• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಉಪಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ; ಐಕ್ಯ ಹೋರಾಟ ವೇದಿಕೆ ಕರೆ

by
October 27, 2020
in ಕರ್ನಾಟಕ
0
ಉಪಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ; ಐಕ್ಯ ಹೋರಾಟ ವೇದಿಕೆ ಕರೆ
Share on WhatsAppShare on FacebookShare on Telegram

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇತ್ತೀಚೆಗೆ ತಂದಿರುವ ಕೃಷಿ ಸಂಬಂಧಿತ ಮಸೂದೆಗಳ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಲು ವ್ಯಕ್ತವಾಗುತ್ತಿವೆ. ಕರ್ನಾಟಕದಲ್ಲೂ ತೀವ್ರತರವಾದ ಪ್ರತಿಭಟನೆಗಳು ನಡದಿದ್ದು, ವಿರೋಧಗಳು ಎದುರಾಗತ್ತಲೇ ಇವೆ. ಈ ನಡುವೆ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆ ನಿಗದಿಯಾಗಿದ್ದು, ಪ್ರತಿಭಟನೆಯ ಸುದ್ದಿಯನ್ನು ಚುನಾವಣಾ ಕಾವು ನುಂಗಿ ಹಾಕಿದೆ.

ADVERTISEMENT

Also Read: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೀತಿಗಳನ್ನು ವಿರೋಧಿಸಿ ‘ಪರ್ಯಾಯ ಜನತಾ ಅಧಿವೇಶನ’

ಕೃಷಿ ಮಸೂದೆಗಳ ವಿರುದ್ಧ ಸತತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತ-ದಲಿತ-ಕಾರ್ಮಿಕರ ಐಕ್ಯ ಹೋರಾಟ ವೇದಿಕೆಯು, ರೈತ-ದಲಿತ-ಕಾರ್ಮಿಕ-ಜನಸಾಮಾನ್ಯರ ವಿರೋಧಿ ಸುಗ್ರೀವಾಜ್ಞೆಗಳನ್ನು ಜಾರಿಗೆ ತಂದಿರುವ ಬಿಜೆಪಿ ಪಕ್ಷಕ್ಕೆ ಚುನಾವಣೆಯಲ್ಲಿ ಸರಿಯಾಗಿ ಪಾಠ ಕಲಿಸಲು ಕರೆ ನೀಡಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟನೆ ಮಾಡಿರುವ ಐಕ್ಯ ಹೋರಾಟ ವೇದಿಕೆ, ʼನೋಟಿನ ರಾಜಕೀಯʼಕ್ಕಾಗಿ ರೈತ-ದಲಿತ-ಕಾರ್ಮಿಕರ-ಜನಸಾಮಾನ್ಯರ ವಿರೋಧಿ ಸುಗ್ರೀವಾಜ್ಞೆಗಳನ್ನು ಹೊರಡಿಸಿರುವ ಬಿಜೆಪಿ ಪಕ್ಷಕ್ಕೆ ಉಪಚುನಾವಣೆಯಲ್ಲಿ ʼಓಟಿನ ರಾಜಕೀಯʼದ ಮೂಲಕ ತಕ್ಕ ಪಾಠ ಕಲಿಸೋಣ ಎಂದು ಜನತೆಗೆ ವಿನಂತಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗಳನ್ನು ಖಂಡಿಸಿರುವ ಐಕ್ಯ ಹೋರಾಟ ವೇದಿಕೆಯು, ಒಂದಾದ ಮೇಲೊಂದರಂತೆ ಜಾರಿಗೆ ತಂದಿರುವ ರೈತ, ದಲಿತ, ಕಾರ್ಮಿಕ ಹಾಗೂ ಜನಸಾಮಾನ್ಯರ ವಿರೋಧಿ ಸುಗ್ರೀವಾಜ್ಞೆ ಮತ್ತು ಕಾಯ್ದೆಗಳ ಬಗ್ಗೆ ದೇಶದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವುದೆ. ಇಡೀ ದೇಶವೇ ಕರೋನಾ ಮಹಾ ಪಿಡುಗಿನ ಹೊಡೆತಕ್ಕೆ ಸಿಕ್ಕಿ ಕೈ, ಕಾಲು, ಬಾಯಿ ಕಟ್ಟಿ ಬಿದ್ದಿರುವಾಗ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ‘ನೋಟಿನ ರಾಜಕೀಯ’ಕ್ಕಾಗಿ ಕಾರ್ಪೋರೇಟ್ ವಲಯಕ್ಕೆ ತಲೆಬಾಗಿ ಉಳ್ಳವರಿಗೆ ಮಣೆ ಹಾಕುವ, ರೈತರ ಭೂಮಿ ಕಬಳಿಸುವ, ಕೃಷಿ ಮಾರುಕಟ್ಟೆಯನ್ನು ಸಂಪೂರ್ಣ ಖಾಸಗೀಕರಣಗೊಳಿಸುವ, ಭೂಮಿಯ ಹಂಚಿಕೆಯಲ್ಲಿ ದಲಿತರನ್ನು ಪೂರ್ತಿ ವಂಚಿಸುವ, ಕಾರ್ಮಿಕರ ಉದ್ಯೋಗದ ಹಕ್ಕು ಕಸಿಯುವ ಹುನ್ನಾರಗಳು ಅತ್ಯಂತ ಖಂಡನಾರ್ಹವಾಗಿವೆ ಎಂದು ಹೇಳಿದೆ.

Also Read: ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಭಾರತೀಯ ಕಿಸಾನ್ ಸಂಘದಿಂದ ಪ್ರತಿಭಟನೆ

ಕಾಳಸಂತೆಕೋರರ ಲೂಟಿಗೆ ಅನುವು ಮಾಡಿಕೊಡಲು ʼಅಗತ್ಯ ವಸ್ತು ಕಾಯಿದೆ’ಗೆ ಬದಲಾವಣೆ ತಂದು ಅನಗತ್ಯವಾಗಿ ಆಹಾರ ವಸ್ತುಗಳ ಬೆಲೆ ಏರುವಂತೆ ಮಾಡಲಾಗಿದೆ. ಪರಿಣಾಮವಾಗಿ ತೊಗರಿ ಮುಂತಾದ ದ್ವಿದಳ ಧಾನ್ಯಗಳ ಧಾರಣೆ ಈಗಾಗಲೇ ಏರಿದೆ. ಸುಗ್ರೀವಾಜ್ಞೆಗಳ ಮೂಲಕ ರಾಜ್ಯ ಸರ್ಕಾರ ಭೂಸುಧಾರಣೆ, ಎಪಿಎಂಸಿ, ಕಾರ್ಮಿಕ ಕಾಯಿದೆಗಳಿಗೆ ಧಿಡೀರನೆ ತಂದಿರುವ ಬದಲಾವಣೆಗಳು ಹಾಗೆ ಕೇಂದ್ರ ಸರ್ಕಾರ ಸಂಪೂರ್ಣ ರಾಜ್ಯದ ವ್ಯಾಪ್ತಿಗೆ ಬರುವ ಕೃಷಿ ಮಾರುಕಟ್ಟೆ ಮೇಲೆ ಹೊರಡಿಸಿರುವ ಕಾಯ್ದೆಗಳು ಹೇಗೆ ಅಪಾಯಕಾರಿ ಎಂದು ರಾಜ್ಯದ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕಳೆದ ಎರಡು ತಿಂಗಳಿಂದ ‘ರೈತ-ದಲಿತ-ಕಾರ್ಮಿಕರ ಐಕ್ಯ ಹೋರಾಟ ನಡೆಯುತ್ತಿದೆ.

ಸದಾ ಕಾಲವೂ ಸಮೃದ್ಧ ಆಹಾರ, ಹಾಲು, ಹಣ್ಣು, ತರಕಾರಿಗಳನ್ನು ದೇಶಕ್ಕೆ ಒದಗಿಸುವ ರೈತಾಪಿ ವರ್ಗಕ್ಕೆ ಸರ್ಕಾರ ಎಲ್ಲ ರೀತಿಯ ನೆರವು ನೀಡುವ ಬದಲು ಅನಗತ್ಯ, ಆತಂಕ, ಅಸಮಾಧಾನ ಉಂಟು ಮಾಡಿ, ಅವರು ಬೀದಿಗಿಳಿಯುವಂತೆ ಮಾಡಿದೆ. ಪರಿಣಾಮವಾಗಿ ಕಾಮ್ರೆಡ್ ಮಾರುತಿ ಮಾನ್ಪಡೆಯವರಂತಹ ಹಿರಿಯ ರೈತ ಮುಖಂಡರು ಕರೋನಾಕ್ಕೆ ತುತ್ತಾಗಿ ಅಮೂಲ್ಯ ಜೀವ ತೆರುವಂತಾದುದಕ್ಕೆ ಸರ್ಕಾರವೇ ನೇರ ಹೊಣೆಗಾರನಾಗಿದೆ. ಈ ಎಲ್ಲ ವಿಚಾರಗಳು ಈಗ ಬಂದಿರುವ ಉಪ ಚುನಾವಣೆಯಲ್ಲಿ ಮುಖ್ಯವಾಗಿ ಮತಪಟ್ಟಿಗೆಯಲ್ಲಿ ಅಭಿವ್ಯಕ್ತವಾಗಬೇಕು ಎನ್ನುವುದು ನಮ್ಮ ಗಟ್ಟಿ ನಿರೀಕ್ಷೆ ಎಂದು ಹೇಳಿದೆ.

ಚುನಾವಣಾ ಸಂದರ್ಭದಲ್ಲಿ ಸುದ್ದಿ ಮಾಧ್ಯಮ ಸಾಮಾಜಿಕ ಜಾಲತಾಣಗಳನ್ನು ವ್ಯವಸ್ಥಿತ ರೀತಿಯಲ್ಲಿ ದುರ್ಬಳಕೆ ಮಾಡಿಕೊಂಡು ಮತದಾರರನ್ನು ದಿಕ್ಕು ತಪ್ಪಿಸಿ ತಮ್ಮ ಗುರಿ ಸಾಧಿಸುವ ಕುತಂತ್ರದಲ್ಲಿ ಆಳುವ ಪಕ್ಷವಿಂದು ಅಪಾರ ಪರಿಣತಿ, ಸಾಮರ್ಥ್ಯ ಸಾಧಿಸಿದೆ. ಇದು ಹೀಗೇ ಮುಂದುವರಿದಲ್ಲಿ ಜನಪದ ಚಳವಳಿ, ಹೋರಾಟ, ಪ್ರತಿಭಟನೆಗಳು ವಿಫಲವಾಗುವುದು ಮಾತ್ರವಲ್ಲ, ಚುನಾವಣೆ ಆಧಾರಿತ ಜನತಂತ್ರಕ್ಕೆ ಭವಿಷ್ಯವೇ ಇಲ್ಲದಂತಾಗುವ ಹಾಗೂ ಜನಪ್ರತಿನಿಧಿಗಳ ಹರಾಜು-ಖರೀದಿಗಳೇ ಪ್ರಜಾತಂತ್ರವೆನ್ನಿಸುವ ಅಪಾಯ ನಮ್ಮ ಮುಂದೆ ಬಂದು ನಿಂತಿದೆ. ಈ ನಿರ್ಣಾಯಕ ಸಮಯದಲ್ಲಿ ಜನತಂತ್ರವನ್ನು ಉಳಿಸುವ ಹೊಣೆಗಾರಿಕೆ ನಮ್ಮೆಲ್ಲ ಮತದಾರದ ಮೇಲಿದೆ. ತಕ್ಷಣಕ್ಕೆ ಬಂದಿರುವ ಉಪ ಚುನಾವಣೆ ಈ ಜವಾಬ್ದಾರಿಯನ್ನು ದಿಟ್ಟವಾಗಿ ನಿರ್ವಹಿಸುವ ಅವಕಾಶ ನೀಡಿದ್ದು, ಇದರ ಸದುಪಯೋಗ ಮಾಡಿಕೊಳ್ಳುವ ಸಂಪೂರ್ಣ ಭರವಸೆ ಇದೆ ಎಂದು ತಿಳಿಸಿದೆ.

Also Read: ಕೃಷಿ ಮಸೂದೆ ವಿರೋಧಿ ರೈತರ ಆಕ್ರೋಶದ ಹಿಂದಿನ ಸಂದೇಶಗಳೇನು?

ಚುನಾವಣೆಯಲ್ಲಿ ಮತದಾರರನ್ನು ದಿಕ್ಕು ತಪ್ಪಿಸುವ ಹುನ್ನಾರಕ್ಕೆ ತಡೆ ಹಾಕಿ ಜನತಂತ್ರವನ್ನು ಉಳಿಸೋಣ. ರೈತ-ದಲಿತ-ಕಾರ್ಮಿಕ-ಜನಸಾಮಾನ್ಯರ ವಿರೋಧಿ ಸುಗ್ರೀವಾಜ್ಞೆಗಳನ್ನು ಜಾರಿಗೆ ತಂದಿರುವ ಬಿಜೆಪಿ ಪಕ್ಷಕ್ಕೆ ಚುನಾವಣೆಯಲ್ಲಿ ಸರಿಯಾಗಿ ಪಾಠ ಕಲಿಸೋಣ. ಆಹಾರ ಭದ್ರತೆ ನೀಡಿರುವ ರೈತರ ಅನ್ನದ ಋಣ ತೀರಿಸೋಣ ಎಂದು ಐಕ್ಯ ಹೋರಾಟ ವೇದಿಕೆಯು ಕರೆ ನೀಡಿದೆ.

ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟದ ಹಕ್ಕೊತ್ತಾಯಗಳು

  1. ಸರ್ಕಾರ ಭೂಸುಧಾರಣೆ, ಎಪಿಎಂಸಿ ಮತ್ತು ಕಾರ್ಮಿಕ ಕಾಯ್ದೆಗಳಿಗೆ ತಂದಿರುವ ಸುಗ್ರೀವಾಜ್ಞೆಗಳನ್ನು ಯಾವುದೇ ಕಾರಣಕ್ಕೂ ಮುಂದುವರಿಸಬಾರದು ಅಥವಾ ಮರು ಹೊರಡಿಸಬಾರದು. ಈ ಕಾಯ್ದೆಗಳಿಗಿಂತ ಹಿಂದಿನ ಯಥಾಸ್ಥಿತಿಯನ್ನು ಉಳಿಸಿಕೊಳ್ಳಬೇಕು

  2. ಭೂಸುಧಾರಣೆಯ ಮೂಲ ಆಶಯವಾದ ‘ಹೊಲದ ಒಡೆತನವನ್ನು ಉಳುವವನ ಕೈಯಿಂದ ಕಿತ್ತುಕೊಳ್ಳಕೂಡದು”. ಹಾಗೆ, ದಲಿತರು, ಭೂರಹಿತರು, ಕೃಷಿ ಕಾರ್ಮಿಕರಿಗೆ ಹೆಚ್ಚುವರಿ ಭೂಮಿ ಹಂಚಿಕೆ ಮೊದಲು ಆಗಬೇಕು

  3. ರಾಜ್ಯದ ‘ಕೃಷಿ ಭೂಮಿ ಸದ್ಬಳಕೆಗೆ ಮೊದಲು ಆದ್ಯತೆ ನೀಡಬೇಕು, ಭೂ ಕ್ರೂಢೀಕರಣ ಮತ್ತು ಭೂಸುಧಾರಣೆಯ ಮುಂದಿನ ಹಂತವಾದ ಸಹಕಾರಿ ಬೇಸಾಯಕ್ಕೆ ಮುನ್ನೆಡಯಬೇಕು.

  4. ರಾಜ್ಯದ ರೈತರಿಗೆ ಕೃಷಿ ಉತ್ಪಾದನೆಯನ್ನು ಲಾಭದಾಯಗೊಳಿಸುವ ಎಲ್ಲ ಕ್ರಮಗಳನ್ನು ಐಕ್ಯ ಹೋರಾಟ ಸ್ವಾಗತಿಸುತ್ತದೆ.

  5. ಯಾವುದೇ ಕಾರಣಕ್ಕೂ ಸ್ಪಷ್ಟ ಪರ್ಯಾಯ ವ್ಯವಸ್ಥೆ ಮಾಡದೆ ಬಡಜನರನ್ನು ಅವರ ಭೂಮಿ ಮತ್ತು ಮನೆಗಳಿಂದ ಒಕ್ಕಲೆಬ್ಬಿಸಬಾರದು.

  6. ರೈತರಿಗೆ ಯೋಗ್ಯ ಮಾರುಕಟ್ಟೆ ಒದಗಿಸಿ, ತೂಕ, ಖರೀದಿಯಲ್ಲಿ ವಂಚನೆ ತಪ್ಪಿಸಿ ಲಾಭದಾಯಕ ಧಾರಣೆ ಒದಗಿಸುವುದು ಸರ್ಕಾರದ ಹಸ್ತಕ್ಷೇಪ’ದಿಂದ ಮಾತ್ರ ಸಾಧ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ ಮಾರುಕಟ್ಟೆಯ ಖಾಸಗೀಕರಣಕವನ್ನು ಕೈಬಿಡಬೇಕು.

  7. ರೈತರ ಬೆಳೆಗಳಿಗೆ ಬಡ್ಡಿ ರಹಿತ ಅಡಮಾನ ಸಾಲ ಯೋಜನೆಯನ್ನು ಬಲಯುತಗೊಳಿಸಬೇಕು, ಬೆಲೆ ಕುಸಿತದಾದಾಗ ಎಲ್ಲ ಕೃಷಿ ಉತ್ಪನ್ನಗಳನ್ನ ಸರ್ಕಾರವೇ ಖರೀದಿಸುವ ವ್ಯವಸ್ಥೆ ಜಾರಿಗೆ ಬರಬೇಕು.

  8. ಕೃಷಿ ಉತ್ಪನ್ನಗಳ ಮಾರಾಟ ಹಾಗೂ ‘ಒಪ್ಪಂದ ಕೃಷಿ” ಇವುಗಳು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಇರುವ ವಿಚಾರಗಳು, ಪಂಜಾಬಿನಂತೆ ಕರ್ನಾಟಕದ ವಿಧಾನಸಭೆಯಲ್ಲೂ ಕೇಂದ್ರದ ಈ ಕಾಯಿದೆಗಳನ್ನು ವಿರೋಧಿಸುವ ಮತ್ತು ರದ್ದುಪಡಿಸುವಂತೆ ಆಗ್ರಹಿಸುವ ನಿರ್ಣಯ ಹೊರಬರಬೇಕು

  9. ಖ್ಯಾತ ಕೃಷಿ ವಿಜ್ಞಾನಿ ಸ್ವಾಮಿನಾಥನ್ ಮಾಡಿರುವ ಶಿಫಾರಸಿನ ಅನ್ವಯದ ಕನಿಷ್ಠ ಬೆಂಬಲ ಬೆಲೆ ಘೋಷಿಸಿ ಇದರ ಕಟ್ಟುನಿಟ್ಟು ಅನುಷ್ಠಾನಕ್ಕೆ ಶಾಸನ, ಕಾನೂನುಗಳನ್ನು ತಡಮಾಡದೇ ರೂಪಿಸಬೇಕು.

  10. ಈಗಿನ ಕಾಯ್ದೆಯಲ್ಲಿರುವ ಕಾರ್ಮಿಕರ ಹಿತಾಸಕ್ತಿಗೆ ಮಾರಕವಾಗುದ ನ್ಯೂನತೆಗಳನ್ನು ಸರಿಪಡಿಸಿ ಶಾರ್ಮಿಕ ಸ್ನೇಹಿ ಹಾಗೂ ಕೈಗಾರಿಕಾ ಸ್ನೇಹಿಯನ್ನಾಗಿ ಮಾಡುವುದರ ಜೊತೆಗೆ ಸಾರ್ವಜನಿಕ ಉದ್ದಿಮೆಗಳನ್ನು ಸದೃಢಗೊಳಿಸಬೇಕು

Tags: ಕಾರ್ಮಿಕರ ಐಕ್ಯ ಹೋರಾಟ ವೇದಿಕೆದಲಿತರಾಜರಾಜೇಶ್ವರಿ ನಗರ ಉಪಚುನಾವಣೆರೈತವಿಧಾನಸಭೆ ಉಪಚುನಾವಣೆಶಿರಾ ಉಪಚುನಾವಣೆ
Previous Post

ಕುತೂಹಲಕಾರಿ ಘಟ್ಟ ತಲುಪಿದ ಐಪಿಎಲ್‌: ನಾಲ್ಕನೇ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ

Next Post

ಶಿರಾ: ಮತದಾರರನ್ನು ಓಲೈಸಲು ಬಿಜೆಪಿಯಿಂದ ಆಮೀಷ; ಕಾಂಗ್ರೆಸ್‌ನಿಂದ ದೂರು ದಾಖಲು

Related Posts

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಯಾದಗಿರಿ..!

by ಪ್ರತಿಧ್ವನಿ
July 5, 2025
0

https://youtube.com/live/MVIPvxtGf0k

Read moreDetails
SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

July 5, 2025

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

July 5, 2025

Ranya Rao: ಅಕ್ರಮ ಚಿನ್ನ ಸಾಗಾಟಣೆಯ ನಟಿ ರನ್ಯಾ ರಾವ್ ಗೆ ಸೇರಿದ 34 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

July 5, 2025

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025
Next Post
ಶಿರಾ: ಮತದಾರರನ್ನು ಓಲೈಸಲು ಬಿಜೆಪಿಯಿಂದ ಆಮೀಷ; ಕಾಂಗ್ರೆಸ್‌ನಿಂದ ದೂರು ದಾಖಲು

ಶಿರಾ: ಮತದಾರರನ್ನು ಓಲೈಸಲು ಬಿಜೆಪಿಯಿಂದ ಆಮೀಷ; ಕಾಂಗ್ರೆಸ್‌ನಿಂದ ದೂರು ದಾಖಲು

Please login to join discussion

Recent News

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಯಾದಗಿರಿ..!

by ಪ್ರತಿಧ್ವನಿ
July 5, 2025
SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!
Top Story

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

by ಪ್ರತಿಧ್ವನಿ
July 5, 2025
Top Story

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

by ಪ್ರತಿಧ್ವನಿ
July 5, 2025
Top Story

Ranya Rao: ಅಕ್ರಮ ಚಿನ್ನ ಸಾಗಾಟಣೆಯ ನಟಿ ರನ್ಯಾ ರಾವ್ ಗೆ ಸೇರಿದ 34 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

by ಪ್ರತಿಧ್ವನಿ
July 5, 2025
ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,
Top Story

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?

ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?

July 5, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಯಾದಗಿರಿ..!

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada