• Home
  • About Us
  • ಕರ್ನಾಟಕ
Tuesday, January 13, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಅದ್ಭುತ ಕಲಾಗ್ರಾಮವನ್ನೇ ಸೃಷ್ಟಿಸಿ ಮರೆಯಾದ ಕಲಾಲೋಕದ ಮಾಣಿಕ್ಯ ಸೊಲಬಕ್ಕನವರ

by
November 19, 2020
in ಕರ್ನಾಟಕ
0
ಅದ್ಭುತ ಕಲಾಗ್ರಾಮವನ್ನೇ ಸೃಷ್ಟಿಸಿ ಮರೆಯಾದ ಕಲಾಲೋಕದ ಮಾಣಿಕ್ಯ ಸೊಲಬಕ್ಕನವರ
Share on WhatsAppShare on FacebookShare on Telegram

ಸೊಲಬಕ್ಕನವರ ಎಂದರೆ ಕಣ್ಣು ಮುಂದೆ ಬರುವುದು ಬಯಲಾಟ ಹಾಗೂ ಗೋಟಗೋಡಿಯ ರಾಕ್ ಗಾರ್ಡನ್‍. ಬಯಲಾಟ, ಶಿಲ್ಪ ಕಲಾಕೃತಿಗಳಲ್ಲಿನ ಇವರ ಅಮೋಘ ಪ್ರತಿಭೆ ಹಾಗೂ ಕಲಾ ಜಗತ್ತಿಗೆ ಇವರ ಕೊಡುಗೆ ಪರಿಣಗಣಿಸಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿತ್ತು.

ADVERTISEMENT

ಇಂತಹ ಮಹಾನ್ ಕಲಾವಿದರು ಡಾ.ಟಿ.ಬಿ. ಸೊಲಬಕ್ಕನವರ (73) ಬುಧವಾರ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ.

ಕುಟುಂಬದ ಮೂಲಗಳ ಪ್ರಕಾರ ಸೊಲಬಕ್ಕನವರ ಅವರು ಇತ್ತೀಚೆಗೆ ಕೋವಿಡ್ 19 ಸೋಂಕಿಗೆ ಒಳಗಾಗಿದ್ದರು ಹಾಗೂ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ 2.45ರ ಸುಮಾರಿಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬೆಂಗಳೂರಿನ ಜಕ್ಕಲಿ ಹಾಗೂ ಆಲಮಟ್ಟಿಯಲ್ಲೂ ಕಲಾ ಗ್ರಾಮ ತಲೆ ಎತ್ತಿವೆ. ಇವುಗಳ ಉಗಮಕ್ಕೆ ಸೊಲಬಕ್ಕನವರ ಅವರ ಮಾರ್ಗದರ್ಶನವೂ ಇದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಸೊಲಬಕ್ಕನವರ ಅವರ ದೊಡ್ಡಾಟ ಸಂಶೋಧನೆ ಮತ್ತು ತರಬೇತಿ ಕೇಂದ್ರಕ್ಕೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ 2002ರಲ್ಲಿ ಅತ್ಯುತ್ತಮ ಕಲಾ ತರಬೇತಿ ಸಂಸ್ಥೆ ಎಂದು ಪ್ರಶಸ್ತಿ ನೀಡಿತ್ತು. ಅಲ್ಲದೇ, 2001ರಲ್ಲಿ ಜಾನಪದ ಜ್ಞಾನ ವಿಜ್ಞಾನ ಪ್ರಶಸ್ತಿ, 2002ರಲ್ಲಿ ಸಂಘಟನಾ ಪ್ರಶಸ್ತಿ, 2005ರಲ್ಲಿ ರಾಜ್ಯೋತ್ಸವ ಹಾಗೂ 2006ರಲ್ಲಿ ಲಲಿತ ಕಲಾ ಅಕಾಡೆಮಿ ಪ್ರಶಸ್ತಿಗೆ ಇವರು ಪಾತ್ರರಾಗಿದ್ದರು.

