• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಕೃಷಿ ಕಾಯ್ದೆ ವಿರುದ್ದ ರಾಷ್ಟ್ರಪತಿ ಭೇಟಿಯಾದ ಕಾಂಗ್ರೆಸ್‌ ನಿಯೋಗ; ಪ್ರಧಾನಿ ವಿರುದ್ದ ರಾಗಾ ವಾಗ್ದಾಳಿ

by
December 24, 2020
in ದೇಶ
0
ಕೃಷಿ ಕಾಯ್ದೆ ವಿರುದ್ದ ರಾಷ್ಟ್ರಪತಿ ಭೇಟಿಯಾದ ಕಾಂಗ್ರೆಸ್‌ ನಿಯೋಗ; ಪ್ರಧಾನಿ ವಿರುದ್ದ ರಾಗಾ ವಾಗ್ದಾಳಿ
Share on WhatsAppShare on FacebookShare on Telegram

ಕೇಂದ್ರ ಸರ್ಕಾರ ಕೃಷಿ ವಿರೋಧಿ ನೀತಿ ವಿರೋಧಿಸಿ ರೈತರೆಲ್ಲ ಒಂದುಗೂಡಿ ದೇಶದಲ್ಲಿ 27 ದಿನದಿಂಧ ನಡೆಸುತ್ತಿರುವ ಪ್ರತಿಭಟನೆಗೆ ಕೇಂದ್ರದ ವಿರೋಧ ಪಕ್ಷದ ನಾಯಕರು ಕೃಷಿಕಾನೂನಿಗೆ ಸಂಬಂಧಿಸಿದಂತೆ ಮತ್ತು ರೈತರ ಪ್ರತಿಭಟನೆಗೆ ಸರ್ಕಾರ ಉತ್ತರ ನೀಡುವಂತೆ ಲಿಖಿತ ರೂಪದಲ್ಲಿ ರಾಷ್ಟ್ರಪತಿಗೆ ಪತ್ರ ರವಾನಿಸಿದ್ದಾರೆ. ಮೋದಿಯೊಬ್ಬ ಕಳ್ಳ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಗುರುವಾರದಂದು ರಾಹುಲ್ ಗಾಂಧಿ ನಾಯಕತ್ವದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ, ಕಾಂಗ್ರೆಸ್‌ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರನ್ನು ಒಳಗೊಂಡ ನಿಯೋಗ ರಾಷ್ಟ್ರಪತಿಭವನಕ್ಕೆ ಭೇಟಿ ನೀಡಿ ಕೃಷಿಕಾಯ್ದೆಗಳನ್ನು ತಡೆದು ರೈತರಿಗೆ ನ್ಯಾಯ ಕೊಡಿಸಿ ಮನವಿ ಮಾಡಿಕೊಂಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇತ್ತ ಕಾಂಗ್ರೆಸ್ ನಾಯಕರು ರಾಷ್ಟ್ರಪತಿ ಭವನದವರೆಗೆ ಹಮ್ಮಿಕೊಂಡ ಪಾದಯಾತ್ರೆಯನ್ನು ಪೊಲೀಸರು ತಡೆದಿದ್ದರು. ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಸೇರಿದಂತೆ ಹಲವು ನಾಯಕರನ್ನು ಈ ಸಂದರ್ಭದಲ್ಲಿ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಸರ್ಕಾರ ಅಧಿಕಾರಿಗಳನ್ನು ತಮಗೆ ಬೇಕಂತೆ ನಡೆಸಿಕೊಳ್ಳುತ್ತಿದೆ ಎಂದು ಕೇಂದ್ರ ಸರ್ಕಾರ ವಿರುದ್ಧ ರಾಃಉಲ್‌ ಗಾಂಧಿ ಹರಿಹಾಯ್ದಿದ್ದಾರೆ.

ಬಂಡವಾಳಶಾಹಿಗಳನ್ನು ಮೋದಿ ಉದ್ಧಾರ ಮಾಡಲು ಹೊರಟಿದ್ದಾರೆ. ದೇಶದ ಜನತೆಗೆ ಮತ್ತು ರೈತರಿಗೆ ಈ ಸತ್ಯ ತಿಳಿದೇ ರೈತರು ಪ್ರಧಾನಿ ಮೋದಿಯ ಮೋಡಿನ ಮಾತಿಗೆ ಮೋಸ ಹೋಗದೆ ಪ್ರತಿಭಟನೆಯನ್ನು ಮುಂದುವರೆಸುತ್ತಿರುವುದು. ಈ ವೇಳೆ ಸರ್ಕಾರ ರೈತರನ್ನು ಕೀಳುಮಟ್ಟದಲ್ಲಿ ನೋಡಿ ಅವಮಾನವೀಯವಾಗಿ ನಡೆಸಿಕೊಂಡಿದ್ದಾರೆ. ದೆಹಲಿಯ ಗಡಿಯಲ್ಲಿ ಹೋರಾಡುವ ರೈತರಿಗೆ ಮೋದಿಯೊಬ್ಬ ಕಳ್ಳ ಎಂದು ತಿಳಿದಿದೆ,” ಎಂದು ರಾಹುಲ್ ಗಾಂಧಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ರೈತರನ್ನು ಹಾಗೂ ಕಾರ್ಮಿಕರನ್ನು ಎದುರಿಸುವ ಶಕ್ತಿ ದೇಶದಲ್ಲಿ ಯಾರಿಗೂ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರಶ್ನೆ ಮಾಡುವ, ನ್ಯಾಯ ಕೇಳುವ ಹಕ್ಕಿದೆ. ಈ ರೈತರ ಪ್ರತಿಭಟನೆ ಕೇವಲ ಬಿಜೆಪಿ, ಆರ್‌ಎಸ್‌ಎಸ್ ನಂತಹ ಸಂಸ್ಥೆಗಳಿಗೆ ಮಾತ್ರ ನಷ್ಟ ಉಂಟುಮಾಡುವುದಿಲ್ಲ, ಬದಲಗಿ ಸಂಪೂರ್ಣ ದೇಶಕ್ಕೆ ನಷ್ಟವನ್ನು ಉಂಟುಮಾಡುತ್ತದೆ. ಹೀಗೆ ಮಾಡಿದರೆ ದೇಶದಲ್ಲಿ ಅಶಾಂತಿಯ ವಾತಾವರಣ ಹೆಚ್ಚುತ್ತದೆ. ಈ ಬಗ್ಗೆ ಸರ್ಕಾರ ಬಹುಬೇಗನೆ ಎಚ್ಚೆತ್ತುಕೊಂಡು ಕಾಯ್ದೆಯನ್ನು ಹಿಂಪಡೆಯುಬೇಕು ಎಂದು ರಾಹುಲ್‌ ಗಾಂಧಿ ಸರ್ಕಾರವನ್ನು ಎಚ್ಚರಿಸಿದ್ದಾರೆ.

Tags: RAHUL GANDHIA AGAINST MODI GOVT
Previous Post

ಏಷ್ಯಾದ ಕರೆನ್ಸಿಗಳಲ್ಲಿಯೇ ಅತೀ ಹೆಚ್ಚು ಕುಸಿತ ಕಂಡ ಭಾರತದ ರೂಪಾಯಿ

Next Post

ದೆಹಲಿ ಜಲಮಂಡಳಿ ಕಛೇರಿಯನ್ನು ಧ್ವಂಸಗೊಳಿಸಿದ ಬಿಜೆಪಿ ಗೂಂಡಾಗಳು; AAP ಆರೋಪ

Related Posts

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ
Top Story

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

by ಪ್ರತಿಧ್ವನಿ
May 15, 2026
0

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಯುದ್ಧದ ಸ್ಥಿತಿ ಹಾಗೂ ಉದ್ವಿಗ್ನ ಪರಿಸ್ಥಿತಿ ಪರಿಣಾಮ ಇದೀಗ ಭಾರತಕ್ಕೂ ತಟ್ಟಿದೆ, ಇದರ ಮುನ್ನೇಚ್ಚರಿಕೆ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ...

Read moreDetails
ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

ವಿದ್ಯುತ್ ಉತ್ಪಾದನೆಯಲ್ಲಿ ಮಹಿಳಾ ಸಿಬ್ಬಂದಿ ಸೇವೆ ಶ್ಲಾಘನೀಯ: ಗೌರವ್ ಗುಪ್ತ

May 14, 2026
ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೆಚ್ಚು ಉದ್ಯೋಗಾವಕಾಶ: ಕ್ರೆಡಲ್ ಎಂ.ಡಿ. ಕೆ.ಪಿ. ರುದ್ರಪ್ಪಯ್ಯ

ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೆಚ್ಚು ಉದ್ಯೋಗಾವಕಾಶ: ಕ್ರೆಡಲ್ ಎಂ.ಡಿ. ಕೆ.ಪಿ. ರುದ್ರಪ್ಪಯ್ಯ

May 14, 2026
ಮೋದಿ ಮಾತಿಗೆ ಬುಲೆಟ್‌ ಏರಿದ ಫಡ್ನವೀಸ್‌ : ಮಹಾರಾಷ್ಟ್ರದಲ್ಲಿ‌ ಇನ್ಮುಂದೆ ಇಂಧನ ಮಿತವ್ಯಯಕ್ಕೆ ಯಾವೆಲ್ಲ ರೂಲ್ಸ್..?

ಮೋದಿ ಮಾತಿಗೆ ಬುಲೆಟ್‌ ಏರಿದ ಫಡ್ನವೀಸ್‌ : ಮಹಾರಾಷ್ಟ್ರದಲ್ಲಿ‌ ಇನ್ಮುಂದೆ ಇಂಧನ ಮಿತವ್ಯಯಕ್ಕೆ ಯಾವೆಲ್ಲ ರೂಲ್ಸ್..?

May 14, 2026
3ನೇ ಹಂತದ SIR : ಕರ್ನಾಟಕ ಸೇರಿದಂತೆ ಯಾವ್ಯಾವ ರಾಜ್ಯಗಳಲ್ಲಿ ಮತಪಟ್ಟಿ ಪರಿಷ್ಕರಣೆ..?

3ನೇ ಹಂತದ SIR : ಕರ್ನಾಟಕ ಸೇರಿದಂತೆ ಯಾವ್ಯಾವ ರಾಜ್ಯಗಳಲ್ಲಿ ಮತಪಟ್ಟಿ ಪರಿಷ್ಕರಣೆ..?

May 14, 2026
Next Post
ಎರಡನೇ ದಿನಕ್ಕೆ ಕಾಲಿಟ್ಟ “ಕನ್ನಡ ವಿವಿ ಉಳಿಸಿ” ಭಿತ್ತಿಪತ್ರ ಚಳವಳಿ

ಎರಡನೇ ದಿನಕ್ಕೆ ಕಾಲಿಟ್ಟ “ಕನ್ನಡ ವಿವಿ ಉಳಿಸಿ” ಭಿತ್ತಿಪತ್ರ ಚಳವಳಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada