• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಡ್ರಗ್ಸ್‌ ಜಾಲ: ಮೂವರು ಸ್ಯಾಂಡಲ್‌ವುಡ್‌ ನಟಿಯರ ಆಪ್ತರನ್ನು ವಶಕ್ಕೆ ಪಡೆದ ಸಿಸಿಬಿ

by
September 4, 2020
in ಕರ್ನಾಟಕ
0
ಡ್ರಗ್ಸ್‌ ಜಾಲ: ಮೂವರು ಸ್ಯಾಂಡಲ್‌ವುಡ್‌ ನಟಿಯರ ಆಪ್ತರನ್ನು ವಶಕ್ಕೆ ಪಡೆದ ಸಿಸಿಬಿ
Share on WhatsAppShare on FacebookShare on Telegram

ಬೆಂಗಳೂರಿನಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್‌(ಮಾದಕ ವಸ್ತು) ಜಪ್ತಿಯಾದ ಬಳಿಕ ಒಬ್ಬೊಬ್ಬರ ಬುಡಕ್ಕೆ ಬಿಸಿ ಬೀಳುತ್ತಿದೆ. ಈ ನಡುವೆ ಸ್ಯಾಂಡಲ್‌ವುಡ್‌ನಲ್ಲಿ ಮಾದಕ ವ್ಯಸನಿಗಳು ಇದ್ದಾರೆಂದು ನಟ, ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಹೇಳಿಕೆ ಕೊಟ್ಟ ಬಳಿಕ ಚಿತ್ರರಂಗದಲ್ಲಿ ತಲ್ಲಣ ಶುರುವಾಗಿದೆ. ಇಂದ್ರಜಿತ್‌ ಹೇಳಿಕೆ ದಾಖಲಿಸಿಕೊಂಡ ಬಳಿಕ 10 ರಿಂದ 15 ಮಂದಿ ಚಿತ್ರನಟ, ನಟಿಯರನ್ನು ವಿಚಾರಣೆ ಮಾಡಲು ಸಿಸಿಬಿ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಮೊದಲಿಗೆ ಮೂವರು ನಟಿಯರ ಜಾಡು ಹಿಡಿದಿರುವ ಪೊಲೀಸರು, ಆ ನಟಿಮಣಿಯರ ಆಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅದರಲ್ಲಿ ನಟಿ ರಾಗಿಣಿ ಆಪ್ತ ರವಿಶಂಕರ್‌, ನಟಿ ಸಂಜನಾ ಗಲ್ರಾಣಿ ಆಪ್ತ ರಾಹುಲ್ ಹಾಗೂ ನಟಿ ಶರ್ಮಿಳಾ ಮಂಡ್ರೆ ಆಪ್ತ ಕಾರ್ತಿಕ್ ರಾಜ್ ಪ್ರಮುಖರಾಗಿದ್ದಾರೆ.

ADVERTISEMENT

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆರ್‌ಟಿಒ ಕಚೇರಿಯಲ್ಲಿ ದ್ವಿತಿಯ ದರ್ಜೆ ಸಹಾಯಕ (SDA) ಆಗಿರುವ ನಟಿ ರಾಗಿಣಿ ಆಪ್ತ ರವಿಶಂಕರ್‌ನನ್ನು ಪೊಲೀಸರು ಬುಧವಾರ ಸಂಜೆ ಕಚೇರಿಯಿಂದಲೇ ಬಂಧಿಸಿ ಕರೆತಂದಿದ್ದರು. ಆ ಬಳಿಕ ನಡೆದ ತೀವ್ರ ವಿಚಾರಣೆ ನಡೆಸಿದರೂ ಯಾರೊಬ್ಬರ ಹೆಸರನ್ನೂ ಬಾಯಿ ಬಿಟ್ಟಿರಲಿಲ್ಲ. ಅಂತಿಮವಾಗಿ ಪೊಲೀಸರು ರವಿಶಂಕರ್ ಮೊಬೈಲ್ ಪರಿಶೀಲನೆ ಮಾಡಿದಾಗ ಕಾರ್ತಿಕ್‌ ರಾಜ್‌ ನಡುವೆ ನಿರಂತರ ಸಂಪರ್ಕ ಹೊಂದಿರುವುದು ಪತ್ತೆಯಾಯಿತು. ಈ ಬಗ್ಗೆ ಪ್ರಶ್ನಿಸಿದಾಗ ನಿರಂತರ ಸಂಪರ್ಕದಲ್ಲಿದ್ದ ಕಾರ್ತಿಕ್ ರಾಜ್ ಮಾಹಿತಿ ಬಹಿರಂಗವಾಯ್ತು. ಸ್ಯಾಂಡಲ್‌ವುಡ್‌ನಲ್ಲಿ ಯಾರೆಲ್ಲಾ ಡ್ರಗ್ಸ್‌ ತೆಗೆದುಕೊಳ್ಳುತ್ತಾರೆ ಎನ್ನುವ ಮಾಹಿತಿಯನ್ನು ಕಾರ್ತಿಕ್ ರಾಜ್ ಬಳಿ ಕೇಳಬೇಕು ಎಂದಿದ್ದ. ರವಿಶಂಕರ್‌ ಕೊಟ್ಟ ಮಾಹಿತಿಯಂತೆ ಬುಧವಾರ ರಾತ್ರಿಯೇ ಕಾರ್ತಿಕ್‌ ರಾಜ್ ವಶಕ್ಕೆ ಪಡೆಯಲು ಸಿಸಿಬಿ ಪೊಲೀಸರು ಮುಂದಾಗಿದ್ದರು. ಆದರೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಕಾರ್ತಿಕ್‌ ರಾಜ್‌ ತಪ್ಪಿಸಿಕೊಂಡಿದ್ದ. ಆದರೂ ಪಟ್ಟು ಬಿಡದ ಸಿಸಿಬಿ ಪೊಲೀಸರು ಗುರುವಾರ ಬೆಳಗ್ಗೆ ಕಾರ್ತಿಕ್ ರಾಜ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಬಂಧಿತನಾಗಿರುವ ಕಾರ್ತಿಕ್‌ ರಾಜ್‌ ನಟಿ ಶರ್ಮಿಳಾ ಮಾಂಡ್ರೆ ಆಪ್ತ ಸ್ನೇಹಿತ ಎನ್ನುವುದು ಗೊತ್ತಾಗಿದೆ. ಈತನಿಗೆ ಸ್ಯಾಂಡಲ್ ವುಡ್ ನ ಸಾಕಷ್ಟು ನಟಿಯರ ಜೊತೆ ಸಂಪರ್ಕವಿದೆ ಎನ್ನಲಾಗಿದೆ. ಕಾರ್ತಿಕ್ ರಾಜ್ ಒಬ್ಬ ಹೋಟೆಲ್ ಉದ್ಯಮಿಯಾಗಿದ್ದು, ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ವಾಸವಾಗಿದ್ದು, ಕೋರಮಂಗಲದಲ್ಲಿ ಮಲ್ಟಿಸ್ಟಾರ್ ಹೋಟೆಲ್ ನಡೆಸುತ್ತಿದ್ದಾನೆ. ಕಾರ್ತಿಕ್ ರಾಜ್ ತಂದೆ ಓರ್ವ ವೈದ್ಯರಾಗಿದ್ದು, ಕಾರ್ತಿಕ್ ರಾಜ್ ಗೆ ಪಾರ್ಟಿಗಳು ಎಂದರೆ ಬಲು ಮೋಹ ಎನ್ನಲಾಗಿದೆ. ಈ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ನಟಿ ರಾಗಿಣಿ ಆಪ್ತ ರವಿಶಂಕರ್‌, ನಟಿ ಶರ್ಮಿಳಾ ಮಾಂಡ್ರೆ ಆಪ್ತ ಕಾರ್ತಿಕ್‌ ರಾಜ್‌ ಬಳಿಕ ಸಂಜನಾ ಗಲ್ರಾಣಿ ಆಪ್ತ ರಾಹುಲ್‌ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಜನಾ ಆಪ್ತ ರಾಹುಲ್ ಹಾಗೂ ಕಾರ್ತಿಕ್ ರಾಜ್ ನ ವಿಚಾರಣೆ ನಡೆಸುತ್ತಿದ್ದರೂ ರಾಹುಲ್‌ ಮಾತ್ರ ಯಾರೊಬ್ಬರ ಹೆಸರನ್ನೂ ಬಾಯಿ ಬಿಟ್ಟಿಲ್ಲ. ಕಾರ್ತಿಕ್ ರಾಜ್ ಪರಿಚಯ ಎಂದಷ್ಟೇ ಹೇಳುತ್ತಿರುವ ರಾಹುಲ್‌, ಬೇರೆ ಯಾರ ಹೆಸರನ್ನು ಹೇಳುತ್ತಿಲ್ಲ. ಬೆಂಗಳೂರು ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್ ಕೂಡ ಸುಮಾರು 1 ಗಂಟೆಗಳ ಕಾಲ ವಿಚಾರಣೆ ಮಾಡಿ ಪ್ರಾಥಮಿಕ ಮಾಹಿತಿ ಪಡೆದು ಸಿಸಿಬಿ ಕಚೇರಿಯಿಂದ ವಾಪಸ್‌ ಆಗಿದ್ದು, ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ವಿಚಾರಣೆ ನಡೆಸುತ್ತಿದ್ದಾರೆ.

ಯಲಹಂಕದ ಜ್ಯುಡಿಷಿನಲ್‌ ಲೇಔಟ್ ನಲ್ಲಿರುವ ರಾಗಿಣಿ ಅಪಾರ್ಟ್ ಮೆಂಟ್ ಗೆ ಶುಕ್ರವಾರ ಬೆಳಿಗ್ಗೆ ಸಿಸಿಬಿ ಪೊಲೀಸರಿಂದ ದಾಳಿ ಆಗಿದೆ. ರವಿಶಂಕರ್ ಬಂಧನದ ಹಿನ್ನೆಲೆಯಲ್ಲಿ ರಾಗಿಣಿ ಮನೆ ಮೇಲೆ ದಾಳಿ ನಡೆಸಲು ನ್ಯಾಯಾಲಯದಿಂದ ಡ್ರಗ್ಸ್ ಕೇಸ್ ವಿಚಾರವಾಗಿ ಸಿಸಿಬಿ ಅಧಿಕಾರಿಗಳು ಸರ್ಚ್ ವಾರೆಂಟ್ ಪಡೆದಿದ್ದರು.

Tags: ‌ ಸ್ಯಾಂಡಲ್‌ವುಡ್ರಾಗಿಣಿ ದ್ವಿವೇದಿಶರ್ಮಿಲಾ ಮಾಂಡ್ರೆಸಂಜನಾ ಗಲ್ರಾನಿಸ್ಯಾಂಡಲ್‌ವುಡ್‌ ಡ್ರಗ್‌ ಮಾಫಿಯಾ
Previous Post

ʼಕೆಲಸ ನೀಡಿ, ಆತ್ಮಹತ್ಯೆ ನಿಲ್ಲಿಸಿʼ ಯುವ ಕಾಂಗ್ರೆಸ್‌ನಿಂದ ಅಭಿಯಾನ ಆರಂಭ

Next Post

UPSC ಜಿಹಾದ್: ಪ್ರಾಯೋಜಕತ್ವ ನೀಡಿದ ಅಮುಲ್ ಸಂಸ್ಥೆ ವಿರುದ್ಧ ಬಾಯ್ಕಾಟ್ ಅಭಿಯಾನ

Related Posts

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?
Top Story

ಇಸ್ರೇಲ್ – ಕರ್ನಾಟಕದ ನಡುವೆ ಆರಂಭವಾಗಲಿದೆಯಾ ಕೌಶಲ್ಯಯುತ ಶ್ರಮಶಕ್ತಿ ಒಪ್ಪಂದ? : ಸಚಿವ ಲಾಡ್‌ ಪ್ಲ್ಯಾನ್‌ ಏನು..?

by ಪ್ರತಿಧ್ವನಿ
May 15, 2026
0

ಬೆಂಗಳೂರು :  ಪರಿಣತ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ಕೆಲಸ ಮಾಡುವ ಕ್ಷಮೆತೆಯಿರುವ ರಾಜ್ಯದ ಕಾರ್ಮಿಕರಿಗೆ ಅವಕಾಶ ಕಲ್ಪಿಸುವ ಸಂಬಂಧ ಕಾರ್ಮಿಕ ಸಚಿವ ಸಂತೋಷ್‌...

Read moreDetails
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡನೀಯ : ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿ

May 15, 2026
ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

ಮೋದಿಯಿಂದ ದೇಶ ದೊಡ್ಡ ದುರಂತ ಸ್ಥಿತಿಗೆ ಬಂದಿದೆ : ಬೆಲೆ ಏರಿಕೆಗೆ ಡಿಕೆ ಶಿವಕುಮಾರ್‌ ವಾಗ್ದಾಳಿ

May 15, 2026
ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

May 15, 2026
ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ

ವಸ್ತ್ರಸಂಹಿತೆ ವಿವಾದಕ್ಕೆ ಹೊಸ ತಿರುವು; ಸರ್ಕಾರದ ಆದೇಶಕ್ಕೆ ಖಾಸಗಿ ಶಾಲೆಗಳ ವಿರೋಧ

May 15, 2026
Next Post
UPSC ಜಿಹಾದ್: ಪ್ರಾಯೋಜಕತ್ವ ನೀಡಿದ ಅಮುಲ್ ಸಂಸ್ಥೆ ವಿರುದ್ಧ ಬಾಯ್ಕಾಟ್ ಅಭಿಯಾನ

UPSC ಜಿಹಾದ್: ಪ್ರಾಯೋಜಕತ್ವ ನೀಡಿದ ಅಮುಲ್ ಸಂಸ್ಥೆ ವಿರುದ್ಧ ಬಾಯ್ಕಾಟ್ ಅಭಿಯಾನ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada