Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಜಾಮಿಯಾದಲ್ಲಿ ದಾಂದಲೆ ಸೃಷ್ಟಿಸಿದ ಪೊಲೀಸರು JNUನಲ್ಲಿ ಗೂಂಡಾಗಳಿಗೆ ಶರಣಾದರೇ?

ಜಾಮಿಯಾ,ಅಲಿಗಢ ವಿವಿಯಲ್ಲಿ ದಾಂದಲೆ ಸೃಷ್ಟಿಸಿದ ಪೊಲೀಸರು,ಜೆಎನ್ ಯುನಲ್ಲಿ  ‘ಗೂಂಡಾ‘ಗಳಿಗೆ ಶರಣಾದರೇ?     
ಜಾಮಿಯಾದಲ್ಲಿ ದಾಂದಲೆ ಸೃಷ್ಟಿಸಿದ ಪೊಲೀಸರು JNUನಲ್ಲಿ ಗೂಂಡಾಗಳಿಗೆ ಶರಣಾದರೇ?

January 6, 2020
Share on FacebookShare on Twitter

ದೇಶಾದ್ಯಂತ ಪೌರತ್ವ ತಿದ್ದುಪಡಿ‌ ಕಾಯ್ದೆ(ಸಿಎಎ) ವಿರುದ್ಧ ಎದ್ದಿರುವ ಜನಾಂದೋಲದಿಂದ ಕಂಗೆಟ್ಟಿರುವ ಬಿಜೆಪಿಯ ಮೋದಿ-ಶಾ ಜೋಡಿಗೆ ಫೀ ಹೆಚ್ಚಳ ವಿರೋಧಿಸಿ ಹೋರಾಟ ನಡೆಸುತ್ತಿದ್ದ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ವಿಶೇಷವಾಗಿ ಯುವತಿಯರ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಹಾಗೂ ಅನಂತರ ಎದ್ದಿರುವ ಕಿಚ್ಚು ಗಂಡಾಂತರ ತಂದೊಡ್ಡುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಜೆ ಎನ್ ಯು ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕ ಕನ್ಹಯ್ಯಾ ಕುಮಾರ್ ಹಾಗೂ ಅವರ ಬಳಗವನ್ನು ದೇಶದ್ರೋಹಿಗಳು ಎಂದು‌ ಜರಿದು ಅದನ್ನು ಸಾಬೀತುಪಡಿಸಲು ವಿಫಲವಾಗಿರುವ ಬಿಜೆಪಿ‌ ನಾಯಕತ್ವವು ಮತ್ತೊಮ್ಮೆ ಪ್ರತಿಷ್ಠಿತ ಜೆ ಎನ್ ಯು ವಿಶ್ವವಿದ್ಯಾಲಯದ ವಿದ್ಯಾರ್ಥಿ ಗಳನ್ನು ಗಾಯಗೊಳಿಸುವ ಮೂಲಕ ಮತ್ತೊಂದು ಸುತ್ತಿನ ಮಂಗಳಾರತಿಗೆ ಅಣಿಯಾದಂತಿದೆ.

ಈ ಬಾರಿ ಜೆ ಎನ್ ಯುನ ನಿರ್ದಿಷ್ಟ ವಸತಿಗೃಹಗಳು ವಿಶೇಷವಾಗಿ ಯುವತಿಯರ ಮೇಲಿನ‌ ದಾಳಿಯ ರಕ್ತಸಿಕ್ತ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿರುವುದನ್ನು ಗಮನಿಸಿದರೆ ಬಿಜೆಪಿಯ‌‌ ಬೇರುಗಳಿಗೆ ಕೊಡಲಿ ಏಟು ಬೀಳುವುದು ದಿಟವೆನಿಸುತ್ತಿದೆ.

No more lies. Please understand what’s happening. pic.twitter.com/zjlAycIGyb

— Andre Borges (@borges) January 5, 2020


“ಬೇಟಿ ಬಚಾವೊ, ಬೇಟಿ ಪಡಾವೋ” ಎಂದು ಪ್ರಚಾರ ಗಿಟ್ಟಿಸಿದ ಮೋದಿಯವರು ನೆಲೆಸಿರುವ ಅಣತಿ ದೂರದಲ್ಲೇ ಇರುವ ಜೆ ಎನ್ ಯು ವಿನಲ್ಲಿ ಯುವತಿಯರ ಮೇಲೆ ಅವರದೇ ಪಕ್ಷದ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನ (ಎಬಿವಿಪಿ) ಗುಂಡಾಗಳು ನಡೆಸಿರುವ ಅಮಾನುಷ ದಾಳಿ ಹಾಗೂ ಮೋದಿ ಆಪ್ತ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಉಸ್ತುವಾರಿಯಲ್ಲಿ ಬರುವ ದೆಹಲಿ ಪೊಲೀಸರು ಈ ಘಟನೆಗೆ ಮೂಖಸಾಕ್ಷಿಯಾಗಿರುವುದು ಹೋರಾಟ ತೀವ್ರ ಸ್ವರೂಪ ಪಡೆಯುವಂತೆ ಮಾಡಿದೆ.

Dear @narendramodi your ABVP goons are attacking elected female office bearers of the students' union in JNU. Does your party have any shame left? https://t.co/nzrcJujasH

— Shehla Rashid (@Shehla_Rashid) January 5, 2020


ಜೆ ಎನ್ ಯು ಮೇಲಿನ ದಾಳಿ ಖಂಡಿಸಿ ಅಂತಾರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆಗಳು ಹಾಗೂ ಭಾರತೀಯ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಭಾನುವಾರ ರಾತ್ರಿಯೇ ಬೀದಿಗಳಿದಿದ್ದಾರೆ. ನೊಬೆಲ್ ಪುರಷ್ಕೃತ, ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಷ್ ಸತ್ಯಾರ್ಥಿ, ಉದ್ಯಮಿ‌ಗಳಾದ ಆನಂದ್ ಮಹೇಂದ್ರ, ಕಿರಣ್ ಮುಜುಂದಾರ್ ಷಾ, ಕೇಂದ್ರ ಹಾಗೂ ರಾಜ್ಯಗಳಲ್ಲಿ ಪ್ರತಿಷ್ಠಿತ ಹುದ್ದೆಗಳಲ್ಲಿರುವ ಜೆ ಎನ್ ಯು ಹಳೆಯ ವಿದ್ಯಾರ್ಥಿಗಳು, ಬಾಲಿವುಡ್ ನಟ-ನಟಿಯರು ವಿದ್ಯಾರ್ಥಿಗಳ ಮೇಲಿನ ಅಮಾನುಷ ದಾಳಿಯನ್ನು ಖಂಡಿಸಿದ್ದಾರೆ.

Attacks on JNUstudents by masked goons is utterly shameful.If our daughters aren't safe in girls hostel of universities like JNU&Jamia there is nothing more disgraceful.Whoever these attackers are they can’t be students.All students’ orgs must oppose violence #JNUAttack

— Kailash Satyarthi (@k_satyarthi) January 5, 2020


ವಿಶೇಷವಾಗಿ ನೇಪಾಳದ ಮಾಜಿ ಪ್ರಧಾನಿ ಹಾಗೂ ಜೆ ಎನ್ ಯು ಹಳೆಯ ವಿದ್ಯಾರ್ಥಿ ಬಾಬುರಾವ್ ಭಟ್ಟಾರೈ ಅವರು “ಜೆ ಎನ್ ಯು ನಂಥ ಪವಿತ್ರ ಕಲಿಕಾ ಸ್ಥಳವನ್ನು ಉಳಿಸಿ. ಈ ಹೋರಾಟಕ್ಕೆ ನನ್ನ ಬೆಂಬಲವಿದೆ” ಎಂದ ಟ್ವೀಟ್ ಮಾಡುವ ಮೂಲಕ ಜಾಗತಿಕವಾಗಿ ಮೋದಿ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುವಂಥ ಸಂದೇಶ ರವಾನಿಸಿದ್ದಾರೆ.

My heart-felt solidarity with my alma mater JNU! Please save this holy temple of learning! https://t.co/Uedm0Rbh2t

— Baburam Bhattarai (@brb1954) January 5, 2020


ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಜೈಶಂಕರ್ ಅವರು ತಾವು ಕಲಿತ ವಿಶ್ವವಿದ್ಯಾಲಯದಲ್ಲಿನ ಘೋರ ಬೆಳವಣಿಗೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್, ಎಡಪಕ್ಷಗಳು ಗಾಯಗೊಂಡ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಭೇಟಿಯಾಗುವ ಮೂಲಕ ಬಿಜೆಪಿ ವಿರುದ್ಧದ ದಾಳಿಯನ್ನು ಮೊನಚುಗೊಳಿಸಿವೆ. ಘಟನೆಯನ್ನು ಬಿಜೆಪಿ, ಗೃಹ ಸಚಿವ ಅಮಿತ್ ಷಾ, ಮಾನವ ಸಂಪನ್ಮೂಲ‌ ಸಚಿವ ಪೋಕ್ರಿಯಾಲ್ ಖಂಡಿಸಿದ್ದಾರೆ. ಆದರೆ, ಅವರ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಸೇರಿದಂತೆ ಹಲವು ನಾಯಕರು ಅಪಹಾಸ್ಯ ಮಾಡಿರುವುದು ಕೇಸರಿ ಪಾಳೆಯದ ದ್ವಂದ್ವ ನೀತಿಗೆ ಕನ್ನಡಿ‌ ಹಿಡಿದಿದೆ.

Your letter looks like a justification of what happened in the evening. Great job. #jnu https://t.co/RIqgI5asJy

— vijaita singh (@vijaita) January 5, 2020


ಬಿಜೆಪಿ ಹಾಗೂ ಅದರ ನಾಯಕರ ಖಂಡನೆಯ‌ನ್ನು ಸಾರಾಸಗಟವಾಗಿ ತಿರಸ್ಕರಿಸಿರುವ ಜೆ ಎನ್ ಯು ವಿದ್ಯಾರ್ಥಿ ಸಂಘಟನೆ ಕೇಸರಿ ಪಾಳೆಯದ ಉಸ್ತುವಾರಿಯಲ್ಲಿಯೇ ದಾಳಿ ನಡೆದಿದೆ ಎಂದು‌ ಆರೋಪಿಸುವ ಮೂಲಕ ಪ್ರಬಲ ಹೋರಾಟದ ಮುನ್ಸೂಚನೆ ನೀಡಿದೆ. ವಿಶ್ವವಿದ್ಯಾಲಯದ ಕುಲಪತಿ ಜಗದೀಶ್ ಕುಮಾರ್ ಅವರು ಘಟನೆಗೆ ವಿದ್ಯಾರ್ಥಿಗಳೇ ಕಾರಣ ಎನ್ನುವ ಸಂದೇಶ ದಾಟಿಸುವ ಮೂಲಕ ಆಳುವವರ ಪರ ನಿಲುವು ಕೈಗೊಂಡಿದ್ದಾರೆ. ಆದರೆ, ಬಿಜೆಪಿಯ ಯಾರೊಬ್ಬರೂ ಗಾಯಾಳುಗಳನ್ನು ಭೇಟಿ ಮಾಡುವ ಸೌಜನ್ಯ ತೋರಿಲ್ಲ. ಬಿಜೆಪಿ ಬೆಂಬಲಿತ ಮಾಧ್ಯಮಗಳು ಘಟನೆಯನ್ನು ವಿದ್ಯಾರ್ಥಿ ಗುಂಪುಗಳ ಕಲಹ ಎಂದು ಬಿಂಬಿಸಲು ಯತ್ನಿಸಿದ್ದು, ಎಬಿವಿಪಿಯ ಕಾರ್ಯಕರ್ತರು ರಾಜಾರೋಷವಾಗಿ ರಾಡುಗಳು, ದೊಣ್ಣೆ ಹಿಡಿದು ವಿಶ್ವವಿದ್ಯಾಲಯದ ಗಾಜು, ಚೇರುಗಳನ್ನು ಪುಡಿಪುಡಿ ಮಾಡಿರುವುದನ್ನು ಉದ್ದೇಶಪೂರ್ವಕವಾಗಿ ಮರೆಮಾಚಲು ಯತ್ನಿಸಿ ಬೆತ್ತಲಾಗಿವೆ.

JNU students and teachers attacked by masked men. Brutality at its new high @amithsha1 @PMOIndia @BJP4Delhi @ArvindKejriwal @Congress_Kar @INCIndia @RahulGandhi @hfwminister_kar @DVSadanandGowda @siddaramaiah pic.twitter.com/rKCfC0Y2SU

— Pratidhvani (@PratidhvaniNews) January 5, 2020


ಜೆ ಎನ್ ಯು ಸುತ್ತಮುತ್ತ ವಿದ್ಯುದ್ದೀಪಗಳನ್ನು ಆರಿಸಲಾಗಿದ್ದು, ಪೊಲೀಸರೇ ದಾಳಿಕೋರರಿಗೆ ಬೆಂಬಲವಾಗಿ ನಿಂತಿರುವ ಹಲವು ವಿಡಿಯೋಗಳು ವೈರಲ್ ಆಗಿವೆ. ಭಾನುವಾರ ಸಂಜೆಯಿಂದಲೇ ಮುಸುಕು ಕವಿಯುತ್ತಿದ್ದಂತೆ ಜೆ ಎನ್ ಯು ನಲ್ಲಿ ಮುಸುಕುದಾರಿ ಗುಂಡಾಗಳ ದುರ್ವರ್ತನೆ ಆರಂಭವಾಗಿದೆ. ದುರುಳರ ದಾಳಿಯಿಂದ ತಪ್ಪಿಸಿಕೊಳ್ಳಲು ಪೊಲೀಸರು, ಸ್ನೇಹಿತರು, ಹಿತೈಷಿಗಳು, ಪೋಷಕರಿಗೆ ಜೆ ಎನ್ ಯು ವಿದ್ಯಾರ್ಥಿಗಳು ಕರೆ ಮಾಡಿ, ಸಂದೇಶ ಕಳುಹಿಸಿ ನೆರವಿಗೆ ಅಂಗಲಾಚಿರುವ ಘಟನೆಗಳು ಕರುಣಾಜನಕವಾಗಿವೆ. ಹೆಣ್ಣು ಮಕ್ಕಳ ಮೇಲೆ ದೈಹಿಕ ದಾಳಿ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ವರದಿ ಮಾಡಲು ಸ್ಥಳಕ್ಕೆ ತೆರಳಿದ ಮಾಧ್ಯಮಗಳನ್ನು ದೇಶದ್ರೋಹಿಗಳು ಎಂದು ನಿಂದಿಸಿ, ಬೆದರಿಕೆಯ ಒಡ್ಡಿದ ಘಟನೆಗಳೂ ವರದಿಯಾಗಿವೆ. ನಿರ್ದಿಷ್ಟ ವಿಡಿಯೋಗಳಲ್ಲಿ ಮುಸುಕುದಾರಿ ದಾಳಿಕೋರರು ಆಡಿರುವ ಮಾತುಗಳು ನಿಸ್ಸಂಶಯವಾಗಿ ಅದು ಬಿಜೆಪಿ ಪ್ರೇರಿತ ಎಂದೆನಿಸದೆ ಇರದು. ಘಟನೆಗೂ ಮುನ್ನ‌ ನಡೆದಿದೆ ಎನ್ನಲಾದ ವಾಟ್ಸಾಪ್ ಚರ್ಚೆಯ ತುಣುಕುಗಳು ವೈರಲ್ ಆಗಿದ್ದು, “ಯುನೈಟ್ ಎಗೆನೆಸ್ಟ್ ಲೆಫ್ಟ್” ಗುಂಪಿನಲ್ಲಿನ ಸಂಭಾಷಣೆಯು ಪೂರ್ವನಿಯೋಜಿತ ಕೃತ್ಯ ಹಾಗೂ ಬಿಜೆಪಿಯ ಪಿತೂರಿಯಿಂದಲೇ ನಡೆದಿರುವುದು ಎಂಬುದಕ್ಕೆ ಸಾಕ್ಷ್ಯ ಒದಗಿಸುತ್ತದೆ.

Ma’am, why don’t you go there and show your solidarity with those young girls who must be terrified. They need your support today #JNUProtests #JNUattack https://t.co/a4LNUQ1rvE

— Seema Goswami (@seemagoswami) January 5, 2020


ಸಂಭಾಷಣೆಯಲ್ಲಿ ಪಾಲ್ಗೊಂಡವರ ಹೆಸರು, ಮೊಬೈಲ್ ಸಂಖ್ಯೆ ಎಲ್ಲವೂ ಇದೆ. ಪೊಲೀಸರು ದಾಳಿಕೋರರ ಪರವಾದ ಮೃದು ಧೋರಣೆ ತಳೆದಿರುವುದು ಹಾಗೂ ವಿಡಿಯೋಗಳಲ್ಲಿ ಬಿಜೆಪಿಯ ಸೈದ್ಧಾಂತಿಕ ವಿರೋಧಿಗಳಾದ ಎಡಪಕ್ಷಗಳ ಬೆಂಬಲಿಗರನ್ನು ನಿಂಧಿಸುವುದು ಸ್ಪಷ್ಟವಾಗಿದೆ. ಇದರಾಚೆಗೆ ಯೋಚಿಸುವುದಾದರೂ ತಮ್ಮದೇ ವಿಚಾರ ಹೊಂದಿರುವ ಸ್ನೇಹಿತರ ಮೇಲೆ ಸಹಪಾಠಿಗಳೇಕೆ ದಾಳಿ ಮಾಡುತ್ತಾರೆ? ಎಂಬ ಸರಳ ಪ್ರಶ್ನೆಗೆ ಬಿಜೆಪಿ ಪಾಳೆಯದಲ್ಲಿ ಉತ್ತರವಿಲ್ಲ!

ಸಿಎಎ ವಿರುದ್ಧ ಹೋರಾಟಕ್ಕೆ ಇಳಿದಿದ್ದ ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ವಿವಿಯ ಮೇಲೆ ಕ್ರೌರ್ಯ ಮೆರೆದು ಅದನ್ನು ಸಮರ್ಥಿಸಲಾಗದೆ ದೇಶದ ಮುಂದೆ ಬಯಲಾಗಿದ್ದ ದೆಹಲಿ ಪೊಲೀಸರು ಒಂದೇ ತಿಂಗಳ ಅಂತರದಲ್ಲಿ ಮತ್ತೊಂದು ಹೇಯ ಕೃತ್ಯದ ವಿರುದ್ಧ ಲಾಠಿ ಬೀಸದೇ ಮೌನಕ್ಕೆ ಶರಣಾಗುವ ಮೂಲಕ ಪಕ್ಷಪಾತ ಮೆರೆದಿದ್ದಾರೆ. ವಿಶ್ವವಿದ್ಯಾಲಯದ ಹಾಸ್ಟೆಲ್, ಪರೀಕ್ಷೆ ಫೀ ಹೆಚ್ಚಳ ಕ್ರಮದ ವಿರುದ್ಧ ಹಲವು ದಿನಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಜೆ ಎನ್ ಯು ವಿದ್ಯಾರ್ಥಿಗಳ ಮೇಲೆ ಬಿಜೆಪಿಯ ಮಾತೃಸಂಸ್ಥೆ ಆರ್ ಎಸ್ ಎಸ್ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಏಕೆ ದಾಳಿ‌ ನಡೆಸಿದೆ?

JNU is seeing a law and order situation created deliberately. What's happening in national capital is nothing but stage managed goondagiri. Who is responsible for this mockery of democracy ?

Posted by Pratidhvani.com on Sunday, January 5, 2020

ಸಿಎಎ ಹೋರಾಟವು ಬಿಜೆಪಿ‌ ನಾಯಕತ್ವಕ್ಕೆ‌ ಒಡ್ಡಿರುವ ಬ್ರಹ್ಮಾಂಡ ಸವಾಲಿನಿಂದ ದೇಶದ ಜನತೆಯ ದೃಷ್ಟಿಕೋನ ಕದಲಿಸಲು ಈ ಕೃತ್ಯ ಎಸಗಲಾಗಿದೆಯೇ? ವಿದ್ಯಾರ್ಥಿಗಳನ್ನು ಕೆಣಕುವ ದುಸ್ಸಾಹಸಕ್ಕೆ ಕೈಹಾಕುವ ಮೂಲಕ ಮೋದಿ ಸರ್ಕಾರ ಮಾಡಲು ಹೊರಟಿರುವುದು‌ ಏನನ್ನು? ಜಾಮಿಯಾ, ಅಲಿಗಢ ಬಳಿಕ ಜೆ ಎನ್ ಯು ಗುರಿಯಾಗಿಸಿರುವುದರ ಹಿಂದೆ ಷಡ್ಯಂತ್ರ ಇರಬಹುದೇ? ದೇಶದ ನಾನಾ ಕಡೆ ನಡೆದಿರುವ ಹೋರಾಟಗಳನ್ನು ಸಮರ್ಥವಾಗಿ ನಿಭಾಯಿಸಲು ವಿಫಲವಾಗಿರುವ ಅಮಿತ್ ಷಾ ನೈತಿಕ ಜವಾಬ್ದಾರಿ ಒತ್ತು ರಾಜೀನಾಮೆ ನೀಡಬೇಕಲ್ಲವೇ? ನಿಷ್ಪಕ್ಷಪಾತವಾಗಿ‌ ಕೆಲಸ ನಿರ್ವಹಿಸಲಾರದ ಸ್ಥಿತಿಯನ್ನು ದೆಹಲಿ ಪೊಲೀಸರಿಗೆ ತಂದೊಡ್ಡಲಾಗಿದೆಯೇ ಎಂಬ ಹತ್ತಾರು ಪ್ರಶ್ನೆಗಳು ಎದ್ದುನಿಂತಿವೆ.

ಸಿಎಎ ವಿರುದ್ಧದ ಹೋರಾಟ ಹಿಮ್ಮೆಟ್ಟಿಸಲು ಪರದಾಡುತ್ತಿರುವ ಬಿಜೆಪಿ ನಾಯಕತ್ವಕ್ಕೆ ಜೆ ಎನ್ ಯು ವಿದ್ಯಾರ್ಥಿಗಳ ಮೇಲಿನ ದಾಳಿಯು ಗಂಭೀರ ಸವಾಲು ತಂದೊಡ್ಡುವುದು ಸ್ಪಷ್ಟವಾಗಿದೆ. ಎರಡು ಪ್ರಮುಖ ಹೋರಾಟಗಳು ಒಂದಾದರೆ ಅದನ್ನು‌ ಹತ್ತಿಕ್ಕುವುದು ಸುಲಭ ಸಾಧ್ಯವಲ್ಲ. ಆರ್ಥಿಕ ಸಮಸ್ಯೆಯಿಂದ ತೀವ್ರ ಟೀಕೆಗೆ ಗುರಿಯಾಗಿರುವ ಮೋದಿ‌ ಸರ್ಕಾರವು ದೇಶದ ಯುವ ಸಮೂಹವನ್ನು ಕೆಣಕುವ ಮೂಲಕ ನಿರ್ಣಾಯಕ ಹೋರಾಟಕ್ಕೆ ತನ್ನನ್ನು ಒಡ್ಡಿಕೊಂಡಿದೆ. ಸ್ವಾತಂತ್ರ್ಯ ಚಳವಳಿಯ ಬಳಿಕ ತುರ್ತುಪರಿಸ್ಥಿತಿಯನ್ನು ಗೆದ್ದ ಭಾರತವು 21ನೇ ಶತಮಾನದ ಮಹತ್ವದ ಹೋರಾಟಕ್ಕೆ ಸಾಕ್ಷಿಯಾಗಿದೆ.

4 Q’s for #BJP:
1. How did masked men enter #JNU?
2. Why Police remains a mute spectator & delay in response time?
3. Why HM & PM r silent whenever students r attacked?
4. How come only those campuses come under attack frm where voices of dissent against Govt come? #JNUViolence pic.twitter.com/3eyxh4s7t0

— Jaiveer Shergill (@JaiveerShergill) January 5, 2020


ಹೆಚ್ಚು ಓದಿದ ಸ್ಟೋರಿಗಳು

ಬಿರುಗಾಳಿಯಾಗಿರುವ ರಾಹುಲ್ ಗಾಂಧಿ ಸುನಾಮಿ ಆಗುಬಲ್ಲರೆ?

ಯಾರಾದರೂ ಒಳಗೆ ಬಂದರೆ ಅಟ್ಟಾಡಿಸಿ ಹೊಡಿರಿ, ಮಿಕ್ಕಿದ್ದು ನಾನು ನೋಡಿಕೊಳ್ಳುತ್ತೇನೆ’ : ಸಚಿವ ಮುನಿರತ್ನ ವಿವಾದಾತ್ಮಕ ಹೇಳಿಕೆ

ನಂದಿನಿ ಮೊಸರು ಪ್ಯಾಕೆಟ್‌ ಮೇಲೆ ‘ದಹಿ’ ಮುದ್ರಣ ಆದೇಶ ಹಿಂಪಡೆದ FSSAI.. ಕನ್ನಡಿಗರು ಟೀಕೆ ಬೆನ್ನಲ್ಲೇ ನಿರ್ಧಾರ..!

ವಿಶ್ವಾಸಾರ್ಹತೆ ಕಳೆದುಕೊಂಡಿರುವ ವಿರೋಧ ಪಕ್ಷಗಳನ್ನು ಹಿಂದಿಕ್ಕಿ ವಿದ್ಯಾರ್ಥಿಗಳು ಹೋರಾಟದ ಮುಂಚೂಣಿಯಲ್ಲಿರುವುದು ಅತ್ಯಂತ ಆಶಾದಾಯಕ ಬೆಳವಣಿಗೆ. ಕಳೆದೊಂದು ತಿಂಗಳಿಂದ ನಕಾರಾತ್ಮಕ ಸುದ್ದಿಗಳಿಂದ ನಿದ್ರೆಯಿಲ್ಲದ ರಾತ್ರಿ ಕಳೆಯುತ್ತಿರುವ ಮೋದಿ-ಶಾ ಜೋಡಿಯ ಬೆಂಬಲಿಗ ಪಡೆ ಜೆ ಎನ್ ಯು ಜೇನುಗೂಡಿಗೆ‌ ಎಸೆದಿರುವ ಕಲ್ಲು ಅವರನ್ನೇ ಪುಡಿಗಟ್ಟುವ ಮಾತುಗಳು ಕೇಳಿಬರುತ್ತಿವೆ. ಏಕೆಂದರೆ ಜಗತ್ತಿನಲ್ಲಿ ವಿದ್ಯಾರ್ಥಿ ಹೋರಾಟಗಳು ವಿಫಲವಾದ ಐತಿಹ್ಯ ತೀರ ಕಡಿಮೆ.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ʻಗುರುದೇವ್‌ ಹೊಯ್ಸಳʼ ಸಕ್ಸಸ್‌.. ಡಾಲಿಗೆ ಕಾರ್‌ ಗಿಫ್ಟ್‌..!
ಸಿನಿಮಾ

ʻಗುರುದೇವ್‌ ಹೊಯ್ಸಳʼ ಸಕ್ಸಸ್‌.. ಡಾಲಿಗೆ ಕಾರ್‌ ಗಿಫ್ಟ್‌..!

by ಪ್ರತಿಧ್ವನಿ
March 31, 2023
ಏ.9ಕ್ಕೆ ಕೋಲಾರದಲ್ಲಿ ರಾಹುಲ್ ಗಾಂಧಿ ರ‍್ಯಾಲಿ ; ಮೋದಿ ಉಪನಾಮ ಹೇಳಿಕೆಯ ಸ್ಥಳದಿಂದಲೇ ಅಬ್ಬರಿಸೋಕೆ ಕಾಂಗ್ರೆಸ್ ಸಿದ್ಧತೆ
Top Story

ಏ.9ಕ್ಕೆ ಕೋಲಾರದಲ್ಲಿ ರಾಹುಲ್ ಗಾಂಧಿ ರ‍್ಯಾಲಿ ; ಮೋದಿ ಉಪನಾಮ ಹೇಳಿಕೆಯ ಸ್ಥಳದಿಂದಲೇ ಅಬ್ಬರಿಸೋಕೆ ಕಾಂಗ್ರೆಸ್ ಸಿದ್ಧತೆ

by ಪ್ರತಿಧ್ವನಿ
April 1, 2023
ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ..!
Top Story

ಯಡಿಯೂರಪ್ಪ ನಿವಾಸದ ಮೇಲೆ ಕಲ್ಲು ತೂರಾಟ..!

by ಪ್ರತಿಧ್ವನಿ
March 27, 2023
ಮಾರ್ಚ್‌ 30ಕ್ಕೆ ʻಗುರುದೇವ್‌ ಹೊಯ್ಸಳʼ ಅದ್ಧೂರಿ ಬಿಡುಗಡೆ
ಸಿನಿಮಾ

ಮಾರ್ಚ್‌ 30ಕ್ಕೆ ʻಗುರುದೇವ್‌ ಹೊಯ್ಸಳʼ ಅದ್ಧೂರಿ ಬಿಡುಗಡೆ

by Prathidhvani
March 27, 2023
ಬಾಣಂತಿ ನಿಗೂಢ ಸಾವು ಪ್ರಕರಣ ಭೇದಿಸಿದ ಖಾಕಿ : ಹೆತ್ತ ತಾಯಿ, ಸಹೋದರ ಅರೆಸ್ಟ್​
Top Story

ಬಾಣಂತಿ ನಿಗೂಢ ಸಾವು ಪ್ರಕರಣ ಭೇದಿಸಿದ ಖಾಕಿ : ಹೆತ್ತ ತಾಯಿ, ಸಹೋದರ ಅರೆಸ್ಟ್​

by ಮಂಜುನಾಥ ಬಿ
March 27, 2023
Next Post
CAA ಹಾಗೂ NRCಯ ಬೇರುಗಳನ್ನು ವಿವರಿಸಿದ ರಾಜಕೀಯ ವಿಶ್ಲೇಷಕ ಡಿ ಉಮಾಪತಿ

CAA ಹಾಗೂ NRCಯ ಬೇರುಗಳನ್ನು ವಿವರಿಸಿದ ರಾಜಕೀಯ ವಿಶ್ಲೇಷಕ ಡಿ ಉಮಾಪತಿ

‘ಯುವಜನರನ್ನು ತಡೆಯುವುದು ಸರ್ಕಾರದ ಅಂತ್ಯದ ಆರಂಭ’ - ಭವ್ಯ ನರಸಿಂಹಮೂರ್ತಿ  

‘ಯುವಜನರನ್ನು ತಡೆಯುವುದು ಸರ್ಕಾರದ ಅಂತ್ಯದ ಆರಂಭ’ - ಭವ್ಯ ನರಸಿಂಹಮೂರ್ತಿ  

‘ಸಿಎಎಯನ್ನು ಆರ್ಥಿಕತೆಯ ಆಧಾರದ ಮೇಲೆ ಅಳೆಯುವುದು ತಪ್ಪು’- ಶ್ರೀಧರ್‌ ಪ್ರಭು  

‘ಸಿಎಎಯನ್ನು ಆರ್ಥಿಕತೆಯ ಆಧಾರದ ಮೇಲೆ ಅಳೆಯುವುದು ತಪ್ಪು’- ಶ್ರೀಧರ್‌ ಪ್ರಭು  

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist