ಆತ್ಮನಿರ್ಭರ್ ಭಾರತ ಯೋಜನೆಯಡಿಯಲ್ಲಿ ಕೇಂದ್ರ ರಕ್ಷಣಾ ಇಲಾಖೆಯು 101 ಸೇನಾ ಪರಿಕರಗಳ ಆಮದಿನ ಮೇಲೆ ನಿರ್ಬಂಧ ಹೇರಿದೆ. ಈ ವಿಚಾರವನ್ನು ಸ್ಪಷ್ಟಪಡಿಸಿರುವ ರಕ್ಷಣಾ ಸಚಿನ ರಾಜನಾಥ್ ಸಿಂಗ್ ಇನ್ನುಮುಂದೆ ಸೇನಾ ಪರಿಕರಗಳನ್ನು ಭಾರತದಲ್ಲೇ ತಯಾರು ಮಾಡಲು ಉತ್ತೇಜನ ನೀಡಲಾಗುವುದು ಎಂದಿದ್ದಾರೆ.
ಉನ್ನತ ಮಟ್ಟದ ತಂತ್ರಜ್ಞಾನ ಬಳಸಿ ನಿರ್ಮಿಸಲಾಗುವ ಆರ್ಟಿಲರಿ ಗನ್, ರೈಫಲ್‌ಗಳು, ಸೋನಾರ್ ತಂತ್ರಜ್ಞಾನ, ಸಾರಿಕೆ ವಿಮಾನಗಳು, ರಾಡಾರ್‌ಗಳನ್ನು ʼನಿರ್ದಿಷ್ಟ ಅವಧಿಯʼ ನಂತರ ಭಾರತದಲ್ಲೇ ತಯಾರಿಸಲಾಗುವುದು ಎಂದು ಹೇಳಿದ್ದಾರೆ.
ಆಮದಿನ ಮೇಲೆ ನಿರ್ಬಂಧ ಹೇರಲಾದ ಸೇನಾ ಸರಕುಗಳ ಪಟ್ಟಿ ಈ ಕೆಳಗಿನಂತಿದೆ.





ಸೇನಾ ಮುಖ್ಯಸ್ಥರು, ಶ್ತಸ್ತ್ರಾಸ್ತ್ರ ತಯಾರಿಕಾ ಕಂಪೆನಿಗಳು ಹಾಗೂ ತಜ್ಞರೊಂದಿಗೆ ಕೂಲಂಕುಷವಾಗಿ ಸಮಾಲೋಚಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.