ಅಯೋಧ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದರೆ ಭಾರತೀಯ ಮುಸ್ಲಿಂ ಸಮುದಾಯಕ್ಕೆ ಮಾರಕವಾಗಲಿದೆ ಎಂಬ ಆತಂಕ ವ್ಯಕ್ತವಾಗಲಿದೆಯೇ?
ಹೌದು. ಮುಸ್ಲಿಂ ಸಮುದಾಯದ ಕೆಲವು ಮುಖಂಡರು ಮೇಲ್ಮನವಿ ಸಲ್ಲಿಸಲು ಮುಂದಾಗಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸುಮಾರು 100 ಮಂದಿ ಮುಸ್ಲಿಂ ಸಮುದಾಯದ ಮುಖಂಡರು, ಬುದ್ಧಿಜೀವಿಗಳು, ಪತ್ರಕರ್ತರು, ವಾಣಿಜ್ಯೋದ್ಯಮಿಗಳು, ಕವಿಗಳು, ಕಲಾವಿದರು, ಚಿತ್ರನಿರ್ಮಾಕರು ಸೇರಿದಂತೆ ಇನ್ನಿತರೆ ಕ್ಷೇತ್ರಗಳ ಗಣ್ಯರು ಮೇಲ್ಮನವಿ ಸಲ್ಲಿಸುವುದು ಸೂಕ್ತವಲ್ಲ ಎಂದಿದ್ದಾರೆ.
ಈಗಾಗಲೇ ಸುಪ್ರೀಂಕೋರ್ಟಿನ ಸಂವಿಧಾನ ಪೀಠವು ಆಯೋಧ್ಯೆಯ ವಿವಾದಿತ ಜಾಗವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು ಮತ್ತು ಮುಸ್ಲಿಂರಿಗೆ ಪರ್ಯಾಯವಾಗಿ 5 ಎಕರೆ ಭೂಮಿಯನ್ನು ನೀಡಬೇಕೆಂದು ಆದೇಶ ನೀಡಿದೆ.
ಈ ಸಂಬಂಧ ಸಹಿ ಹಾಕಿರುವ ವಿವಿಧ ಕ್ಷೇತ್ರಗಳ ಈ ಮುಸ್ಲಿಂ ಗಣ್ಯರು ದೇಶದಲ್ಲಿ ಅಯೋಧ್ಯೆ ವಿಚಾರ ಜೀವಂತವಾಗಿದ್ದಷ್ಟು ಕಾಲ ಮಾರಕವಾಗುತ್ತದೆ. ಇದು ಭಾರತೀಯ ಮುಸ್ಲಿಂರಿಗೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ ಎಂದಿದ್ದಾರೆ.
ಈ ಗಣ್ಯರು, “ನಾವು ನಮ್ಮ ಮುಸ್ಲಿಂ ಸಮುದಾಯದವರಲ್ಲಿ ಕೇಳಿಕೊಳ್ಳುವುದೇನೆಂದರೆ ಕಳೆದ ಮೂರು ದಶಕಗಳಷ್ಟು ಹಳೆಯದಾದ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದಲ್ಲಿ ಹಲವಾರು ಮುಸ್ಲಿಂರ ಮುಗ್ಧಜೀವಗಳನ್ನು ಮತ್ತು ಆಸ್ತಿಪಾಸ್ತಿಯನ್ನು ಕಳೆದುಕೊಂಡಿರುವುದು ಒಂದು ಕಡೆಯಾದರೆ, ಸಂಘಪರಿವಾರದ ರಾಜಕೀಯದ ಮೇಲಾಟ ಮತ್ತೊಂದು ಕಡೆಯಲ್ಲಿಲ್ಲಿತ್ತು. ಇದರಿಂದ ನಾವು ಪಾಠ ಕಲಿತ್ತಿಲ್ಲವೇ? ಈ ಸಂದರ್ಭದಲ್ಲಿ ನಡೆದ ಕೋಮುಗಲಭೆಗಳಲ್ಲಿ ಬಡ ಮುಸ್ಲಿಂರು ಬೆಲೆ ತೆತ್ತಿದ್ದಾರಲ್ಲವೇ?’’ ಎಂದು ಹೇಳಿದ್ದಾರೆ.
ಈ ಮಂದಿರ-ಮಸೀದಿ ವಿವಾದ ಕೇವಲ ಸಂಘಪರಿವಾರದ ನಿಜವಾದ ಅಜೆಂಡಾಕ್ಕೆ ರಕ್ಷಾಕವಚವಾಗಲು ನೆರವಾಯಿತು. ಅದು ಜಾತ್ಯತೀತ ಪ್ರಜಾತಂತ್ರ ವ್ಯವಸ್ಥೆಗೆ ಪರ್ಯಾಯವಾಗಿ ಹಿಂದೂ ರಾಷ್ಟ್ರವನ್ನಾಗಿ ಮಾರ್ಪಡಿಸುವ ಒಂದು ವ್ಯವಸ್ಥೆಯಾಗಿದೆ ಎಂಬ ಆತಂಕವನ್ನು ಗಣ್ಯರು ವ್ಯಕ್ತಪಡಿಸಿದ್ದಾರೆ.
ಈ ಕುರಿತಾದ ಒಂದು ಪತ್ರವನ್ನು ಸಿದ್ಧಪಡಿಸಿ ಅದಕ್ಕೆ ಸಹಿ ಹಾಕಿರುವ ಇವರೆಲ್ಲರೂ, ಒಂದು ವೇಳೆ ಈ ವಿವಾದವನ್ನು ಕೋರ್ಟಿನಲ್ಲಿ ಮುಂದುವರಿಸಿದ್ದೇ ಆದಲ್ಲಿ ಮುಸ್ಲಿಂ ವಿರೋಧಿ ಕಾರರ್ಯತಂತ್ರಗಳಿಗೆ ಮತ್ತಷ್ಟು ಆಹಾರ ನೀಡಿದಂತಾಗುತ್ತದೆ ಮತ್ತು ಕೋಮು ಶಕ್ತಿಗಳು ಒಗ್ಗೂಡಲು ನೆರವಾದಂತಾಗುತ್ತದೆ. ಈ ವಿವಾದವನ್ನು ಮುಂದುವರಿಸದಿರುವುದು ಲೇಸು. ಇದರಿಂದ ಬಹುಸಂಖ್ಯಾತರಲ್ಲಿ ಲಕ್ಷಾಂತರ ಜಾತ್ಯತೀತ ಜನರ ಮನಸನ್ನು ಗೆಲ್ಲಬಹುದಾಗಿದೆ. ಇದು ದೇಶ ಮತ್ತು ಸಮುದಾಯದ ಹಿತಾಸಕ್ತಿಗೆ ಉತ್ತಮ ಹೆಜ್ಜೆಯಾಗಲಿದೆ’’ ಎಂದು ತಮ್ಮ ಮನವಿ ಪತ್ರದಲ್ಲಿ ಕೋರಿದ್ದಾರೆ.
ಗಣ್ಯರು ಬಿಡುಗಡೆ ಮಾಡಿರುವ ಹೇಳಿಕೆಯ ಪೂರ್ಣಪಾಠ ಇಲ್ಲಿದೆ:-
“ಈ ಕೆಳಗೆ ಸಹಿ ಮಾಡಿರುವ ನಾವು, ಅಯೋಧ್ಯ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಕೆಲವು ಮುಸ್ಲಿಂ ನಾಯಕರು ಮುಂದಾಗಿರುವುದಕ್ಕೆ ನಮಗೆ ಆತಂಕ ಉಂಟಾಗಿದೆ. ನಾವು ಭಾರತೀಯ ಮುಸ್ಲಿಂ ಸಮುದಾಯದ ಅತೃಪ್ತಿಯನ್ನು ಈ ಮೂಲಕ ತೋಡಿಕೊಳ್ಳುತ್ತಿದ್ದೇವೆ. ನ್ಯಾಯಾಲಯ ನೀಡಿರುವ ತೀರ್ಪಿಗೆ ಸಂವಿಧಾನ ಪರಿಣತರು ಮತ್ತು ಜಾತ್ಯತೀತ ಸಂಘಸಂಸ್ಥೆಗಳು ಬದ್ಧರಾಗಿದ್ದು, ಅದರ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಆದರೆ, ನ್ಯಾಯಾಲಯ ನೀಡಿರುವ ಈ ತೀರ್ಪು ನ್ಯಾಯಸಮ್ಮತವಾಗಿಲ್ಲ ಎಂದು ಹೇಳುವುದೇ ಆದಲ್ಲಿ ಅಯೋಧ್ಯೆ ವಿವಾದವನ್ನು ಮತ್ತಷ್ಟು ವರ್ಷಗಳವರೆಗೆ ಜೀವಂತವಾಗಿಟ್ಟರೆ ಅದು ಭಾರತೀಯ ಮುಸ್ಲಿಂರಿಗೆ ಮಾರಕವಾಗುತ್ತದೆಯೇ ಹೊರತು ನೆರವಾಗುವುದಿಲ್ಲ.
ಮೂರು ದಶಕಗಳ ಕಾಲ ನಡೆದ ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದಿಂದ ನಾವೇನು ಕಳೆದುಕೊಂಡಿದ್ದೇವೆ ಮತ್ತು ಎಷ್ಟು ಗಳಿಸಿದ್ದೇವೆ ಎಂಬುದನ್ನು ಮುಸ್ಲಿಂ ಬಾಂಧವರು ವಿಚಾರ ಮಾಡಬೇಕಿದೆ. ಹಲವಾರು ಮುಸ್ಲಿಂರು ಜೀವ ಕಳೆದುಕೊಂಡಿದ್ದಾರೆ, ಸಾಕಷ್ಟು ಆಸ್ತಿ-ಪಾಸ್ತಿ ಕಳೆದುಕೊಂಡಿದ್ದಾರೆ.
ಮೇಲ್ಮನವಿ ಸಲ್ಲಿಸುವಂತೆ ಮುಸ್ಲಿಂರಿಗೆ ಹಲವಾರು ಮಂದಿ ಸಲಹೆ ನೀಡಿದ್ದಾರೆ. ಆದರೆ, ನಮ್ಮ ಮುಸ್ಲಿಂ ಬಾಂಧವರಿಗೆ ಕಳಕಳಿಯ ಮನವಿಯೆಂದರೆ ಈ ವಿವಾದದಿಂದ ದೂರ ಸರಿಯಿರಿ. ಏಕೆಂದರೆ, ಇದು ಸಂಘಪರಿವಾರದ ಅಜೆಂಡಾದ ಮುಖವಾಡ ಧರಿಸಲು ನೆರವಾಗುತ್ತದೆ ಮತ್ತು ನಮ್ಮ ಜಾತ್ಯತೀತ ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧವಾಗಿ ಹಿಂದೂ ರಾಷ್ಟ್ರವನ್ನಾಗಿಸುವ ಕುತಂತ್ರಕ್ಕೆ ನೆರವಾಗಲಿದೆ.
ಈ ಮನವಿ ಪತ್ರಕ್ಕೆ ಹೈದ್ರಾಬಾದ್ ನ ಸಾಮಾಜಿಕ ಕಾರ್ಯಕರ್ತ ಆರಿಝ್ ಮೊಹ್ಮದ್, ಚೆನ್ನೈನ ವಕೀಲ ಎ.ಜೆ.ಜಾವದ್, ಮುಂಬೈನ ಲೇಖಕ, ಅಂಕಣಕಾರ(ಮರಾಠಿ) ಅಬ್ದುಲ್ ಖಾದರ್ ಮುಕದಮ್, ಸಾಮಾಜಿಕ ಕಾರ್ಯಕರ್ತ ಅಫೇಕ್ ಅಜಾದ್, ನಾಸಿಕ್ ನ ಪತ್ರಕರ್ತ ಅಫ್ತಬ್ ಖಾನ್, ಸಾಮಾಜಿಕ ಕಾರ್ಯಕರ್ತ, ಹೊಟೇಲ್ ಉದ್ಯಮಿ ಅಫ್ಲಲ್ ಪಟೇಲ್ ಸೇರಿದಂತೆ 91 ಮಂದಿ ಮುಸ್ಲಿಂ ಗಣ್ಯರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
ಕೃಪೆ: ದಿ ವೈರ್