳಿದ್ದಾರೆ.
“ಭಾರತ ಒಂದು ಕಡೆಯಿಂದ ಚೀನಾ ಮತ್ತು ಕಡೆಯಿಂದ ಪಾಕಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಳ್ಳುತ್ತದೆ. ಆದರೆ, ನಮಗೆ ಶಾಂತಿ ಬೇಕು. ಅಹಿಂಸೆ ಬೇಕು,” ಎಂದು ಗಡ್ಕರಿ ಹೇಳಿದ್ದಾರೆ.
ನಾವೆಂದೂ ಭೂತಾನ್ ಗಡಿಯನ್ನು ಅತಿಕ್ರಮಿಸಲು ಪ್ರಯತ್ನಿಸಿಲ್ಲ. ಪಾಕಿಸ್ತಾನದ ವಶದಲ್ಲಿರುವ ನಮ್ಮ ಹಕ್ಕಿನ ಭೂ ಭಾಗವನ್ನೂ ನಾವು ಪಡೆಯಲು ಹವಣಿಸಿಲ್ಲ. ಚೀನಾದ ಭೂಮಿಯೂ ನಮಗೆ ಬೇಕಾಗಿಲ್ಲ, ಎಂದು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ ಹೇಳಿದ್ದಾರೆ.
![](https://pratidhvani.in/wp-content/uploads/2021/02/TPFI-106.jpg)