• Home
  • About Us
  • ಕರ್ನಾಟಕ
Wednesday, October 29, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ದೊರೆಸ್ವಾಮಿಯವರನ್ನು ಪಾಕ್ ಏಜೆಂಟ್ ಎಂದ ಚೀಟಿಂಗ್ ಶಾಸಕ ಯತ್ನಾಳ್ ಮೇಲಿದೆ 23 ಗಂಭೀರ ಪ್ರಕರಣಗಳು

by
February 26, 2020
in ಕರ್ನಾಟಕ
0
ದೊರೆಸ್ವಾಮಿಯವರನ್ನು ಪಾಕ್ ಏಜೆಂಟ್ ಎಂದ ಚೀಟಿಂಗ್ ಶಾಸಕ ಯತ್ನಾಳ್ ಮೇಲಿದೆ 23 ಗಂಭೀರ ಪ್ರಕರಣಗಳು
Share on WhatsAppShare on FacebookShare on Telegram

ಕೇಂದ್ರ ಸರ್ಕಾರದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯ(ಸಿಎಎ) ವಿರುದ್ಧ ಇಂದು ದೇಶದಾದ್ಯಂತ ದೊಡ್ಡ ಮಟ್ಟದ ಹೋರಾಟ ನಡೆಯುತ್ತಿದೆ. ಧರ್ಮದ ಆಧಾರದಲ್ಲಿ ಪೌರತ್ವವನ್ನು ನಿರ್ಧರಿಸುವ ಕೇಂದ್ರ ಸರ್ಕಾರದ ನಡೆಯನ್ನು ನಾಡಿನಾದ್ಯಂತ ನೂರಾರು ಮುತ್ಸದ್ದಿಗಳು, ಅದರಲ್ಲೂ ಮುಖ್ಯವಾಗಿ ಗಾಂಧಿವಾದಿಗಳು ಇದನ್ನು ಬಹುವಾಗಿ ಖಂಡಿಸುತ್ತಿದ್ದಾರೆ. ಇದಕ್ಕೆ ಕಾರಣ ಕೇಂದ್ರದ ನಿಲುವು ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಚಾರ ಎಂಬುದು ಅವರ ಆರೋಪ.

ADVERTISEMENT

ಹೀಗೆ ಕೇಂದ್ರದ ನಿಲುವಿನ ವಿರುದ್ಧ ನಿಂತಿರುವ ಪ್ರಮುಖರ ಪೈಕಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ರಾಜ್ಯದ ಹೆಮ್ಮೆ ದೊರೆಸ್ವಾಮಿಯವರೂ ಸಹ ಒಬ್ಬರು. ಕಳೆದ ಹಲವು ದಶಕಗಳಿಂದ ರಾಜ್ಯದ ಹತ್ತಾರು ಪ್ರಮುಖ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಯುವ ಸಮಾಜಕ್ಕೆ ದಾರಿದೀಪವಾದವರು ದೊರೆಸ್ವಾಮಿ.

ಆದರೆ, ಅವರು ಕೇಂದ್ರ ಸರ್ಕಾರದ ಸಿಎಎ ಕಾನೂನನ್ನು ವಿರೋಧಿಸಿದರು ಎಂಬ ಏಕೈಕ ಕಾರಣಕ್ಕೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ದೊರೆಸ್ವಾಮಿ ಅವರನ್ನು ಪಾಕಿಸ್ತಾನದ ಏಜೆಂಟ್, ನಕಲಿ ಸ್ವಾತಂತ್ರ್ಯ ಹೋರಾಟಗಾರ ಎಂದು ಹೀಗೆಳೆಯುವ ಮೂಲಕ ತೀರಾ ನೀಚತನದ ಮಾತುಗಳನ್ನಾಡಿದ್ದಾರೆ. ಹಿರಿಯ ಸ್ವಾತಂತ್ರ್ಯ ಸೇನಾನಿಯನ್ನು ಅವಮಾನಿಸುವ ಮೂಲಕ ನಿಜವಾದ ದೇಶದ್ರೋಹಿ ಆಗಿದ್ದಾರೆ.

ಅಸಲಿಗೆ ಈತನೋರ್ವ ಯಕಶ್ಚಿತ್ ಶಾಸಕ ಎಂಬುದೊಂದನ್ನು ಬಿಟ್ಟರೆ ದೊರೆಸ್ವಾಮಿಯವರ ಕುರಿತು ಮಾತನಾಡಲು ಈತನಿಗೆ ಯಾವ ಯೋಗ್ಯತೆ ಇದೆ. ಅಂದಹಾಗೆ ಈತನ ಯೋಗ್ಯತೆ ಕುರಿತು ಹುಡುಕುತ್ತಾ ಹೊರಟ ʼಪ್ರತಿಧ್ವನಿʼ ತಂಡಕ್ಕೆ ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಈತನೇ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಯೋಗ್ಯತಾ ಪಟ್ಟಿ (ತನ್ನ ಮೇಲೆ ದಾಖಲಾಗಿರುವ ಪ್ರಕರಣಗಳ ಪಟ್ಟಿ) ಲಭ್ಯವಾಗಿದೆ. ಇದನ್ನು ಓದಿದ ನಂತರ ದೊರೆಸ್ವಾಮಿಯವರನ್ನು ಟೀಕಿಸಿದವ ಎಂತಹ (ಅ)ಯೋಗ್ಯ ಎಂಬುದನ್ನು ನೀವೆ ನಿರ್ಧರಿಸಿ.

(1) ಮೋಸ ಮತ್ತು ಆಸ್ತಿಯ ಅಪ್ರಾಮಾಣಿಕ ವಿತರಣೆಗೆ ಸಂಬಂಧಿಸಿದಂತೆ IPC Section-420 ಅಂದರೆ ಚೀಟಿಂಗ್ ಅಡಿಯಲ್ಲಿ 2 ಪ್ರಕರಣ ದಾಖಲಾಗಿದೆ.

(2) ಭದ್ರತಾ ಠೇವಣಿ ಸೇರಿದಂತೆ ಇತರೆ ವಿಚಾರಗಳಲ್ಲಿ ಮೋಸ ಎಸಗಿದ್ದಕ್ಕಾಗಿ IPC Section -467ರ ಅಡಿಯಲ್ಲಿ 2 ಪ್ರಕರಣ ದಾಖಲಿಸಲಾಗಿದೆ.

(3) ನಕಲಿ ಕರೆನ್ಸಿ ನೋಟುಗಳ ಸ್ವಾಧೀನಕ್ಕೆ ಸಂಬಂಧಿಸಿದಂತೆ IPC Section -489 C ಅಡಿಯಲ್ಲಿ 2 ಪ್ರಕರಣಗಳನ್ನು ದಾಖಲಿಸಲಾಗಿದೆ.

(4) ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಅಥವಾ ಸಾಧನಗಳನ್ನು ಹೊಂದಿರುವುದಕ್ಕೆ ಸಂಬಂಧಿಸಿದಂತೆ IPC Section -324ರ ಅಡಿಯಲ್ಲಿ 1 ಪ್ರಕರಣ ದಾಖಲಿಸಲಾಗಿದೆ

(5) ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದಂತೆ IPC Section-506ರ ಅಡಿಯಲ್ಲಿ 1 ಪ್ರಕರಣವನ್ನು ದಾಖಲಿಸಲಾಗಿದೆ.

(6) ಪ್ರತಿಕ್ರಿಯಾತ್ಮಕವಾಗಿ ಪ್ರಚೋದನೆ ಮಾಡಿದ್ದರೆ ನೀಡಲಾಗುವ ಶಿಕ್ಷೆಗೆ ಸಂಬಂಧಿಸಿದ IPC Section-109ರ ಅಡಿಯಲ್ಲಿ 3 ಪ್ರಕರಣಗಳನ್ನು ದಾಖಲು

(7) ನಕಲಿ ದಾಖಲೆಯನ್ನು ಸೃಷ್ಟಿಸಿ ನೈಜವಾಗಿ ಬಳಸಿದ್ದಕ್ಕಾಗಿ IPC Section-471ರ ಅಡಿಯಲ್ಲಿ 2 ಪ್ರಕರಣ ದಾಖಲಾಗಿದೆ.

(8) ಸ್ವಯಂಪ್ರೇರಣೆಯಿಂದ ನೋವನ್ನುಂಟುಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ IPC Section-323ರ ಅಡಿಯಲ್ಲಿ 2 ಪ್ರಕರಣ ದಾಖಲಾಗಿವೆ.

(9) ಅಪರಾಧ ಪ್ರಕರಣ ನಡೆದಾಗ ಅಬೆಟ್ಟರ್ಗೆ ಸಂಬಂಧಿಸಿದಂತೆ IPC Section -114ರ ಅಡಿಯಲ್ಲಿ 2 ಪ್ರಕರಣಗಳು ದಾಖಲಾಗಿವೆ.

(10) ಕ್ರಿಮಿನಲ್ ಪಿತೂರಿಯ ಶಿಕ್ಷೆಗೆ ಸಂಬಂಧಿಸಿದ IPC Section -120B ಅಡಿಯಲ್ಲಿ 2 ಪ್ರಕರಣ ದಾಖಲಾಗಿವೆ

(11) ವಿಧಾನಸಭೆಯಲ್ಲಿ ಪ್ರತಿಯೊಬ್ಬ ಸದಸ್ಯರು ಎದುರಿಸಬೇಕಾದ ವಿಚಾರಣೆಯ ಸಂದರ್ಭದಲ್ಲಿ ಮಾಡಿರುವ ಅಪರಾಧಕ್ಕೆ IPC Section -149ರ ಅಡಿಯಲ್ಲಿ 2 ಪ್ರಕರಣಗಳು ದಾಖಲಾಗಿವೆ.

(12) ಕೃತ್ಯದ ಉದ್ದೇಶಕ್ಕಾಗಿ ಸುಳ್ಳು ವ್ಯಕ್ತಿತ್ವವನ್ನು ಸೃಷ್ಟಿಸಿದ್ದಕ್ಕಾಗಿ IPC Section-205ರ ಅಡಿಯಲ್ಲಿ 2 ಪ್ರರಕಣಗಳು ದಾಖಲಾಗಿವೆ.

(13) ಆಸ್ತಿಯನ್ನು ವಶಪಡಿಸಿಕೊಳ್ಳುವ ವಿಚಾರದಲ್ಲಿ ವಂಚನೆ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ IPC Section -207ರ ಅಡಿಯಲ್ಲಿ 2 ಪ್ರಕರಣಗಳು ದಾಖಲಾಗಿವೆ.

(14) ವರ್ಗವಣೆ ಪತ್ರದಲ್ಲಿ ಮೋಸ ಅಥವಾ ಅಪ್ರಾಮಾಣಿಕತೆ ತೋರಿಸಿದ ಆರೋಪಕ್ಕೆ ಸಂಬಂಧಿಸಿದಂತೆ IPC Section -423ರ ಅಡಿಯಲ್ಲಿ 2 ಪ್ರಕರಣಗಳು ದಾಖಲಾಗಿವೆ.

(15) ಟ್ರೇಡ್ ಮಾರ್ಕ್‌ಗಳಿಗೆ ಸಂಬಂಧಿಸಿದಂತೆ IPC Section -478ರ ಅಡಿಯಲ್ಲಿ 2 ಪ್ರಕರಣಗಳು ದಾಖಲಾಗಿವೆ.

(16) ಮಾನಹಾನಿ ಶಿಕ್ಷೆಗೆ ಸಂಬಂಧಿಸಿದಂತೆ IPC Section – 500ರ ಅಡಿಯಲ್ಲಿ 1 ಪ್ರಕರಣ ದಾಖಲಾಗಿದೆ.

(17) ಪ್ರಚೋದನೆಯ ಮೇಲೆ ಸ್ವಯಂಪ್ರೇರಿತವಾಗಿ ತೀವ್ರವಾದ ನೋವನ್ನುಂಟುಮಾಡುವ IPC Section -335ರ ಅಡಿಯಲ್ಲಿ 1 ಪ್ರಕರಣ ದಾಖಲಾಗಿದೆ.

(18) ಶಾಂತಿಯನ್ನು ಉಲ್ಲಂಘಿಸಲು ಮತ್ತು ಉದ್ದೇಶಪೂರ್ವಕವಾಗಿ ಪ್ರಚೋಧಿಸುವಂತ ಭಾಷಣ ಮಾಡಿದ್ದಕ್ಕೆ ಸಂಬಂಧಿಸಿದಂತೆ IPC Section -504ರ ಅಡಿಯಲ್ಲಿ 1 ಪ್ರಕರಣ ದಾಖಲಾಗಿದೆ.

(19) ಕಾನೂನು ಬಾಹೀರವಾಗಿ ವಿಧಾನಸಭೆ ಸದಸ್ಯರಾಗಿರುವುದಕ್ಕೆ ಸಂಬಂಧಿಸಿದಂತೆ IPC Section -143ರ ಅಡಿಯಲ್ಲಿ 1 ಪ್ರಕರಣ ದಾಖಲಾಗಿದೆ.

(20) ಉದ್ದೇಶಪೂರ್ವಕವಾಗಿ ಗಲಭೆ ಸೃಷ್ಟಿಗೆ ಸಂಬಂಧಿಸಿದಂತೆ IPC Section -147ರ ಅಡಿಯಲ್ಲಿ 1 ಪ್ರಕರಣ ದಾಖಲಾಗಿದೆ.

(21) ಇತರರ ಜೀವಕ್ಕೆ ಅಪಾಯವನ್ನುಂಟು ಮಾಡುವ ಕ್ರಿಯೆಗೆ ಸಂಬಂಧಿಸಿದ IPC Section -336 ಅಡಿಯಲ್ಲಿ 1 ಪ್ರಕರಣ

(22) ಇತರರ ವೈಯಕ್ತಿಕ ಸುರಕ್ಷತೆಗೆ ಅಥವಾ ಜೀವಕ್ಕೆ ಅಪಾಯಕಾರಿಯಾದ ಕೃತ್ಯದಿಂದ ಅವರಿಗೆ ನೋವನ್ನುಂಟುಮಾಡುವುದಕ್ಕೆ ಸಂಬಂಧಿಸಿದಂತೆ IPC Section -337ರ ಅಡಿಯಲ್ಲಿ 1 ಪ್ರಕರಣ ದಾಖಲಾಗಿದೆ.

(23) ಮಾನಹಾನಿಗೆ ಸಂಬಂಧಿಸಿದಂತೆ IPC Section -499ರ ಅಡಿಯಲ್ಲಿ ಒಂದು ಪ್ರಕರಣ.

ಹೀಗೆ ಚೀಟಿಂಗ್, 420 ಸೇರಿದಂತೆ ತನ್ನ ಮೇಲೆ ಸಾಲು ಸಾಲು ಗಂಭೀರ ಪ್ರಕರಣಗಳನ್ನು ಜಡಿಸಿಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ನಾಡಿನ ಹಿರಿಯ ಜೀವ, ಸ್ವಾತಂತ್ರ್ಯ ಸೇನಾನಿ ದೊರೆಸ್ವಾಮಿ ವಿರುದ್ಧ ನೀಚ ಭಾಷೆ ಬಳಸಿ ಮಾತನಾಡುತ್ತಾರೆ, ಇಂತಹ ಘಟನೆಗಳನ್ನು ಕಂಡು ಕಾಣದಂತೆ ಸರ್ಕಾರ ಜಾಣ ಕುರುಡು ಕಿವುಡಿಗೆ ಶರಣಾಗುತ್ತದೆ ಎಂದರೆ ಇಂತಹ ಜನರಿಗೆ ಏನು ಹೇಳುವುದು?

Tags: BJP MLADoreswamyFreedom Fighter DOreswamyPak Agentದೊರೆಸ್ವಾಮಿಪಾಕ್ ಏಜೆಂಟ್ಶಾಸಕ ಯತ್ನಾಳ್
Previous Post

ಕೊನೆಗೂ ಬಂದ ಪುಟ್ಟ, ಹೋದ ಪುಟ್ಟ ಎಂದಾಯಿತೆ ಟ್ರಂಪ್ ಭೇಟಿ?

Next Post

ಗೋವಿಂದ ಭಟ್ಟರಿಗಂದು ಶಿಶುನಾಳ ಶರೀಫ – ಕೋರಣೇಶ್ವರರಿಗಿಂದು ದಿವಾನ್ ಶರೀಫ

Related Posts

Top Story

DK Shivakumar: ತೇಜಸ್ವಿ ಸೂರ್ಯ ಅವರ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
October 28, 2025
0

“ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಸಂಸದ ತೇಜಸ್ವಿ ಸೂರ್ಯ ಅವರು ಕೊಟ್ಟ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ. ಆದರೂ ಅವರ ಸಲಹೆಗಳನ್ನು ಗೌರವಿಸುತ್ತೇನೆ. ಅವುಗಳನ್ನು ಪರಿಶೀಲಿಸಲು ಅಧಿಕಾರಿಗಳಿಗೆ...

Read moreDetails
ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ

ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ

October 28, 2025
ಕಲಾಲೋಕ ಮಳಿಗೆಗೆ ನವೆಂಬರಿನಲ್ಲಿ ಚಾಲನೆ: ಎಂ ಬಿ ಪಾಟೀಲ

ಕಲಾಲೋಕ ಮಳಿಗೆಗೆ ನವೆಂಬರಿನಲ್ಲಿ ಚಾಲನೆ: ಎಂ ಬಿ ಪಾಟೀಲ

October 28, 2025

ಕರ್ನಾಟಕದಾದ್ಯಂತ ಹಾಗೂ ವಿದೇಶದಲ್ಲಿಯೂ ಬಿಡುಗಡೆಗೆ ಸಿದ್ದವಾದ “ಹೇ ಪ್ರಭು” ಚಿತ್ರ..

October 28, 2025
ಈ ವಾರ ತೆರೆಗೆ ಬಹು ನಿರೀಕ್ಷಿತ “ಬ್ರ್ಯಾಟ್”(BRAT). .

ಈ ವಾರ ತೆರೆಗೆ ಬಹು ನಿರೀಕ್ಷಿತ “ಬ್ರ್ಯಾಟ್”(BRAT). .

October 28, 2025
Next Post
ಗೋವಿಂದ ಭಟ್ಟರಿಗಂದು ಶಿಶುನಾಳ ಶರೀಫ - ಕೋರಣೇಶ್ವರರಿಗಿಂದು ದಿವಾನ್ ಶರೀಫ

ಗೋವಿಂದ ಭಟ್ಟರಿಗಂದು ಶಿಶುನಾಳ ಶರೀಫ - ಕೋರಣೇಶ್ವರರಿಗಿಂದು ದಿವಾನ್ ಶರೀಫ

Please login to join discussion

Recent News

Top Story

DK Shivakumar: ತೇಜಸ್ವಿ ಸೂರ್ಯ ಅವರ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ: ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
October 28, 2025
ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ
Top Story

ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ

by ಪ್ರತಿಧ್ವನಿ
October 28, 2025
ಕಲಾಲೋಕ ಮಳಿಗೆಗೆ ನವೆಂಬರಿನಲ್ಲಿ ಚಾಲನೆ: ಎಂ ಬಿ ಪಾಟೀಲ
Top Story

ಕಲಾಲೋಕ ಮಳಿಗೆಗೆ ನವೆಂಬರಿನಲ್ಲಿ ಚಾಲನೆ: ಎಂ ಬಿ ಪಾಟೀಲ

by ಪ್ರತಿಧ್ವನಿ
October 28, 2025
Top Story

ಕರ್ನಾಟಕದಾದ್ಯಂತ ಹಾಗೂ ವಿದೇಶದಲ್ಲಿಯೂ ಬಿಡುಗಡೆಗೆ ಸಿದ್ದವಾದ “ಹೇ ಪ್ರಭು” ಚಿತ್ರ..

by ಪ್ರತಿಧ್ವನಿ
October 28, 2025
ಬೀದಿ ನಾಯಿಗಳಿಗೆ ಬ್ರೇಕ್ ಹಾಕಲು ಮುಂದಾದ ಗದಗ-ಬೆಟಗೇರಿ ನಗರಸಭೆ
Top Story

ಬೀದಿ ನಾಯಿಗಳಿಗೆ ಬ್ರೇಕ್ ಹಾಕಲು ಮುಂದಾದ ಗದಗ-ಬೆಟಗೇರಿ ನಗರಸಭೆ

by ಪ್ರತಿಧ್ವನಿ
October 28, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

DK Shivakumar: ತೇಜಸ್ವಿ ಸೂರ್ಯ ಅವರ ಸಲಹೆಗಳಲ್ಲಿ ಪರ್ಯಾಯ ಪರಿಹಾರಗಳು ಕಾಣಲಿಲ್ಲ: ಡಿ.ಕೆ. ಶಿವಕುಮಾರ್

October 28, 2025
ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ

ಅಂತಿಮ ಅಧಿಸೂಚನೆಗೆ ಶಾಸಕ ಶರತ್ ಬಚ್ಚೇಗೌಡ ಮನವಿ

October 28, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada