Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ದೆಹಲಿ ಹಿಂಸಾಚಾರದ ಹಿಂದೆ ಇತ್ತೆ ಗುಜರಾತ್ ಮಾದರಿಯ ಬ್ಲೂಪ್ರಿಂಟ್?

ದೆಹಲಿ ಹಿಂಸಾಚಾರದ ಹಿಂದೆ ಇತ್ತೆ ಗುಜರಾತ್ ಮಾದರಿಯ ಬ್ಲೂಪ್ರಿಂಟ್?
ದೆಹಲಿ ಹಿಂಸಾಚಾರದ ಹಿಂದೆ ಇತ್ತೆ ಗುಜರಾತ್ ಮಾದರಿಯ ಬ್ಲೂಪ್ರಿಂಟ್?

February 29, 2020
Share on FacebookShare on Twitter

ದೆಹಲಿಯ ನಗರ ಮೂರು ದಿನಗಳ ಯಾವ ನಿರ್ಬಂಧವಿಲ್ಲದ ಹೇಯ ಅಟ್ಟಹಾಸದ ಬಳಿಕ ಇದೀಗ ಹೊತ್ತಿಉರಿದ ಊರಿನ ಅವಶೇಷಗಳ ನಡುವಿನಿಂದ ನೋವು ಹೊಗೆಯಾಡುವಂತೆ ಕ್ರಮೇಣ ಸಹಜ ಸ್ಥಿತಿಗೆ ಮರಳುತ್ತಿದೆ.

ಹೆಚ್ಚು ಓದಿದ ಸ್ಟೋರಿಗಳು

ಬಿರುಗಾಳಿಯಾಗಿರುವ ರಾಹುಲ್ ಗಾಂಧಿ ಸುನಾಮಿ ಆಗುಬಲ್ಲರೆ?

ಯಾರಾದರೂ ಒಳಗೆ ಬಂದರೆ ಅಟ್ಟಾಡಿಸಿ ಹೊಡಿರಿ, ಮಿಕ್ಕಿದ್ದು ನಾನು ನೋಡಿಕೊಳ್ಳುತ್ತೇನೆ’ : ಸಚಿವ ಮುನಿರತ್ನ ವಿವಾದಾತ್ಮಕ ಹೇಳಿಕೆ

ನಂದಿನಿ ಮೊಸರು ಪ್ಯಾಕೆಟ್‌ ಮೇಲೆ ‘ದಹಿ’ ಮುದ್ರಣ ಆದೇಶ ಹಿಂಪಡೆದ FSSAI.. ಕನ್ನಡಿಗರು ಟೀಕೆ ಬೆನ್ನಲ್ಲೇ ನಿರ್ಧಾರ..!

ಗುಜರಾತಿನ ನಾಯಕರಿಬ್ಬರು ದೇಶದ ರಾಜಧಾನಿಯಲ್ಲಿ ಕುಳಿತು ಅಧಿಕಾರದ ಚುಕ್ಕಾಣಿ ಹಿಡಿದಿರುವಾಗ ಇಂತಹದ್ದೊಂದು ಭೀಕರ ಹಿಂಸಾಚಾರ ಅವರ ಮೂಗಿನಡಿಯೇ ನಡೆದುಹೋಗಿದೆ. ಹಾಗಾಗಿ, ಇದು 2002ರ ಗುಜರಾತ್ ಹತ್ಯಾಕಾಂಡದ ಪುನರಾವರ್ತನೆ ಎಂದು ಗಂಭೀರ ಆರೋಪ ಮಾಡಿರುವ ಪ್ರತಿಪಕ್ಷಗಳು, ಗಲಭೆ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲರಾಗಿರುವ ಗೃಹ ಸಚಿವ ಅಮಿತ್ ಶಾ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತಿವೆ. ಪ್ರತಿಪಕ್ಷಗಳು ಮಾತ್ರವಲ್ಲ; ವಿವಿಧ ಸಾಮಾಜಿಕ ಸಂಘಟನೆಗಳು, ಹೋರಾಟಗಾರರು ಮತ್ತು ಕೆಲವು ಮಾಧ್ಯಮಗಳು ಕೂಡ ದೆಹಲಿಯ ಈ ಹಿಂಸಾಚಾರದಲ್ಲಿ ಗುಜರಾತ್ ಗಲಭೆಯ ಚಹರೆಗಳಿವೆ. ಹಾಗಾಗಿ ಇದು ಗಲಭೆಯ ಗುಜರಾತ್ ಮಾದರಿಯೇ ಎಂದು ಹೇಳಿವೆ.

ಕಳೆದ ಭಾನುವಾರ ಆರಂಭವಾದ ಹಿಂಸಾಚಾರದ ವೈಖರಿ, ಅದಕ್ಕೆ ಕುಮ್ಮಕ್ಕು ನೀಡಿದ ಬಗೆ, ಗಲಭೆಕೋರರು ಕೂಗುತ್ತಿದ್ದ ಘೋಷಣೆಗಳು, ನಡೆಸಿದ ಕೊಲೆ- ಸುಲಿಗೆಗಳು, ಬಳಸಿದ ಅಸ್ತ್ರಗಳು, ಅಧಿಕಾರಸ್ಥರು ಕಣ್ಣಳತೆಯಲ್ಲೇ ನಡೆಯುತ್ತಿದ್ದ ಆ ಪೈಶಾಚಿಕ ಕೃತ್ಯಗಳಿಗೆ ಜಾಣಕುರುಡು ಪ್ರದರ್ಶಿಸಿದ್ದು, ಗಲಭೆಕೋರನ್ನು ಸದೆಬಡಿಸಬೇಕಾಗಿದ್ದ ಪೊಲೀಸರು, ಅದಕ್ಕೆ ಪ್ರತಿಯಾಗಿ ಗಲಭೆಗೆ ಸ್ವತಃ ಮಾರ್ಗದರ್ಶನ ಮಾಡಿ, ಸ್ವತಃ ಹಿಂಸಾಚಾರದಲ್ಲಿ ತೊಡಗಿದ್ದು, ಮತ್ತು ಅಂತಿಮವಾಗಿ ಆ ಗಲಭೆಯನ್ನು ಮಾಧ್ಯಮಗಳು- ಅದರಲ್ಲೂ ಟಿವಿ ವಾಹಿನಿಗಳು- ವರದಿ ಮಾಡಿದ ರೀತಿ, ಸೇರಿದಂತೆ ಹಲವು ಅಂಶಗಳು ಗುಜರಾತ್ ಮಾದರಿಗೆ ನಿದರ್ಶನ.

ಗುಜರಾತ್ ಗಲಭೆಯ ಸಂದರ್ಭದಲ್ಲಿಯೂ ಕೂಡ ಗಲಭೆ ಆರಂಭಕ್ಕೆ ಮುನ್ನ ಧರ್ಮಾಂಧ ಗುಂಪುಗಳಿಗೆ ಅಲ್ಪಸಂಖ್ಯಾತರ ವಿರುದ್ಧ ಭೀತಿ ಬಿತ್ತಿ ದ್ವೇಷ ಕಾರುವಂತೆ ಪ್ರಚೋದಿಸಲಾಗಿತ್ತು. ಬಳಿಕ ಆ ಗುಂಪಿಗೆ ಅಗತ್ಯ ಅಸ್ತ್ರಗಳನ್ನು ನೀಡಿ ಮುಸ್ಲಿಂ ಬಾಹುಳ್ಯದ ಪ್ರದೇಶಗಳ ಮೇಲೆ ದಾಳಿಗೆ ಬಿಡಲಾಗಿತ್ತು ಎಂಬುದನ್ನು ಘಟನೆ ಕುರಿತ ಹಲವು ವರದಿಗಳು ಹೇಳಿವೆ. ದೆಹಲಿ ಗಲಭೆಯ ವೇಳೆಯೂ ಹಾಗೆಯೇ ಆರ್ ಎಸ್ ಎಸ್ ವ್ಯಕ್ತಿಗಳು ದೊಡ್ಡ ಸಂಖ್ಯೆಯ ಹುಡುಗರನ್ನು ಒಟ್ಟುಗೂಡಿಸಿ ಅವರಿಗೆ ಗಲಭೆ ಎಬ್ಬಿಸುವ ಬಗ್ಗೆ ಕುಮ್ಮಕ್ಕು ನೀಡಿ, ಅಸ್ತ್ರಗಳನ್ನು ಸರಬರಾಜು ಮಾಡಿದ್ದರು ಎಂದು ಗಲಭೆಪೀಡಿತ ಪ್ರದೇಶದ ಹಲವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಸ್ವತಃ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಮಂದಿ ಬಿಜೆಪಿ ನಾಯಕರು ದೆಹಲಿ ವಿಧಾನಸಭಾ ಚುಣಾವಣಾ ಪ್ರಚಾರದಲ್ಲಿ ಬಹಿರಂಗವಾಗಿ ಮುಸ್ಲಿಮರ ವಿರುದ್ಧ ಬೆಂಕಿ ಕಾರಿದ್ದರು. ಗೋಲಿ ಮಾರೋ.. ಎಂಬ ಹೇಳಿಕೆಯ ಮೂಲಕ ಹಿಂಸೆಗೆ ಪ್ರಚೋದನೆ ನೀಡಿದ್ದರು. ಜೊತೆಗೆ ಗಲಭೆಯ ದಿನ ಕೂಡ ಕಪಿಲ್ ಮಿಶ್ರಾ ಎಂಬ ಬಿಜೆಪಿ ಸ್ಥಳೀಯ ನಾಯಕ, ನೇರವಾಗಿ ಸಿಎಎ ವಿರೋಧಿ ಹೋರಾಟಗಾರರ ವಿರುದ್ಧ ಬೀದಿಗಿಳಿಯುವಂತೆ ಹಿಂದೂಗಳಿಗೆ ಕರೆ ನೀಡಿದ್ದರು.

ಮುಸ್ಲಿಮರ ವಿರುದ್ಧದ ದ್ವೇಷವನ್ನು ಗುಜರಾತ್ ಗಲಭೆಯ ದಿನಗಳಿಗಿಂತ ಈಗ ಹೆಚ್ಚು ಪರಿಣಾಮಕಾರಿಯಾಗಿ ಹರಡಲು ಸಾಮಾಜಿಕ ಜಾಲತಾಣಗಳು ಬಹಳ ಅನುಕೂಲ ಒದಗಿಸಿದವು. ಹಾಗಾಗಿಯೇ ಬಹಳ ವ್ಯಾಪಕವಾಗಿ ಗಲಭೆ ಸಾಮಾಹಿಕ ಹತ್ಯಾಕಾಂಡದ ಸ್ವರೂಪ ಪಡೆದುಕೊಂಡಿತು. ಕೇವಲ ಮೂರು ದಿನದಲ್ಲೇ ಇಡೀ ಈಶಾನ್ಯ ದೆಹಲಿಗೆ ವ್ಯಾಪಿಸಿ, ವ್ಯಾಪಕ ಸಾವು-ನೋವು(ಸುಮಾರು 40 ಮಂದಿ ಸಾವು), ಆಸ್ತಿಪಾಸ್ತಿ ಧ್ವಂಸಕ್ಕೆ ಕಾರಣವಾಯಿತು. ಗುಜರಾತ್ ಮಾದರಿಯಲ್ಲಿಯೇ ಮಸೀದಿಗಳನ್ನು ಧ್ವಂಸ ಮಾಡಲಾಯಿತು. ಮುಸ್ಲಿಮರಿಗೆ ಮನೆಗಳಿಗೆ ನುಗ್ಗಿ ಬೆಂಕಿ ಹಚ್ಚಲಾಯಿತು. ಮನೆಮಂದಿಯ ಮೇಲೆ ಹಲ್ಲೆ ನಡೆಸಲಾಯಿತು, ವೃದ್ಧರು, ಮಕ್ಕಳು, ಗರ್ಭಿಣಿಯರನ್ನು ಬಿಡದೆ ದಾಳಿ ನಡೆಯಿತು. ಒಂದೇ ವ್ಯತ್ಯಾಸವೆಂದರೆ, ಗುಜರಾತ್ ಗಲಭೆಯಲ್ಲಿ ವ್ಯಾಪಕವಾಗಿ ತ್ರಿಶೂಲವನ್ನೇ ಹಿಂಸೆಯ ಅಸ್ತ್ರವನ್ನಾಗಿ ಬಳಸಲಾಗಿತ್ತು. ಈಗ ಅದಕ್ಕಿಂತ ಪ್ರಬಲವಾದ ರಿವಾಲ್ವರುಗಳನ್ನು ದಾಳಿಕೋರರು ಬಳಸಿದರು.

ಗುಜರಾತ್ ಗಲಭೆಯಲ್ಲಿ ಪೊಲೀಸರು ಸಂಪೂರ್ಣ ಒಂದು ಕಡೆ ವಹಿಸಿದ್ದರು. ದಾಳಿಗೊಳಗಾದ ಮಂದಿ ಎಷ್ಟು ಮೊರೆ ಇಟ್ಟರೂ, ದಾಳಿಕೋರರು ಎಲ್ಲ ಕೆಲಸ ಮುಗಿಸಿ ಆಯಾ ಜಾಗದಿಂದ ಮುಂದೆ ಸಾಗುವವರೆಗೆ ಪೊಲೀಸರು ದೂರವೇ ಉಳಿಯುತ್ತಿದ್ದರು. ಎಲ್ಲಾ ಮುಗಿದ ಬಳಿಕ ಬರುತ್ತಿದ್ದರು ಎಂಬ ವರದಿಗಳಿವೆ. ದೆಹಲಿಯ ವಿಷಯದಲ್ಲಿಯೂ ಅದೇ ಪುನರಾವರ್ತನೆಯಾಗಿದೆ. ಕೆಲವೊಮ್ಮೆ ಪೊಲೀಸರು ಕಲ್ಲು ತೂರುವುದು, ಅನಾವಶ್ಯಕವಾಗಿ ಅಮಾಯಕ ಮಕ್ಕಳು- ವೃದ್ಧರ ಮೇಲೆ ಲಾಠಿ ಬೀಸುವುದು, ಸಿಸಿಟಿವಿ ಕ್ಯಾಮಾರಗಳನ್ನು ಒಡೆದುಹಾಕುವುದು, ದಾಳಿಕೋರ ಗುಂಪುಗಳನ್ನು ಕರೆತಂದು ನಿರ್ದಿಷ್ಟ ಪ್ರದೇಶಗಳಿಗೆ ಬಿಟ್ಟು ದಾಳಿ ನಡೆಸುವ ಸೂಚನೆ ನೀಡಿ ವಾಪಸು ಹೋಗುವುದು,.. ಮುಂತಾದ ವಿಪರೀತದ ವರ್ತನೆಗಳು ಕೂಡ ಹಲವು ವೀಡಿಯೋಗಳಲ್ಲಿ ಸೆರೆಯಾಗಿದೆ.

ಇನ್ನು ಆಳುವ ಮಂದಿಯ ವರಸೆಯಲ್ಲಿ ಕೂಡ ಗುಜರಾತ್ ಮಾದರಿಯೇ ಮುಂದುವರಿದಿದೆ ಎಂಬುದಕ್ಕೆ ಹಲವು ನಿದರ್ಶನಗಳು ಇವೆ. ಗುಜರಾತ್ ಗಲಭೆಯ ವೇಳೆ ಅಲ್ಲಿನ ಸಿಎಂ ಆಗಿದ್ದವರು ನರೇಂದ್ರ ಮೋದಿಯವರು. ಗಲಭೆ ಆರಂಭದ ಹಿಂದಿನ ದಿನ ನಡೆದ ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ಕರೆದು, ಗೋಧ್ರಾ ದುರಂತದ ಹಿನ್ನೆಲೆಯಲ್ಲಿ ಹಿಂದೂಗಳು ಕುದಿಯುತ್ತಿದ್ದು, ಅವರು ತಮ್ಮ ಸೇಡು ತೀರಿಸಿಕೊಳ್ಳಲು ಮುಕ್ತ ಅವಕಾಶ ನೀಡಿ ಎಂದು ಅಧಿಕಾರದ ಚುಕ್ಕಾಣಿ ಹಿಡಿದವರೇ ಸೂಚನೆ ನೀಡಿದ್ದರು ಎಂಬ ಗಂಭೀರ ಆರೋಪ ಆ ಕುರಿತ ಪ್ರಕರಣಗಳಲ್ಲಿ ಅಧಿಕೃತವಾಗಿಯೇ ದಾಖಲಾಗಿದೆ. ದೆಹಲಿ ಗಲಭೆಯ ವಿಷಯದಲ್ಲಿಯೂ ಪೊಲೀಸರ ವರ್ತನೆ ಗಮನಿಸಿದರೆ, ಅಂತಹ ಸೂಚನೆ ಅವರಿಗೂ ಸಿಕ್ಕಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಅದಕ್ಕೆ ಪೂರಕವೆಂಬಂತೆ ಹಿಂಸಾಚಾರದಲ್ಲಿ ಬರೋಬ್ಬರಿ 20 ಮಂದಿ ಜೀವ ಕಳೆದುಕೊಂಡ ಬಳಿಕ ಸ್ವತಃ ಪ್ರಧಾನಿ ಆ ಬಗ್ಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ತಮ್ಮ ಪ್ರತಿಕ್ರಿಯೆ ನೀಡಿದರು. ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದರು. ಇನ್ನು ಗೃಹ ಸಚಿವರಂತೂ ಬರೋಬ್ಬರಿ ಆರು ದಿನಗಳ ಬಳಿಕ ಘಟನೆಯ ಕುರಿತು ಪ್ರತಿಕ್ರಿಯಿಸಿದ್ದಾರೆ. ದೆಹಲಿ ಸಿಎಂ ಕೂಡ ಈ ವಿಷಯದಲ್ಲಿ ಜನರ ನಿರೀಕ್ಷೆಯಂತೆ ಕೆಲಸ ಮಾಡಲಿಲ್ಲ. ಸಂತ್ರಸ್ತರು ಮತ್ತು ಭೀತಿಗೊಳಗಾದವರಲ್ಲಿ ಭರವಸೆ ಮೂಡಿಸುವ ಪ್ರಯತ್ನ ಮಾಡಲಿಲ್ಲ ಎಂಬ ಅಸಮಾಧಾನದ ಮಾತುಗಳೂ ಕೇಳಿಬರುತ್ತಿವೆ.

ಇನ್ನು ರಾಷ್ಟ್ರೀಯ ಸುದ್ದಿವಾಹಿನಿಗಳು ಮತ್ತು ದಿನಪತ್ರಿಕೆಗಳು ದೆಹಲಿ ಹಿಂಸಾಚಾರವನ್ನು ವರದಿ ಮಾಡಿದ ರೀತಿ ಮತ್ತು 2002ರ ಗುಜರಾತ್ ಗಲಭೆಯನ್ನು ಅಂದಿನ ಮುಖ್ಯವಾಹಿನಿ ಮಾಧ್ಯಮಗಳು ವರದಿ ಮಾಡಿದ ರೀತಿಯ ನಡುವೆ ಸಾಕಷ್ಟು ಸಾಮ್ಯತೆ ಇದೆ. ಗಲಭೆಯ ಕುರಿತ ಸಾಮಾಜಿಕ ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳು ಸಾಕ್ಷ್ಯಧಾರ ಸಹಿತ ಹೇಳಿಕೆಗಳನ್ನು ನೀಡುವವರೆಗೆ ಬಹುತೇಕ ಮಾಧ್ಯಮಗಳು ಗುಜರಾತ್ ಗಲಭೆಯನ್ನು ಕೂಡ ಹಿಂದೂ ಮುಸ್ಲಿಂ ಸಂಘರ್ಷವೆಂದೇ ಹೇಳುತ್ತಿದ್ದವು ಮತ್ತು ಅದು ರಾಷ್ಟ್ರೀಯ ಸುದ್ದಿಯೇ ಅಲ್ಲ ಎಂಬಂತೆ ಸ್ಥಳೀಯ ಆವೃತ್ತಿಗಳಲ್ಲಿ ವರದಿ ಪ್ರಕಟಿಸಿ ಕೈತೊಳೆದುಕೊಳ್ಳುತ್ತಿದ್ದವು(ಟಿವಿ ಸುದ್ದಿ ವಾಹಿನಿಗಳ ಅಬ್ಬರ ಇರಲಿಲ್ಲ!. ಆಗಿನ ಪ್ರಮುಖ ಖಾಸಗಿ ಟಿವಿ ವಾಹಿನಿಯಾಗಿದ್ದ ಎನ್ ಡಿಟಿವಿ ಮಾತ್ರ ಗುಜರಾತ್ ಗಲಭೆಯ ವಾಸ್ತವ ಚಿತ್ರಣವನ್ನು ಹೊರಜಗತ್ತಿಗೆ ತೋರಿಸಿತ್ತು. ಆ ಕಾರಣಕ್ಕಾಗಿಯೇ ಹಿಂದುತ್ವವಾದಿಗಳಿಗೆ ಈಗಲೂ ಎನ್ ಡಿಟಿವಿ ವಾಹಿನಿಯ ಮೇಲೆ ದ್ವೇಷ ಎಂಬುದನ್ನು ತಳ್ಳಿಹಾಕಲಾಗದು!

ಜೊತೆಗೆ ದೆಹಲಿ ಘಟನೆಯ ವಿಷಯದಲ್ಲೂ ಮಾಧ್ಯಮಗಳು; ಅದರಲ್ಲೂ ಬಹುತೇಕ ಸುದ್ದಿ ವಾಹಿನಿಗಳು ಆರಂಭದ ಎರಡು ದಿನ ಅದು ನಡದೇ ಇಲ್ಲ ಎಂಬಂತೆ ಕೇವಲ ಅಮೆರಿಕ ಅಧ್ಯಕ್ಷರ ಭಾರತ ಭೇಟಿಯ ವರದಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದವು. ಮತ್ತೊಂದು ಕಡೆ ಘಟನೆಯ ವರದಿ ಮಾಡಲು ಹೋದ ಪತ್ರಕರ್ತರ ಮೇಲೆ ಗಲಭೆಕೋರರು ದಾಳಿ ನಡೆಸಿದ್ದು ಕೂಡ ಗುಜರಾತ್ ಮಾದರಿಯ ಪುನರಾವರ್ತನೆಯೇ!

ಈ ಸಾಮ್ಯತೆಯ ಪಟ್ಟಿ ಅಷ್ಟಕ್ಕೇ ನಿಲ್ಲದು. ಗಲಭೆ, ಗಲಭೆಗೆ ಶಾಸಕಾಂಗದ ಅಧಿಕಾರಸ್ಥರು, ಕಾರ್ಯಾಂಗದ ಭಾಗವಾದ ಕಾನೂನು ಸುವ್ಯವಸ್ಥೆ ಕಾಯಬೇಕಾದ ಪೊಲೀಸರು ಮತ್ತು ನಾಲ್ಕನೇ ಅಂಗವೆನ್ನಲಾದ ಮಾಧ್ಯಮದ ಮಂದಿಯ ಬಳಿಕ, ನ್ಯಾಯಾಂಗವನ್ನು ಕೂಡ ಬಾಯಿ ಮುಚ್ಚಿಸುವ, ಬೆದರಿಸುವ ಮತ್ತು ಹತ್ತಿಕ್ಕುವ ಯತ್ನಗಳು ಆಗಲೂ ನಡೆದಿದ್ದವು. ಈಗಲೂ ದೆಹಲಿಯ ವಿಷಯದಲ್ಲಿಯೂ ಅದು ನಡೆದಿದೆ. ದೆಹಲಿ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಪ್ರಚೋದನಕಾರಿ ಹೇಳಿಕೆ ನೀಡಿದವರ ವಿರುದ್ಧ ಎಫ್ ಐಆರ್ ದಾಖಲಿಸಿ ಎಂದು ಸೂಚಿಸಿದ ಹೈಕೋರ್ಟ್ ನ್ಯಾಯಾಧೀಶರನ್ನು ಅವರು ಹಾಗೇ ಆದೇಶಿಸಿದ ಕೆಲವೇ ತಾಸಿನಲ್ಲಿ ಎತ್ತಂಗಡಿ ಮಾಡಲಾಗಿದೆ. ಆ ಮೂಲಕ ನ್ಯಾಯಾಂಗವನ್ನು ಕೂಡ ತಮ್ಮ ಮೂಗಿನ ನೇರಕ್ಕೆ ಬಗ್ಗಿಸುವ ಯತ್ನ ನಡೆದಿದೆ.

ಗಲಭೆಯ ಯೋಜನೆ, ಅದರ ಜಾರಿ, ಪೊಲೀಸರ ಬೆಂಬಲ, ಆಡಳಿತದ ಪರೋಕ್ಷ ಬೆಂಬಲ, ಮಾಧ್ಯಮಗಳ ಕರುಡುಗಣ್ಣು, ನ್ಯಾಯಾಂಗದ ಮೇಲೆ ಒತ್ತಡ,.. ಹೀಗೆ ಪ್ರತಿ ಹಂತದಲ್ಲೂ ದೆಹಲಿಯ ಗಲಭೆಯ ಬೇರುಗಳು 18 ವರ್ಷಗಳ ಹಿಂದಿನ ಗುಜರಾತ್ ಗಲಭೆಯಲ್ಲೇ ಇದ್ದಂತಿದೆ. ಆದರೆ, ಒಂದೇ ವ್ಯತ್ಯಾಸವೆಂದರೆ, ಅಂದು ಮೊಬೈಲ್ ಫೋನ್, ಸಿಸಿಟಿವಿಯಂತಹ ತಂತ್ರಜ್ಞಾನ ಪ್ರಭಾವಿಯಾಗಿರಲಿಲ್ಲ. ಹಾಗಾಗಿ ದಾಳಿಕೋರರು, ಕುಮ್ಮಕ್ಕು ನೀಡಿದ ಪೊಲೀಸರ ಕೃತ್ಯಗಳು ಕ್ಯಾಮರಾಗಳಲ್ಲಿ ಸೆರಯಾಗಿ ಜನರ ಕೈಸೇರಿರಲಿಲ್ಲ. ಆದರೆ, ಇದೀಗ ದಾಳಿಕೋರರು ಮತ್ತು ಪೊಲೀಸರ ಜುಗಲಬಂಧಿ ಕೃತ್ಯಗಳು ಮೊಬೈಲ್ ಮತ್ತು ಸಿಸಿಟಿವಿಗಳಲ್ಲಿ ದಾಖಲಾಗಿ ಕ್ಷಣಾರ್ಧದಲ್ಲಿ ದೇಶದ ಮೂಲೆಮೂಲೆಗೆ ತಲುಪಿವೆ. ಹಾಗಾಗಿ ಪ್ರತ್ಯಕ್ಷದರ್ಶಿಗಳಷ್ಟೇ ಮಾಹಿತಿ, ದೇಶದ ಯಾವುದೋ ಮೂಲೆಯಲ್ಲಿ ಕೂತ ಮೊಬೈಲ್ ಬಳಕೆದಾರನಿಗೂ ಸಿಕ್ಕಿದೆ.

ಹಾಗಾಗಿ ಮುಂದಿನ ದಿನಗಳಲ್ಲಿ ತನಿಖೆಗಳು ಆರಂಭವಾದಾಗ ಈ ತಂತ್ರಜ್ಞಾನಗಳು ದಾಖಲಿಸಿದ ಗಲಭೆಯ ಕ್ಷಣಕ್ಷಣದ ಚಿತ್ರಣ ದೊಡ್ಡ ಪಾತ್ರ ವಹಿಸಬಹುದು. ನ್ಯಾಯದ ತಕ್ಕಡಿಯ ಸ್ವಾಯತ್ತತೆ ಕಾಯಬಹುದು ಎಂಬುದೊಂದೇ ಗುಜರಾತ್ ಮಾದರಿಗೆ ತುಸು ಭಿನ್ನವಾಗಿರುವ ಸಂಗತಿ!

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ನಂದಿನಿ ಕನ್ನಡಿಗರ ಆಸ್ತಿ, ಕನ್ನಡಿಗರ ಅಸ್ಮಿತೆ ಹಾಗೂ ಕನ್ನಡಿಗರ ಜೀವನಾಡಿ : ಹೆಚ್.ಡಿ.ಕುಮಾರಸ್ವಾಮಿ
Top Story

ನಂದಿನಿ ಕನ್ನಡಿಗರ ಆಸ್ತಿ, ಕನ್ನಡಿಗರ ಅಸ್ಮಿತೆ ಹಾಗೂ ಕನ್ನಡಿಗರ ಜೀವನಾಡಿ : ಹೆಚ್.ಡಿ.ಕುಮಾರಸ್ವಾಮಿ

by ಪ್ರತಿಧ್ವನಿ
March 30, 2023
ಅಂಬರೀಶ್ ಅವರು ಸಹಜವಾಗಿ ಬದುಕು ನಡೆಸಿದರು ; ಸಿಎಂ ಬೊಮ್ಮಾಯಿ
ಸಿನಿಮಾ

ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಸ್ಮಾರಕ ಉದ್ಘಾಟನೆ

by ಪ್ರತಿಧ್ವನಿ
March 28, 2023
ಒಂದು ಕಡೆ ಲಕ್ಷ.. ಕೋಟಿಗೆ ರೇಟು ಫಿಕ್ಸ್ ಮಾಡ್ತಾರೆ.. ಇನ್ನೊಂದು ಕಡೆ ಮೀಸಲಾತಿ ಅಂತಾರೆ : ಬಿಜೆಪಿ ವಿರುದ್ಧ ಹೆಚ್‌ಡಿಕೆ ಕಿಡಿ
Top Story

ಒಂದು ಕಡೆ ಲಕ್ಷ.. ಕೋಟಿಗೆ ರೇಟು ಫಿಕ್ಸ್ ಮಾಡ್ತಾರೆ.. ಇನ್ನೊಂದು ಕಡೆ ಮೀಸಲಾತಿ ಅಂತಾರೆ : ಬಿಜೆಪಿ ವಿರುದ್ಧ ಹೆಚ್‌ಡಿಕೆ ಕಿಡಿ

by ಪ್ರತಿಧ್ವನಿ
March 28, 2023
ಕರ್ನಾಟಕ ವಿಧಾನಭೆಯಲ್ಲಿ ಪಕ್ಷಗಳ ಸದ್ಯದ ಬಲಾಬಲ ಎಷ್ಟು?
Top Story

ಕರ್ನಾಟಕ ವಿಧಾನಭೆಯಲ್ಲಿ ಪಕ್ಷಗಳ ಸದ್ಯದ ಬಲಾಬಲ ಎಷ್ಟು?

by ಪ್ರತಿಧ್ವನಿ
March 29, 2023
ಸಚಿವ ವಿ.ಸೋಮಣ್ಣ ಮೂಗಿಗೆ ತುಪ್ಪ ಸವರಿದ ಬಿಜೆಪಿ : ಬಿಜೆಪಿ ಜಿಲ್ಲಾ ಘಟಕದಲ್ಲಿ ಅರುಣ್​ ಸೋಮಣ್ಣಗೆ ಸ್ಥಾನ
Top Story

ಸಚಿವ ವಿ.ಸೋಮಣ್ಣ ಮೂಗಿಗೆ ತುಪ್ಪ ಸವರಿದ ಬಿಜೆಪಿ : ಬಿಜೆಪಿ ಜಿಲ್ಲಾ ಘಟಕದಲ್ಲಿ ಅರುಣ್​ ಸೋಮಣ್ಣಗೆ ಸ್ಥಾನ

by ಮಂಜುನಾಥ ಬಿ
March 29, 2023
Next Post
ಮಹಿಳಾ ಕ್ರಿಕೆಟ್ ಮನ್ವಂತರಕ್ಕೆ ಕಾರಣವಾಗಲಿ ನಾರೀಮಣಿಯರ ಪ್ರದರ್ಶನ

ಮಹಿಳಾ ಕ್ರಿಕೆಟ್ ಮನ್ವಂತರಕ್ಕೆ ಕಾರಣವಾಗಲಿ ನಾರೀಮಣಿಯರ ಪ್ರದರ್ಶನ

ನೆರೆ ಪರಿಹಾರಕ್ಕೆ ಕನ್ನ: ಆರು ಸರ್ಕಾರಿ ಅಧಿಕಾರಿಗಳು ಅಮಾನತು 

ನೆರೆ ಪರಿಹಾರಕ್ಕೆ ಕನ್ನ: ಆರು ಸರ್ಕಾರಿ ಅಧಿಕಾರಿಗಳು ಅಮಾನತು 

ದೆಹಲಿಯಲ್ಲಿ ಮನುಷ್ಯತ್ವ ಮರೆತು ದಾನವರಾದ ಮತಾಂಧರು

ದೆಹಲಿಯಲ್ಲಿ ಮನುಷ್ಯತ್ವ ಮರೆತು ದಾನವರಾದ ಮತಾಂಧರು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist