ಲಾಕ್ ಡೌನ್ನಿಂದ ಕಂಗೆಟ್ಟು ಹೋಗಿದ್ದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮೇ19ರಿಂದ ಸಡಿಲಿಕೆಗೆ ಸಿಎಂ ಅರವಿಂದ ಕೇಜ್ರಿವಾಲ್ ಆದೇಶಿಸಿದ್ದಾರೆ. ಮೇ 18ರಂದು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಕೇಜ್ರಿವಾಲ್, ಇನ್ನೂ ಲಾಕ್ ಡೌನ್ ಯತಾಪ್ರಕಾರ ಮುಂದುವರೆಸಿದರೆ ಬೊಕ್ಕಸಕ್ಕೆ ದೊಡ್ಡ ಹೊಡೆತ ಬೀಳಲಿದೆ. ಹೀಗಾಗಿ ಅಂಗಡಿ ಮುಂಗಟ್ಟುಗಳಿಗೆ, ಸರ್ಕಾರಿ ಬಸ್ ಸಂಚಾರಕ್ಕೆ, ಮತ್ತು ಟ್ಯಾಕ್ಸಿಗಳ ಓಡಾಟಕ್ಕೆ ಅನುವುಮಾಡಿಕೊಡಲಾಗಿದೆ ಎಂದರು.
ಲಾಕ್ ಡೌನ್ ಸಡಿಲಿಕೆಯನ್ನ ಕಠಿಣ ಶಿಸ್ತು ಕ್ರಮಗಳೊಂದಿಗೆ ಮಾಡಲಾಗಿದೆ. ಪ್ರತಿ ಬಸ್ ನಲ್ಲಿ 20ಕ್ಕಿಂತ ಪ್ರಯಾಣಿಕರನ್ನು ಹತ್ತಿಸುವಂತಿಲ್ಲ. ಮತ್ತು ಎಲ್ಲಾ ಟ್ಯಾಕ್ಸಿಗಳಲ್ಲು ಕೋವಿಡ್ ನಿರೋಧಕ ಕ್ರಮಗಳನ್ನು ಅಳವಡಿಸಸೋದರ ಜತೆಗೆ ಪ್ರತಿ ಟ್ಯಾಕ್ಸಿಯಲ್ಲೂ ಇಬ್ಬರಿಗಿಂತ ಹೆಚ್ಚಿನ ಜನರು ಪ್ರಯಾಣಿಸ ಬಾರದು ಎಂದಿದ್ದಾರೆ. ಅಲ್ದೇ, ಎಲ್ಲಾ ಅಂಗಡಿ ಮುಂಗಟ್ಟುಗಳು ಶಿಸ್ತು ಬದ್ಧವಾಗಿ ಕಾರ್ಯನಿರ್ವಹಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ ಅಂತ ಕೇಜ್ರಿವಾಲ್ ಹೇಳಿದ್ದಾರೆ.
ಇನ್ನು ಮೋಟಾರು ವಾಹನಗಳ ಓಡಾಟ, ಮತ್ತು ಕನ್ಸಟ್ರಕ್ಷನ್ ವಾಹನಗಳಹ ಮತ್ತು ಸರಕು ಸಾಗಾಣ ವಾಹನಗಳ ಓಡಾಟಕ್ಕೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಮದುವೆ ಸಮಾರಂಭಗಳಿಗೂ ಸಡಿಲಿಕೆ ನೀಡಲಾಗಿದ್ದು, 50ಕ್ಕಿಂತ ಹೆಚ್ಚಿನ ಜನ ಸೇರದೆ ಮದುವೆ ಸಮಾರಂಭ ಮತ್ತು ಅಂತಿಮ ವಿಧಿವಿಧಾನ ಕಾರ್ಯಗಳಿಗೆ ಕೇವಲ 20 ಜನರಿಗಷ್ಟೇ ಅವಕಾಶ ಎಂದೂ ಹೇಳಿದ್ದಾರೆ. ಇನ್ನುಳಿದಂತೆ ಶಾಲೆ, ಕಾಲೇಜು, ಮೆಟ್ರೋ, ಹಾಗೂ ಚಿತ್ರಮಂದಿರಗಳಿಗೆ ಸದ್ಯಕ್ಕೆ ಲಾಕ್ ಡೌನ್ ಸಡಿಲಿಕೆ ನೀಡುತ್ತಿಲ್ಲ ಎಂಬುವುದನ್ನೂ ಸ್ಪಷ್ಟ ಪಡಿಸಿದ್ದಾರೆ. ಮೇ 31ರ ವರೆಗೆ ಇದೇ ಮಾದರಿ ಅನ್ವಯವಾಗಲಿದ್ದು, ಅದಾದ ಬಳಿಕ ಕೇಂದ್ರ ಸರ್ಕಾರದ ತೀರ್ಮಾನಕ್ಕನುಗುಣವಾಗಿ ತಮ್ಮ ತೀರ್ಮಾನವೂ ಬದಲಾಗಲಿದೆ ಎಂದು ಕೇಜ್ರಿವಾಲ್ ಮಾಧ್ಯಗಳಿಗೆ ಸ್ಪಷ್ಟ ಪಡಿಸಿದ್ದಾರೆ.