ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳು ಅಂತರ್-ಧರ್ಮೀಯ ವಿವಾಹಗಳನ್ನು ನಿಯಂತ್ರಿಸಲು ಕಾನೂನು ರೂಪಿಸಲು ಹೊರಟಿರುವ ಬೆನ್ನಲ್ಲೇ ಉತ್ತರಾಖಂಡ್ ಸರ್ಕಾರ ಅದಕ್ಕೆ ವ್ಯತಿರಿಕ್ತವಾಗಿ ಅಂತರ್-ಧರ್ಮೀಯ, ಅಂತರ್-ಜಾತಿ ವಿವಾಹಗಳಿಗೆ ಪ್ರೋತ್ಸಾಹ ಧನ ನೀಡಲು ತೀರ್ಮಾನಿಸಿದೆ.
ಅಂತರ್-ಧರ್ಮೀಯ ಹಾಗೂ ಅಂತರ್-ಜಾತಿಯ ವಿವಾಹ ಮಾಡಿಕೊಳ್ಳುವವ ಜೋಡಿಗಳಿಗೆ 50,000 ಪ್ರೋತ್ಸಾಹ ಧನ ನೀಡುವುದಾಗಿ ಉತ್ತರಖಾಂಡ್ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಘೋಷಿಸಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಂತರ್ಜಾತಿ ವೈವಾಹಿಕ ಸಂದರ್ಭಗಳಲ್ಲಿ, ನಗದು ಪ್ರೋತ್ಸಾಹವನ್ನು ಪಡೆಯುವ ಒಂದು ಷರತ್ತು ಎಂದರೆ ಸಂವಿಧಾನದ 341 ನೇ ಪರಚ್ಛೇದದ ಪ್ರಕಾರ ಜೋಡಿಯಲ್ಲಿ ಒಬ್ಬರು ಪರಿಶಿಷ್ಟ ಜಾತಿಯವರಾಗಿರಬೇಕು.
ಅಂತರ್ಜಾತಿ ಮತ್ತು ಅಂತರ್-ಧಾರ್ಮಿಕ ವೈವಾಹಿಕ ಸಂಬಂಧಗಳಿಗೆ ನೀಡಲಾದ ಮೊತ್ತವು ರಾಷ್ಟ್ರೀಯ ಏಕತೆಯ ಮನೋಭಾವವನ್ನು ಉತ್ತೇಜಿಸಲು ಅತ್ಯಂತ ಸಹಾಯಕವಾಗುತ್ತದೆ ಎಂದು ತೆಹ್ರಿಯ ಸಮಾಜ ಕಲ್ಯಾಣ ಅಧಿಕಾರಿ ದೀಪಂಕರ್ ಘಿಲ್ಡಿಯಾಲ್ ಹೇಳಿದ್ದಾರೆ. ಅರ್ಹ ದಂಪತಿಗಳು ಮದುವೆಯ ನಂತರ ಒಂದು ವರ್ಷದವರೆಗೆ ನಗದು ಪ್ರೋತ್ಸಾಹಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದ್ದಾರೆ.
Also Read: ದೇಶವನ್ನು ವಿಭಜಿಸಲು ಲವ್ ಜಿಹಾದ್ ಪದವನ್ನು ಸೃಷ್ಟಿಸಲಾಗಿದೆ: ಗೆಹ್ಲೋಟ್
ಅಂತರ್ಜಾತಿಯ ವಿವಾಹಗಳಿಗೆ ಪ್ರೋತ್ಸಾಹ ಧನವನ್ನು ಕರ್ನಾಟಕ ಸರ್ಕಾರವು ನೀಡುತ್ತಿದ್ದು, ಪರಿಶಿಷ್ಟ ಜಾತಿ ವ್ಯಕ್ತಿಗೆ ವಿತ್ತೀಯ ಪ್ರೋತ್ಸಾಹ ನೀಡಲಾಗುತ್ತದೆ, ಅವರು ಕರ್ನಾಟಕದ ನಿವಾಸಿಯಾಗಿರಬೇಕು ಮತ್ತು ಹಿಂದೂ ಎಸ್ಸಿ ಅಲ್ಲದ ವ್ಯಕ್ತಿಯನ್ನು ಮದುವೆಯಾಗಬೇಕು. ದಂಪತಿಗಳ ಒಟ್ಟು ಆದಾಯವು ವರ್ಷಕ್ಕೆ 5 ಲಕ್ಷ ರೂ.ಗಿಂತ ಹೆಚ್ಚಿರಬಾರದು. ಪತಿ ಎಸ್‌ಸಿ ಸಮುದಾಯದವರಾಗಿದ್ದರೆ ದಂಪತಿಗೆ 2.5 ಲಕ್ಷ ರೂ., ಮತ್ತು ಪತ್ನಿ ಎಸ್‌ಸಿಗೆ ಸೇರಿದವರಾಗಿದ್ದರೆ 3 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ.
Also Read: ಗೋಹತ್ಯೆ ಹಾಗೂ ಲವ್ ಜಿಹಾದ್ ನಿಷೇಧಕ್ಕೆ ಕಾನೂನು ರೂಪಿಸಲಿರುವ ಕರ್ನಾಟಕ ಸರ್ಕಾರ