ಭಾರತ ಜಿಡಿಪಿಯಲ್ಲಿ ಕುಸಿದು ಕೊಂಪೆ ಸಢೇರಿದೆ ಎನ್ನುವ ಮಾತುಗಳು ತಾರಕಕ್ಕೇ ಏರಿದ್ವು. ಅನೇಕ ಕಂಪನಿಗಳು ತನ್ನ ಸಿಬ್ಬಂದಿಗಳನ್ನು ಕೆಲಸದಿಂದ ತೆಗೆಯುವ ಕೆಲಸ ಮಾಡಿದ್ರು. ಹಲವಾರು ಕಂಪನಿಗಳು ವಾರದಲ್ಲಿ 5 ದಿನ, 4 ದಿನ ಮಾತ್ರ ಕೆಲಸ ಮಾಡುವ ಹಂತಕ್ಕೂ ಬಂದವು. ಉಳಿದ ದಿನದ ವೇತನಕ್ಕೆ ಕತ್ತರಿ ಹಾಕಿ ನಷ್ಟ ತುಂಬಿಕೊಳ್ಳುವ ಕೆಲಸ ಮಾಡಿದ್ದರು. ಆದರೆ ಇದೀಗ ಮತ್ತೊಂದು ಅಂಕಿ ಅಂಶ ಬಿಡುಗಡೆಯಾಗಿದೆ. ಭಾರತದ ಆರ್ಥಿಕ ದರ ವೃದ್ಧಿಯಾಗಿದೆ. ಆರ್ಥಿಕ ವರ್ಷದ ಮೋರನೇ ತ್ರೈಮಾಸಿಕ ಅವಧಿಯ ಅಕ್ಟೋಬರ್ – ಡಿಸೆಂಬರ್ ಜಿಡಿಪಿ ಶೇಕಡ 4.7 ರಷ್ಟು ಎಂದು ಅಧಿಕೃತ ಮಾಹಿತಿ ಬಿಡುಗಡೆ ಆಗಿದೆ.
ಎರಡನೇ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ ದರ ಆರು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದು ಶೇಕಡ 4.5ಮುಟ್ಟಿತ್ತು. ಶುಕ್ರವಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಶೇಕಡ 4.5ರಿಂದ ಶೇಕಡ 4.7ರಷ್ಟಾಗಿದೆ ಎಂದು ತಿಳಿಸಲಾಗಿದೆ. 2018ರ 2ನೇ ತ್ರೈಮಾಸಿಕ ಅವಧಿಯಲ್ಲಿ ಶೇಕಡ 7ರಷ್ಟಿದ್ದ ಆರ್ಥಿಕ ವೃದ್ಧಿ ದರ2019ರಲ್ಲಿ ಸಂಪೂರ್ಣವಾಗಿ ಕುಸಿದಿದೆ 2020ನೇ ಹಣಕಾಸು ವರ್ಷದಲ್ಲಿ ಶೇಕಡ 5ರಷ್ಟು ಬೆಳವಣಿಗೆ ದಾಖಲಿಸಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಸಣ್ಣ ಪ್ರಮಾಣದಲ್ಲಿ ಚೇತರಿಕೆ ಕಂಡರೂ ನಿರೀಕ್ಷಿತ ಮಟ್ಟ ಮುಟ್ಟುವ ವಿಶ್ವಾಸ ಮೂಡಿಸಿಲ್ಲ ಎನ್ನಲಾಗಿದೆ.
ಈ ಆರ್ಥಿಕ ವರ್ಷ ಮಾರ್ಚ್ ಅಂತ್ಯಕ್ಕೆ ಮುಕ್ತಾಯವಾಗಲಿದ್ದು, ಈ ಹಣಕಾಸು ವರ್ಷದ ಒಟ್ಟಾರೆ ಜಿಡಿಪಿ ಬೆಳವಣಿಗೆ ಶೇಕಡ ೫ರಷ್ಟು ಇರಲಿದೆ ಎಂದು ಕೇಂದ್ರ ಸರ್ಕಾರದ ಅಂದಾಜು. ಆದರೆ ಬೆಳವಣಿಗೆ ವೇಗ ಕುಂಠಿತವಾಗಿದ್ದು, ತಯಾರಿಕಾ ವಿಭಾಗ ಕುಸಿದಿದೆ ಎನ್ನಲಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತ್ರ, ಭಾರತ ೫ ಟ್ರಿಲಿಯನ್ ಡಾಲರ್ ಆರ್ಥಿಕ ದೇಶವನ್ನಾಗಿ ಮಾಡುವ ನರೇಂದ್ರ ಮೋದಿ ಸರ್ಕಾರದ ಗುರಿ ಬಜೆಟ್ ಚಾಲ್ತಿಗೆ ಬಂದ ಬಳಿಕ ಸಾಧ್ಯವಾಗಲಿದೆ ಎನ್ನುವ ಆಶಾಭಾವನೆಯನ್ನು ಇಟ್ಟುಕೊಂಡಿದ್ದಾರೆ. ಜಿಡಿಪಿ ಬೆಳವಣಿಗೆಯು ಆರ್ಥಿಕ ವರ್ಷ ೩ನೇ ತ್ರೆöÊಮಾಸಿಕದಲ್ಲಿ ಸುಮಾರು 7 ವರ್ಷಗಳ ಕನಿಷ್ಠ ಅಂದರೆ 4.7% ಕ್ಕೆ ಇಳಿದಿದೆ.
ಮೊದಲ ತ್ರೈಮಾಸಿಕದಿಂದ ಮೂರನೇ ತ್ರೈಮಾಸಿಕ ಅವಧಿ ೯ ತಿಂಗಳಾಗಿದ್ದು, ಭಾರತದ ಆರ್ಥಿಕತೆ ಶೇಕಡ 5.1% ರಷ್ಟು ಇದೆ. ಆದರೆ ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಭಾರತದ ಆರ್ಥಿಕತೆ ಶೇಕಡ 6.3% ರಷ್ಟಿತ್ತು. ಮೂರನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಶೇಕಡ 4.7 ರಷ್ಟಿದೆ ಎಂದು ಸಮಾಧಾನ ಪಡುವಂತಿಲ್ಲ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಜಿಡಿಪಿ ದರ ಶೇಕಡ 5.6 ರಷ್ಟು ಇತ್ತು.
ರಾಷ್ಟ್ರೀಯ ಮಾಧ್ಯಮಗಳ ಜೊತೆ ಮಾತನಾಡಿರುವ ನಿರ್ಮಲಾ ಸೀತಾರಾಮನ್, ಜಿಡಿಪಿ ದರ ವೃದ್ಧಿಯಾಗಿರುವುದರಿಂದ ನಾನು ಸಂತೋಷವಾಗಿದ್ದೇನೆ ಎಂದಿದ್ದಾರೆ. ನಾನು ಸಂತೋಷದಿಂದ ಇದ್ದೇನೆ ಎಂದು ಹೇಳಬಾರದು. ಆದರೂ ನಮ್ಮ ಹಡಗು ಉತ್ತಮ ದಾರಿ ಹಿಡಿದಿದೆ. ನಾವೆಲ್ಲರೂ ಸುರಕ್ಷಿತ ಎಂದಿದ್ದಾರೆ. ಜೊತೆಗೆ ಕೊರೋನಾ ವೈರಸ್‌ನಿಂದ ದೇಶದ ಆರ್ಥಿಕತೆ ಅಡ್ಡಿಯಾಗುವ ಬಗ್ಗೆ ಯೋಚನೆ ಮಾಡಿದರೆ ಫಲವಿಲ್ಲ. ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗೋಣ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.