
ಕನ್ನಡದ ಮೊದಲ ದಿನಪತ್ರಿಕೆ ಮಂಗಳೂರ ಸಮಾಚಾರ ಕ್ರೈಸ್ತ ಧರ್ಮ ಪ್ರಚಾರಕ್ಕೆ ಸ್ವಿಟ್ಜ್ ರ್ ಲೆಂಡ್ ನಿಂದ ಭಾರತಕ್ಕೆ ಆಗಮಿಸಿದ ಮಿಶನರಿಗಳು ಬಾಸೆಲ್ ಮಿಶನ್ ಎಂಬ ಒಂದು ಸಂಸ್ಥೆಯನ್ನು ಮಂಗಳೂರಿನಲ್ಲಿ ಹುಟ್ಟು ಹಾಕುತ್ತಾರೆ. ಬಾಸೆಲ್ ಮಿಶನ್ ನಲ್ಲಿ 1841 ರಲ್ಲಿ ಬಾಸೆಲ್ ಮಿಶನ್ ಪ್ರೆಸ್ ನ್ನು ಸ್ಥಾಪಿಸುತ್ತಾರೆ. ಅಲ್ಲಿ ಮೊದಲು ಕಲ್ಲಚ್ಚು ಮುದ್ರಣ ಪ್ರಾರಂಭಿಸುತ್ತಾರೆ. ನಂತರ ಅಚ್ಚುಮೊಳೆ ಮುದ್ರಣವೂ ಆರಂಭವಾಗುತ್ತದೆ. 1843 ಜುಲೈ 1 ರಂದು “ಮಂಗಳೂರ ಸಮಾಚಾರ” ಹೆಸರಿನಿಂದ ಪತ್ರಿಕೆ ಹೊರತರಲಾಯಿತು. ಇದು ಒಂದು ತಿಂಗಳಿನಲ್ಲಿ ಎರಡು ಬಾರಿ ಪ್ರಕಟವಾಗುತ್ತಿತ್ತು. ಜರ್ಮನಿಯ ಕ್ರೈಸ್ತ ಮಿಷನರಿ ಹರ್ಮನ್ ಮೊಗ್ಲಿಂಗ್ ಎಂಬುವರು ಇದರ ಸಂಪಾದಕರು. ಮೊಗ್ಲಿಂಗ್ ಅವರು 1853 ರಲ್ಲಿ “ಮಂಗಳೂರು ಪಂಚಾಂಗ” ವನ್ನೂ ಸಹ ಹೊರತರುತ್ತಾರೆ.
ಕ್ರೈಸ್ತಮಿಷನರಿಗಳು ನಡೆಸಿದ ಮಂಗಳೂರ ಸಮಾಚಾರ ಪತ್ರಿಕೆಯಲ್ಲಿ ಧರ್ಮ ಪ್ರಚಾರದ ಕಾರ್ಯ ಮಾಡಲಿಲ್ಲ. ವರ್ತಮಾನ ಸುದ್ದಿಗಳನ್ನು ಪ್ರಕಟಿಸುವುದು ಅದರ ಮೂಲೋದ್ದೇಶವಾಗಿತ್ತು. ಇದು 16 ಆವೃತ್ತಿಗಳನ್ನು ಕಂಡು ಫೆಬ್ರವರಿ 15 1844 ರಲ್ಲಿ ಕೊನೆಗೊಳ್ಳುತ್ತದೆ. ಜುಲೈ -1 ರಂದು ಮೊದಲ ಬಾರಿಗೆ ವರ್ತಮಾನ ಪತ್ರಿಕೆ ಪ್ರಾರಂಭವಾದ ಕಾರಣ ಪತ್ರಿಕಾ ದಿನಾಚರಣೆಯನ್ನು ಜುಲೈ -1 ರಂದು ಆಚರಿಸಿಕೊಂಡು ಬರಲಾಗುತ್ತಿದೆ.

ಭಾರತೀಯ ಪತ್ರಿಕೋದ್ಯಮಕ್ಕೆ ಏನಾಗಿದೆ? ಏಕೆ ಇಷ್ಚು ಕೆಳಮಟ್ಟಕ್ಕೆಇಳಿದಿದೆ?
ಭಾರತದ ಪತ್ರಿಕೋದ್ಯಮವು ಸಂಕಷ್ಟದಲ್ಲಿದೆ. ಅದು ನಷ್ಟದ ಹಾದಿಯಲ್ಲಿದೆ. ಅದು ತನ್ನ ಆಕರ್ಷಣೆಯನ್ನು ಉಳಿಸಿಕೊಂಡಿಲ್ಲ. ಜನ ಪತ್ರಿಕೆಯನ್ನು ಓದುವುದನ್ನು ಕಮ್ಮಿ ಮಾಡಿದ್ದಾರೆ ಆದರೆ ಅವರಿಗೆ ಅದು ಅನಿವಾರ್ಯವೇನಲ್ಲ ಈಗ ಎಲ್ಲ ಬದಲಾಗಿದೆ ಯೂಟ್ಯೂಬ್ ವ್ಯಾಟ್ಸಾಪ್ ಫೇಸ್ಬುಕ್ ಇನ್ಸ್ಟಾಗ್ರಾಂ ಕಡೆ ಮೋರೆಯವೋಗಿದ್ದಾರೆ ಹಾಗಾಗಿ ಪತ್ರಿಕೆಗಳನ್ನು ಕೊಂಡು ಓದುವ ಅಭ್ಯಾಸವು ಮರೆಯಾಗುತ್ತಿದೆ ಅಥವಾ ಅತ್ಯಂತ ಕಡಿಮೆ ಆಗುತ್ತಿದೆ.
ಇದಕ್ಕೆ ಪ್ರತಿಯಾಗಿ ಪತ್ರಿಕೆಯ ಮುದ್ರಣ, ಹಂಚಿಕೆ, ಕಾಗದದ ಬೆಲೆ ನಿರಂತರವಾಗಿ ಹೆಚ್ಚಾಗುತ್ತಿದೆ ಅವುಗಳನ್ನು ನಿರ್ವಹಿಸುವುದಕ್ಕಾಗಿ ಪತ್ರಿಕೆಗಳ ಬೆಲೆಯನ್ನು ಅನಿವಾರ್ಯವಾಗಿ ಹೆಚ್ಚಿಸಬೇಕಾಗಿದೆ. ಆದರೆ ಪತ್ರಿಕೆಗಳ ಬೆಲೆಯನ್ನು ಹೆಚ್ಚಿಸಿದರೆ ಓದುಗರು ಅವುಗಳನ್ನು ಕೊಂಡುಕೊಳ್ಳುವುದು ಇನ್ನೂ ಕಡಿಮೆಯಾಗುವ ಸಾಧ್ಯತೆ ಇದೆ. ಹಾಗಾಗಿ ಪತ್ರಿಕೆಗಳ ಬೆಲೆಯನ್ನು ನಿಯಂತ್ರಣದಲ್ಲಿ ಇರಿಸಲು ಪ್ರಯತ್ನಿಸುತ್ತಾರೆ. ಈ ವೆಚ್ಚದ ವ್ಯತ್ಯಾಸವನ್ನು ಸರಿದೂಗಿಸಲು ಅನಿವಾರ್ಯವಾಗಿ ಅದಕ್ಕಾಗಿ ಜಾಹೀರಾತುಗಳ ಮೊರೆ ಹೋಗಬೇಕಾಗುತ್ತದೆ. ಜಾಹೀರಾತುಗಳಿಂದಲೂ ಸಹ ನಿರೀಕ್ಷೆ ಮಾಡಿದಂತಹ ಹಣ ಹೊಂದಾಣಿಕೆ ಮಾಡಲು ಸಾಧ್ಯವಾಗುವುದಿಲ್ಲ.
ಅದಕ್ಕಾಗಿ ಅವರು ಬೇರೆ ಬೇರೆ ಮೂಲಗಳ ಮೊರೆ ಹೋಗಬೇಕಾಗುತ್ತದೆ. ಅಂದರೆ ಬಂಡವಾಳಗಾರರ ಪರವಾಗಿ ಸುದ್ದಿಗಳನ್ನು ಮಾಡಬೇಕಾಗುತ್ತದೆ. ರಾಜಕೀಯದವರ ಹಂಗಿನಲ್ಲಿ ಬದುಕಬೇಕಾಗುತ್ತದೆ. ಮತ್ಯಾರೋ ಹೂಡಿಕೆದಾರರ ಕೈಕಾಲು ಹಿಡಿಯಬೇಕಾಗುತ್ತದೆ, ಹಾಗಾಗಿ ಪ್ರಾಮಾಣಿಕತೆ ಮತ್ತು ದಕ್ಷತೆ ಹಾಗೂ ನಿಷ್ಠೆಯನ್ನು ಎಲ್ಲಕ್ಕಿಂತ ಮುಖ್ಯವಾಗಿ ಪತ್ರಿಕಾಧರ್ಮವನ್ನು ಉಳಿಸಿಕೊಳ್ಳುವುದು ಕಷ್ಟ.
ಹಾಗಾಗಿ ಆರ್ಥಿಕವಾಗಿ ಕುಸಿತಕ್ಕೆ ಇಳಿದಿದೆ ಮತ್ತು ಆ ಕುಸಿತವನ್ನು ನಿರ್ವಹಿಸಿಕೊಳ್ಳಲು ನೈತಿಕವಾಗಿ ಪಾತಾಳವನ್ನು ಸೇರಿಕೊಂಡಿದೆ.. ಎಲ್ಲವುಗಳ ನಡುವೆಯೂ ಕೂಡ ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳಲು ಬೆರಳೆಣಿಕೆಯಷ್ಟು ಪತ್ರಕರ್ತರು ಪ್ರಯತ್ನಿಸುತ್ತಾರಾದರೂ ಈ ಭ್ರಷ್ಟ ವ್ಯವಸ್ಥೆಯ ನಡುವೆ ಅದು ತುಂಬಾ ತುಂಬಾ ಕಷ್ಟಕರವಾಗಿದೆ.

ಪತ್ರಿಕೆಗಳ ಕಥೆ ಹೀಗಾದರೆ ವಿದ್ಯುನ್ಮಾನ ಮಾಧ್ಯಮಗಳ ಕಥೆಯಂತೂ ಅತ್ಯಂತ ಕ್ಲಿಷ್ಟಕರವಾಗಿದೆ. ಅವುಗಳನ್ನು ಹೇಳುವುದಕ್ಕಿಂತ ಚರ್ಚಿಸುವುದಕ್ಕಿಂತ ಸುಮ್ಮನಿರುವುದೇ ವಾಸಿಯೇನೋ. ಅಷ್ಟೊಂದು ಸರ್ವನಾಶವಾಗಿ ಹೋಗಿದೆ ಅಲ್ಲಿನ ವ್ಯವಸ್ಥೆ. ಓದುಗರಿಗೆ ನನ್ನದೊಂದು ಮನವಿ 2000 ಇಸ್ವಿ ಹಿಂದೆ ಹೋದರೆ ಇಡೀ ದೇಶ ಬೆಳಿಗ್ಗೆ ಆಯ್ತು ಅಂದರೆ ಮನೆ ಮನೆಗೆ ದಿನಪತ್ರಿಕೆಗಳು ರಾರಜುಸುತ್ತಿದ್ದವು ಮನೆಯಲ್ಲಿ ಟೀ ಜೊತೆಗೆ ದಿನಪತ್ರಿಕೆಗಳಲ್ಲಿ ಕಾಲ ಕಳೆಯುತ್ತಿದ್ದರು
ಸಂಪಾದಕರಿಗೆ ಪತ್ರಕರ್ತರಿಗೆ ವರದಿಗಾರರಿಗೆ ಅವರ ಜೀವನ ಜೊತೆಗೆ ದಿನಪತ್ರಿಕೆಗಳಲ್ಲಿ ಜೀವನ ನಡೆಸುತ್ತಿದ್ದರು ದಿನಪತ್ರಿಕೆಗಳಲ್ಲಿ ಯಾವಾಗಲೂ ಅಲ್ಲಿ ನಡೆದಂತಹ ಮಾತನಾಡಿದಂತಹ ಸತ್ಯಾಸತತೆಯನ್ನ ಪ್ರಕಟಣೆ ಮಾಡುವಲ್ಲಿ ವರದಿಗಾರರು ಸಂಪಾದಕರು ಕೆಲಸ ಮಾಡುತ್ತಿದ್ದರು
ಓದುವುದರ ಮಜಾ ಮಜಾನೇ ಬೇರೆ
ಕಾಲ ಬದಲಾಗಿದೆ ದಿನಪತ್ರಿಕೆಗಳು ಕಡಿಮೆಯಾಗುತ್ತಿದೆ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಲ್ಲಾ ವಾಟ್ಸಾಪ್ ಲ್ಲಿ ಬರುವ ಪಿಡಿಎಫ್‌ಗೆ ಗಾಗಿ ಕಾಯುತ್ತಿದ್ದಾರೆ ಕಾರಣ
ಕಾಲ ಬದಲಾದ ಹಾಗೆ ನಾವು ಕೂಡ ಬದಲಾಗಲೇ ಬೇಕಾಗಿದೆ ನಾನು ಹೇಳುವ ಪ್ರಕಾರ ಬದಲಾದ ಕಾಲಘಟ್ಟ ನಡುವೆ ಜೀವನ ಸಾಗಿದೆ
ಭೂಮಿ ಅದೇ ಹಗಲು ಅದೇ ರಾತ್ರಿ ಅದೇ. ಮನುಷ್ಯತ್ವ ಎಂಬ ಪ್ರಾಣಿ ಬದಲಾಗಿದೆ ಎಲ್ಲಾ ಹಣದ ಹಿಂದೆ ಎಲ್ಲ ತಂತ್ರಜ್ಞಾನದ ಹಿಂದೆ
1995ರ ಇಂದಿನ ಕಾಲಘಟ್ಟದಲ್ಲಿ ಲ್ಯಾಂಡ್ಲೈನ್ ಬಂತು ಪೇಜರ್ ಬಂತು ಮೊಬೈಲ್ ಬಂತು ಮೊಬೈಲ್ ಬಂದ ಮೇಲೆ ಆಂಡ್ರಾಯ್ಡ್ ಮೊಬೈಲ್ ಬಂತು 2ಜಿ 4ಜಿ 5ಜಿ ಅಂಚೆ ಕಚೇರಿ ಇತ್ತು ಅಂಚೆ ಕಚೇರಿ ಕಾಗದ ಪತ್ರ ರವಾನೆ ಕಮ್ಮಿ ಆಯಿತು

ಸ್ಟುಡಿಯೋ ಗೋಗಿ ಫೋಟೋ ತೆಗೆದ 5 ದಿನಕ್ಕೆ ಪಾಸ್ ಫೋಟೋ ಸಿಗುತ್ತಿತ್ತು ರಿಲನ್ನ ತೊಳೆದು ಫೋಟೋ ಮಾಡಿಕೊಡುತ್ತಿದ್ದರು
ಇದ್ದ ಜಾಗದಲ್ಲೇ ಫೋಟೋ ಹೊಡೆದು ಫ್ರಾಕ್ಷನ್ ಆಫ್ ಸೆಕೆಂಡಲ್ಲಿ ಫೋಟೋ ಸಿಗುತ್ತದೆ ಈಗ
ಇಂದಿನ ಕಾಲದಲ್ಲಿ ಬಟ್ಟೆ ತೆಗೆದುಕೊಂಡು ಟೈಲರ್ ಹತ್ತಿರ ಹೋಗಿ ಅಳತೆ ಕೊಟ್ಟು ಒಲಿಸಿಕೊಂಡು ಹಾಕುತ್ತಿದ್ದೇವು ಈಗ ಕಾಲ ಬದಲಾಗಿದೆ ಈ ಎಲ್ಲಾ ರೆಡಿಮೇಡ್ ಆ ಕೊಳ್ಳುವುದು ಫ್ಯಾಷನ್ ಎಲ್ಲಾದಕ್ಕಿಂತ ಹೆಚ್ಚಾಗಿ ನಮ್ ತಂದೆ ತಾತ ಅವರ ಕಾಲದಲ್ಲಿ ಮೈಸೂರು ತನಕ ನಡೆದುಕೊಂಡು ಹೋಗಿದ್ದು ಉದಾಹರಣೆಗಳಿದೆ ಹೋಬ್ಳಿಗೆ ಪಟ್ಟಣಗಳಿಗೆ ನಡೆದುಕೊಂಡ ಜೀವನ ನಡೆಸುತ್ತಿದ್ದರು ಮರದ ಗಾಡಿ ಇತ್ತು ಟೈರ್ ಗಾಡಿ ಬಂತು ಲೂನ ಬಂತು ಆಟೋ ಬಂತು ಲಾರಿ ಬಂತು ಎಲ್ಲಾ ಸೌಕರ್ಯಗಳು ಹೆಚ್ಚಾಗಿ ರೈತರಿಗೆ ದೊಡ್ಡ ಪೆಟ್ಟು ಬಿದ್ದು ರೈತ ಸಾಲದ ಸುಲಳಿಯಲ್ಲಿ ಸಿಲುಕಿ ಒದ್ದಾಡಿದ್ದುಂಟು ನಾನು ಹೇಳುತ್ತಿರುವುದು ಅಭಿವೃದ್ಧಿ ಆಗಿದ್ದು ಒಳ್ಳೇದೇ ಆದರೆ ಈತ ಮಿತ ಬೇಕು ಇಡೀ ಮನುಷ್ಯತ್ವ ಶೋಕಿಯಲ್ಲಿ ಕಾಲ ಕಳೆಯುವುದನ್ನ ಜಾಸ್ತಿ ಮಾಡಿಕೊಂಡು ಬಿಟ್ಟಿದ್ದಾನೆ
ಇವೆಲ್ಲವನ್ನ ವಿವರಣೆ ಕೊಡೋ ಅಗತ್ಯ ಇರ್ಲಿಲ್ಲ ಆದರೂ ಒಂದು ಸಣ್ಣ ಪ್ರಯತ್ನ ಎಲ್ಲ ಬದಲಾದ ಪರಿಣಾಮ
ಮನುಷ್ಯನಿಗೆ ಬಿಡುವಿಲ್ಲದೆ ರೋಗ ಗಳು ಹೆಚ್ಚಾಗಿ ಬೇಗ ಸಾವು ಸಂಭವಿಸುತ್ತಿದ್ದಾನೆ ಇದು ನನ್ನ ಮನದಾಳದ ಮಾತು ಸ್ವೀಕಾರ ಮಾಡುವವರು ಮಾಡಬಹುದು ನಿಮಗೆ ಬಿಟ್ಟಿದ್ದು ದಿನಪತ್ರಿಕೆಗಳನ್ನ ಓದಿ
ನವೀನ ಹೆಚ್ ಎ ಅಂಕಣಕಾರರು ಲೇಖಕರು ಹನುಮನಹಳ್ಳಿ ಕೆಆರ್ ನಗರ