Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ದೆಹಲಿ ಗೆಲಲ್ಲು ಮೋದಿ ಕಸರತ್ತು! ರಾಮ ಮಂದಿರ ಟ್ರಸ್ಟ್ ದಾಳ!?

ದೆಹಲಿ ಗೆಲಲ್ಲು ಮೋದಿ ಕಸರತ್ತು! ರಾಮ ಮಂದಿರ ಟ್ರಸ್ಟ್ ದಾಳ!?
ದೆಹಲಿ ಗೆಲಲ್ಲು ಮೋದಿ ಕಸರತ್ತು! ರಾಮ ಮಂದಿರ ಟ್ರಸ್ಟ್ ದಾಳ!?

February 5, 2020
Share on FacebookShare on Twitter

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚುನಾವಣಾ ಕಣ ರಂಗೇರಿದೆ. ಈ ಬಾರಿ ದೆಹಲಿ ಗದ್ದುಗೆಯಿಂದ ಅರವಿಂದ್ ಕೇಜ್ರಿವಾಲ್ ಕೆಳಕ್ಕಿಳಿಸಿ ಕಮಲ ಪತಾಕೆ ಹಾರಿಸಬೇಕೆಂದು ಪಣ ತೊಟ್ಟಿರುವ ಅಮಿತ್ ಸೇನೆ ಮಾತಿನ ಯುದ್ಧವನ್ನೇ ಸಾರಿದೆ. ಎಲ್ಲಾ ವರ್ಗದ ಜನರೂ ಕೇಜ್ರಿವಾಲ್ ಪರ ವಾಲಿರುವ ಅಂಶ ಸಮೀಕ್ಷೆಗಳ ಮೂಲಕ ಹೊರ ಬೀಳ್ತಿದ್ದು, ಬಿಜೆಪಿ ಪಕ್ಷದ ಆಂತರಿಕ ಸಮೀಕ್ಷೆಯಲ್ಲೂ ಪಕ್ಷದ ಸಾಧನೆ ಹೇಳುವ ಮಟ್ಟಕ್ಕೆ ಇಲ್ಲ ಎನ್ನಲಾಗಿದೆ. ದೆಹಲಿಯಲ್ಲಿ ಬಹುತೇಕ ವಲಸಿಗರೇ ತುಂಬಿಕೊಂಡಿದ್ದು, ಯಾವುದೇ ಚುನಾವಣಾ ಅಸ್ತçದ ಮೂಲಕ ಜನರನ್ನು ಸೆಳೆಯಲು ಸಾಧ್ಯವಾಗ್ತಿಲ್ಲ. ದೆಹಲಿ ಜನರನ್ನು ಸೆಳೆಯುವ ತಂತ್ರ ಹೆಣೆಯಲು ಭಾರೀ ಕಸರತ್ತು ಮಾಡುತ್ತಿರುವ ಕೇಸರಿ ಪಡೆ ಇದೀಗ ರಾಮ ಮಂದಿರ ದಾಳ ಉರುಳಿಸಿದೆ.

ಹೆಚ್ಚು ಓದಿದ ಸ್ಟೋರಿಗಳು

ಉದ್ಯಮಿ ಗೌತಮ್ ಅದಾನಿಗೆ Z ಶ್ರೇಣಿ ಭದ್ರತೆ

ರಾಜಕೀಯ ಪಕ್ಷಗಳು ನೀಡುವ ಭರವಸೆಗಳನ್ನು ತಡೆಯಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಜಮ್ಮು-ಕಾಶ್ಮೀರ; ಕಾಶ್ಮೀರಿ ಪಂಡಿತರ ಹಂತಕರನ್ನು ಗುರುತಿಸಿದ ಪೊಲೀಸರು

ದೆಹಲಿಯಲ್ಲಿ ಬಹುತೇಕ ವಲಸಿಗರೇ ತುಂಬಿಕೊಂಡಿದ್ದಾರೆ. ಜೀವನ ಸಾಗಿಸಲು ಕಷ್ಟಪಟ್ಟು ಕೆಲಸ ಮಾಡುವ ಉದ್ದೇಶದಿಂದ ನಾನಾ ರಾಜ್ಯಗಳಿಂದ ದೆಹಲಿ ಪಟ್ಟಣ ಸೇರಿದ್ದಾರೆ. ಈ ಜನರಿಗೆ ಬೇಕಿರುವುದು ರಸ್ತೆ, ನೀರು, ಸಾರಿಗೆ, ವಿದ್ಯುತ್ ಸೌಲಭ್ಯ. ಅದನ್ನು ಬಿಟ್ಟು ಬೇರೇನು ಘೋಷಣೆ ಮಾಡಿದರೂ ಜನರು ಮತ ಹಾಕುವಂತೆ ಮಾಡುವುದು ಸಾಧ್ಯವಿಲ್ಲ. ಇದೇ ಕಾರಣದಿಂದ ದಿನದಿಂದ ದಿನಕ್ಕೆ ಬಿಜೆಪಿ ಹೊಸ ಹೊಸ ದಾಳ ಉರುಳಿಸುತ್ತಿದೆ. ಇವತ್ತು ಅಮಿತ್ ಷಾ ಹಾಗು ನರೇಂದ್ರ ಮೋದಿ ರಾಮಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ಸ್ಥಾಪಿಸುವ ಹೇಳಿಕೆಯನ್ನು ನೀಡಿದ್ದಾರೆ. ದೆಹಲಿ ಚುನಾವಣೆಗೂ ರಾಮಮಂದಿರ ಟ್ರಸ್ಟ್‍ಗೂ ಎಲ್ಲಿಂದ ಸಂಬಂಧ ಎನ್ನಬಹುದು. ಆದರೆ ದೆಹಲಿಯಲ್ಲಿರುವ ಕೆಳವರ್ಗದ ಜನರನ್ನು ಸೆಳೆಯಲು ಮುಂದಾಗಿರುವ ಅಮಿತ್ ಷಾ ಬಳಗ, 15 ಜನರ ಟ್ರಸ್ಟ್ನಲ್ಲಿ ಓರ್ವ ದಲಿತರನ್ನು ಸೇರ್ಪಡೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ

ದೆಹಲಿಯಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ, ನೀರು, ಸಾರಿಗೆ, ಶಿಕ್ಷಣ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಬೆರಳು ತೋರಿಸದಂತೆ ಕೆಲಸ ಮಾಡಿದೆ. ಮೊದಲ ಎರಡು ವರ್ಷಗಳ ಕಾಲ ಮೋದಿಯನ್ನು ಟೀಕಿಸುತ್ತಿದ್ದ ಅರವಿಂದ್ ಕೇಜ್ರಿವಾಲ್ ದೆಹಲಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ಬಳಿಕ ಜನgರಿಂದ ದೂರವಾಗುತ್ತಿರುವ ಸುಳಿವು ಕಂಡುಕೊಂಡ ಅರವಿಂದ್ ಕೇಜ್ರಿವಾಲ್, ತಾನು ಮಾತನಾಡುವುದಕ್ಕಿಂತ ಕೆಲಸ ಮಾಡುವುದು ಸೂಕ್ತವೆಂದು ಕೇವಲ ಕೆಲಸಕ್ಕಷ್ಟೇ ಆದ್ಯತೆ ನೀಡುತ್ತಾ ಸಾಗಿದರು. ಅರವಿಂದ್ ಕೇಜ್ರಿವಾಲ್ ಮಾಡಿದ ಈ ತಂತ್ರಗಾರಿಗೆ ದೆಹಲಿ ಜನರ ಮನಸ್ಸು ಸೆಳೆದಿದ್ದು, ಈ ಬಾರಿ ಕೂಡ ನರೇಂದ್ರ ಮೋದಿ ಸೇನೆಗೆ ಸೋಲಾಗುವುದು ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ. ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಪಶ್ಚಿಮ ಬಂಗಾಳದಿಂದ ಆಗಮಿಸಿರುವ ಜನರನ್ನು ಜನರನ್ನು ಸೆಳೆಯಲು ಏನೆಲ್ಲಾ ಕಸರತ್ತ ಮಾಡಬೇಕು ಅಷ್ಟನ್ನೂ ಮಾಡಿ ಆಗಿದೆ. ಇದೀಗ ಅಂತಿಮವಾಗಿ ರಾಮ ಮಂದಿರ ಟ್ರಸ್ಟ್‍ನಲ್ಲಿ ದಲಿತರಿಗೆ ಸ್ಥಾನ ನೀಡುವುದಾಗಿ ಘೋಷಣೆ ಮಾಡುವ ಮೂಲಕ ಮತ್ತೊಂದು ದಾಳ ಉರುಳಿಸಿದ್ದಾರೆ ಎನ್ನಲಾಗುತ್ತಿದೆ.

ನವೆಂಬರ್ 9 ರಂದು ಅಯೋಧ್ಯೆ ವಿವಾದದ ಬಗ್ಗೆ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ಮುಂದಿನ ಮೂರು ತಿಂಗಳ ಒಳಗಾಗಿ ರಾಮಮಂದಿರ ನಿರ್ಮಾಣದ ಉಸ್ತುವಾರಿಗಾಗಿ ಟ್ರಸ್ಟ್ ಸ್ಥಾಪನೆ ಮಾಡಿ, ಟ್ರಸ್ಟ್ ಮೂಲವೇ ರಾಮಮಂದಿರ ನಿರ್ಮಾಣ ಮಾಡಬೇಕೆಂದು ಸೂಚನೆ ನೀಡಿತ್ತು. ಇದೀಗ ದೆಹಲಿ ಚುನಾವಣೆ ಮುಗಿದ ಮರುದಿನವೇ ಸುಪ್ರೀಂಕೋರ್ಟ್ ಕೊಟ್ಟಿರುವ ಡೆಡ್‌ಲೈನ್ ಮುಕ್ತಾಯವಾಗಲಿದ್ದು, ಅಂದೇ ರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ಸ್ಥಾಪನೆ ಮಾಡ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂಸತ್ ಅಧಿವೇಶನದಲ್ಲಿ ಘೋಷಣೆ ಮಾಡಿದ್ದಾರೆ. ಈ ಟ್ರಸ್ಟ್‍ಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಎಂದು ಹೆಸರಿಡಲಾಗುವುದು ಎಂದೂ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಬೆನ್ನಲ್ಲೇ ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ, ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಟ್ರಸ್ಟ್ ಸ್ಥಾಪನೆಯಾಗಲಿದ್ದು, ಅದರಲ್ಲಿ 15 ಮಂದಿ ಸದಸ್ಯರಿರುತ್ತಾರೆ. ಎಲ್ಲಾ ರೀತಿಯ ನಿರ್ಧಾರಗಳನ್ನು ಕೈಗೊಳ್ಳಲು ಸ್ವಾತಂತ್ರ್ಯ ಇರಲಿದೆ. ಈ ಕಮಿಟಿಯಲ್ಲಿ ಓರ್ವ ದಲಿತ ಇರುತ್ತಾರೆ ಎನ್ನುವ ಮೂಲಕ ದಲಿತ ಕಾರ್ಡ್ ಪ್ಲೇ ಮಾಡಿದ್ದಾರೆ. ಬಿಜೆಪಿಯ ಚುನಾವಣಾ ರಣತಂತ್ರ ಫೆಬ್ರವರಿ 8ರಂದು ನಡೆಯುವ ಮತದಾನದಲ್ಲಿ ವರ್ಕೌಟ್ ಆಗುತ್ತಾ ಎನ್ನುವುದು ಫೆಬ್ರವರಿ 11ರ ಫಲಿತಾಂಶದಲ್ಲಿ ಗೊತ್ತಾಗಲಿದೆ.

RS 500
RS 1500

SCAN HERE

[elfsight_youtube_gallery id="4"]

don't miss it !

ಮ್ಯಾಂಚೆಸ್ಟರ್ ಯುನೈಟೆಡ್ ಫುಟ್‌ಬಾಲ್‌ ಕ್ಲಬ್ ಖರೀದಿಸ್ತಾರಂತೆ ಎಲಾನ್ ಮಸ್ಕ್!
ಕ್ರೀಡೆ

ಮ್ಯಾಂಚೆಸ್ಟರ್ ಯುನೈಟೆಡ್ ಫುಟ್‌ಬಾಲ್‌ ಕ್ಲಬ್ ಖರೀದಿಸ್ತಾರಂತೆ ಎಲಾನ್ ಮಸ್ಕ್!

by ಪ್ರತಿಧ್ವನಿ
August 17, 2022
ಗೆಳೆಯನ ಬಲಿ ಪಡೆದ ರಸ್ತೆಗುಂಡಿ ವಿರುದ್ಧ ಏಕಾಂಗಿ ಅಭಿಯಾನ ನಡೆಸುತ್ತಿರುವ ಮಂಗಳೂರಿನ ಯುವಕ.!
ಕರ್ನಾಟಕ

ಗೆಳೆಯನ ಬಲಿ ಪಡೆದ ರಸ್ತೆಗುಂಡಿ ವಿರುದ್ಧ ಏಕಾಂಗಿ ಅಭಿಯಾನ ನಡೆಸುತ್ತಿರುವ ಮಂಗಳೂರಿನ ಯುವಕ.!

by Shivakumar A
August 14, 2022
ಹರ್ ಘರ್ ತಿರಂಗ ಅಭಿಯಾನ ಬಹಿಷ್ಕರಿಸಲು ಯತಿ ನರಸಿಂಹಾನಂದ್ ಕರೆ
ದೇಶ

ಹರ್ ಘರ್ ತಿರಂಗ ಅಭಿಯಾನ ಬಹಿಷ್ಕರಿಸಲು ಯತಿ ನರಸಿಂಹಾನಂದ್ ಕರೆ

by ಪ್ರತಿಧ್ವನಿ
August 13, 2022
ಲೋಕಾಯುಕ್ತಕ್ಕೆ ಮತ್ತಷ್ಟು ಬಲ ಬೇಕಿದೆ: ಎಚ್.ವಿಶ್ವನಾಥ್
ಕರ್ನಾಟಕ

ಲೋಕಾಯುಕ್ತಕ್ಕೆ ಮತ್ತಷ್ಟು ಬಲ ಬೇಕಿದೆ: ಎಚ್.ವಿಶ್ವನಾಥ್

by ಪ್ರತಿಧ್ವನಿ
August 12, 2022
ಧರ್ಮದ ನಶೆಯಲ್ಲಿ ಜನರು ಜಿಎಸ್‌ಟಿ ಭಾರವನ್ನು ಮರೆತರೆ?
ಅಭಿಮತ

ಧರ್ಮದ ನಶೆಯಲ್ಲಿ ಜನರು ಜಿಎಸ್‌ಟಿ ಭಾರವನ್ನು ಮರೆತರೆ?

by ಡಾ | ಜೆ.ಎಸ್ ಪಾಟೀಲ
August 11, 2022
Next Post
ಹೊಸ ದೇಶವನ್ನೇ ನಿರ್ಮಿಸಿದ ನಿತ್ಯಾನಂದನ ಬಂಧನಕ್ಕೆ ವಾರೆಂಟ್!

ಹೊಸ ದೇಶವನ್ನೇ ನಿರ್ಮಿಸಿದ ನಿತ್ಯಾನಂದನ ಬಂಧನಕ್ಕೆ ವಾರೆಂಟ್!

ಶಾಹಿನ್‌ಬಾಗ್‌ ಕುರಿತು ಬಿಜೆಪಿ ಬಿಡುಗಡೆ ಮಾಡಿರುವ ವಿಡಿಯೋ ಅಸಲಿಯೋ? ನಕಲಿಯೋ?

ಶಾಹಿನ್‌ಬಾಗ್‌ ಕುರಿತು ಬಿಜೆಪಿ ಬಿಡುಗಡೆ ಮಾಡಿರುವ ವಿಡಿಯೋ ಅಸಲಿಯೋ? ನಕಲಿಯೋ?

ಮಗುವಿನ ತಾಯಿ

ಮಗುವಿನ ತಾಯಿ, ಶಿಕ್ಷಕಿ ದೇಶದ್ರೋಹಿ ಎಂದ ಬಿಜೆಪಿಯ ಫ್ಯಾಸಿಸ್ಟ್ ಮುಖ ಅನಾವರಣ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist