Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಡೊನಾಲ್ಡ್ ಟ್ರಂಪ್ ಭೇಟಿಯಿಂದ ಭಾರತಕ್ಕೆ ಏನು ಲಾಭ?

ಡೊನಾಲ್ಡ್ ಟ್ರಂಪ್ ಭೇಟಿಯಿಂದ ಭಾರತಕ್ಕೆ ಏನು ಲಾಭ?
ಡೊನಾಲ್ಡ್ ಟ್ರಂಪ್ ಭೇಟಿಯಿಂದ ಭಾರತಕ್ಕೆ ಏನು ಲಾಭ?

February 23, 2020
Share on FacebookShare on Twitter

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಬ್ರವರಿ 24ಕ್ಕೆ ಭಾರತಕ್ಕೆ ಬರುತ್ತಿದ್ದಾರೆ. ಭಾರತ ಕೂಡ ವಿಶ್ವದ ದೊಡ್ಡಣ್ಣನನ್ನು ಸ್ವಾಗತ ಮಾಡಲು ತುಗಾಲಲ್ಲಿ ನಿಂತಿದೆ. ಟ್ರಂಪ್ ಸ್ವಾಗತಕ್ಕಾಗಿ ಗುಜರಾತ್‌ನ ಅಹಮಾದಾಬಾದ್‌ನಲ್ಲಿ ರತ್ನಗಂಬಳಿ ಸ್ವಾಗತಕ್ಕೆ ಸಜ್ಜಾಗಿ ನಿಂತಿದೆ. ಈಗಾಗಲೇ ಅಮೆರಿಕದಿಂದ ನಾಲ್ಕನೇ ಯುಎಸ್ ಏರ್ ಫೋರ್ಸ್ನ ವಿಮಾನ ಅಧ್ಯಕ್ಷರ ಕುಂಟುಂಬದ ಸಾಮಗ್ರಿಗಳನ್ನು ಹೊತ್ತು ತಂದಿದೆ. ಕೇವಲ 36 ಗಂಟೆಗಳ ಪ್ರವಾಸ ಕೈಗೊಂಡಿರುವ ಡೊನಾಲ್ಡ್ ಟ್ರಂಪ್ ಬಂದ ಪುಟ್ಟ.. ಹೋದ ಪುಟ್ಟ ಎನ್ನುವಂತೆ ತನ್ನ ಸ್ವಂತ ಲಾಭಕ್ಕೆ ಏನೇನು ಬೇಕು ಅದನ್ನು ಮಾತ್ರ ಮಾಡಿಕೊಂಡು ವಾಪಸ್ ಹೋಗ್ತಾರಾ ಎನ್ನುವ ಅನುಮಾನ ಎಲ್ಲರನ್ನು ಕಾಡುತ್ತಿದೆ. ಇದಕ್ಕೆ ಕಾರಣ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಾಪಾರ ಸಂಬಂಧದ ಬಗ್ಗೆ ಯಾವುದೇ ಚರ್ಚೆ ನಡೆಸುವುದಿಲ್ಲ ಎಂದಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ದೆಹಲಿಯಲ್ಲಿ ಬೀಡು ಬಿಟ್ಟ ಮಹಾ ಸಿಎಂ – ಡಿಸಿಎಂ

ಅಯೋಧ್ಯೆಯ ಅಕ್ರಮ ಭೂಮಿ ಮಾರಾಟದ ಹಿಂದೆ ಬಿಜೆಪಿ : ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದಿಂದ ಪಟ್ಟಿ ಬಿಡುಗಡೆ

ಮಣಿಪುರ; 5ದಿನಗಳ ಕಾಲ ಇಂಟರ್ನೆಟ್ ಸೇವೆ ಸ್ಥಗಿತ

ಮೋದಿ ತವರೂರು ಗುಜರಾತ್ ಡೊನಾಲ್ಡ್ ಟ್ರಂಪ್ ಕಾರ್ಯಕ್ರಮಕ್ಕಾಗಿ ಬರೋಬ್ಬರಿ 85 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ವಿಶ್ವದ ಅತಿ ದೊಡ್ಡ ಕ್ರೀಡಾಂಗಣ ಉದ್ಘಾಟನೆ ಮಾಡಲು ವೇದಿಕೆ ಸಜ್ಜಾಗಿದೆ. 1 ಲಕ್ಷದ 10 ಸಾವಿರ ಜನರು ಸೇರಬಹುದಾದ ಸ್ಟೇಡಿಯಂನಲ್ಲಿ ನಮಸ್ತೇ ಟ್ರಂಪ್ ಕಾರ್ಯಕ್ರಮ ನಡೆಯಲಿದೆ. ಆದರೆ ಭಾರತ, ಅಮೆರಿಕ ನಡುವಣ ಯಾವೆಲ್ಲಾ ವಿಚಾರಗಳು ಚರ್ಚೆ ಆಗಲಿದೆ ಎನ್ನುವುದು ಮಾತ್ರ ಇಲ್ಲೀವರೆಗೂ ಬಹಿರಂಗವಾಗಿಲ್ಲ. ಡೊನಾಲ್ಡ್ ಟ್ರಂಪ್ ಜೊತೆ ಹಿರಿಯ ಅಧಿಕಾರಿಗಳ ತಂಡ ಕೂಡ ಆಗಮಿಸಲಿದ್ದು, ಎರಡೂ ದೇಶಗಳ ನಡುವೆ ಸ್ನೇಹ ವೃದ್ಧಿ ಹಾಗು ವ್ಯವಹಾರದ ಬಗ್ಗೆ ಮಹತ್ವದ ಮಾತುಗಳು ನಡೆಯಲಿವೆ ಎನ್ನಲಾಗಿದೆ. ಯಾವೆಲ್ಲಾ ಕಾರ್ಯಕ್ರಮಗಳು ಚರ್ಚೆಯ ಭಾಗವಾಗಲಿವೆ ಎನ್ನುವ ವಿಚಾರವನ್ನು ಗುಪ್ತವಾಗಿ ಇಡಲಾಗಿದೆ.

ಡೊನಾಲ್ಡ್ ಟ್ರಂಪ್ ರೀತಿ 2006ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಜಾಜ್ ಡಬ್ಲ್ಯೂ ಬುಷ್ ಭಾರತಕ್ಕೆ ಬಂದಿದ್ದರು. ಮನೋಹನ್ ಸಿಂಗ್ ಪ್ರಧಾನಿ ಆಗಿದ್ದರು. ಎ.ಪಿ.ಜೆ ಅಬ್ದುಲ್ ಕಲಾಂ ರಾಷ್ಟ್ರಪತಿ ಆಗಿದ್ದರು. ಆ ವೇಳೆ ಇಷ್ಟೊಂದು ಅಬ್ಬರ ಇಲ್ಲದಿದ್ದರು ಭಾರತೀಯ ಸೇನೆ ಸದೃಢವಾಗಲು ಬೇಕಾದ ನಾಗರಿಕ ಪರಮಾಣು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಈ ಬಾರಿ ಡೊನಾಲ್ಡ್ ಟ್ರಂಪ್, ಈಗಾಗಲೇ ವ್ಯಾಪಾರ ವಹಿವಾಟಿನ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಾಗುವುದು ಎಂದಿದ್ದಾರೆ. ಅಂದರೆ ಚರ್ಚೆ ವಿಷಯಗಳ ಪಟ್ಟಿಯಲ್ಲಿ ಭಾರತ ಹಾಗು ಅಮೆರಿಕ ನಡುವಿನ ವ್ಯಾಪಾರ ವೃದ್ಧಿ ಬಗ್ಗೆ ಯಾವುದೇ ಚರ್ಚೆ ನಡೆಯುವುದಿಲ್ಲ ಎನ್ನುವುದು ಸ್ಪಷ್ಟ. ಆದ್ರೆ ಅಚ್ಚರಿಯ ಬೆಳವಣಿಗೆಯಲ್ಲಿ ವ್ಯಾಪಾರ ವ್ಯವಹಾರದ ಬಗ್ಗೆ ಮಹತ್ವದ ಒಪ್ಪಂದ ನಡೆದರೂ ನಡೆಯಬಹುದು ಎನ್ನುವ ಮಾಹಿತಿ ವೈಟ್‌ಹೌಸ್ ಮೂಲದಿಂದ ಹೊರಬಿದ್ದಿದೆ.

ಇಂದಿಗೂ ಅಮೆರಿಕ ಹಾಗು ಭಾರತದ ನಡುವೆ ದೊಡ್ಡ ಸಮಸ್ಯೆ ಎಂದರೆ ಹೆಚ್ 1 ಬಿ ವೀಸಾ ಸಮಸ್ಯೆ. ಟ್ರಂಪ್ ಭಾರತಕ್ಕೆ ಆಗªಮಿಅಸುತ್ತಿರುವ ಈ ಸಮಯದಲ್ಲಿ ನರೇಂದ್ರ ಮೋದಿ ಪ್ರಬಾವ ಬೀರುವ ಮೂಲಕ ಸಮಸ್ಯೆಗೆ ಇತಿಶ್ರೀ ಹಾಡಿದರೆ, ಲಕ್ಷಾಂತರ ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡಲು ಅನುಕೂಲ ಆಗಲಿದೆ. ಜೊತೆಗೆ ಹಲವಾರು ಜನರು ಅಮೆರಿಕದಲ್ಲಿ ಉದ್ಯೂಗ ಗಿಟ್ಟಿಸುವ ಬಾಗಿಲು ತೆರೆದಂತಾಗುತ್ತದೆ.

2020ರ ಏಪ್ರಿಲ್ 1ನೂತನ ವೀಸ ನೀತಿ ಜಾರಿ ಮಾಡುವ ಬಗ್ಗೆ ಈ ಹಿಂದೆಯೇ ಟ್ರಂಪ್ ಘೋಷಣೆ ಮಾಡಿದ್ದಾರೆ. ಅದನ್ನು ಭಾರತದಲ್ಲಿ ಮೊದಲ ಬಾರಿಗೆ ಸಹಿ ಮಾಡ್ತಾರಾ ಎನ್ನುವುದನ್ನು ಕಾದು ನೋಡ್ಬೇಕು. ಆದ್ರೆ ಗೋದ್ರಾ ಹತ್ಯಾಕಾಂಡದ ಬಳಿಕ ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕ ವೀಸಾ ಕೊಟ್ಟಿರಲಿಲ್ಲ. ಭಾರತದ ಪ್ರಧಾನಿಯಾದ ಬಳಿಕವಷ್ಟೇ ನರೇಂದ್ರ ಮೋದಿ ಅವರಿಗೆ ಅಮೆರಿಕ ವೀಸಾ ಕೊಟ್ಟಿದೆ. ಇದೀಗ ವಿದ್ಯಾರ್ಥಿಗಳು ಹಾಗು ಉದ್ಯೋಗಿಗಳಿಗೆ ಪಾಸ್‌ಪೋರ್ಟ್ ಕೊಡಿಸ್ತಾರಾ ಕಾದು ನೋಡ್ಬೇಕು.

RS 500
RS 1500

SCAN HERE

don't miss it !

ಅವರ ಅನುಭವದ ಮುಂದೆ ನಾನು ಚಿಕ್ಕವಳು : ಜಲಜಾ ನಾಯ್ಕ್‌
ವಿಡಿಯೋ

ಅವರ ಅನುಭವದ ಮುಂದೆ ನಾನು ಚಿಕ್ಕವಳು : ಜಲಜಾ ನಾಯ್ಕ್‌

by ಪ್ರತಿಧ್ವನಿ
August 3, 2022
ಮತಾಂತರ ನಿಷೇಧ ಕಾಯ್ದೆಯು ಧಾರ್ಮಿಕ ಹಕ್ಕುಗಳನ್ನು ಕಿತ್ತುಕೊಳ್ಳುವುದಿಲ್ಲ : ಆರಗ ಜ್ಞಾನೇಂದ್ರ
ಕರ್ನಾಟಕ

108 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ!

by ಪ್ರತಿಧ್ವನಿ
August 7, 2022
ಇದು ಹಿಂದೂ ವಿಗ್ರಹವಲ್ಲ, ಭಗವಾನ್‌ ಬುದ್ಧನ ವಿಗ್ರಹ: ದೇವಾಲಯದ ವ್ಯಾಜ್ಯವನ್ನು ಬಗೆಹರಿಸಿದ ಮದ್ರಾಸ್‌ ಹೈಕೋರ್ಟ್
ದೇಶ

ಇದು ಹಿಂದೂ ವಿಗ್ರಹವಲ್ಲ, ಭಗವಾನ್‌ ಬುದ್ಧನ ವಿಗ್ರಹ: ದೇವಾಲಯದ ವ್ಯಾಜ್ಯವನ್ನು ಬಗೆಹರಿಸಿದ ಮದ್ರಾಸ್‌ ಹೈಕೋರ್ಟ್

by ಪ್ರತಿಧ್ವನಿ
August 3, 2022
ಬಿಜೆಪಿಯ ಬಾಡಿಗೆ ಭಾಷಣಕೋರನೊಬ್ಬ ಬಿಜೆಪಿ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿರುವುದು ಜಗತ್ತಿನ 8ನೇ ಅದ್ಬುತ : ಕಾಂಗ್ರೆಸ್
ಕರ್ನಾಟಕ

ಬಿಜೆಪಿಯ ಬಾಡಿಗೆ ಭಾಷಣಕೋರನೊಬ್ಬ ಬಿಜೆಪಿ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿರುವುದು ಜಗತ್ತಿನ 8ನೇ ಅದ್ಬುತ : ಕಾಂಗ್ರೆಸ್

by ಪ್ರತಿಧ್ವನಿ
August 3, 2022
ಸಿದ್ದರಾಮೋತ್ಸವದಿಂದ ಬೆದರಿದ ಬಿಜೆಪಿ : ಅಮಿತ್ ಶಾ ದಿಢೀರ್ ಭೇಟಿಗೆ ಕಾರಣವೇನು?
ಕರ್ನಾಟಕ

ಸಿದ್ದರಾಮೋತ್ಸವದಿಂದ ಬೆದರಿದ ಬಿಜೆಪಿ : ಅಮಿತ್ ಶಾ ದಿಢೀರ್ ಭೇಟಿಗೆ ಕಾರಣವೇನು?

by Shivakumar A
August 2, 2022
Next Post
ಅಧಿಕಾರವಿಲ್ಲದಿದ್ದರೂ ಪೌರತ್ವ ಸಾಬೀತು ಪಡಿಸಲು ನೋಟಿಸ್‌ ನೀಡಿದ UIDAI 

ಅಧಿಕಾರವಿಲ್ಲದಿದ್ದರೂ ಪೌರತ್ವ ಸಾಬೀತು ಪಡಿಸಲು ನೋಟಿಸ್‌ ನೀಡಿದ UIDAI 

ಸರ್ಕಾರ ಉಳಿಸುವ ಧಾವಂತದಲ್ಲಿ ನೆರೆ ಸಂತ್ರಸ್ತರನ್ನು ಮರೆತ ಸರ್ಕಾರ

ಸರ್ಕಾರ ಉಳಿಸುವ ಧಾವಂತದಲ್ಲಿ ನೆರೆ ಸಂತ್ರಸ್ತರನ್ನು ಮರೆತ ಸರ್ಕಾರ

ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ಗೆ ಮಾತ್ರ ಪ್ರಧಾನಿಯೇ?

ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ಗೆ ಮಾತ್ರ ಪ್ರಧಾನಿಯೇ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist