ದೇಶದ ಮುಖ್ಯವಾಹಿನಿಯಾದ್ಯಂತ ಚರ್ಚೆಗೆ ಗ್ರಾಸವಾದ ಅರ್ನಾಬ್ ಗೋಸ್ವಾಮಿ ಬಂಧನ ಮಹಾರಾಷ್ಟ್ರದ ಸರ್ಕಾರದ ಏಕಾಏಕಿ ನಿರ್ಧಾರವಾಗಿರಲಿಲ್ಲ. ಅರ್ನಾಬ್‌ರನ್ನು ಬಂಧಿಸಲು ಮಹಾರಾಷ್ಟ್ರ ಗೃಹ ಇಲಾಖೆ ಸಾಕಷ್ಟು ಯೋಜನೆ ರೂಪಿಸಿ, ಕಾರ್ಯಗತಗೊಳಿಸಿದೆ.
ಇಂಟಿರಿಯರ್ ಡಿಸೈನರ್ ಅನ್ವಯ್ ನಾಯಕ್ ಹಾಗೂ ಅವರ ತಾಯಿಯ 2018 ರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಮರು ಪ್ರಾರಂಭಿಸಲು ರಾಯಗಡ್ ಪೊಲೀಸರಿಗೆ ಅನುಮತಿ ಸಿಕ್ಕೊಡನೆಯೇ ಅರ್ನಾಬ್‌ರನ್ನು ಬಂಧಿಸಲು ʼಆಪರೇಷನ್ ಅರ್ನಾಬ್ʼ ಗಾಗಿ ಸಿದ್ಧತೆ ಪ್ರಾರಂಭವಾಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆಪರೇಷನ್ ಅರ್ನಾಬ್ ಸಲುವಾಗಿ ಕೊಂಕಣ್ ರೇಂಜ್ ಇನ್ಸ್ಪೆಕ್ಟರ್ ಜನರಲ್ ಸಂಜಯ್ ಮೊಹಿತೆ ಅವರ ನೇತೃತ್ವದಲ್ಲಿ 40 ಮಂದಿ ಪೊಲೀಸರ ತಂಡವನ್ನು ರಚಿಸಲಾಗಿತ್ತು. 40 ಮಂದಿ ಸಿಬ್ಬಂದಿಗಳನ್ನು ಮುಂಬೈ ಹಾಗೂ ರಾಯಗಢ ಪೊಲೀಸ್ ಪಡೆಯಿಂದ ಆಯ್ಕೆ ಮಾಡಲಾಗಿತ್ತು.
ಅರ್ನಾಬ್ ಬಂಧನಕ್ಕೆ ಸಂಜಯ್ ಮೊಹಿತೆ ಅವರು ಯೋಜನೆ ರೂಪಿಸಿದ್ದರು. ಆದರೆ ಅದನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಎನ್‌ಕೌಂಟರ್ ಸ್ಪೆಶಲಿಸ್ಟ್ ಸಚಿನ್ ವಾಝೆ ಅವರ ಹೆಗಲಿಗೆ ವಹಿಸಲಾಯಿತು.
Also Read: ಅರ್ನಾಬ್ ಗೋಸ್ವಾಮಿಗೆ 14 ದಿನಗಳ ನ್ಯಾಯಾಂಗ ಬಂಧನ
ʼಮೊಹಿತೆ ಅವರ ನೇತೃತ್ವದ ತಂಡಕ್ಕೆ ಪ್ರಬಲ ಅರ್ನಾಬ್‌ರನ್ನು ಸರಳವಾಗಿ ಬಂಧಿಸುವುದು ಸವಾಲಿನ ಕೆಲಸವಾಗಿತ್ತು. ತಂಡದ ಪ್ರತಿಯೊಬ್ಬರೂ ಎಚ್ಚರಿಕೆಯಿಂದ, ಪ್ರಚೋದನೆಗೆ ಒಳಗಾಗದಂತೆ ಸಂಯಮ ಪಾಲಿಸಿದರುʼ ಎಂದು ಹಿರಿಯ ಕ್ಯಾಬಿನೆಟ್ ಸದಸ್ಯರೊಬ್ಬರು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಿಂದ ಆತ್ಮಹತ್ಯೆ ಪ್ರಕರಣದಲ್ಲಿ ಅರ್ನಾಬ್ ಕೈವಾಡವಿದೆಯೆಂದು ಮನವರಿಕೆಯಾಗಿತ್ತು. ನಮ್ಮ ಜನರು ಆತನ ನಿವಾಸದ ಸುತ್ತ ಹಲವು ಬಾರಿ ಗಸ್ತು ತಿರುಗಿದ್ದೆವು. ಇದೊಂದು ರಹಸ್ಯ ಕಾರ್ಯಾಚರಣೆಯಾಗಿತ್ತು. ಕಾರ್ಯಾಚರಣೆಯ ಮಾಹಿತಿ ಸೋರಿಕೆಯಾದರೆ ಬಂಧನದಿಂದ ತಪ್ಪಿಸಲು ಅರ್ನಬ್ ನಗರ ಬಿಟ್ಟು ಪಲಾಯನ ಮಾಡಬಹುದೆಂಬ ಆತಂಕ ನಮ್ಮನ್ನು ಕಾಡುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

Also Read: ಅರ್ನಾಬ್ ಬಂಧನ: ಬೆಂಬಲಕ್ಕೆ ನಿಂತ ಕೇಂದ್ರ ಸರ್ಕಾರದ ಮಂತ್ರಿಗಳು
ಅರ್ನಾಬ್ ತನ್ನ ನಿವಾಸದಲ್ಲಿರುವುದನ್ನು ಖಚಿತಪಡಿಸಿದ ಪೊಲೀಸರು ಅವರನ್ನು ಬುಧವಾರ ಮುಂಜಾನೆ ಅವರ ನಿವಾಸದಿಂದ ಬಂಧಿಸಿದ್ದಾರೆ. ಇದು ಸಂಪೂರ್ಣ ಪೂರ್ವ ತಯಾರಿಯಿಂದ ನಡೆಸಿದ ಕಾರ್ಯಾಚರಣೆಯಾಗಿದ್ದು, ಕಾರ್ಯಾಚರಣೆಯ ಸಣ್ಣ ಸಣ್ಣ ವಿಷಯಗಳನ್ನೂ ಸೂಕ್ಷ್ಮವಾಗಿ ರೂಪುಗೊಳಿಸಲಾಗಿತ್ತು. ಅರ್ನಾಬ್ ನಿವಾಸದ ಬಾಗಿಲು ತಟ್ಟುವವರು ಯಾರು, ಅರ್ನಾಬ್ ಜೊತೆ ಮಾತನಾಡುವವರು ಯಾರು, ಅವರ ಕುಟುಂಬದವರನ್ನು ನಿಭಾಯಿಸುವವರು ಯಾರು, ತಮ್ಮ ಜೊತೆ ಬರಲು ಪ್ರತಿರೋಧಿಸಿದರೆ ಅದನ್ನು ನಿರ್ವಹಿಸುವುದು ಹೇಗೆ ಎಂಬ ಪ್ರತಿಯೊಂದನ್ನೂ ಮೊದಲೇ ನಿರ್ಧರಿಸಲಾಗಿತ್ತು ಎಂದು ಅವರು ತಿಳಿಸಿರುವುದಾಗಿ ವರದಿ ಹೇಳಿದೆ.
Also Read: ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಬಂಧನ
ದೇವೇಂದ್ರ ಫಡ್ನವೀಸ್ ಸರ್ಕಾರದಲ್ಲಿ ಈ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಪ್ರಯತ್ನಿಸಲಾಗಿತ್ತು. ಮೃತ ಅನ್ವಯ್ ಅವರ ಪತ್ನಿ ಹಾಗೂ ಅವರ ಮಗಳಅಹವಾಲನ್ನು ಆಲಿಸಿದಾಗ ನನಗೆ ಆಘಾತವಾಯಿತು. ಮಹಾರಾಷ್ಟ್ರದಲ್ಲಿ ಇದು ಸಂಭವಿಸಬಹುದು ಎಂದು ನನಗೆ ನಂಬಲಾಗಿರಲಿಲ್ಲ. ನಾವು ಪ್ರಕರಣವನ್ನು ಅದರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಮಹಾರಾಷ್ಟ್ರ ಗೃಹ ಮಂತ್ರಿ ಅನಿಲ್ ದೇಶ್‌ಮುಖ್ ಹೇಳಿದ್ದಾರೆ.
Also Read: ಮತ್ತೆ ಸಂಕಷ್ಟದಲ್ಲಿ Republic Tv ಮುಖ್ಯಸ್ಥ ಅರ್ನಬ್ ಗೋಸ್ವಾಮಿ.!
ಬಿಜೆಪಿ ವಿರುದ್ಧ ನೇರ ಪ್ರಹಾರ ನಡೆಸಿದ ದೇಶ್‌ಮುಖ್, ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣವನ್ನು ಬಿಜೆಪಿ ರಾಜಕೀಯಗೊಳಿಸಿತು, ಆದರೆ ಅನ್ವಯ್ ಪ್ರಕರಣದಲ್ಲಿ ಸ್ಪಷ್ಟ ಆತ್ಮಹತ್ಯೆ ಪತ್ರ ಇದ್ದರೂ ಬಿಜೆಪಿ ಪ್ರಕರಣವನ್ನು ನಿಗ್ರಹಿಸಿದ್ದಾರೆ. ನಾವು ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ಒದಗಿಸುತ್ತೇವೆ ಎಂದು ದೇಶ್ಮುಖ್ ತಿಳಸಿದ್ದಾರೆ.