• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಉತ್ತಮ ಆಡಳಿತ ಪಟ್ಟಿಯಲ್ಲಿ ಕೇರಳ ಪ್ರಥಮ, ಕೊನೆಯ ಸ್ಥಾನದಲ್ಲಿ ಉತ್ತರ ಪ್ರದೇಶ

by
October 31, 2020
in ದೇಶ
0
ಉತ್ತಮ ಆಡಳಿತ ಪಟ್ಟಿಯಲ್ಲಿ ಕೇರಳ ಪ್ರಥಮ
Share on WhatsAppShare on FacebookShare on Telegram

ಬೆಂಗಳೂರು ಮೂಲದ ಲಾಭರಹಿತ ಸಂಸ್ಥೆ ಪಬ್ಲಿಕ್‌ ಅಫೇರ್ಸ್‌ ಸೆಂಟರ್, ಶುಕ್ರವಾರ ಬಿಡುಗಡೆ ಮಾಡಿದ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕ -2020 (Public Affairs Index-2020) ವರದಿಯ ಪ್ರಕಾರ, ಕೇರಳ ದೇಶದ ಅತ್ಯುತ್ತಮ ಆಡಳಿತ ಹೊಂದಿರುವ ರಾಜ್ಯಗಳಲ್ಲಿ ಮೊದಲ ಸ್ಥಾನ ಪಡೆದಿದ್ದು, ದೊಡ್ಡ ರಾಜ್ಯಗಳ ವಿಭಾಗದಲ್ಲಿ ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿದೆ.

ADVERTISEMENT

ಈಕ್ವಿಟಿ, ಬೆಳವಣಿಗೆ ಮತ್ತು ಸುಸ್ಥಿರತೆ ಎಂಬ ಮೂರು ಮಾನದಂಡಗಳ ಮೇಲೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಆಡಳಿತವನ್ನು ಮೌಲ್ಯಮಾಪನ ಮಾಡಿದ ವರದಿಯು ತಮಿಳುನಾಡು ಮತ್ತು ಆಂಧ್ರಪ್ರದೇಶವನ್ನು ದೊಡ್ಡ ರಾಜ್ಯಗಳಲ್ಲಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿರುವುದಾಗಿ ಹೇಳಿದೆ. ಕರ್ನಾಟಕ ನಾಲ್ಕನೇ ಸ್ಥಾನ ಪಡೆದಿದೆ. ಬಿಹಾರ ಮತ್ತು ಒಡಿಶಾ ಕೊನೆಯ ಮೂರು ರಾಜ್ಯಗಳಲ್ಲಿ ಸ್ಥಾನ ಪಡೆದ ಇತರ ಎರಡು ರಾಜ್ಯಗಳಾಗಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸಣ್ಣ ರಾಜ್ಯಗಳ ಪಟ್ಟಿಯಲ್ಲಿ ಗೋವಾ ಮೊದಲ ಸ್ಥಾನ ಅಲಂಕರಿಸಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ಚಂಢೀಗಢ ಮೊದಲ ಸ್ಥಾನ ಪಡೆದಿದೆ.

ಕಳೆದ ವರ್ಷವೂ ಅಗ್ರಸ್ಥಾನದಲ್ಲಿದ್ದ ಕೇರಳ ಸಾರ್ವಜನಿಕ ವ್ಯವಹಾರಗಳ ಸೂಚ್ಯಂಕದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಇನ್ನಷ್ಟು ಪ್ರಗತಿ ಸಾಧಿಸಿದೆ. ಕಳೆದ ವರ್ಷ 1.011 ಇದ್ದ ಅಂಕವು ಈ ಬಾರಿ 1.3989 ಗೆ ಏರಿದೆ. 18 ದೊಡ್ಡ ರಾಜ್ಯಗಳ ಪೈಕಿ 9 ರಾಜ್ಯಗಳು ನಕರಾತ್ಮಕ ಅಂಕ ಪಡೆದಿದೆ. ಉತ್ತರಪ್ರದೇಶವು -1.462 ಅಂಕದೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಸಣ್ಣ ರಾಜ್ಯಗಳಲ್ಲಿ ಗೋವಾ (1.746), ಮೇಘಾಲಯ (0.797) ಮತ್ತು ಹಿಮಾಚಲ ಪ್ರದೇಶ (0.725) ಅಂಕ ಪಡೆದರೆ, ಮಣಿಪುರ (-0.364) ಮತ್ತು ದೆಹಲಿ (-0.364) ಅಂಕ ಪಡೆದು ಕೊನೆ ಸ್ಥಾನದಲ್ಲಿವೆ.

ಸುಸ್ಥಿರ ಅಭಿವೃದ್ಧಿ ಮಾನದಂಡದ ಆಧಾರದಲ್ಲಿ ಈ ಸೂಚ್ಯಂಕದಲ್ಲಿ ರ್ಯಾಂಕ್‌ ನೀಡಲಾಗಿದೆ ಎಂದು ಪಟ್ಟಿ ಬಿಡುಗಡೆ ಮಾಡಿರುವ ಸಂಸ್ಥೆಯ ಅಧ್ಯಕ್ಷರಾಗಿರುವ ಇಸ್ರೋದ ಮಾಜಿ ಮುಖ್ಯಸ್ಥ ಕೆ ಕಸ್ತೂರಿ ರಂಗನ್‌ ಹೇಳಿದ್ದಾರೆ.

ವಿಶೇಷವೆಂದರೆ ಎರಡು ಕೋಟಿಗಿಂತ ಅಧಿಕ ಜನಸಂಖ್ಯೆಯಿರುವ ದೊಡ್ಡ ರಾಜ್ಯಗಳ ಪೈಕಿ ಮೊದಲ ನಾಲ್ಕೂ ಸ್ಥಾನವನ್ನು ದಕ್ಷಿಣದ ಭಾರತದ ರಾಜ್ಯಗಳು ಪಡೆದಿವೆ. ತೆಲಂಗಾಣ ಆರನೇ ಸ್ಥಾನ ಪಡೆದಿದೆ. ಎರಡು ಕೋಟಿಗೂ ಕಡಿಮೆ ಜನಸಂಖ್ಯೆಯಿರುವ ರಾಜ್ಯಗಳ ಪೈಕಿ ಗೋವಾ ಪ್ರಥಮ ಸ್ಥಾನ ಪಡೆದಿದೆ.

Tags: govt of keralaKeralaUttar PradeshUttar Pradesh Governmentಉತ್ತರ ಪ್ರದೇಶಉತ್ತರ ಪ್ರದೇಶ ಸರ್ಕಾರಕೇರಳ
Previous Post

ಮಂಗಳೂರು ವಿಮಾನ ನಿಲ್ದಾಣ ಅಧಿಕೃತವಾಗಿ ಅದಾನಿ ತೆಕ್ಕೆಗೆ

Next Post

ತನ್ನ ಸ್ಟಾರ್‌ ಪ್ರಚಾರಕ ಸ್ಥಾನಮಾನ ರದ್ದತಿ ವಿರುದ್ಧ ಸುಪ್ರೀಂ‌ ಮೆಟ್ಟಿಲೇರಿದ ಕಮಲ್‌ ನಾಥ್

Related Posts

Boat Tragedy In Vietnam
Top Story

BREAKING NEWS : ದೋಣಿ ಮುಳುಗಿ 15 ಭಾರತೀಯರ ದುರ್ಮರಣ : ವಿಯೆಟ್ನಾಂ ಪ್ರವಾಸಕ್ಕೆ ತೆರಳಿದ್ದವರು ಮಸಣಕ್ಕೆ..

by ಪ್ರತಿಧ್ವನಿ
July 11, 2026
0

ನವದೆಹಲಿ : ವಿಯೆಟ್ನಾಂನ ಫು ಕ್ವಾಕ್‌ ದ್ವೀಪದ (Phu Quoc Island) ಬಳಿಕ 32 ಮಂದಿ ಭಾರತೀಯ ಪ್ರವಾಸಿಗರನ್ನು (Indian Tourists) ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಡೆಯಾಗಿ 15...

Read moreDetails
DK Vs HDK

ಕಂಬಳದಿಂದ ವೈಶಿಷ್ಟ್ಯಪೂರ್ಣ ದಸರಾದ ಘನತೆಗೆ ಧಕ್ಕೆ ಬೇಡ : ಸರ್ಕಾರದ ನಡೆಗೆ HDK ವಿರೋಧ..!

July 11, 2026
Janardhan Reddy Vs Naidu

ಜನಾರ್ದನ ರೆಡ್ಡಿಗೆ ನಾಯ್ಡು ಸರ್ಕಾರದ ಶಾಕ್‌ : ಬ್ರಾಹ್ಮಣಿ ಸ್ಟೀಲ್ಸ್‌ಗೆ ನೀಡಿದ್ದ ಜಮೀನು ವಾಪಸ್..!

July 11, 2026
M P prakash Statue inaurgated BY Siddaramaiah

ದಿ. ಎಂ.ಪಿ. ಪ್ರಕಾಶ್‌ ಪ್ರತಿಮೆ ಅನಾವರಣಗೊಳಿಸಿದ ಮಾಜಿ ಸಿಎಂ ಸಿದ್ದರಾಮಯ್ಯ..

July 11, 2026
Zameer Vs Governer

ಮಾಜಿ ಸಚಿವ ಜಮೀರ್‌ಗೆ ಬಿಗ್‌ ಶಾಕ್‌ : ರಾಜ್ಯಪಾಲರ ಬಳಿ ಲೋಕಾಯುಕ್ತ ಕೇಳಿಕೊಂಡಿದ್ದೇನು..?

July 11, 2026
Next Post
ತನ್ನ ಸ್ಟಾರ್‌ ಪ್ರಚಾರಕ ಸ್ಥಾನಮಾನ ರದ್ದತಿ ವಿರುದ್ಧ ಸುಪ್ರೀಂ‌ ಮೆಟ್ಟಿಲೇರಿದ ಕಮಲ್‌ ನಾಥ್

ತನ್ನ ಸ್ಟಾರ್‌ ಪ್ರಚಾರಕ ಸ್ಥಾನಮಾನ ರದ್ದತಿ ವಿರುದ್ಧ ಸುಪ್ರೀಂ‌ ಮೆಟ್ಟಿಲೇರಿದ ಕಮಲ್‌ ನಾಥ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada