ಸರ್ಕಾರದ ಸೂಚನೆಯಂತೆ ಈಗಾಗಲೇ ಪದವಿ ಕಾಲೇಜುಗಳ ಬಾಗಿಲು ತೆರೆದಿವೆ. ಹೀಗಿದ್ದರೂ ಯಾಕೋ ವಿದ್ಯಾರ್ಥಿಗಳು ಕಾಲೇಜಿನ ಕಡೆ ಮುಖ ಮಾಡುತ್ತಿಲ್ಲ. ಉಪನ್ಯಾಸಕರು ಕಾಲೇಜಿಗೆ ಬರುತ್ತಿದ್ದಾರಾದರೂ ವಿದ್ಯಾರ್ಥಿಗಳ ಮಾತ್ರ ಎಲ್ಲಿಯೂ ಕಾಣುತ್ತಿಲ್ಲ. ಕಾಲೇಜು ಶುರುವಾದರೂ ಬರುವ ವಿದ್ಯಾರ್ಥಿಗಳ ಸಂಖ್ಯೆ ತೀರ ಕಡಿಮೆ ಇದೆ. ಕಾಲೇಜಿನೊಂದಿಗೆ ಶುರುವಾದ ಪದವಿ ಹಾಸ್ಟೆಲ್ಗಳು ಕೂಡ ವಿದ್ಯಾರ್ಥಿಗಳಿಲ್ಲದೆ ಖಾಲಿ ಹೊಡೆಯುತ್ತಿವೆ. ಇದಕ್ಕೆ ಕಾರಣ ಈ ಹಿಂದೆ ಕರೋನಾ ಸೆಂಟರ್ ಮತ್ತು ಆರೈಕೆ ಕೇಂದ್ರಗಳಾಗಿದ್ದ ಹಾಸ್ಟೆಲ್ಗಳಿಗೆ ಹೋಗಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿರುವುದು.
ಹೌದು, ತೀವ್ರ ಕರೋನಾ ಬಿಕ್ಕಟ್ಟಿನ ನಡುವೆಯೂ ನವೆಂಬರ್ 17ರಿಂದ ರಾಜ್ಯದಾದ್ಯಂತ ಕಾಲೇಜು ಪುನರ್ ಆರಂಭ ಮಾಡಲಾಗಿದೆ. ಕಾಲೇಜು ಶುರುವಾಗಿ ಐದು ದಿನಗಳಾದರೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಒಂದು ವೇಳೆ ಕೆಲವು ವಿದ್ಯಾರ್ಥಿಗಳು ಕಾಲೇಜಿಗೆ ಬಂದರೂ ಸರ್ಕಾರದ ಮಾರ್ಗಸೂಚಿ ನೋಡಿ ಗಾಬರಿಗೊಂಡಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಾಲೇಜಿಗೆ ಹೋಗಿ ಬರಬಹುದು. ಆದರೆ, ಕೋವಿಡ್ ಸೆಂಟರ್, ಆರೈಕೆ ಕೇಂದ್ರವಾಗಿದ್ದ ಹಾಸ್ಟೆಲ್ಗಳಿಗೆ ಹೋಗಿ ಮತ್ತೆ ವಾಸ್ತವ್ಯ ಹೂಡಲು ಭಯ ಆಗುತ್ತದೆ. ಕೋವಿಡ್ ಸೆಂಟರ್, ಆರೈಕೆ ಕೇಂದ್ರಗಳಾಗಿದ್ದ ಬಳಸುತ್ತಿದ್ದ ಬೆಡ್ಗಳನ್ನೇ ಈಗಲೂ ನಾವು ವಾಸ್ತವ್ಯ ಮಾಡಲು ಬಳಸುತ್ತಿದ್ದಾರೆ. ಬೆಡ್ಶೀಟ್ ಕೂಡ ಸ್ಯಾನಿಟೈಸ್ ಮಾಡಿಲ್ಲ, ಹೀಗಿರುವಾಗ ಹೇಗೆ ನಾವು ಹಾಸ್ಟೆಲ್ಗಳಿಗೆ ಹೋಗವುದು ಎನ್ನುತ್ತಾರೆ ವಿದ್ಯಾರ್ಥಿಗಳು.
ಸೋಂಕಿತರು ಬಳಸಿದ್ದ ಹೊದಿಕೆ, ದಿಂಬನ್ನೇ ನಾವು ಬಳಸಬೇಕು. ಸೋಪು, ಬಿಸಿನೀರಿನಿಂದ ತೊಳೆದು ಮರುಬಳಕೆ ಮಾಡಿ. ಡೆಟಾಲ್, ಸ್ಯಾವಲಾನ್ ಮಿಶ್ರಿತ ಬಿಸಿನೀರು ಬಳಸಿ ಎಂದು ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ. ಈ ಆದೇಶಕ್ಕೆ ಹೆದರಿ ಹಾಸ್ಟೆಲ್ಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸಿದ ವಿದ್ಯಾರ್ಥಿ.
ಇನ್ನು, ಕೆಲವು ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳಿಗೆ ಬೆಡ್ ವ್ಯವಸ್ಥೆಯೇ ಇಲ್ಲ. ಕಳೆದ ವರುಷ ನೀಡಿದ ಬೆಡ್ಗಳ ಬಳಕೆ ಮಾಡಲಾಗುತ್ತಿದೆ. ತಮ್ಮ ಸ್ವಂತ ಖರ್ಚಿನಲ್ಲಿ ಬೆಡ್ ಶೀಟ್, ಬ್ಲಾಂಕೆಟ್ ತಂದು ವಿದ್ಯಾರ್ಥಿಗಳು ಮಲಗುವಂತಾಗಿದೆ.