Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಜನಸಾಮಾನ್ಯರಿಗೆ ಒಂದು ಕೈಲಿ ಕೊಟ್ಟು ಮತ್ತೊಂದು ಕೈಲಿ ಕಿತ್ತುಕೊಂಡ ನಿರ್ಮಲಾ

ಜನಸಾಮಾನ್ಯರಿಗೆ ಒಂದು ಕೈಲಿ ಕೊಟ್ಟು ಮತ್ತೊಂದು ಕೈಲಿ ಕಿತ್ತುಕೊಂಡ ನಿರ್ಮಲಾ
ಜನಸಾಮಾನ್ಯರಿಗೆ ಒಂದು ಕೈಲಿ ಕೊಟ್ಟು ಮತ್ತೊಂದು ಕೈಲಿ ಕಿತ್ತುಕೊಂಡ ನಿರ್ಮಲಾ

February 1, 2020
Share on FacebookShare on Twitter

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ತಮ್ಮ ಎರಡನೇ ಬಜೆಟ್ ಮಂಡಿಸಿದ್ದು 5 ರಿಂದ 7.5 ಲಕ್ಷವರೆಗೂ ಆದಾಯ ಹೊಂದಿರುವವರ ತೆರಿಗೆಯನ್ನು ಶೇ.20ರಿಂದ ಶೇ.10ಕ್ಕೆ ಇಳಿಸಿದ್ದಾರೆ. ಅದೇ ಸಂದರ್ಭದಲ್ಲಿ ಹಲವಾರು ಪ್ರಮುಖ ಗೃಹೋಪಯೋಗಿ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದಾರೆ. ಇದರೊಂದಿಗೆ ಒಂದು ಕೈಯಲ್ಲಿ ನೀಡಿ ಮತ್ತೊಂದು ಕೈಯಲ್ಲಿ ಕಿತ್ತುಕೊಂಡಿದ್ದಾರೆ. ಗೃಹೋಪಯೋಗಿ ಉತ್ಪನ್ನಗಳು, ವಿದ್ಯುತ್ ಉಪಕರಣಗಳು, ಆಟಿಕೆಗಳು ಸೇರಿದಂತೆ ಪ್ರಮುಖ 22 ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ.2.5ರಿಂದ ಶೇ.70ರವರೆಗೂ ಹೆಚ್ಚಿಸಿದ್ದಾರೆ. ಇದರಿಂದ ಮಧ್ಯಮ ವರ್ಗಕ್ಕೆ ಒಂದು ಕಡೆ ಆದಾಯ ತೆರಿಗೆ ವಿನಾಯಿತಿ ನೀಡಿ ಮತ್ತೊಂದು ರೂಪದಲ್ಲಿ ಅವರ ಕಿಸಿಗೆ ಕತ್ತರಿ ಹಾಕಿದ್ದಾರೆ. ಇದರಿಂದ ಆರ್ಥಿಕತೆ ಚೇತರಿಕೆ ಕಾಣಲು ಮತ್ತಷ್ಟು ಹೆಣಗಾಡುವಂತಾಗಲಿದೆ.

ಹೆಚ್ಚು ಓದಿದ ಸ್ಟೋರಿಗಳು

ಸುಪ್ರೀಂ ಕೋರ್ಟ್ ಗಮನ ಸೆಳೆಯಲು ಬೀದಿಗಿಳಿದು ಹೋರಾಟ ಅನಿವಾರ್ಯ: ಬಸವರಾಜ ಬೊಮ್ಮಾಯಿ

ತಮಿಳುನಾಡಿನಲ್ಲಿ ಬಿಜೆಪಿ ಜತೆಗಿನ ಬಾಂಧವ್ಯವನ್ನು ಕಳೆದುಕೊಳ್ಳುತ್ತೇನೆ : ಉದಯನಿಧಿ ಸ್ಟಾಲಿನ್

ಕಾವೇರಿ ನೀರಿ ನಿಯಂತ್ರಣ ಸಮಿತಿ ಸಭೆ: ಕರ್ನಾಟಕದ ಪರವಾಗಿ ಅಧಿಕಾರಿಗಳು ವಾದ ಮಂಡನೆ 

ಕೃಷಿ ಕ್ಷೇತ್ರ ವಿಚಾರದಲ್ಲೂ ಇದೇ ನೀತಿಯನ್ನು ಅನುಸರಿಸಿದ್ದಾರೆ. ಒಂದು ಕಡೆ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಸಾಲ ನೀಡುವುದಾಗಿ ಹೇಳಿದ್ದಾರೆ. ಮತ್ತೊಂದು ಕಡೆ ರಸಗೊಬ್ಬರ, ರಾಸಾಯನಿಕಗಳು, ಪೆಟ್ರೋಲಿಯಂ ಉತ್ಪನ್ನಗಳಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸಿದ್ದಾರೆ. ಕೃಷಿಕರ ಆದಾಯವನ್ನು ದುಪ್ಪಟ್ಟುಗೊಳಿಸುವುದಾಗಿ ಎನ್‍ಡಿಎ-1ರಿಂದಲೂ ಹೇಳಲಾಗುತ್ತಿದೆ. ಆದರೂ 2020-21ರ ಬಜೆಟ್‍ನಲ್ಲಿ ಈ ಕುರಿತು ಪ್ರಸ್ತಾಪ ಇಲ್ಲ.

ಈ ಯೋಜನೆಯನ್ನು 2022ಕ್ಕೆ ಮುಂದೂಡಲಾಗಿದೆ. ಹೀಗಾಗಿ ಕೃಷಿ ಕ್ಷೇತ್ರ ಚೇತರಿಕೆ ಕಾಣಲು ಇನ್ನೆಷ್ಟು ವರ್ಷಗಳು ಕಾಯಬೇಕೋ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ರೈತರ ಮಟ್ಟಿಗೆ ಆಶಾದಾಯಕ ಬೆಳವಣಿಗೆ ಎಂದರೆ ‘ಕಿಸಾನ್ ರೈಲ್’ ಪರಿಚಯಿಸುವ ಪ್ರಸ್ತಾಪ ಮಾಡಿರುವುದು. ಇದರಿಂದ ಬೇಗ ಕೊಳೆಯುವ ಕೃಷಿ ಉತ್ಪನ್ನಗಳನ್ನು ಶೀಘ್ರದಲ್ಲಿ ಇತರೆಡೆಗಳಿಗೆ ಸಾಗಣೆ ಮಾಡಲು ಸಹಕಾರಿಯಾಗಲಿದೆ. ಈ ಕ್ರಮ ಕೃಷಿ ವಲಯದಲ್ಲಿ ತುಸು ಆಶಾವಾದವನ್ನು ಮೂಡಿಸಿದೆ.

ಈ ಬಜೆಟ್‍ನಲ್ಲಿ ಅಂದಾಜು 22.46 ಲಕ್ಷ ಕೋಟಿ ಆದಾಯ ನಿರೀಕ್ಷಿಸಿದ್ದು 30.4 ಲಕ್ಷ ಕೋಟಿ ವೆಚ್ಚ ತೋರಿಸಲಾಗಿದೆ. ಇದರೊಂದಿಗೆ ವಿತ್ತೀಯ ಕೊರತೆ 7.96 ಲಕ್ಷ ಕೋಟಿಗೆ ಏರಿದಂತಾಗಿದೆ. ಕಳೆದ ಜುಲೈನಲ್ಲಿ ಸಭೆಯೊಂದರಲ್ಲಿ ಮಾತನಾಡಿದ್ದ ಹಣಕಾಸು ಸಚಿವರು ವಿತ್ತೀಯ ಕೊರತೆಯನ್ನು ಒಟ್ಟಾರೆ ಜಿಡಿಪಿಯ ಶೇ.3.3ಕ್ಕೆ ಇಳಿಸಲಾಗುವುದು ಎಂದು ಹೇಳಿದ್ದರು. ಆದರೆ ಬಜೆಟ್‍ನಲ್ಲಿ ಈ ಪ್ರಮಾಣವನ್ನು ಶೇ.3.8ಕ್ಕೆ ಏರಿಸಿದ್ದಾರೆ.

ಈ ವಿತ್ತೀಯ ಕೊರತೆಯನ್ನು ತುಂಬಿಸುವ ಸ್ಪಷ್ಟ ಯೋಜನೆಗಳನ್ನು ಬಜೆಟ್‍ನಲ್ಲಿ ಪ್ರಸ್ತಾಪಿಸಿಲ್ಲ. ಇದಕ್ಕಾಗಿ ಮತ್ತೆ ಆರ್‍ಬಿಐನ ಸಾರ್ವಭೌಮ ನಿಧಿ, ಎಲ್‍ಐಸಿಯಂತಹ ಲಾಭದಾಯಕ ಸಾರ್ವಜನಿಕ ಸಂಸ್ಥೆಗಳಲ್ಲಿನ ಬಂಡವಾಳ ವಾಪಸಾತಿಗೆ ಮುಂದಾಗಿದ್ದಾರೆ. ಇದು ದೇಶದ ಸಾರ್ವಜನಿಕ ಕ್ಷೇತ್ರದ ಮೇಲೆ ಕೇಂದ್ರ ಸರ್ಕಾರ ಮತ್ತೊಂದು ಗಂಭೀರ ದಾಳಿಗೆ ಮುಂದಾಗಿರುವುದನ್ನು ತೋರಿಸುತ್ತದೆ. ಈಗಾಗಲೆ ಬಿಎಸ್‍ಎನ್‍ಎಲ್ ಮುಚ್ಚಿದ್ದು 90 ಸಾವಿರ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಇದರ ಜೊತೆಗೆ ಇನ್ನಷ್ಟು ಸಂಸ್ಥೆಗಳು ಇದೇ ದಾರಿಯನ್ನು ಹಿಡಿಯಲಿವೆ. ಬಂಡವಾಳ ವಾಪಸಾತಿ ಪ್ರಮಾಣ ಕಳೆದ ಆರ್ಥಿಕ ವರ್ಷದಲ್ಲಿ 65 ಸಾವಿರ ಕೋಟಿ ಗುರಿ ಹೊಂದಿದ್ದರೆ, ಈ ಸಾಲಿನಲ್ಲಿ ಈ ಮೊತ್ತವನ್ನು 1.20 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.

ಆಹಾರ, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿಯನ್ನು ಕಡಿತಗೊಳಿಸಲಾಗಿದ್ದು ಇದರಿಂದ ಆಹಾರ ಉತ್ಪನ್ನಗಳು ಸೇರಿದಂತೆ ಪ್ರತಿಯೊಂದು ಸರಕುಗಳ ದರಗಳು ಏರಿಕೆ ಕಾಣಲಿವೆ. ಇದರೊಂದಿಗೆ ಹಣದುಬ್ಬರ ತನ್ನಿಂತಾನೆ ಹೆಚ್ಚಲಿದೆ. ಮತ್ತೊಂದು ಕಡೆ ಅತ್ಯಂತ ಪ್ರಮುಖ ಗ್ರಾಹಕ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನೂ ಹೆಚ್ಚಿಸಿರುವುದು ಜನಸಾಮಾನ್ಯರ ಜೀವನವನ್ನು ದುಸ್ತರಗೊಳಿಸಲಿದೆ. ಇದು ಬಡವರ ಬದುಕಿನ ಮೇಲೆ ಹಣಕಾಸು ಸಚಿವರು ನಡೆಸಿರುವ ಸರ್ಜಿಕಲ್ ಸ್ಟ್ರೈಕ್ ಆಗಿದೆ.

ರಸ್ತೆ, ಆಸ್ಪತ್ರೆ, ಶಿಕ್ಷಣ, ನೀರಾವರಿಯಂತಹ ಮೂಲಸೌಕರ್ಯಗಳಿಗೆ ಸಾರ್ವಜನಿಕ ವೆಚ್ಚದಲ್ಲಿ ತುಸು ಏರಿಕೆ ಮಾಡಲಾಗಿದೆ. 2019-20ರಲ್ಲಿ 3.48 ಲಕ್ಷ ಕೋಟಿ ಇದ್ದದ್ದು ಈ ಸಾಲಿನಲ್ಲಿ 4.12 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಒಂದು ಅಂದಾಜಿನ ಪ್ರಕಾರ ದೇಶದ ಮೂಲಸೌಕರ್ಯ ಅಭಿವೃದ್ಧಿಗೆ 100 ಲಕ್ಷ ಕೋಟಿ ರೂ.ಗಳ ಅಗತ್ಯವಿದೆ. ಇದಕ್ಕೆ ಹೋಲಿಸಿದರೆ ಈ ಹಣ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.

ದೇಶದ ಮುಂದಿನ ಅತಿದೊಡ್ಡ ಸವಾಲು ನಿರುದ್ಯೋಗ, ಕೃಷಿ, ಕೈಗಾರಿಕೆ, ಮೂಲಸೌಕರ್ಯ ಮತ್ತಿತರ ಪ್ರಮುಖ ಕ್ಷೇತ್ರಗಳ ಹಿನ್ನಡೆ. ತಾವು ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಈ ಕುರಿತು ಬಜೆಟ್‍ನಲ್ಲಿ ಯಾವುದೇ ಪ್ರಸ್ತಾವನೆ ಮಾಡಿಲ್ಲ. ದೇಶದ ಜನಸಂಖ್ಯೆಯಲ್ಲಿ ಬಹುತೇಕರು ದುಡಿಯುವ ವಯಸ್ಸಿನವರು. ಅಗಾಧವಾದ ಈ ಮಾನವ ಸಂಪನ್ಮೂಲವನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳುವಲ್ಲಿ ಯಾವುದೇ ರೂಪುರೇಷೆಗಳನ್ನು ಪ್ರಸ್ತಾಪಿಸಿಲ್ಲ.

ಇದರ ಜೊತೆಗೆ ಸಾಮಾನ್ಯ ಜನರ ಖರೀದಿ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಯಾವುದೇ ಮುನ್ನೋಟ ಮತ್ತು ದೂರದೃಷ್ಟಿ ಈ ಬಜೆಟ್‍ನಲ್ಲಿ ಇಲ್ಲ. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿ ಕಡಿತಗೊಳಿಸಿರುವುದರಿಂದ ಪೆಟ್ರೋಲಿಯಂ ಉತ್ಪನ್ನಗಳ ದರಗಳು ತನ್ನಿಂತಾನೆ ಏರಲಿವೆ. ಇದು ಇತರೆ ಎಲ್ಲ ಉತ್ಪನ್ನಗಳ ದರ ಏರಿಕೆಗೆ ದಾರಿ ಮಾಡಿಕೊಡಲಿದೆ. ಆಗ ಹಣದುಬ್ಬರ ತೀವ್ರವಾಗಿ ಏರಲಿದೆ. ಈಗಾಗಲೆ ಬಜೆಟ್‍ನಲ್ಲಿ ಹಲವಾರು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನೂ ಹೆಚ್ಚಿಸಿರುವುದು ಜನಸಾಮಾನ್ಯರ ಮೇಲಿನ ಹೊರೆಯನ್ನು ಇನ್ನಷ್ಟು ಹೆಚ್ಚಿಸಲಿದೆ.

RS 500
RS 1500

SCAN HERE

Pratidhvani Youtube

«
Prev
1
/
5515
Next
»
loading
play
Siddaramaiah | ಕಾವೇರಿ ವಿಚಾರವನ್ನ ಬರೀ ರಾಜಕೀಯಕ್ಕೆ ಬಳಕೆ ಮಾಡ್ತಿದ್ದಾರೆ…! | Press Meet |@PratidhvaniNews
play
Tamil Naduನಲ್ಲಿ Siddaramaiah ಫೋಟೋಗೆ ಹಾರ ಹಾಕಿ ಧರಣಿ | ರಾಮನಗರದಲ್ಲಿ ತಮಿಳುನಾಡು ಸಿಎಂ Stalin​ಗೆ ತಿಥಿ!
«
Prev
1
/
5515
Next
»
loading

don't miss it !

ಅದಾನಿ ಸಮೂಹವನ್ನು ಅಲುಗಾಡಿಸಿರುವ ಸ್ಟಾಕ್ ಮ್ಯಾನಿಪ್ಯುಲೇಷನ್ ಆರೋಪಗಳ ದಾಖಲೆಗಳು
ಅಂಕಣ

ಅದಾನಿ ಸಮೂಹವನ್ನು ಅಲುಗಾಡಿಸಿರುವ ಸ್ಟಾಕ್ ಮ್ಯಾನಿಪ್ಯುಲೇಷನ್ ಆರೋಪಗಳ ದಾಖಲೆಗಳು

by ಡಾ | ಜೆ.ಎಸ್ ಪಾಟೀಲ
September 25, 2023
ಅಖಂಡ ಕರ್ನಾಟಕ ಸಂಪೂರ್ಣ ಸ್ತಬ್ಧವಾದರೆ ಮಾತ್ರ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಬಹುದು: ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ
Top Story

ಅಖಂಡ ಕರ್ನಾಟಕ ಸಂಪೂರ್ಣ ಸ್ತಬ್ಧವಾದರೆ ಮಾತ್ರ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಬಹುದು: ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಕರೆ

by ಪ್ರತಿಧ್ವನಿ
September 24, 2023
ನಾವು ಹುಡುಗಾಟಕ್ಕಾಗಿ ಬಂದ್‌ ಮಾಡಿಲ್ಲ: ವಾಟಾಳ್‌ ನಾಗರಾಜ್‌
Top Story

ನಾವು ಹುಡುಗಾಟಕ್ಕಾಗಿ ಬಂದ್‌ ಮಾಡಿಲ್ಲ: ವಾಟಾಳ್‌ ನಾಗರಾಜ್‌

by ಪ್ರತಿಧ್ವನಿ
September 25, 2023
ಸರ್ಕಾರದ ನಡೆಗೆ ಕಿಡಿಕಾರಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
Top Story

ಸರ್ಕಾರದ ನಡೆಗೆ ಕಿಡಿಕಾರಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

by ಪ್ರತಿಧ್ವನಿ
September 25, 2023
ಸುಪ್ರೀಂಕೋರ್ಟ್​ನಲ್ಲಿ ಕಾವೇರಿ ನೀರು ವಿವಾದ.. ನೀರು ಬಿಡಿ ಅಷ್ಟೇ..
Top Story

ಸುಪ್ರೀಂಕೋರ್ಟ್​ನಲ್ಲಿ ಕಾವೇರಿ ನೀರು ವಿವಾದ.. ನೀರು ಬಿಡಿ ಅಷ್ಟೇ..

by ಲಿಖಿತ್‌ ರೈ
September 21, 2023
Next Post
ವರಿಷ್ಠರು ಓಕೆ ಎಂದರೂ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದೇಕೆ?

ವರಿಷ್ಠರು ಓಕೆ ಎಂದರೂ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದೇಕೆ?

ಬಜೆಟ್: ಹಾಡಿ ಹೊಗಳಿದ ಬಿಜೆಪಿ

ಬಜೆಟ್: ಹಾಡಿ ಹೊಗಳಿದ ಬಿಜೆಪಿ, ತೆಗಳಿದ ಪ್ರತಿಪಕ್ಷಗಳು

ಇಂಡಿಗೋ  ಸಂಸ್ಥೆಯಿಂದ 25 ಲಕ್ಷ ಪರಿಹಾರ ಕೇಳಿ ನೋಟಿಸ್‌ ನೀಡಿದ ಕುನಾಲ್‌ ಕಮ್ರಾ

ಇಂಡಿಗೋ ಸಂಸ್ಥೆಯಿಂದ 25 ಲಕ್ಷ ಪರಿಹಾರ ಕೇಳಿ ನೋಟಿಸ್‌ ನೀಡಿದ ಕುನಾಲ್‌ ಕಮ್ರಾ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist