Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಗಂಡನಿಗೆ ಜಾಮೀನು ಕೊಡಿಸುವ ಆಮೀಷ ನೀಡಿ ಎರಡು ವರ್ಷ ಅತ್ಯಾಚಾರವೆಸಗಿದ ಕಾಂಗ್ರೆಸ್‌ ಕೌನ್ಸಿಲರ್‌

ಗಂಡನಿಗೆ ಜಾಮೀನು ಕೊಡಿಸುವ ಆಮೀಷ ನೀಡಿ ಎರಡು ವರ್ಷ ಅತ್ಯಾಚಾರವೆಸಗಿದ ಕಾಂಗ್ರೆಸ್‌ ಕೌನ್ಸಿಲರ್‌
ಗಂಡನಿಗೆ ಜಾಮೀನು ಕೊಡಿಸುವ ಆಮೀಷ ನೀಡಿ ಎರಡು ವರ್ಷ ಅತ್ಯಾಚಾರವೆಸಗಿದ ಕಾಂಗ್ರೆಸ್‌ ಕೌನ್ಸಿಲರ್‌

February 25, 2020
Share on FacebookShare on Twitter

ಆರೋಪಿ ಗಂಡನಿಗೆ ಜಾಮೀನು ಕೊಡಿಸ್ತೀನಿ ಎಂದು ಅತ್ಯಾಚಾರ ಎಸಗಿದ ಪಂಜಾಬ್‌ನ ಮೊಹಾಲಿ ನಗರದ ಕೌನ್ಸಿಲರ್‌ ಕೃತ್ಯಕ್ಕೆ ಕಾಂಗ್ರೆಸ್‌ ತಲೆತಗ್ಗಿಸುವಂತಾಗಿದೆ. ಆಮಿಷಗಳನ್ನೊಡ್ದಿ ಅಶಕ್ತ ಮಹಿಳೆಯರನ್ನ ಚಪಲಕ್ಕೆ ಬಳಸಿಕೊಳ್ಳುವುದು ಸಾಮಾನ್ಯವಾಗಿದೆ. ಅದರಲ್ಲೂ ರಾಜಕಾರಣಿಗಳು ಹಾಗೂ ಅಧಿಕಾರಿಗಳಂತೂ ಈ ದೌರ್ಬಲ್ಯವನ್ನ ಸಮರ್ಥವಾಗಿ ಉಪಯೋಗಿಸಿಕೊಳ್ಳುತ್ತಾರೆ. ಉದ್ಯೋಗ ಕೊಡುವುದಾಗಿ, ಹಣ ಸಹಾಯ ಮಾಡುವುದಾಗಿ ಸಾಕಷ್ಟು ಮಹಿಳೆಯರನ್ನ ಮಂಚಕ್ಕೆ ಕರೆದಿರುವ ಘಟನೆಗಳು ನಡೆದಿವೆ, ರೇಷನ್‌ ಕಾರ್ಡ್‌ ನೀಡಲು ಮಂಚಕ್ಕೆ ಕರೆದ ದೆಹಲಿ ಆಮ್‌ ಆದ್ಮಿ ಪಕ್ಷದ ನಾಯಕನ ರಾಸಲೀಲೆಯೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈಗ ಮಾದಕ ವಸ್ತು ಸಾಗಣೆಗಾಗಿ ಜೈಲು ಪಾಲಾಗಿದ್ದ ಸಂತ್ರಸ್ಥೆ ಗಂಡನಿಗೆ ಜಾಮೀನು ಕೊಡಿಸ್ತೀನಿ ಎಂದು ಆಕೆಯನ್ನ ಕಾಮತೃಷೆಗೆ ಬಳಸಿದ ಪಂಜಾಬ್‌ನ ಮೊಹಾಲಿಯ ಕೌನ್ಸಿಲರ್‌ ರಾಜಸ್ಥಾನ ಪೊಲೀಸರ ಅತಿಥಿಯಾಗಿದ್ದಾನೆ.

ಹೆಚ್ಚು ಓದಿದ ಸ್ಟೋರಿಗಳು

ಮುಂದಿನ 25ವರ್ಷಗಳಲ್ಲಿ ಭಾರತ ಅಭಿವೃದ್ದಿ ಹೊಂದಿದ ದೇಶವಾಗಬೇಕು : ಪ್ರಧಾನಿ ಮೋದಿ

ನೀರಿನ ಕೊಡ ಮುಟ್ಟಿದ ದಲಿತ ಬಾಲಕನನ್ನು ಹೊಡೆದು ಕೊಂದ ಶಿಕ್ಷಕ

ನಮ್ಮ ಜತೆ ಪ್ರಧಾನಿ ಮೋದಿ ಮಾತನಾಡಿದಾಗ ಇಡೀ ದೇಶವೇ ನಮ್ಮನ್ನು ಬೆಂಬಲಿಸಿದ ಅನುಭವವಾಯ್ತು: ಹರ್ಮನ್‌ಪ್ರೀತ್

ಪಂಜಾಬ್‌ನ ಮೊಹಾಲಿ ಸೆಕ್ಟರ್‌ 70 ವಾರ್ಡ್‌ನ ಕೌನ್ಸಿಲರ್‌ ಸುರೀಂದರ್‌ ಎಸ್‌ ರಜಪೂತ್‌ ಕಾಂಗ್ರೆಸ್‌ ಮುಖಂಡ, ಮಹಾ ಚಪಲಚನ್ನಿಗರಾಯ, ಈ ಹಿಂದೆ ಅಶ್ಲೀಲ ಹೇಳಿಕೆಗಳಿಗಾಗಿ ಸಾಕಷ್ಟು ಸುದ್ದಿಯಲ್ಲಿದ್ದಾತ. ಈತ ಪಕ್ಕದ ಮನೆಯ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಅತ್ಯಾಚಾರ ಎಸಗಿದ್ದು, ವಿಡಿಯೋ ಮಾಡಿಕೊಂಡು ಎರಡು ವರ್ಷಗಳ ಕಾಲ ಕಿರುಕುಳ ನೀಡಿದ್ದಾನೆ, ರಾತ್ರೋರಾತ್ರಿ ರಾಜಸ್ಥಾನ ಪೊಲೀಸರು ಈತನ ಮನೆ ಮೇಲೆ ದಾಳಿ ನಡೆಸಿ, ಬಂಧಿಸಿ ಎಳೆದೊಯ್ದಿದ್ದಾರೆ.

ಸುರೀಂದರ್‌ ಪಕ್ಕದ ಮನೆಯಲ್ಲಿ ವಾಸಿಸುತ್ತಿರುವ ಮೂವತ್ತು ವರ್ಷ ವಯಸ್ಸಿನ ಮಹಿಳೆಯ ಗಂಡ ಟ್ರಾನ್ಸ್‌ಪೋರ್ಟ್‌ ನಡೆಸುತ್ತಿದ್ದ, ಆತನ ಲಾರಿ ರಾಜಸ್ಥಾನದಲ್ಲಿ ಪೊಲೀಸರಿಂದ ತಪಾಸಣೆಗೆ ಒಳಗಾದಾಗ ಲಾರಿಯಲ್ಲಿ ನಿಷೇಧಿತ ಮಾಧಕ ವಸ್ತು ಅಫೀಮ್‌ ಸಿಗುತ್ತೆ, ಆತನನ್ನ ಮಾದಕ ವಸ್ತು ಮಾರಾಟ ನಿಷೇಧ ಕಾನೂನಿನಡಿ ರಾಜಸ್ಥಾನ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸುತ್ತಾರೆ. ಪಕ್ಕದ ರಾಜ್ಯದಲ್ಲಿ ಜಾಮೀನು ಪಡೆಯಲು ಮಹಿಳೆಯ ಸಹಾಯಕ್ಕೆ ಕೌನ್ಸಿಲರ್‌ ಸುರೀಂದರ್‌ ಬರುತ್ತಾನೆ, ತನ್ನ ವಾರ್ಡ್‌ ನಿವಾಸಿಯಾಗಿದ್ದರಿಂದ ಸಾಕಷ್ಟು ಪರಿಚಯವೂ ಇತ್ತು. ಜೈಪುರದ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಸಾಕಷ್ಟು ನನಗೆ ಗೊತ್ತಿದೆ, ಅಲ್ಲಿಗೆ ಹೋಗಿ ಮಾತಾಡೋಣ ಎಂದು ಪುಸಲಾಯಿಸಿ ಜೈಪುರಕ್ಕೆ ಕರೆತಂದು ರೂಂ ಮಾಡಿ ಉಳಿಸಿಕೊಳ್ಳುತ್ತಾನೆ, ಅಂದು ರಾತ್ರಿ ಅಮಲು ಬರುವ ಔಷಧ ನೀಡಿ ಅತ್ಯಾಚಾರವೆಸಗಿದ್ದಾನೆಂದು ಸಂತ್ರಸ್ಥೆ ದೂರಿಕೊಂಡಿದ್ದಾಳ

ಈ ಘಟನೆ ನಡೆದು ಎರಡು ವರ್ಷಗಳಾದರೂ ಮಹಿಳೆಗೆ ಈತ ಸಹಾಯ ಮಾಡಿಲ್ಲ, ಆಕೆಯ ಗಂಡ ಹೊರಗೆ ಬಂದಿರಲಿಲ್ಲ, ಹಾಗೂ ಆಕೆ ಪ್ರಕರಣವನ್ನೂ ದಾಖಲಿಸಿರಲಿಲ್ಲ, ಆರೋಪಿ ಸುರೀಂದರ್‌ ಆಕೆಯ ವಿಡಿಯೋ ಮಾಡಿ ಸತತವಾಗಿ ಕಿರುಕುಳ ನೀಡುತ್ತಿದ್ದ. ಆತ ಪ್ರಭಾವಿ ಕಾಂಗ್ರೆಸ್‌ ನಾಯಕನೂ ಆಗಿದ್ದರಿಂದ ವಾರ್ಡ್‌ನಲ್ಲಿ ಪ್ರಾಪರ್ಟಿ ಡೀಲರ್‌ ವೃತ್ತಿ ಮಾಡುತ್ತಿದ್ದರಿಂದ ಪೊಲೀಸರೂ ಮಹಿಳೆಯ ಸಹಾಯಕ್ಕೆ ಬಂದಿರಲಿಲ್ಲ. ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದ್ದರಿಂದ ಮಹಿಳೆ ತನ್ನ ಗಂಡ ಜಾಮೀನಿನ ಮೇಲೆ ಹೊರಬಂದ ಬಳಿಕ ಫೆಬ್ರುವರಿ 20ರಂದು ಜೈಪುರದ ಸದರ್‌ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾಳೆ, ಜೈಪುರ ಪೊಲೀಸರು ರಾತ್ರೋರಾತ್ರಿ ಸುರೀಂದರ್‌ ಮನೆ ಮೇಲೆ ದಾಳಿ ಮಾಡಿ ಬಂಧಿಸಿ ಕರೆದೊಯ್ದಿದ್ದು ಪಂಜಾಬ್‌ ಕಾಂಗ್ರೆಸ್‌ಗೂ ಮುಜುಗರ ತಂದಿದೆ. ಸದ್ಯ ಪೊಲೀಸರ ಅತಿಥಿಯಾಗಿರುವ ಕೌನ್ಸಿಲರ್‌ನ ಪ್ರಕರಣದ ದಿಕ್ಕು ಎತ್ತ ಸಾಗುತ್ತೋ, ಸಂತ್ರಸ್ಥೆಗೆ ನ್ಯಾಯ ಸಿಗುತ್ತಾ ನೋಡಬೇಕಿದೆ.

RS 500
RS 1500

SCAN HERE

[elfsight_youtube_gallery id="4"]

don't miss it !

ಮುಖ್ಯಮಂತ್ರಿ ಬದಲಾವಣೆ ಕೇವಲ ಕಾಂಗ್ರೆಸ್ ಸೃಷ್ಟಿ : ಪ್ರಲ್ಹಾದ್ ಜೋಶಿ
ಕರ್ನಾಟಕ

ಆಗಿನ ಕಾಂಗ್ರೆಸ್ಸೇ ಬೇರೆ, ಈಗಿರುವುದು ನಕಲಿ ಕಾಂಗ್ರೆಸ್, ನಕಲಿ ಗಾಂಧಿಗಳು : ಪ್ರಹ್ಲಾದ ಜೋಷಿ

by ಪ್ರತಿಧ್ವನಿ
August 14, 2022
ಕುಮಾರಸ್ವಾಮಿ ಡ್ರಾಮಾ ಕಣ್ಣೀರು: ಅಶ್ವಥ್‌ ನಾರಾಯಣ ವ್ಯಂಗ್ಯ
ಕರ್ನಾಟಕ

ಕುಮಾರಸ್ವಾಮಿ ಡ್ರಾಮಾ ಕಣ್ಣೀರು: ಅಶ್ವಥ್‌ ನಾರಾಯಣ ವ್ಯಂಗ್ಯ

by ಪ್ರತಿಧ್ವನಿ
August 11, 2022
ಬಿಜೆಪಿ ಇನ್ನಷ್ಟು ಬಲವಾದರೆ ಜನರು ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ -ಅಖಿಲೇಶ್ ಯಾದವ್
ದೇಶ

ಬಿಜೆಪಿ ಇನ್ನಷ್ಟು ಬಲವಾದರೆ ಜನರು ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ -ಅಖಿಲೇಶ್ ಯಾದವ್

by Shivakumar A
August 10, 2022
ಲಾಲ್ ಬಾಗ್ ಫ್ಲವರ್ ಶೋ : ಭರ್ಜರಿ ಆಫರ್ ಕೊಟ್ಟ ನಮ್ಮ ಮೆಟ್ರೋ!
ಕರ್ನಾಟಕ

ಲಾಲ್ ಬಾಗ್ ಫ್ಲವರ್ ಶೋ : ಭರ್ಜರಿ ಆಫರ್ ಕೊಟ್ಟ ನಮ್ಮ ಮೆಟ್ರೋ!

by ಪ್ರತಿಧ್ವನಿ
August 12, 2022
PSI ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ : ದಿವ್ಯಾ ಹಾಗರಗಿ ಬಂಧನ, ನಿಷ್ಪಕ್ಷಪಾತ ತನಿಖೆ ನಡೆಸುತ್ತೇವೆ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ!
ಕರ್ನಾಟಕ

ಸಚಿವ ಅರಗ ಜ್ಞಾನೇಂದ್ರ ಸೇರಿ ನಾಲ್ವರಿಗೆ ಅಕ್ರಮವಾಗಿ ಬಿಡಿಎ ಸೈಟ್‌ ಮಂಜೂರು?

by ಪ್ರತಿಧ್ವನಿ
August 9, 2022
Next Post
ಮುಖ್ಯಮಂತ್ರಿ ಇದ್ದರೆ ಉಸ್ತುವಾರಿ ಸಚಿವರು ಇರಲ್ಲ

ಮುಖ್ಯಮಂತ್ರಿ ಇದ್ದರೆ ಉಸ್ತುವಾರಿ ಸಚಿವರು ಇರಲ್ಲ, ಇದು ಈಶ್ವರಪ್ಪ ಶಿಷ್ಟಾಚಾರ!

ಕೊನೆಗೂ ಬಂದ ಪುಟ್ಟ

ಕೊನೆಗೂ ಬಂದ ಪುಟ್ಟ, ಹೋದ ಪುಟ್ಟ ಎಂದಾಯಿತೆ ಟ್ರಂಪ್ ಭೇಟಿ?

ದೊರೆಸ್ವಾಮಿಯವರನ್ನು ಪಾಕ್ ಏಜೆಂಟ್ ಎಂದ ಚೀಟಿಂಗ್ ಶಾಸಕ ಯತ್ನಾಳ್ ಮೇಲಿದೆ 23 ಗಂಭೀರ ಪ್ರಕರಣಗಳು

ದೊರೆಸ್ವಾಮಿಯವರನ್ನು ಪಾಕ್ ಏಜೆಂಟ್ ಎಂದ ಚೀಟಿಂಗ್ ಶಾಸಕ ಯತ್ನಾಳ್ ಮೇಲಿದೆ 23 ಗಂಭೀರ ಪ್ರಕರಣಗಳು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist