ಕಳೆದ ಒಂದು ದಿನದಲ್ಲಿ 5199 ಹೊಸ ಕರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಕರ್ನಾಟಕದಲ್ಲಿ ಇದುವರೆಗೂ 96141 ಕರೋನಾ ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ. ಕರೋನಾ ಸೋಂಕಿತರಾಗಿದ್ದ 2088 ಮಂದಿ ಇಂದು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಒಟ್ಟು 35838 ಮಂದಿ ಕರೋನಾ ಸೋಂಕಿತರು ಸೋಂಕಿನಿಂದ ಗುಣಮುಖರಾಗಿ ಮನೆ ಸೇರಿದ್ದಾರೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 82 ಮಂದಿ ಸೋಂಕಿತರು ಸೋಂಕಿನಿಂದ ಮೃತಪಟ್ಟಿದ್ದು, ಒಟ್ಟು 1878ಮಂದಿಯನ್ನು ಕರೋನಾ ಸೋಂಕು ಬಲಿ ಪಡೆದುಕೊಂಡಿದೆ. ರಾಜ್ಯದಲ್ಲಿ ಪ್ರಸ್ತುತ 58417 ಸಕ್ರಿಯ ಕರೋನಾ ಪ್ರಕರಣಗಳಿವೆ. ಅವರಲ್ಲಿ 632 ಮಂದಿಗೆತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಗಳೂರು ನಗರವೊಂದರಲ್ಲೇ 1950 ಕರೋನಾ ಸೋಂಕಿತರು ಹೊಸದಾಗಿ ಕಂಡುಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 45453 ತಲುಪಿದೆ. ಇದುವರೆಗೂ 11405 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕರೋನಾ ಸೋಂಕಿನಿಂದಾಗಿ ಇಂದು ನಗರವೊಂದರಲ್ಲೇ 29 ಮಂದಿ ಅಸುನೀಗಿದ್ದಾರೆ. ಇದುವರೆಗೂ 891 ಮಂದಿ ಬೆಂಗಳೂರಿನಲ್ಲಿ ಕರೋನಾ ಕಾರಣಕ್ಕೆ ಮೃತಪಟ್ಟಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 33156 ಸಕ್ರಿಯ ಸೋಂಕಿತರ ಪ್ರಕರಣಗಳಿವೆ.