2018ರ ಅನ್ವಯ್ ನಾಯ್ಕ್ ಆತ್ಮಹತ್ಯೆ ಪ್ರಕರಣದಲ್ಲಿ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಹಾಗೂ ಇತರ ಇಬ್ಬರು ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
ಅರ್ನಾಬ್ ಮತ್ತು ಇನ್ನಿಬ್ಬರು ಆರೋಪಿಗಳಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡದಿರುವುದರಲ್ಲಿ ತಪ್ಪಿದೆ ಎಂದು ನಾವು ಭಾವಿಸುತ್ತೇವೆ ಎಂದ ಡಿವೈ ಚಂದ್ರಚೂಡ್ ಹಾಗೂ ಇಂದಿರಾ ಬ್ಯಾನರ್ಜಿ ಅವರಿದ್ದ ಪೀಠವು 50,000 ಬಾಂಡಿನ ಮೇಲೆ ಜಾಮೀನು ನೀಡಿದೆ.
Also Read: ಹೌದು, ನಾನೊಬ್ಬ ಪತ್ರಕರ್ತೆ, ಹಾಗಾಗಿ ನಾನು ಅರ್ನಾಬ್ ಬೆಂಬಲಿಸಲಾರೆ!
ಅರ್ನಾಬ್, ಫಿರೋಜ್ ಷೇಖ್ ಮತ್ತು ನಿತೇಶ್ ಸರ್ದಾ ತಮಗೆ ಮಧ್ಯಂತರ ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಂಗಳವಾರ ಸುಪ್ರೀಂ ಮೆಟ್ಟಿಲೇರಿದ್ದರು.
ಮನವಿ ಸಲ್ಲಿಸಿದ್ದ ಕೇವಲ ಒಂದೇ ದಿನದಲ್ಲಿ ಅರ್ನಾಬ್ ಜಾಮೀನು ಅರ್ಜಿ ವಿಚಾರಣೆಗೆ ಬಂದಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ದುಷ್ಯಂತ್ ದೇವ್ ಸುಪ್ರೀಂ ಕೋರ್ಟ್ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
Also Read: ಬಾಂಬೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಅರ್ನಾಬ್
ಸಾಮಾನ್ಯ ನಾಗರಿಕ, ಆರೋಪಿಗಳು ವಾರಗಟ್ಟಲೆ, ತಿಂಗಳುಗಟ್ಟಲೆ ಕಾಯಬೇಕಿರುವಾಗ ಗೋಸ್ವಾಮಿ ಅರ್ಜಿ ತರಾತುರಿ ಹೇಗೆ ವಿಚಾರಣೆಗೆ ಬಂತೆಂದು ದುಷ್ಯಂತ್ ಪ್ರಶ್ನಿಸಿರುವ ಖಂಡಿಸಿದ್ದಾರೆ.
ಗೋಸ್ವಾಮಿಯಂತಹವರು “ವಿಶೇಷ ಸವಲತ್ತು” ಪಡೆಯುತ್ತಿದ್ದರೆ, ಸಾಮಾನ್ಯ ಭಾರತೀಯರು ಜೈಲು ಶಿಕ್ಷೆಯಿಂದ ಬಳಲುತ್ತಿದ್ದಾರೆ, ಇದು ಕಾನೂನುಬಾಹಿರ ಮತ್ತು ಅನಧಿಕೃತವಾಗಿದೆ ಎಂದು ದುಷ್ಯಂತ್ ಹೇಳಿದ್ದಾರೆ.
Also Read: ಮಧ್ಯಂತರ ಜಾಮೀನು ನಿರಾಕರಿಸಿದ ಬಾಂಬೆ ಹೈ ಕೋರ್ಟ್: ಸೆಷನ್ಸ್ ಕೋರ್ಟ್ ಮೊರೆ ಹೋದ ಅರ್ನಾಬ್