Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಅಪಾಯಕಾರಿ ಕರೋನಾಗೆ ಯುನಾನಿ, ಹೊಮಿಯೋಪತಿ ಮದ್ದು

ಅಪಾಯಕಾರಿ ಕೊರೋನಾಗೆ ಯುನಾನಿ, ಹೊಮಿಯೋಪತಿ ಮದ್ದು
ಅಪಾಯಕಾರಿ ಕರೋನಾಗೆ ಯುನಾನಿ

January 31, 2020
Share on FacebookShare on Twitter

ಚೀನಾದಲ್ಲಿ ಮರಣ ಮೃದಂಗ ಬಾರಿಸ್ತಿರುವ ಕರೊನಾ ವೈರಸ್ ಭಾರತಕ್ಕೂ ಕಾಲಿಟಿದೆ. ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾಗಿದೆ. ಕೇರಳದಿಂದ ಚೀನಾದ ವುಹಾನ್‌ಗೆ ತೆರಳಿದ್ದ ವಿದ್ಯಾರ್ಥಿ, ಅನಾರೋಗ್ಯಕ್ಕೆ ತುತ್ತಾಗಿದ್ದ. ಕೂಡಲೇ ತಾಯ್ನಾಡಿಗೆ ಮರಳಿದ್ದ. ಇಲ್ಲಿಗೆ ಬಂದ ಕೂಡಲೆ ಅನಾರೋಗ್ಯ ಪೀಡಿತರಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಲ್ಲಾ ರೀತಿಯ ತಪಾಸಣೆಗಳನ್ನು ನಡೆಸಿದಾಗ ಕರೊನಾ ವೈರಸ್ ಪತ್ತೆಯಾಗಿರುವುದು ಖಚಿತವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ರೋಗ ಪೀಡಿತ ವಿದ್ಯಾರ್ಥಿಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ರೋಗಿಯ ಸ್ಥಿತಿ ಸ್ಥಿರವಾಗಿದೆ. ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸಲಾಗುತ್ತಿದೆ. ಕೇರಳದಲ್ಲಿ ಈ ಪ್ರಕರಣ ಪತ್ತೆಯಾಗಿರುವುದರಿಂದ ಕರ್ನಾಟಕದ ಗಡಿ ಭಾಗಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕೇರಳ ಹಾಗೂ ಕರ್ನಾಟಕದ ನಡುವೆ ಸಂಚರಿಸುವ ಬಸ್‌ಗಳು ಹಾಗೂ ವಿಮಾನಗಳಲ್ಲಿ ತೀವ್ರ ಎಚ್ಚರಿಕೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಚೀನಾದಲ್ಲಿ ಇದುವರೆಗೂ 170 ಮಂದಿ ಮೃತಪಟ್ಟಿದ್ದು, 7711 ಮಂದಿಗೆ ಸೋಂಕು ತಗುಲಿ ಆಸ್ಪತ್ರೆ ಸೇರಿದ್ದಾರೆ.6

ಹೆಚ್ಚು ಓದಿದ ಸ್ಟೋರಿಗಳು

ಭಯೋತ್ಪಾದಕ ಕೃತ್ಯದಲ್ಲಿ ನಿಜ್ಜರ್‌ ಕೈವಾಡ: ಕೆನಡಾದಲ್ಲಿ ಹತ್ಯೆಯಾದ ಖಲಿಸ್ತಾನಿ ವಿರುದ್ಧ ಭಾರತ ಆರೋಪ

ಮಂಡ್ಯ ಬಂದ್​ ಬಗ್ಗೆಯೂ ಕೊಂಕು ಮಾತು.. ರೈತರ ಬಗ್ಗೆ ಯಾಕೀ ಕೋಪ..?

ತಮಿಳುನಾಡಿನ ಮೇಲೆ ಹೆಚ್ಚಾಗ್ತಿದೆ ಕನ್ನಡಿಗರ ಆಕ್ರೋಶ: ಬಂದ್, ಪ್ರತಿಭಟನೆ ವೇಳೆ ಹೈಅಲರ್ಟ್​!

ಕರೋನಾ ವೈರಸ್ ವಿಶ್ವದೆಲ್ಲೆಡೆ ಮರಣ ಮೃದಂಗ ಬಾರಿಸುತ್ತಾ ಇದೆ. ಮಹಾಮಾರಿ ಕರೋನಾಗೆ ಚೀನಾ ಅಕ್ಷರಶಃ ತತ್ತರಿಸಿ ಹೋಗಿದೆ. ಮಕ್ಕಳು, ವಯಸ್ಕರು, ವೃದ್ಧರು ಎನ್ನದೆ 18ಕ್ಕೂ ಹೆಚ್ಚು ನಗರಗಳು ಹಾಸಿಗೆ ಮೇಲೆ ಮಲಗಿವೆ. ಎಲ್ಲಾ ಆಸ್ಪತ್ರೆಗಳಲ್ಲೂ ಮುಖಕ್ಕೆ ಮಾಸ್ಕ್ ಹಾಕಿದ ಕೊರೋನಾ ಸೋಂಕಿತರು ಕಣ್ಣಿಗೆ ಕಾಣಿಸುತ್ತಾರೆ. ಕೊರೋನಾ ವೈರಸ್ ವಿಶ್ವವನ್ನೇ ಅಲುಗಾಡಿಸುತ್ತಿದ್ದರೂ ಭಾರತ ಮಾತ್ರ ಹೋಮಿಯೋಪತಿ ಹಾಗೂ ಯುನಾನಿ ಔಷಧಿ ಬಳಸಿ, ಕೊರೋನಾದಿಂದಲೇ ದೂರ ಇರಿ ಎಂದು ಸರ್ಕಾರವೇ ಸುತ್ತೋಲೆ ಹೊರಡಿಸಿದೆ.

ಅಲೋಪಥಿ ಮೆಡಿಸಿನ್‌ಗಿಂತ ಆಯುರ್ವೇದ ಮದ್ದು ಬಹಳಷ್ಟು ಪರಿಣಾಮಕಾರಿ ಎನ್ನುವುದು ಖಚಿತ. ಕೇಂದ್ರ ಸರ್ಕಾರ ಕೂಡ ಹೋಮಿಯೋಪತಿ ಮತ್ತು ಯುನಾನಿ ಔಷಧಿ ಮೊರೆ ಹೋಗಿದ್ದು, ಕಾಯಿಲೆ ಬರುವ ಮುಂಚೆಯೇ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ವೈರಸ್ ಸೋಂಕು ನಿಮ್ಮ ಮೇಲೆ ದಾಳಿ ಮಾಡದಂತೆ ಹೇಗೆ ಮುಂಜಾಗ್ರತೆ ವಹಿಸಬಹುದು ಎನ್ನುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.

ಕರೋನಾ ಮಾರಿಗೆ ಮದ್ದು ಏನು?

* 2 ದಿನಕ್ಕೊಮ್ಮೆ ಉಗುರು ಬೆಚ್ಚನೆ ನೀರಲ್ಲಿ 5 ಗ್ರಾಂ ಅಗಸ್ತ್ಯ ಹರಿತ್ಯಾಕಿ ಕುಡಿಯಿರಿ
* ಎರಡು ದಿನಕ್ಕೊಮ್ಮೆ ಸಂಶಮನಿ ವಾಟಿ 500 ಮಿ.ಗ್ರಾಂ ಬಳಸಿ
* ಕಾಳುಮೆಣಸು, ಶುಂಠಿ ಜೊತೆ ನೀರಲ್ಲಿ 5 ತುಳಸಿ ಎಲೆ ಕುದಿಸಿ ಸೇವಿಸಿ
* 1 ಲೀ. ನೀರನ್ನ ಅರ್ಧ ಲೀಟರ್ಗೆ ಬರುವಂತೆ ಕುದಿಸಿ ಕುಡಿಯಬೇಕು
* ಬೇರು ಹಣ್ಣನ್ನ ಹೆಚ್ಚಾಗಿ ತಿನ್ನೋದ್ರಿಂದ ವೈರಸ್ ತಡೆಗಟ್ಟಬಹುದು
* ನಿತ್ಯ 3 ಗ್ರಾಂ ದಾಲ್ಚಿನ್ನಿ, 12 ಗ್ರಾಂ ಗಸಗಸೆ ಸೇವಿಸುವುದು ಸೂಕ್ತ

ಪ್ರತಿಯೊಬ್ಬರು ಶುಚಿತ್ವಕ್ಕೆ ತುಂಬಾ ಮಹತ್ವ ಕೊಡಬೇಕು. ಕರೋನಾ ಒಬ್ಬರಿಂದ ಒಬ್ಬರಿಗೆ ಹರಡೋ ಅಂಟು ರೋಗ. ಕೈಗಳನ್ನ ಆಗಿಂದಾಗೆ ಸೋಪ್‌ನಿಂದ ತೊಳೆಯಬೇಕು. ಕೈ ತೊಳೆಯದೆ ಯಾವುದೇ ಕಾರಣಕ್ಕೂ ಮೂಗು, ಕಣ್ಣು, ಬಾಯಿಯನ್ನ ಮುಟ್ಟಿಕೊಳ್ಳಬಾರದು. ಅಲ್ಲದೆ ಸೋಂಕಿತರು ಎಂದು ಕಂಡು ಬಂದರೆ ಅವರಿಂದ ಆದಷ್ಟು ದೂರ ಇರುವುದು ಒಳ್ಳೆಯದ್ದು. ಜೊತೆಗೆ ಅನಾರೋಗ್ಯಕ್ಕೀಡಾದವರು ಹೊರಗಡೆ ಅಡ್ಡಾಡುವ ಬದಲು ಮನೆಯಲ್ಲೇ ಇದ್ದು ಚಿಕಿತ್ಸೆ ತೆಗೆದುಕೊಳ್ಳುವುದು ಒಳ್ಳೆಯದ್ದು. ಕೆಮ್ಮು ಇದ್ದವರು ಮುಖಕ್ಕೆ ಕರ್ಚೀಫ್ ಇಟ್ಟುಕೊಳ್ಳಬೇಕು. ಒಂದು ವೇಳೆ ಪ್ರವಾಸ ಹೋಗುವ ಅನಿವಾರ್ಯತೆ ಇದ್ದರೆ N95 ಮಾಸ್ಕನ್ನೇ ಬಳಸಬೇಕು ಎಂದು ಸ್ವತಃ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಈಗಾಗಲೇ ಭಾರತದಲ್ಲಿ ಕರೋನಾ ವೈರಸ್ ಪತ್ತೆಯಾಗಿರುವ ಕಾರಣ ಹರುಡುವಿಕೆ ದಿನದಿಂದ ದಿನಕ್ಕೆ ಏರಿಕೆಯಾಗಿವುದು ಕಟ್ಟಿಟ್ಟ ಬುತ್ತಿ. ಅದರಲ್ಲೂ ಕರ್ನಾಟಕದ ಪಕ್ಕದ ಕೇರಳದಲ್ಲೇ ಪತ್ತೆಯಾಗಿರೋದು ಕರ್ನಾಟಕದಲ್ಲಿ ಮತ್ತಷ್ಟು ಭಯದ ವಾತಾವರಣ ಸೃಷ್ಟಿ ಮಾಡಿದೆ. ಇಂತಹ ಸಂಧರ್ಭದಲ್ಲಿ ನಾವು ಎಚ್ಚರಿಕೆ ವಹಿಸದಿದ್ದಲ್ಲಿ, ಮುಂದೆ ಅತೀ ದೊಡ್ಡ ಸಂಕಷ್ಟ ಎದುರಿಸಬೇಕಾಗುವ ಸಾಧ್ಯತೆಗಳಿವೆ.

RS 500
RS 1500

SCAN HERE

Pratidhvani Youtube

«
Prev
1
/
5477
Next
»
loading
play
H. D. Kumaraswamy | ಕಾವೇರಿ ಹೋರಾಟಕ್ಕೆ ಮತ್ತಷ್ಟು ಬಲ ತುಂಬಲು ಮಾಜಿ ಸಿಎಂ ಹೆಚ್‌.ಡಿ.ಕೆ ಸಜ್ಜು..!
play
Kaveri | ಕಾವೇರಿ ಯಾರಿಗೆ ಸೇರಿದ್ದು..? ಯಾರ್ಯಾರ ರಾಜಕೀಯ ಏನು..? | HD Kumaraswamy | @PratidhvaniNews
«
Prev
1
/
5477
Next
»
loading

don't miss it !

ಭಯೋತ್ಪಾದಕ ಕೃತ್ಯದಲ್ಲಿ ನಿಜ್ಜರ್‌ ಕೈವಾಡ: ಕೆನಡಾದಲ್ಲಿ ಹತ್ಯೆಯಾದ ಖಲಿಸ್ತಾನಿ ವಿರುದ್ಧ ಭಾರತ ಆರೋಪ
Top Story

ಭಯೋತ್ಪಾದಕ ಕೃತ್ಯದಲ್ಲಿ ನಿಜ್ಜರ್‌ ಕೈವಾಡ: ಕೆನಡಾದಲ್ಲಿ ಹತ್ಯೆಯಾದ ಖಲಿಸ್ತಾನಿ ವಿರುದ್ಧ ಭಾರತ ಆರೋಪ

by ಪ್ರತಿಧ್ವನಿ
September 23, 2023
ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಬಿಸಿ ಕೂಡ ಸೇರಿಸಬೇಕು:ಸೋನಿಯಾ ಗಾಂಧಿ
Top Story

ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಬಿಸಿ ಕೂಡ ಸೇರಿಸಬೇಕು:ಸೋನಿಯಾ ಗಾಂಧಿ

by ಪ್ರತಿಧ್ವನಿ
September 20, 2023
ಕಾವೇರಿ ಸಮಸ್ಯೆಗೆ ವಿರೋಧ ಪಕ್ಷಗಳಿಂದ ರಾಜಕೀಯ ಆಯಾಮ: ಡಿ.ಕೆ. ಶಿವಕುಮಾರ್ ಆರೋಪ
Top Story

ಕಾವೇರಿ ಸಮಸ್ಯೆಗೆ ವಿರೋಧ ಪಕ್ಷಗಳಿಂದ ರಾಜಕೀಯ ಆಯಾಮ: ಡಿ.ಕೆ. ಶಿವಕುಮಾರ್ ಆರೋಪ

by ಪ್ರತಿಧ್ವನಿ
September 23, 2023
ನಮಗೆ ಕುಡಿಯಲು ನೀರಿಲ್ಲ,  ರಾಜ್ಯಕ್ಕೆ ತಜ್ಞರ ತಂಡವನ್ನ ಕಳುಹಿಸಿ: ಎಂ.ಬಿ ಪಾಟೀಲ್‌
ಇದೀಗ

ನಮಗೆ ಕುಡಿಯಲು ನೀರಿಲ್ಲ, ರಾಜ್ಯಕ್ಕೆ ತಜ್ಞರ ತಂಡವನ್ನ ಕಳುಹಿಸಿ: ಎಂ.ಬಿ ಪಾಟೀಲ್‌

by Prathidhvani
September 22, 2023
ಎಸ್‌ಸಿ/ಎಸ್‌ಟಿಗೆ ಮೀಸಲಾತಿ ವಿಸ್ತರಣೆ: ಸುಪ್ರೀಂ ಕೋರ್ಟ್ ಪರಿಶೀಲನೆ
Top Story

ಎಸ್‌ಸಿ/ಎಸ್‌ಟಿಗೆ ಮೀಸಲಾತಿ ವಿಸ್ತರಣೆ: ಸುಪ್ರೀಂ ಕೋರ್ಟ್ ಪರಿಶೀಲನೆ

by ಪ್ರತಿಧ್ವನಿ
September 21, 2023
Next Post
ಬಜೆಟ್ 2020: ಯುವಜನರ ಹಾಗೂ ಕೃಷಿಕರ ಆದ್ಯತೆಗಳೇನು?

ಬಜೆಟ್ 2020: ಯುವಜನರ ಹಾಗೂ ಕೃಷಿಕರ ಆದ್ಯತೆಗಳೇನು?

ಕೊನೆಗೂ ಶಾ ಭೇಟಿಯಾದ ಯಡಿಯೂರಪ್ಪ

ಕೊನೆಗೂ ಶಾ ಭೇಟಿಯಾದ ಯಡಿಯೂರಪ್ಪ, ಸಂಪುಟ ವಿಸ್ತರಣೆಗೆ ಮೂರು ದಿನ ಗಡುವು  

ಜಾಮಿಯಾ ಗುಂಡಿನ ಸದ್ದು ಬೇರೆಲ್ಲೂ ಕೇಳಿಸದಿರಲಿ!

ಜಾಮಿಯಾ ಗುಂಡಿನ ಸದ್ದು ಬೇರೆಲ್ಲೂ ಕೇಳಿಸದಿರಲಿ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist