ನವೆಂಬರ್ 23ರಂದು ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಮನ್ಸ್ ಸಿಬಿಐ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದೆ.
ಈ ಸುದ್ದಿಯನ್ನು ಧೃಡೀಕರಿಸಿದ ಡಿಕೆ ಶಿವಕುಮಾರ್, ಬೆಂಗಳೂರು ಸಿಬಿಐ ಕಚೇರಿಯಿಂದ ಅಕ್ಟೋಬರ್ 5 ರಂದು ತಮ್ಮ ನಿವಾಸದ ಮೇಲೆ ನಡೆದಿದ್ದ ದಾಳಿ ಸಂಬಂಧ ತಮಗೆ ನ.19 ರಂದು ಸಮನ್ಸ್ ಜಾರಿಯಾಗಿರುವುದು ನಿಜ. ನವೆಂಬರ್ 23 ರಂದು ಹಾಜರಾಗಲು ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದೇ ಮೊದಲ ಬಾರಿಗೆ ಸಿಬಿಐ ಸಮನ್ಸ್ ನೋಟಿಸ್ ನೀಡಿದೆ. ನ.19ರಂದು ಮಗಳ ನಿಶ್ಚಿತಾರ್ಥದಲ್ಲಿ ಇದ್ದದರಿಂದ ಸಿಬಿಐ ಕಚೇರಿಗೆ ಹಾಜರಾಗಲಾಗಲಿಲ್ಲ. ಹಾಗೂ ನ.22 ರಿಂದ ಉತ್ತರ ಕರ್ನಾಟಕ ಪ್ರವಾಸದಲ್ಲಿರುವುದರಿಂದ ಅಂದು ಕೂಡ ಹಾಜರಾಗಲು ಸಾಧ್ಯವಾಗುವುದಿಲ್ಲ. ಅದರ ಬದಲಾಗಿ ನ.25 ರಂದು ಸಂಜೆ 4 ಗಂಟೆಗೆ ಸಿಬಿಐ ಕಚೇರಿ ವಿಚಾರಣೆಗೆ ಹಾಜರಾಗುವುದಾಗಿ ಮನವಿ ಮಾಡಿದ್ದೇನೆ. ಇದಕ್ಕೆ ಸಿಬಿಐ ಒಪ್ಪಿಗೆ ಸೂಚಿಸಿದೆ ಎಂದು ಅವರು ತಿಳಿಸಿದ್ದಾರೆ.
ಅಕ್ಟೋಬರ್ 5 ರಂದು ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಶಿವಕುಮಾರ್ ಆಪ್ತರ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಪ್ರಕರಣ ಸಂಬಂಧ ವಿಚಾರಣೆ ನಡೆಸುಲು ಸಮನ್ಸ್ ನೀಡಿದೆ.