ಈ ದಶಕದ ಮೊದಲನೇ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ್ದಾರೆ. ಭಾರತದ ಆಕಾಂಕ್ಷೆ , ಆರ್ಥಿಕ ಬೆಳವಣಿಗೆ, ಸಾಮಾಜಿಕ ಕಾಳಜಿ ಎಂಬ ಪ್ರಮುಖ ಮೂರು ಮೂಲಗಳನ್ನು ಆಧರಿಸಿ ಈ ಬಾರಿಯ ಬಜೆಟ್ ತಯಾರಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಬಾರಿಯ ಬಜೆಟ್‌ನ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
ಕೃಷಿ ವಲಯ
· ಗ್ರಾಮೀಣ ಅಭಿವೃದ್ಧಿ, ಕೃಷಿ ಉತ್ತೇಜನಕ್ಕೆ 16 ಅಂಶಗಳ ವಿಶೇಷ ಕ್ರಿಯಾಯೋಜನೆ ರೂಪಿಸಲಾಗಿದೆ.
· ಸಾಗರ ಮಿತ್ರ ಯೋಜನೆ ಮೂಲಕ ಮೀನು ಉತ್ಪಾದಿಸುವ ಗುರಿ ಹೊಂದಿದೆ.
· ಕೃಷಿಕರ ಅಭಿವೃದ್ಧಿಗೆ ಕೃಷಿ ಉಡಾನ್ ಮೂಲಕ ಈಶಾನ್ಯ ರಾಜ್ಯಗಳಲ್ಲಿ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಕೃಷಿ ಉತ್ಪನ್ನ ವಸ್ತುಗಳ ರಫ್ತಿಗೆ ವಿಮಾನ ಸಾರಿಗೆ ಮತ್ತು ಕೃಷಿ ರೈಲು ಸೇವೆಯನ್ನು ತಿಳಿಸಲಾಗಿದೆ.
· ರಾಷ್ಟ್ರೀಯ ಮಟ್ಟದಲ್ಲಿ ಸಾವಯವ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ರೂಪಿಸಲಾಗಿದೆ.
· ಪಶುಸಂಗೋಪನೆಯಲ್ಲಿ ಹಾಲು ಉತ್ಪಾದನೆಯನ್ನು 53.5 ಟನ್ ನಿಂದ 108 ಟನ್ ಗೆ ಹೆಚ್ಚಿಸುವ ಗುರಿ ಹೊಂದಿದೆ.
· 100 ಜಿಲ್ಲೆಗಳಲ್ಲಿ ಜಲ ಸಂವರ್ಧನೆಗೆ ಒತ್ತು ನೀಡಲಾಗಿದೆ. ಜಲಜೀವನ ಯೋಜನೆಗೆ 3.6 ಲಕ್ಷ ಕೋಟಿ ರೂ. ಅನುದಾನ.
· ಬೀಜ ಸಂರಕ್ಷಣೆಗೆ ಮುಂದಾಗುವ ಮಹಿಳಾ ಸ್ವ ಸಹಾಯ ಸಂಘಗಳಿಗೆ ಧನ ಸಹಾಯ ಮುದ್ರಾ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ. ರೈತ ಮಹಿಳೆಯರಿಗೆ ಧಾನ್ಯಲಕ್ಷ್ಮಿ ಯೋಜನೆ.
· ಪ್ರಧಾನ ಮಂತ್ರಿ ಕುಸುಮ್ ಯೋಜನೆಯ ಫಲಾನುಭವಿ ರೈತರು ಸೋಲಾರ್ ಗ್ರಿಡ್ ಪಂಪ್ ಸೆಟ್ ಬಳಸುತ್ತಿದ್ದು ಇದನ್ನು ಇನ್ನೂ ೧೫ ಲಕ್ಷ ರೈತರಿಗೆ ವಿತರಿಸುವ ಯೋಜನೆ.
· ಫಸಲ್ ಭೀಮಾ ಯೋಜನೆಯಡಿಯಲ್ಲಿ 6.11 ಕೋಟಿ ರೈತರಿಗೆ ವಿಮೆ ಯೋಜನೆ ರೂಪಿಸಿದೆ.
ಶಿಕ್ಷಣ ಮತ್ತು ಉದ್ಯೋಗ
· ಶಿಕ್ಷಣಕ್ಕೆ 99,300ಕೋಟಿ ಮತ್ತು ಕೌಶಲ್ಯಾಭಿವೃದ್ಧಿಗೆ 3,000 ಕೋಟಿ ಅನುದಾನ ಘೋಷಿಸಿದೆ.
· ‘ಸ್ಟಡಿ ಇಂಡಿಯಾ’ ಎಂಬ ಯೋಜನೆ ಮೂಲಕ ಜಾಗತಿಕ ಮಟ್ಟದಲ್ಲಿ ಶಿಕ್ಷಣ ವಲಯವನ್ನು ವಿಸ್ತರಿಸಲು ಮುಂದಾಗಿದೆ. ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆಗೆ ಆದ್ಯತೆ.
· ಹೊಸದಾಗಿ ವಿಧಿ ವಿಜ್ಞಾನ ಕಾಲೇಜು ಮತ್ತು ನ್ಯಾಷನಲ್ ಪೊಲೀಸ್ ವಿಶ್ವವಿದ್ಯಾಲಯ ಸ್ಥಾಪನೆ.
· ನೂತನ ನ್ಯಾಷನಲ್ ಪೊಲೀಸ್ ವಿವಿಯ ಆರಂಭ. ಪ್ರತಿ ಜಿಲ್ಲೆಗೆ ಒಂದರಂತೆ ಮೆಡಿಕಲ್ ಕಾಲೇಜ್ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ.
· ಶಿಕ್ಷಣದಿಂದ ವಂಚಿತರಾದವರಿಗೆ ಆನ್ ಲೈನ್ ಪದವಿ ಶಿಕ್ಷಣಕ್ಕೆ ಹೆಚ್ಚಿನ ಪ್ರೋಹ್ಸಾಹ.
· 5 ಲಕ್ಷ ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಪ್ರೋತ್ಸಾಹ. ಕ್ಷಿಪ್ರ ಗತಿಯಲ್ಲಿ ಬ್ಯಾಂಕ್ ಸಾಲದ ಹಣ ಪಾವತಿ ಮಾಡಲು ಆ್ಯಪ್ ಆಧಾರಿತ ವ್ಯವಸ್ಥೆ ಜಾರಿಗೆ ಇದರಿಂದ ಕೈಗಾರಿಕೋದ್ಯಮಿಗಳಿಗೆ ತ್ವರಿತವಾಗಿ ಸಾಲ ಸೌಲಭ್ಯ ದೊರೆಯಲಿದೆ.
· ನವ ಭಾರತ ನಿರ್ಮಾಣದ ಕಲ್ಪನೆಯಲ್ಲಿ ಸರಕಾರಿ, ಖಾಸಗಿ ಸಹಭಾಗಿತ್ವದಲ್ಲಿ ಐದು ನಗರಗಳನ್ನು ‘ಸ್ಮಾರ್ಟ್ ಸಿಟಿ’ಯನ್ನಾಗಿ ಅಭಿವೃದ್ಧಿಪಡಿಸಿ ಪ್ರತಿ ಜಿಲ್ಲೆಯನ್ನು ರಫ್ತು ಕೇಂದ್ರವಾಗಿಸುವ ನಿರ್ಧಾರ. ಈ ನಿಟ್ಟಿನಲ್ಲಿ ಉತ್ಪಾದನೆಗೆ ಹೆಚ್ಚು ಒತ್ತು ನೀಡಿ. ರಫು ಉತ್ತೇಜನಕ್ಕಾಗಿ ನಿರ್ವಿಕ್ ಯೋಜನೆಯನ್ನು ಘೋಷಿಸಿದೆ. ಇದರಿಂದ ರಫ್ತಿನ ಮೇಲಿನ ತೆರಿಗೆ ಕಡಿಮೆಯಾಗುವ ಸಾಧಯತೆ ಇದೆ.
· ಮೂಲ ಸೌಕರ್ಯ ವಲಯಕ್ಕೆ 103 ಲಕ್ಷ ಕೋಟಿ ರೂ.
ಮಹಿಳೆಯರಿಗೆ ಮತ್ತು ಮಕ್ಕಳಿಗೆ
· 6 ಲಕ್ಷ ಅಂಗನವಾಡಿ ಕಾರ್ಯಕರ್ತರು 10 ಕೋಟಿ ಕುಟುಂಬದ ನ್ಯೂಟ್ರಿಷನ್ ವಿವರಗಳನ್ನು ದಾಖಲಿಸುತ್ತಿದ್ದಾರೆ. 35,600 ಕೋಟಿ ರೂ.ಗಳು ನ್ಯೂಟ್ರಿಷಿಯನ್ ಯೋಜನೆಯಡಿಯಲ್ಲಿ ಮಕ್ಕಳ ಪೌಷ್ಠಿಕತೆ ಹೆಚ್ಚಿಸಲು ಮೀಸಲಿಡಲಾಗಿದೆ.
· ಮಹಿಳೆಯರ ಕಲ್ಯಾಣಕ್ಕೆ 28,600 ಕೋಟಿ ಮೀಸಲಿಡಲಾಗಿದೆ.
· ಭಾರತ ನೆಟ್ ಯೋಜನೆಗೆ 6000 ಕೋಟಿ ಅನುದಾನ ಮೀಸಲಾಗಿಸಿ. ಇದರೊಂದಿಗೆ 6 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಣೆ ಗರ್ಭಿಣಿಯರ ಸಾವು ತಡೆಗಟ್ಟಲು ಹೊಸ ಟಾಸ್ಕ್ ಫೋರ್ಸ್ ನ್ನು ರೂಪಿಸಿದೆ.
ಇತರೆ ಮುಖ್ಯಾಂಶಗಳು
· ಪರಿಸರ ಸಂರಕ್ಷಣೆಗೆ 4400 ಕೋಟಿ ರೂ. ಅನುದಾನ ಒದಗಿಸಲಾಗಿದೆ. ವಿಷಕಾರಿ ಅನಿಲ ಹೊರ ಹಾಕುವ ಕಾರ್ಖಾನೆಗಳನ್ನು ಸ್ಥಗಿತಗೊಳಿಸಲು ತೀರ್ಮಾನ.
· ಹಿರಿಯ ನಾಗರಿಕರಿಗಾಗಿ 9,000 ಕೋಟಿ ರೂ ಮೀಸಲಾಗಿಸಿದೆ.
· 5.50 ಲಕ್ಷ ಕೋಟಿ ಸಾರ್ವಜನಿಕ ಬ್ಯಾಂಕ್ ಗಳಿಗೆ ಅನುದಾನ.
· ಲಡಾಖ್ ಅಭಿವೃದ್ಧಿಗೆ 5958 ಕೋಟಿ ಮೀಸಲು ಮತ್ತು ಜಮ್ಮು ಕಾಶ್ಮೀರ ಅಭಿವೃದ್ಧಿಗೆ 30,757 ಕೋಟಿ ರೂ. ಅನುದಾನ ಮೀಸಲಾಗಿಸಿದೆ.
· ಪರಿಶಿಷ್ಟ ಜಾತಿ, ಇತರೆ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ 85,000 ಕೋಟಿ ರೂ. ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ 53,700 ಕೋಟಿ ರೂ. ಮೀಸಲಾಗಿಸಿದೆ.
· ಹವಾಮಾನ ಮತ್ತು ಪರಿಸರ ಮಾಲಿನ್ಯ ತಡೆಗೆ 4,400 ಕೋಟಿ ಅನುದಾನ ಮೀಸಲಾಗಿಸಿ ಹೆಚ್ಚು ವಿಷಕಾರಿ ಅನಿಲಗಳನ್ನು ಹೊರಹಾಕುವ ಕಾರ್ಖಾನೆ ಮುಚ್ಚಲು ತೀರ್ಮಾನಿಸಿದೆ.
· ಪ್ರವಾಸೋದ್ಯಮ ಇಲಾಖೆಗೆ 2500 ಕೋಟಿ ಅನುದಾನ ಮೀಸಲಾಗಿಸಿ ಅಹಮದಾಬಾದ್ ನಲ್ಲಿ ಸಿಂಧೂ ನಾಗರೀಕತೆಯನ್ನು ಸಾರುವ ಹೊಸ ಮ್ಯೂಸಿಯಂ ಸ್ಥಾಪನೆ. ಐತಿಹಾಸಿಕ ಸ್ಥಳಗಳಾಗಿ 5 ಪ್ರಮುಖ ಪುರಾತತ್ವ ಸ್ಥಳಗಳ ಅಭಿವೃದ್ಧಿಪಡಿಸಲು ಗುರಿ ಹೊಂದಿದೆ.
· 1.7 ಲಕ್ಷ ಕೋಟಿ ರೂ. ಸಾರಿಗೆ ವಿಭಾಗಕ್ಕೆ ಮೀಸಲಿರಿಸಲಾಗಿದೆ.
· ಆರೋಗ್ಯಕ್ಕಾಗಿ 69 ಸಾವಿರ ಕೋಟಿ ರೂ. ಅನುದಾನ ಮೀಸಲಾಗಿಸಿದೆ. 12 ರೋಗಗಳಿಗಾಗಿ ʼಮಿಷನ್ ಇಂಧ್ರ ಧನುಷ್ʼ ಯೋಜನೆಯ ವಿಸ್ತರಣೆ, 112 ಜಿಲ್ಲೆಗಳಲ್ಲಿ ಆಸ್ಪತ್ರೆಗಳ ಆರಂಭಕ್ಕೆ ಕ್ರಮ. ಮತ್ತು ಎಲ್ಲಾ ಜಿಲ್ಲೆಗಳಲ್ಲಿ ಜನೌಷಧ ಮಳಿಗೆ ಸ್ಥಾಪನೆಗೆ ಒತ್ತುನೀಡಲಾಗಿದೆ.
· ಸಾರ್ವಜನಿಕ ಬ್ಯಾಂಕ್‌ಗಳಿಗೆ 3.50 ಲಕ್ಷ ಕೋಟಿ ರೂ. ಅನುದಾನ ನೀಡುವ ಮೂಲಕ ಬ್ಯಾಂಕಿಂಗ್ ಕ್ಷೇತ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ.
· ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕಾರ್ಯಾರಂಭಕ್ಕೆ ಒತ್ತು. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಒಟ್ಟು ವೆಚ್ಚ 18,600 ಕೋಟಿ ರೂ. ಆಗಲಿದೆ. ಇದರಲ್ಲಿ 10,800 ಕೋಟಿ ರೂ. ಅನುದಾನವನ್ನು ಕೇಂದ್ರ ಸರಕಾರ ಒದಗಿಸಲಿದೆ. 2024ರೊಳಗೆ 100 ವಿಮಾನ ನಿಲ್ದಾಣಗಳನ್ನು ಆರಂಭಿಸಲು ಸಿದ್ಧತೆ ನಡೆಸಲಾಗಿದೆ.
· ಪ್ರವಾಸೋದ್ಯಮ ಕ್ಷೇತ್ರಕ್ಕೆ 2500 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಐತಿಹಾಸಿಕ ಮಹತ್ವ ಸಾರುವ ಮ್ಯೂಸಿಯಂಗಳನ್ನು ಆರಂಭಿಸಲಾಗುವುದು.
· ವಿತ್ತೀಯ ಕೊರತೆಯನ್ನು ಒಪ್ಪಿಕೊಂಡ ಕೇಂದ್ರ ಸರಕಾರ. 2020ರಲ್ಲಿ ವಿತ್ತೀಯ ಕೊರತೆ ಶೇ.3.8 ರಷ್ಟಿದೆ. 2021 ರಲ್ಲಿ ಶೇ. 3.5 ಮಾಡುವ ಗುರಿ ಹೊಂದಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.