ಲಾಕ್‌ಡೌನ್ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ವೇಳಾಪಟ್ಟಿಯನ್ನು ಕನ್ನಡ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮೇ 19 ರಂದು ಪ್ರಕಟಗೊಳಿಸಿದೆ. ಜೂನ್ 25 ರಂದು ಶುರು ಆಗುವ ಪರೀಕ್ಷೆಗಳು ಜುಲೈ 3 ರ ಒಳಗಡೆ ಮುಗಿಯಲಿದೆ.
ಪರೀಕ್ಷಾ ಅಭ್ಯರ್ಥಿಗಳು ಶಿಕ್ಷಣ ಇಲಾಖೆ ಈಗಾಗಲೇ ಹೇಳಿರುವ ಮುನ್ನೆಚ್ಚರಿಕಾ ಕ್ರಮವನ್ನು ಪಾಲಿಸಿ ಪರೀಕ್ಷೆಗಳಿಗೆ ಹಾಜರಾಗಬೇಕು ಎಂದು ಕಳೆದ ವಾರ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದರು.
ಪರೀಕ್ಷಾ ವೇಳಾಪಟ್ಟಿ
25/06/2020 ದ್ವಿತೀಯ ಭಾಷೆ (ಕನ್ನಡ/ ಇಂಗ್ಲೀಷ್)
27/06/2020 ಗಣಿತ
29/06/2020 ವಿಜ್ಞಾನ
01/07/2020 ಸಮಾಜ ವಿಜ್ಞಾನ
02/07/2020 ಪ್ರಥಮ ಭಾಷೆ (ಕನ್ನಡ, ಇಂಗ್ಲೀಷ್, ಸಂಸ್ಕೃತ, ಹಿಂದಿ, ಉರ್ದು ಹಾಗೂ ಇತರೆ)
03/07/2020 ತ್ರತೀಯ ಭಾಷೆ (ತುಳು, ಸಂಸ್ಕೃತ, ಕೊಂಕಣಿ, ಅರೇಬಿಕ್, ಪರ್ಷಿಯನ್ ಹಾಗೂ ಇತರೆ)
ಎಲ್ಲಾ ಮುಖ್ಯ ವಿಷಯಗಳ ಪರೀಕ್ಷೆಗಳು ಬೆಳಗ್ಗೆ 10:30 ಗೆ ಆರಂಭವಾಗಲಿದೆ.