ಇನ್ನು, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್, ಲಂಡನ್ ರೆಕಾರ್ಡ್ ಹೋಲ್ಡರ್ಸ್ ರಿಪಬ್ಲಿಕ್, ಅಮೆರಿಕದ ರೆಕಾರ್ಡ್ ಸೆಕ್ಟರ್, ನೇಪಾಳದ ಎವರೆಸ್ಟ್ ವರ್ಲ್ಡ್ ರೆಕಾರ್ಡ್, ಅಮೇಜಿಂಗ್ ವರ್ಲ್ಡ್ ರೆಕಾರ್ಡ್, ಯೂನಿಕ್ ವರ್ಲ್ಡ್ ರೆಕಾರ್ಡ್ಗಳಿಗೂ ಇವರು ಭಾಜನರಾಗಿದ್ದರು.

ಮೃತರು ಪತ್ನಿ ಸಾವಿತ್ರಮ್ಮ, ಪುತ್ರಿ ವೇದಾರಾಣಿ, ಪುತ್ರ ರಾಜಹರ್ಷ ಹಾಗೂ ಅಳಿಯ ಉದ್ಯಮಿ ಪ್ರಕಾಶ ದಾಸನೂರ ಅವರನ್ನು ಅಗಲಿದ್ದಾರೆ.

ಇಂದು ಮಧ್ಯಾಹ್ನ ರಾಕ್ ಗಾರ್ಡನ್ ಪಕ್ಕ ನ್ಯೂ ವರ್ಕ್ ಶಾಪ್ (ದುಂಡಸಿ ದಾರಿ) ಹತ್ತಿರ ನೆರವೇರಿಸಲಾಯಿತು.

ಏನಿದು ಗೊಟಗೋಡಿಯ ರಾಕ್ ಗಾರ್ಡನ್:

ಇದು ವಿಸ್ಮಯ ಲೋಕ. ಕಡು ರೋಚಕಮಯ ಪ್ರವಾಸಿ ತಾಣ. ವಿಗ್ರಹಗಳ ನೈಜ ಬದುಕಿನ ದರ್ಶನ ನಿಮಗಾಗುತ್ತದೆ. ಇಲ್ಲಿ ಕಾಲಿಟ್ಟ ಕೂಡಲೆ ಇದೊಂದು ಜೀವಂತ ಶಿಲ್ಪಗಳ ಅಮೋಘ ಮೇಳದಂತೆ ಭಾಸವಾಗುತ್ತದೆ. ವಯಸ್ಸಿನ ತರತಮವಿಲ್ಲದೆ ಎಲ್ಲರ ಮೈಮನಗಳನ್ನು ಕಲ್ಪನಾಸಿರಿ ಉಯ್ಯಾಲೆಯಲ್ಲಿ ತೂಗುವ ಉದ್ಯಾನವನ ಈ ಸುತ್ತಾಣ. ಪ್ರವೇಶ ದ್ವಾರದ ವಿನ್ಯಾಸ ನೋಡಿದ ತಕ್ಷಣ ಒಳಗಡೆ ಏನಿರಬಹುದು ಎಂದು ಮನಸ್ಸು ಪುಲಕಿತಗೊಳ್ಳುತದೆ. ಒಳಗೆ ಕಾಲಿಟ್ಟ ಕೂಡಲೇ ನಿಮಗೆ ಕಾಣುವುದು ಕನ್ನಡದ ಮೇರು ನಟ- ನಟ ಸಾರ್ವಭೌಮ ಡಾ. ರಾಜ್ ಕುಮಾರ ಅವರ ವಿವಿಧ ಚಲನಚಿತ್ರ ಪಾತ್ರಗಳ ದೃಶ್ಯಾವಳಿಗಳು. ಇಲ್ಲಿ ನೀವು ಪ್ರವೇಶಿಸುತ್ತಿದ್ದಂತೆ ಗಾರ್ಡನ್ ಕಾಣೆಯಾಗುತ್ತದೆ. ಅದು ಬದುಕಾಗಿ, ನಿಮ್ಮದೇ ಆದ ಆದರ್ಶಮಯ ಭ್ರಾಂತಿಗಳ ಬದುಕಾಗಿ ಮಾರ್ಪಡುತ್ತದೆ. ಮುಂದೆ ಸಾಗುತ್ತ ಹೋದಂತೆ ಕಲಾತ್ಮಕ ಮಾನವರು, ಪ್ರಾಣಿಗಳು, ಉಪಯೋಗಿ ವಸ್ತು ವಿಷಯಗಳು, ಮನೆ, ಮಹಡಿ, ದನದಕೊಟ್ಟಿಗೆ, ಅಂಗಡಿ ಮುಗ್ಗಟ್ಟು, ಓಣಿ ಕೇರಿ, ವೃತ್ತಿ ನಿರತ ಶ್ರಮ ಸಾಹಸ ಗಾಥೆ ಪ್ರಸಂಗಗಳು, ಸೌಂದರ್ಯೋಪಾಸನೆಯ ಚಿತ್ರಣಗಳು, ಅಧುನಿಕ ಮಾನವರ ಜೀವನ ಬಗೆಯನ್ನು ಸಾರುವ ಚಿತ್ರಗಳು ಮೊದಲಾಗಿ ವಿಭಿನ್ನ, ವಿಚಿತ್ರ, ಅದ್ಭುತ, ವೈವಿಧ್ಯಮಯ ವಿಗ್ರಹಗಳ ಜೀವಂತ ಸಮುದಾಯದ ಅದ್ಭುತ ದರ್ಶನವಾಗುತ್ತದೆ. ಈ ವಿಗ್ರಹಗಳು ಜೀವಂತಿಕೆಯಿಂದ ತುಂಬಿದ್ದು ಕಲಾತ್ಮಕವಾಗಿವೆ, ಆಕರ್ಷಕವಾಗಿವೆ, ನೈಜಕ್ಕೆ ಅತಿ ಸನಿಹವಾಗಿವೆ.

ಇಂದರಂಥದ್ದು ಬೇರೊಂದಿಲ್ಲ – ಇಲ್ಲಿ 2000ಕ್ಕೂ ಹೆಚ್ಚು ಶಿಲ್ಪಗಳಿವೆ. ಇದೊಂದು ಶಿಲ್ಪಗಳ ಆಗರ, ವೈವಿಧ್ಯಮಯ ಕಲಾ ಪ್ರಕಾರಗಳ ಸಾಗರ. ಜಗತ್ತಿನಲ್ಲಿಯೇ ಇಂಥದ್ದೊಂದು ಅದ್ಭುತ ಇದುವೇ ಹೌದು.

ಗುಡ್ಡದಂತೆ ಕಂಗೊಳಿಸುವ ಪ್ರವೇಶ ದ್ವಾರದ ಒಳಗೆ ಕಾಲಿರಿಸುತ್ತಿದ್ದಂತೆ ಡಾ.ರಾಜ್ ಅವರ ವಿವಿಧ ಪ್ರತಿಮೆಗಳನ್ನು ಕಾಣುವಿರಿ. ಇವುಗಳನ್ನು ನೋಡುತ್ತ ಆ ಚಿತ್ರ ಮತ್ತು ಪಾತ್ರಗಳನ್ನು ಮೆಲುಕು ಹಾಕುತ್ತ ಸಂಪೂರ್ಣವಾಗಿ ತೃಪ್ತಿಯನ್ನು ಅರಸುವಿರಿ. ಕನ್ನಡ ಸಿನೆಮಾ ಲೋಕದ ದಂತಕಥೆಯಾದ ಅಭಿನಯಕೋವಿದ ಡಾ. ರಾಜ್ ದೃಶ್ಯಾವಳಿಗಳು ಅವರನ್ನು ವಾಸ್ತವವಾಗಿ ನೋಡುತ್ತಿರುವಂತೆ ಭಾಸವಾಗುತ್ತದೆ. ಕಲ್ಪನಾಲೋಕದಲ್ಲಿ ನೀವು ವಿಹರಿಸುವಂತೆ ಮಾಡುತ್ತವೆ ಈ ಕಲಾಕೃತಿಗಳು!

ಒಳಗಡೆ ವಿಹರಿಸುತ್ತಿದಂತೆ ಸಾಲುಸಾಲಾಗಿ ಆಕಾಶಗಂಗೆಯ ಉಪಾದಿಯಲ್ಲಿ ನಿರ್ಮಿಸಲಾದ ಶಿಲ್ಪಕಲಾಕೃತಿಗಳು ಮೌನಿಯಾದರೂ ಜೀವಂತ ಕಳೆಯಿಂದ ಬೀಗುವ ಈ ಬೊಂಬೆಗಳು ಮಾತನಾಡುತ್ತವೆ. ಏನೆಲ್ಲ ವಿಷಯಗಳನ್ನು ಸಂದೇಶಿಸುತ್ತವೆ. ಕಲಾತ್ಮಕವಾಗಿ, ಸೃಜನಾತ್ಮಕವಾಗಿ ನಿರ್ಮಿತವಾದ ಈ ಬೊಂಬೆಗಳು ನಿಮ್ಮ ದೃಷ್ಟಿ ತಾಕಿದೊಡನೆ ಜೀವಂತವಾಗುತ್ತವೆ. ಇಂತಹ ವೈವಿಧ್ಯಮಯ ಕಲೆಯನ್ನು ಸೃಷ್ಟಿಸಿದ ಕುಶಲ, ಮೇಧಾವಿ ಮತ್ತು ದೂರದೃಷ್ಟಿಯನ್ನುಳ್ಳ ಕಲಾಕಾರರಿಗೆ ಅಭಿವಂದನೆ – ಅಭಿನಂದನೆಗಳು.

ಪ್ರೊ. ಟಿ.ಬಿ. ಸೊಲಬಕ್ಕನವರ ಹಾಗೂ ಅವರ ಕುಶಲಕಾರರ ತಂಡ ಪ್ರಶಂಸೆಗೆ ಅರ್ಹ – ರಾಕ್ ಗಾರ್ಡನ್ ದಂತಹ ಅದ್ಭುತ, ರೋಚಕ ಕಲಾತ್ಮಕ ಹಾಗೂ ಅಮರ ಸೃಷ್ಟಿಯನ್ನು ಮಾಡಿದ ಸಾಧನೆ-ದಾಖಲೆ ಅವರದ್ದು!

ಚಿಣ್ಣರ ಶಿಲ್ಪಗಳು, ಅವುಗಳು ನೀರಿನಲ್ಲಿ ಆಡುತ್ತಿರುವ ದೃಶ್ಯಗಳಂತೂ ಶಬ್ದಗಳಲ್ಲಿ ಹೇಳಲಸಾಧ್ಯ. ಅವುಗಳನ್ನು ನೋಡಿಯೇ ಅನುಭವಿಸಬೇಕು.

ಇಲ್ಲೊಂದು ಕಲಾ ವಸ್ತುಸಂಗ್ರಹಾಲಯ ಕೂಡ ಇದೆ. ಮುತ್ತಿನಿಂದ ಅಲಂಕರಿಸಿದ ವೈವಿಧ್ಯಮಯ ಕಲಾಕೃತಿಗಳ, ಗಾಜಿನಲ್ಲಿ ಬಿಡಿಸಿದ ಸುಂದರ ಚಿತ್ತಾರಗಳ ಆಗರವೇ ಇಲ್ಲಿದೆ.

ಮದುವೆ ಮನೆ: ಇಲ್ಲಿ ನಿಜವಾಗಿ ಮದುವೆ ನಡೆಯುತ್ತದೆ. ಎಲ್ಲರೂ ಸ್ಟೇಜ್ ಮೇಲೆ ನಿಂತು ಫೋಟೊ ಕ್ಲಿಕ್ಕಿಸಿಕೊಳ್ಳಲು ಅಣಿಯಾಗಿದ್ದಾರೆ. ಅಲ್ಲಿ ಫೋಟೊ ಶಬ್ದ ಕೂಡ ಬರುತ್ತಿರುತ್ತದೆ. ಅವೆಲ್ಲ ಪ್ರತಿಮೆಗಳು ಎಂದು ತಿಳಿದ ಮೇಲೆ ಒಂದು ಸಾರಿ ನಗು ಉಕ್ಕಿ ಬರುತ್ತದೆ. ಸುತ್ತಲೂ ಕಣ್ಣಾಡಿಸಿದರೆ ಎಲ್ಲ ಧರ್ಮಗಳ ಮದುವೆ ರೀತಿ-ರಿವಾಜುಗಳ ಹತ್ತು ಹಲವು ಫೋಟೊಗಳು ಕಾಣಸಿಗುತ್ತವೆ.

ಮುಂದಿದೆ ನಮ್ಮ ಹಳ್ಳಿ ಮನೆ: ಅದೊಂದು ನಿಜವಾದ ಗ್ರಾಮ. ಅಲ್ಲಿ ಭವಿಷ್ಯ ಹೇಳುವ ಪಂಡಿತ, ಹಳ್ಳಿಯ ಗೌಡರು, ಶೆಟ್ಟರ ಅಂಗಡಿ, ಒನಕೆ ಕುಟ್ಟುತ್ತಿರುವ ಹೆಣ್ಣು ಮಕ್ಕಳು, ಶ್ಯಾನಭೋಗರು, ಕುಶಲಕರ್ಮಿಗಳು, ಅವರೆಲ್ಲ ಮಾಡುತ್ತಿರುವ ಕಲಾ ಕುಸುರಿನ ಕೆಲಸಗಳು ಹೀಗೆ ಒಳಗಡೆ ನೋಡುತ್ತ ಸಾಗಿದಾಗ ನಿಜಕ್ಕೂ ಯಾವುದೋ ಹಳ್ಳಿಗೆ ಬಂದು ಬಿಟ್ಟೆವಾ ಎನ್ನುವ ಭಾವ ಎಲ್ಲರಲ್ಲೂ ಮೂಡುತ್ತದೆ.

ಇಲ್ಲಿ ಉತ್ತರ ಕರ್ನಾಟಕದವರು ಯಾರೇ ಬರಲಿ, ಓಹ್! ನಮ್ಮಜ್ಜ ಹಿಂಗ ಇದ್ದ ನೋಡ ಅಂತ ಉದ್ಗರಿಸುತ್ತಾರೆ.

ಜತೆಗೆ ಪುರಾತನ ಕಸೂತಿ ಕೆಲಸಗಳಾದ ಕವದಿ ಹೊಲಿಯುವುದು, ನೂಲು ತೆಗೆಯುವುದು, ಕಂಬಾರ, ಕಮ್ಮಾರ, ರಾಟಿ ಹೊಡೆಯುವುದು ಹೀಗೆ ಅನೇಕ ದೃಶ್ಯಗಳು ನಮ್ಮನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತವೆ.

ಮೊದಲನೇಯ ಮಹಡಿಗಳತ್ತ ನೋಡಿದಾಗ ಪೇಪರ್ ಓದುತ್ತ ಕುಳಿತಿರುವ ಅಜ್ಜ, ನಮಗೆ ಕೈ ಬೀಸುತ್ತಿರುವ ಹುಡುಗಿ, ದಿಟ್ಟಿಸಿ ನೋಡುತ್ತಿರುವ ಹುಡುಗಾ; ಎಲ್ಲವೂ ಆಕರ್ಷಿಸುತ್ತವೆ. ಗೌಡರ ಮನೆಯತ್ತ ಸಾಗಿದಾಗ ಗೌಡರ ಆ ಧೀಟು, ಮುಂದೆ ಕುಳಿರುವ ನಾಯಿ, ಮಗ್ಗುಲ ನಿಂತಿರುವ ಸೇವಕನ ಮುಖದಲ್ಲಿರುವ ಧೈನ್ಯತಾ ಭಾವ ಇದೆಲ್ಲ ಕೃತಕವಾಗಿ ಸೃಷ್ಟಿಸಲು ಹೇಗೆ ಸಾಧ್ಯ ಎಂದು ಅನಿಸುತ್ತದೆ.

ದನದ ಮನೆ: ಆ ಮನೆಯನ್ನು ಪ್ರವೇಶಿಸುತ್ತಿದ್ದಂತೆ ದನದ ಕೊಟ್ಟಿಗೆಗೆ ಕಾಲಿಟ್ಟೆವು ಎಂದು ಭಾಸವಾಗುತ್ತದೆ. ಎಲ್ಲ ತಳಿಗಳಿ ದನಗಳು, ಎಮ್ಮೆಗಳು ಅಲ್ಲಿ ಜೀವಂತವಾಗಿವೆ ಎನಿಸುತ್ತದೆ.

ಮುಂದೆ ಸಾಗುತ್ತ ಹೋದರೆ ಇಲ್ಲಿ ಕಾಡು ಪ್ರಾಣಿಗಳ, ಗ್ರಾಮ ಸಂಸ್ಕøತಿಯ, ಶಾಲೆಯ, ದೇವಾಲಯದ, ಗೂಳಿ ಕಾಳಗದ, ಮಕ್ಕಳ ಹಳೆಯ ಆಟಗಳ ಹೀಗೆ ಕಲೆಯ ವಿವಿಧ ಮಜಲುಗಳು ಸಾಗರವೇ ಇಲ್ಲಿ ಅನಾವರಣಗೊಂಡಿದೆ. ಎಲ್ಲ ಕಲಾ ಪ್ರತಿಮೆಗಳ ವೀಕ್ಷಣೆ ಮುಗಿದ ಮೇಲೆ ಒಂದಿಷ್ಟು ಸಮಯ ಬೋಟಿಂಗ್ ಮಾಡಿ, ತಿಂಡಿ ತಿನಿಸು ತಿನ್ನಲೂ ಇಲ್ಲಿ ಅನುಕೂಲವಿದೆ.

ವಿಶಾಲವಾದ ಕೆರೆಯ ನೋಟ, ಗಿಡಮರಗಳ ಸೊಂಪಾದ ನೆರಳಲ್ಲಿ ಪಾರದರ್ಶಕತೆಯನ್ನು ತೋರುವ ನೀರು, ನಿಸರ್ಗದ ಮಧ್ಯೆ ಬೋಟಿಂಗ್ ಮಾಡುವ ಅನುಭವ ಅನನ್ಯ; ಅನತಿ ದೂರದಲ್ಲಿ ಕಾಣುವ ರಾಷ್ಟ್ರೀಯ ಹೆದ್ದಾರಿ, ಅಲ್ಲಿ ಬರ್ ಬರ್ ಎಂದು ಕ್ಷಣ ಮಾತ್ರದಲ್ಲಿ ಬಂದು ಹೋಗುವ ವಾಹನಗಳು, ಡೋಣಿ ವಿಹಾರದ ಸೌಲಭ್ಯಗಳು, ಸುತ್ತಲಿನ ಪರಿಸರ ಇವೆಲ್ಲ ಪ್ರವಾಸಿಗರ ಹೃದಯ-ಆತ್ಮ-ಮನಸ್ಸನ್ನು ಚೇತೋಹಾರಿಯಾಗಿಸುತ್ತವೆ.

ದನದ ಮಾರುಕಟ್ಟೆ: ಅಲ್ಲಿ ಒಬ್ಬ ಎಷ್ಟು ಈ ಹೋರಿಗೆ ಎಂದು ಕೇಳುತ್ತ ನಿಂತಿದ್ದಾನೆ, ಈ ಕಡೆಗೆ ಒಬ್ಬ ಗುಟ್ಟಾಗಿ ವ್ಯಾಪಾರ ಮುಗಿಸುತ್ತಿದ್ದಾನೆ, ಗ್ರಾಮಸ್ಥನೊಬ್ಬ ಬಾಯಲ್ಲಿ ಎಲೆ ಅಡಿಕೆ ಜಗಿಯುತ್ತ ನಿಂತಿದ್ದಾನೆ. ವ್ಯಾಪಾರಸ್ಥರು ಎತ್ತುಕೊಳ್ಳಲು ಗ್ರಾಹಕರು ಬರುತ್ತಾರೆ ಎಂದು ಕಾಯುತ್ತಿದ್ದಾರೆ, ಈರ್ವರು ಎತ್ತಿನ ಬಾಯಿ ತೆಗೆದು ಪರೀಕ್ಷಿಸುತ್ತಿದ್ದಾರೆ. ಒಬ್ಬ ಹಿರಿಯ ಬಾಹ್ಮಣ ಅಲ್ಲಿ ನಿಂತಿದ್ದಾನೆ. ಇಬ್ಬರು ಎತ್ತಿನ ಕಾಲಿಗೆ ನಾಲು ಬಡಿಯುತ್ತಿದ್ದಾರೆ. ಇದು ದನದ ಮಾರುಕಟ್ಟೆಯಲ್ಲಿ ಕಂಡು ಬರುವ ದೃಶ್ಯ.

ತರಕಾರಿ ಮಾರುಕಟ್ಟೆ: ದನದ ಮಾರುಕಟ್ಟೆ ನೋಡುತ್ತ ತುಸು ಮುಂದಕ್ಕೆ ಸಾಗಿದರೆ ಕಾಣಸಿಗುವುದೇ ತರಕಾರಿ ಮಾರುಕಟ್ಟೆ. ಇಲ್ಲಿ ಎಲ್ಲ ತರಹದ ಕಾಯಿಪಲ್ಯೆಗಳಿವೆ. ಇವು ನಿಜಕ್ಕೂ ತಾಜಾ ತರಕಾರಿಯೇನೋ ಅನ್ನಿಸುವಷ್ಟು ಅದ್ಭುತವಾಗಿವೆ. ಒಬ್ಬ ತಕ್ಕಡಿ ತೂಗುತ್ತಿದ್ದಾನೆ, ಒಬ್ಬ ಮಹಿಳೆ ಇದು ಎಷ್ಟಪ್ಪ… ಕಮ್ಮಿ ಬರಲ್ವಾ… ಅಂತ ಕೇಳುತ್ತಿದ್ದಾಳೆ. ಒಬ್ಬ ಮಹಿಳೆ ನಿಂಬೆಹಣ್ಣು ಮಾರುತ್ತ ಕುಳಿತಿದ್ದಾಳೆ. ಕಾಯಿ ಮಾರುವವ, ಲಂಬಾಣಿ ಮಹಿಳೆ, ಒಣ ಮೆಣಸಿನಕಾಯಿ, ಅರಿಶಿಣ ಬೇರು, ಇತರೆ ಮಸಾಲೆ ಪದಾರ್ಥಗಳು, ಒಟ್ಟಾರೆ ಎಲ್ಲ ತರಕಾರಿಗಳು ಮತ್ತು ಕಲಾಕೃತಿಗಳು ನಿಜವೆನ್ನಿಸುವಂತಿವೆ.

ಎಲ್ಲಿದೆ ಇದು: ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೋಗುವಾಗ (ಶಿಗ್ಗಾಂವ್ ನಿಂದ 6 ಕಿಮಿ) ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಎಡಗಡೆ, ಮತ್ತು ಹುಬ್ಬಳ್ಳಿ ಯಿಂದ ಬೆಂಗಳೂರಿಗೆ ಹೋಗುವಾಗ ಬಲಗಡೆ (ಹುಬ್ಬಳ್ಳಿಯಿಂದ 37 ಕಿಮಿ) ಇದೆ.

Previous Post

ಸಂಪುಟ ವಿಸ್ತರಣೆಗೆ ದೆಹಲಿ ಭೇಟಿ: ಬರಿಗೈಲಿ ಹಿಂದಿರುಗಿದ ಯಡಿಯೂರಪ್ಪ

Next Post

ಕರ್ನಾಟಕ: 1849 ಹೊಸ ಕರೋನಾ ಪ್ರಕರಣಗಳು ಪತ್ತೆ

Related Posts

BBK 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಯ ವಿಭಿನ್ನ ಆಸೆಗಳು: ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!
Top Story

BBK 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಯ ವಿಭಿನ್ನ ಆಸೆಗಳು: ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!

by ಪ್ರತಿಧ್ವನಿ
January 13, 2026
0

ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12(Bigg Boss Kannada Season 12) ಇದೀಗ ಅಂತಿಮ ಹಂತದತ್ತ ಸಾಗುತ್ತಿದೆ. ಫಿನಾಲೆಗೆ ದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ...

Read moreDetails
BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?

BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?

January 13, 2026
ಪತ್ನಿಗೆ ಕಿರುಕುಳ.. ಪ್ರೇಯಸಿ ಜೊತೆ ಇರುವಾಗಲೇ ಲಾಕ್..ಟೆಕ್ಕಿ ಅರೆಸ್ಟ್

ಪತ್ನಿಗೆ ಕಿರುಕುಳ.. ಪ್ರೇಯಸಿ ಜೊತೆ ಇರುವಾಗಲೇ ಲಾಕ್..ಟೆಕ್ಕಿ ಅರೆಸ್ಟ್

January 13, 2026
ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

January 13, 2026
Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!

Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!

January 13, 2026
Next Post
ಕರ್ನಾಟಕ: 1849 ಹೊಸ ಕರೋನಾ ಪ್ರಕರಣಗಳು ಪತ್ತೆ

ಕರ್ನಾಟಕ: 1849 ಹೊಸ ಕರೋನಾ ಪ್ರಕರಣಗಳು ಪತ್ತೆ

Please login to join discussion

Recent News

BBK 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಯ ವಿಭಿನ್ನ ಆಸೆಗಳು: ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!
Top Story

BBK 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಯ ವಿಭಿನ್ನ ಆಸೆಗಳು: ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!

by ಪ್ರತಿಧ್ವನಿ
January 13, 2026
ಅಕ್ರಮ ವಲಸೆ, ಮಾನವೀಯತೆ, ಕಾನೂನು ಮತ್ತು ರಾಷ್ಟ್ರ ಭದ್ರತೆ!
Top Story

ಅಕ್ರಮ ವಲಸೆ, ಮಾನವೀಯತೆ, ಕಾನೂನು ಮತ್ತು ರಾಷ್ಟ್ರ ಭದ್ರತೆ!

by ಪ್ರತಿಧ್ವನಿ
January 13, 2026
BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?
Top Story

BBK 12: ಮೊದಲ ದಿನ ಔಟ್‌, ಫಿನಾಲೆಯಲ್ಲಿ ಫೇವರೆಟ್: ಟಗರು ಪುಟ್ಟಿ ಆಟಕ್ಕೆ ಟರ್ನಿಂಗ್ ಪಾಯಿಂಟ್‌ ಯಾವುದು..?

by ಪ್ರತಿಧ್ವನಿ
January 13, 2026
ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ
Top Story

ಬೆಂಗಳೂರಿನಲ್ಲಿ ́ನಾನ್‌ ಕನ್ನಡಿಗʼ ಜಾಹೀರಾತು: ದಿಢೀರ್‌ ಯೂಟರ್ನ್ ಹೊಡೆದ ಖಾಸಗಿ ಕಂಪನಿ

by ಪ್ರತಿಧ್ವನಿ
January 13, 2026
Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!
Top Story

Daily Horoscope: ಇಂದು ಈ ರಾಶಿಯವರಿಗೆ ಬಂಪರ್‌ ಲಾಟರಿ..!

by ಪ್ರತಿಧ್ವನಿ
January 13, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

BBK 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಯ ವಿಭಿನ್ನ ಆಸೆಗಳು: ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!

BBK 12: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿಯ ವಿಭಿನ್ನ ಆಸೆಗಳು: ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು..!

January 13, 2026
ಅಕ್ರಮ ವಲಸೆ, ಮಾನವೀಯತೆ, ಕಾನೂನು ಮತ್ತು ರಾಷ್ಟ್ರ ಭದ್ರತೆ!

ಅಕ್ರಮ ವಲಸೆ, ಮಾನವೀಯತೆ, ಕಾನೂನು ಮತ್ತು ರಾಷ್ಟ್ರ ಭದ್ರತೆ!

January 13, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada