ಭಾರತವೂ ಸೇರಿದಂತೆ ಸುಮಾರು 215 ದೇಶಗಳಿಗೆ ಹಬ್ಬಿರುವ ಕರೋನಾ ಸಾಂಕ್ರಾಮಿಕ ರೋಗಕ್ಕೆ ಇನ್ನೂ ಲಸಿಕೆ ಕಂಡು ಹಿಡಿಯಲಾಗದ್ದರಿಂದ ಸರ್ಕಾರಗಳ ಪ್ರಯತ್ನಗಳೆಲ್ಲವನ್ನೂ ಮೀರಿ ತನ್ನ ಸಂಖ್ಯೆಗಳನ್ನು ವೃದ್ದಿಸುತ್ತಲೇ ಹೋಗುತ್ತಿದೆ. ಕರ್ನಾಟಕ ರಾಜ್ಯದ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆ ಹೊರಡಿಸಿದ ಪತ್ರಿಕಾ ಪ್ರಕಟಣೆಯ ಪ್ರಕಾರ ರಾಜ್ಯದಲ್ಲಿ ಇಲ್ಲಿಯವರೆಗೆ ಒಟ್ಟು 794 ಪ್ರಕರಣಗಳು ಕಂಡುಬಂದಿದೆ.
08 ಮೇ ಸಂಜೆ 05 ರ ಬಳಿಕದ 24 ಗಂಟೆಗಳಲ್ಲಿ ರಾಜ್ಯದಲ್ಲಿ 41 ಹೊಸ ಕೋವಿಡ್ 19 ಪ್ರಕರಣ ಪತ್ತೆಯಾಗಿದೆ. 386 ಮಂದಿ ಕರೋನಾ ಸೋಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಸಕ್ರಿಯವಾಗಿರುವ 377 ಪ್ರಕರಣಗಳಲ್ಲಿ 371 ರೋಗಿಗಳು ವಿವಿಧ ಆಸ್ಪತ್ರೆಗಳ ಪ್ರತ್ಯೇಕಿಸಿದ ವಾರ್ಡುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು 06 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ. ಕರೋನಾ ಪೀಡಿತರ ಪೈಕಿ 30 ಮಂದಿ ಅಸುನಿಗಿದ್ದಾರೆಂದು ಇಲಾಖೆ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ದಾವಣಗೆರೆಯಲ್ಲಿ 5, ಬೆಂಗಳೂರು ನಗರದಲ್ಲಿ 12, ದಕ್ಷಿಣ ಕನ್ನಡದಲ್ಲಿ 3, ಉತ್ತರ ಕನ್ನಡದಲ್ಲಿ 8, ತುಮಕೂರಲ್ಲಿ 4, ಬೀದರಲ್ಲಿ 3, ಚಿತ್ರದುರ್ಗದಲ್ಲಿ 3, ಚಿಕ್ಕ ಬಳ್ಳಾಪುರ ಹಾಗೂ ದಾವಣಗೆರೆಯಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ.







