Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ʼಸೋಶಿಯಲ್‌ ಡಿಸ್ಟೆನ್ಸ್‌ʼ ಅನ್ನೋದು ಶಾಪ ಎಂದು ಭಾವಿಸದಿರಿ

ʼಸೋಶಿಯಲ್‌ ಡಿಸ್ಟೆನ್ಸ್‌ʼ ಅನ್ನೋದು ಶಾಪ ಎಂದು ಭಾವಿಸದಿರಿ
ʼಸೋಶಿಯಲ್‌ ಡಿಸ್ಟೆನ್ಸ್‌ʼ ಅನ್ನೋದು ಶಾಪ ಎಂದು ಭಾವಿಸದಿರಿ

March 28, 2020
Share on FacebookShare on Twitter

ಕರೋನಾ ಹೆಮ್ಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿ ಸಾವನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಶಿಖರದತ್ತ ಸಾಗುತ್ತಿದೆ. ಕರೋನಾ ವೈರಸ್ ನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಸಾಮಾನ್ಯ ಜನರು ಭಯಭೀತಗೊಂಡಿದ್ದಾರೆ. ಸರ್ಕಾರಗಳು ʼಸೋಶಿಯಲ್ ಡಿಸ್ಟೆನ್ಸ್ʼ ಮಾಡಿಕೊಂಡರೆ ಕರೋನಾ ವೈರಸ್ ಚೈನ್‌ ಲಿಂಕ್ ತುಂಡರಿಸುವ ಸಾಧ್ಯತೆ ಬಗ್ಗೆ ಮಾತಾಡುತ್ತಿದೆ. ಇದೊಂದೇ ಸದ್ಯಕ್ಕೆ ಕರೋನಾ ಮಹಾಮಾರಿ ತಡೆಯಲು ಇರುವ ಮಾರ್ಗ ಎನ್ನುವ ಕಾರಣಕ್ಕೆ ಇಡೀ ದೇಶವನ್ನೇ 21 ದಿನಗಳ ಕಾಲ ಲಾಕ್‌ಡೌನ್ ಮಾಡಿದ್ದಾರೆ. ಸರ್ಕಾರ ಮಾಡಿರುವ ಆದೇಶ ಮುರಿದು ಹೊರ ಪ್ರಪಂಚಕ್ಕೆ ಬರುವಂತಿಲ್ಲ. ಒಂದು ವೇಳೆ ಹೊರಗಡೆ ಅಡ್ಡಾಡಿದ್ರೆ ಪೊಲೀಸರಿಂದ ಪೆಟ್ಟು ತಿನ್ನುವ ಪರಿಸ್ಥಿತಿ ಇದೆ. ಮನೆಯಲ್ಲೂ ಸುಮ್ಮನೆ ಕೂರಲಾಗದೆ, ಹೊರಗಡೆ ಸುತ್ತಾಟ ಮಾಡಲೂ ಸಾಧ್ಯವಾಗದೆ ಜನರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೆ ಒತ್ತಡದಲ್ಲಿ ಸಾವಿಗೆ ಶರಣಾಗುತ್ತಿದ್ದಾರೆ. ಕೊಲೆ ಮಾಡುವ ಹಂತಕ್ಕೂ ಮುಂದಾಗುತ್ತಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಕಾಂಗ್ರೆಸ್​ ನಾಯಕಿಗೆ ಶೂರ್ಪನಖಿ ಎಂದಿದ್ದ ಪ್ರಧಾನಿ ಮೋದಿ : ಮಾನನಷ್ಟ ಮೊಕದ್ದಮೆ ಹೂಡುತ್ತೇನೆಂದ ರೇಣುಕಾ ಚೌಧರಿ

ಬಿಜೆಪಿಗೆ ಬಿಜೆಪಿಯೇ ಎದುರಾಳಿ..! ‘ನಾವಿಕನಿಲ್ಲದ ಹಡಗು’ ಭಾಗ – 02

ನಿಮ್ಮಂತಹ ಪುಕ್ಕಲು ಸರ್ವಾಧಿಕಾರಿಗೆ ಹೆದರಲ್ಲ: ಮೋದಿ ವಿರುದ್ಧ ಪ್ರಿಯಾಂಕ ಗುಡುಗು.!

ಭಾರತ ಬಡತನವನ್ನೇ ಹಾಸು ಹೊತ್ತು ಮಲಗಿದ್ದ ರಾಷ್ಟ್ರ. 21ನೇ ಶತಮಾನದಿಂದ ಈಚೆಗೆ ಭಾರತ ಮಧ್ಯಮ ವರ್ಗದ ಕಡೆಗೆ ಪ್ರಯಾಣ ಬೆಳೆಸಿದೆ. ಈಗಲೂ ಬಹುತೇಕ ಮಂದಿ ಜೀವನೋಪಾಯಕ್ಕಾಗಿ ಕೂಲಿಯನ್ನೇ ನಂಬಿ ಬದುಕುತ್ತಿದ್ದಾರೆ. ಕೆಳವರ್ಗದ ಜನರು ಕಷ್ಟಪಟ್ಟು ದುಡಿಯುವಾಗ ಸಾಕಷ್ಟು ದುಶ್ಚಟಗಳಿಗೆ ಪಾಲುದಾರ ಆಗಿರುತ್ತಾರೆ. ಇದೀಗ 21 ದಿನಗಳ ಕಾಲ ಇಡೀ ದೇಶವೇ ಲಾಕ್‌ಡೌನ್ ಎಂದಿರುವುದು ಕೂಲಿ ಕಾರ್ಮಿಕ ಜನರನ್ನು ನಿದ್ರೆಗೆಡಿಸಿದೆ. ಕಾಲ ಕಳೆಯುವುದಕ್ಕೆ ಪರ್ಯಾಯ ಮಾರ್ಗಗಳೇ ಕಾಣಿಸದೆ ಆತ್ಮಹತ್ಯೆ ಎಂದು ಕೂಪಕ್ಕೆ ಮುಂದಾಗುತ್ತಿದ್ದಾರೆ. ಕೇವಲ ಬಡವರು ಮಾತ್ರವಲ್ಲ ಶ್ರೀಮಂತರಲ್ಲದ ಮಧ್ಯಮ ವರ್ಗದ ಜನರೂ ಕೂಡ ತಮ್ಮ ದೈನಂದಿನ ಚಟಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದೆ ಅಥವಾ ದಿನನಿತ್ಯ ನಡೆಸಿಕೊಂಡು ಬಂದಿರುವ ಕೆಲಸಗಳನ್ನು ಮಾಡಲಾಗದೆ ಮನಸ್ಸು ಕೆಡುತ್ತಿದೆ. ಮುಂದೇನು ಎನ್ನುವುದನ್ನು ಅರಿಯದೆ ಸಾವಿಗೆ ಶರಣಾಗುತ್ತಿದ್ದಾರೆ. ಇನ್ನೊಂದಿಷ್ಟು ಮಂದಿ ಕರೋನಾ ಹರಡುತ್ತೆ ಎನ್ನುವ ಭೀತಿಯಲ್ಲೇ ಮನೆಯಲ್ಲಿ ಮೈಮುದುರಿ ಕುಳಿತಿದ್ದಾರೆ. ಮನೆ ಜನರನ್ನೂ ಹೆದರಿಸುತ್ತಿದ್ದಾರೆ.

ಜನರನ್ನು ಸಾವಿನ ಕುಣಿಕೆಯಿಂದ ಪಾರು ಮಾಡಲು ಅಗತ್ಯ ಇರುವ ʼಸೋಶಿಯಲ್ ಡಿಸ್ಟೆನ್ಸ್ʼ ಮಾಡುವ ಏಕೈಕ ಉದ್ದೇಶದಿಂದ ಕೇಂದ್ರ ಸರ್ಕಾರ 21 ದಿನಗಳ ಕಾಲ ದೇಶವನ್ನು ಲಾಕ್‌ಡೌನ್ಮಾಡಿದೆ. ʼಮನೆಯಲ್ಲೇ ಇರಿ ಜೀವ ಉಳಿಸಿಕೊಳ್ಳಿʼ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಆದರೆ ಮನೆಯಲ್ಲಿ ಮಾನಸಿಕ ಕ್ಷೋಭೆಗೆ ತುತ್ತಾಗುತ್ತಿರುವ ಸಾಮಾನ್ಯ ಜನ ಸಂಕಷ್ಟಕ್ಕೆ ಸಿಲುಕಿಕೊಳ್ತಿದ್ದಾರೆ. ಮಹಾರಾಷ್ಟ್ರದ ಕಾಂದಿವಳಿಯಲ್ಲಿ ತಮ್ಮ ಮಾತು ಕೇಳದೆ ಮನೆಯಿಂದ ಹೊರಕ್ಕೆ ಹೋಗಿದ್ದ ಎನ್ನುವ ಏಕೈಕ ಕಾರಣಕ್ಕೆ ಶುರುವಾದ ಜಗಳ ಹತ್ಯೆಯಲ್ಲಿ ಅಂತ್ಯವಾಗಿದೆ. 28 ವರ್ಷದ ದುರ್ಗೇಶ್ ಠಾಕೂರ್ ಎಂಬಾತನನ್ನು ರಾಜೇಶ್ ಠಾಕೂರ್ ಎಂಬಾತ ಹತ್ಯೆ ಮಾಡಿದ್ದಾನೆ. ಕಾಂದಿವಳಿ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದು, ಲಾಕ್‌ಡೌನ್ಆದೇಶ ಉಲ್ಲಂಘನೆ ಮಾಡಿ ಪದೇ ಪದೇ ಮನೆಯಿಂದ ಹೊರಕ್ಕೆ ಹೋಗಿ ಬರುತ್ತಿದ್ದ. ಅದೇ ಕಾರಣಕ್ಕೆ ಜಗಳ ನಡೀತು. ಅತಿರೇಕಕ್ಕೆ ಹೋದಾಗ ಕರೋನಾ ಭಯದಲ್ಲಿ ಹತ್ಯೆ ಮಾಡಿದೆವು ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಕರೋನಾ ಆತಂಕದಿಂದ ಮಾನಸಿಕ ಖಿನ್ನತೆಗೆ ಒಳಗಾದ ವ್ಯಕ್ತಿಯೊಬ್ಬರು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಅಬ್ಬೆಟ್ಟು ಎಂಬಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 55 ವರ್ಷದ ಸದಾಶಿವ ಶೆಟ್ಟಿ ನೇಣಿಗೆ ಶರಣಾಗುವ ಮುನ್ನ ಕರೋನಾ ಭಯ ಹುಟ್ಟಿಸಿದೆ ಎಂದು ಪತ್ರ ಬರೆದಿಟ್ಟಿದ್ದಾರೆ ಎನ್ನಲಾಗಿದೆ. ಮೊನ್ನೆಯಷ್ಟೇ ಉಡುಪಿಯ ಬಹ್ಮಾವರದ ಉಪ್ಪೂರಿ ಗೋಪಾಲಕೃಷ್ಣ ಮಡಿವಾಳ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದರು. ಕೆಎಸ್ಆರ್ಟಿಸಿ ಬಸ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ ಗೋಪಾಲಕೃಷ್ಣ ಮಡಿವಾಳ, ಕರೋನಾ ಸುದ್ದಿಗಳ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ದೇಶವನ್ನು 21 ದಿನಗಳ ಕಾಲ ಲಾಕ್‌ಡೌನ್ ಮಾಡಿದ ಬಳಿಕ ಇನ್ನು ಮೂರ್ನಾಲ್ಕು ದಿನಗಳಿಗೆ ಈ ರೀತಿಯ ಘಟನೆಗಳು ಹೆಚ್ಚಾಗುತ್ತಿವೆ. ಇಷ್ಟು ದಿನಗಳ ಕಾಲ ಸಂಗ್ರಹ ಮಾಡಿದ್ದ ವಸ್ತುಗಳು ಖಾಲಿಯಾಗುತ್ತ ಬಂದ ಬಳಿಕ ಮತ್ತೊಂದು ರೀತಿಯ ಸಂಕಷ್ಟಗಳು ಎದುರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಖಿನ್ನತೆಯಿಂದ ಹೊರ ಬರುವ ಮಾರ್ಗಗಳನ್ನು ಜನರೇ ಆಯ್ಕೆ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಕರೋನಾ ವೈರಸ್ ಗೆ ಅಥವಾ ಕೇಂದ್ರ, ರಾಜ್ಯ ಸರ್ಕಾರಕ್ಕೆ ಶಾಪ ಹಾಕುತ್ತ ಕುಳಿತರೆ ಯಾವುದೇ ಪ್ರಯೋಜನ ಆಗುವುದಿಲ್ಲ. ಕೇಂದ್ರ, ಅಥವಾ ರಾಜ್ಯ ಸರ್ಕಾರ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೂ ನಮ್ಮ ಜೀವ ಉಳಿಸಿಕೊಳ್ಳುವ ಅನಿವಾರ್ಯತೆ ಇರುವ ಏಕೈಕ ಕಾರಣದಿಂದ ಎಲ್ಲವನ್ನೂ ಅನುಭವಿಸುವ ಅನಿವಾರ್ಯತೆಯೂ ಇದೆ. ಖಿನ್ನತೆಯಿಂದ ಹೊರ ಬರಲು ಏನು ಮಾಡಬೇಕು ಎನ್ನುವ ಬಗ್ಗೆ ಇಂದೇ ನಿರ್ಧಾರ ಮಾಡಿ. ಒಬ್ಬರೇ ಕುಳೀತು ಕರೋನಾ ಬಗ್ಗೆ ಯೋಚನೆ ಮಾಡಿದರೆ ಖಿನ್ನತೆ ಕಟ್ಟಿಟ್ಟ ಬುತ್ತಿ. ನ್ಯೂಸ್ ಚಾನಲ್‌ ಗಳನ್ನು ನೋಡಿದರೆ ಬದುಕುವುದೇ ಬೇಡ ಎನಿಸುತ್ತದೆ. ವಾಟ್ಸಪ್, ಫೇಸ್ಬುಕ್ ಕೂಡ ನಿಮ್ಮನ್ನು ಬದುಕಿಸುವ ಸಾಧ್ಯತೆ ಕಡಿಮೆ. ಎಲ್ಲೆಲ್ಲೂ ಭಯಹುಟ್ಟಿಸುವ ವರದಿಗಳೇ ಬರುತ್ತಿವೆ. ಹಾಗಾಗಿ ಮೊಬೈಲ್ ಹಾಗೂ ಸಿನಿಮಾಗಳು, ಮನರಂಜನೆ ಕಾರ್ಯಕ್ರಮಗಳನ್ನು ಬಿಟ್ಟು ಬೇರೆ ಎಲ್ಲದರಿಂದಲೂ ಆದಷ್ಟು ಅಂತರ ಕಾಯ್ದುಕೊಳ್ಳಿ. ಮೊಬೈಲ್ ನಲ್ಲಿ ಓದುವ ಹವ್ಯಾಸ ಇದ್ದರೆ ಸಕಾರಾತ್ಮಕ ಸುದ್ದಿಗಳನ್ನಷ್ಟೇ ಓದಿ.

ಖಿನ್ನತೆಗೆ ಒಳಗಗಾಬೇಡಿ, ದುಡುಕಿನ ನಿರ್ಧಾರಗಳು ಬೇಡವೇ ಬೇಡ. ಸಾಧ್ಯವಾದಷ್ಟು ಕರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿ. ನೀವು ಉಳ್ಳವರಾಗಿದ್ದರೆ, ಅನ್ನದ ಪೊಟ್ಟಣಗಳನ್ನು ಮಾಡಿಕೊಂಡು ಬೀದಿಯಲ್ಲಿ ಬಿದ್ದಿರುವ ನಿರ್ಗತಿಕರಿಗೆ ಕೊಟ್ಟು ಬನ್ನಿ. ʼಸೋಶಿಯಲ್ ಡಿಸ್ಟೆನ್ಸ್ʼ ಕಾಯ್ದುಕೊಂಡು ರಸ್ತೆಯಲ್ಲಿ ನಿಂತಿರುವ ಪೊಲೀಸರಿಗೂ ಆಹಾರ ಕೊಡಿ. ಉಳಿದ ಸಮಯದಲ್ಲಿ ಮನೆ ಮಂದಿಯೆಲ್ಲಾ ಕುಳಿತು ಆಟವಾಡಿ. ಎಲ್ಲರೂ ಸೇರಿಕೊಂಡು ಅಡುಗೆ ಮಾಡಿ. ಪುಸ್ತಕಗಳನ್ನು ಓದುವ ಹವ್ಯಾಸ ಮಾಡಿಕೊಳ್ಳಿ. ಕರೋನಾ ಎಂಬ ಮಹಾಮಾರಿ ಬಂದಿದ್ದರಿಂದ ನಾನು ಪುಸ್ತಕ ಪ್ರೇಮಿಯಾದೆ ಎಂದಾದರೂ ಹೇಳಿಕೊಳ್ಳಬಹುದು. ಹೆಚ್ಚು ಜನರು ಸೇರುವ ಪ್ರದೇಶಕ್ಕೆ ಹೋಗದೆ, ಮನೆಯಲ್ಲೇ ಕುಳಿತು ಖಿನ್ನತೆಗೂ ಒಳಗಾಗದೆ, ನಿಮ್ಮ ವ್ಯಾಪ್ತಿಯಲ್ಲಿ ಏನೇನು ಮಾಡಬಹುದು ಎನ್ನುವುದನ್ನು ಒಮ್ಮೆ ಲಿಸ್ಟ್ ಮಾಡಿಕೊಳ್ಳಿ. ಅದರಲ್ಲಿ ಸಾಧ್ಯವಾಗಿದ್ದನ್ನು ಮಾಡುತ್ತಾ ಸಾಗಿ. ಮನಸ್ಸಿಗೂ ಖುಷಿ ಆಗುವಂತೆ ಮಾಡಿ. ಖಿನ್ನತೆಯನ್ನು ಓಡಿಸಿ, ಕರೋನಾ ತೊಲಗಿಸಿ. ಎಲ್ಲರೂ ಬದುಕಿದರೆ ನಾವು ಬದುಕೋಣ, ಇಲ್ಲದಿದ್ದರೆ ಬೇಡ ಎನ್ನುವ ದೃಢ ನಿರ್ಧಾರ ಕೈಗೊಳ್ಳಿ. ಕರೋನಾ ಬಗ್ಗೆ ಭಯ ಬೇಕಿಲ್ಲ.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

DK Shivakumar |ನನಗೆ ಧರ್ಮ, ದೇವರು,ಮಠಗಳ ಬಗ್ಗೆ ಗೌರವವಿದೆ. #pratidhvani #dkshivakumar #politics #karnataka
ಇದೀಗ

DK Shivakumar |ನನಗೆ ಧರ್ಮ, ದೇವರು,ಮಠಗಳ ಬಗ್ಗೆ ಗೌರವವಿದೆ. #pratidhvani #dkshivakumar #politics #karnataka

by ಪ್ರತಿಧ್ವನಿ
March 21, 2023
ಮೋದಿ ಹಿರಿಯಣ್ಣ, ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ: ಕೇಜ್ರಿವಾಲ್‌
Top Story

ಮೋದಿ ಹಿರಿಯಣ್ಣ, ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ: ಕೇಜ್ರಿವಾಲ್‌

by ಪ್ರತಿಧ್ವನಿ
March 22, 2023
ಇತಿಹಾಸ ಹಾಳುಮಾಡುವವರ ವಿರುದ್ಧದ ಹೋರಾಟಕ್ಕೆ ಶ್ರೀಗಳು ನೇತೃತ್ವ ವಹಿಸಲಿ : ಡಿ.ಕೆ.ಶಿವಕುಮಾರ್ : D.K Shivakumar
Top Story

ಇತಿಹಾಸ ಹಾಳುಮಾಡುವವರ ವಿರುದ್ಧದ ಹೋರಾಟಕ್ಕೆ ಶ್ರೀಗಳು ನೇತೃತ್ವ ವಹಿಸಲಿ : ಡಿ.ಕೆ.ಶಿವಕುಮಾರ್ : D.K Shivakumar

by ಪ್ರತಿಧ್ವನಿ
March 21, 2023
ಸುಳ್ಳಿನ ಉರಿಗೌಡ, ನಂಜೇಗೌಡ ಮಾತು ಹಾಗಿರಲಿ ;  ಜೀವಂತ ಬೇಯುತ್ತಿರುವ ಉರಿಗೌಡ, ನಂಜೇಗೌಡರ ಪಾಡೇನು?
Top Story

ಸುಳ್ಳಿನ ಉರಿಗೌಡ, ನಂಜೇಗೌಡ ಮಾತು ಹಾಗಿರಲಿ ; ಜೀವಂತ ಬೇಯುತ್ತಿರುವ ಉರಿಗೌಡ, ನಂಜೇಗೌಡರ ಪಾಡೇನು?

by ಮಂಜುನಾಥ ಬಿ
March 18, 2023
D BOSS | ಗುರು ರಾಘವೇಂದ್ರ ಸ್ವಾಮಿ ದರ್ಶನ ಪಡೆದ ಡಿ ಬಾಸ್ #PRATIDHVANI
ಇದೀಗ

D BOSS | ಗುರು ರಾಘವೇಂದ್ರ ಸ್ವಾಮಿ ದರ್ಶನ ಪಡೆದ ಡಿ ಬಾಸ್ #PRATIDHVANI

by ಪ್ರತಿಧ್ವನಿ
March 23, 2023
Next Post
ಕರೋನಾ ಸೋಂಕನ್ನೂ ಕೋಮುವಾದಿ ಅಜೆಂಡಾದ ಅಸ್ತ್ರ ಮಾಡಿಕೊಂಡ ಮಾಧ್ಯಮ!

ಕರೋನಾ ಸೋಂಕನ್ನೂ ಕೋಮುವಾದಿ ಅಜೆಂಡಾದ ಅಸ್ತ್ರ ಮಾಡಿಕೊಂಡ ಮಾಧ್ಯಮ!

ʼಕೋವಿಡ್-19‌ʼ ಅಟ್ಟಹಾಸದ ಮಧ್ಯೆಯೂ ಆಶಾದಾಯಕ ಬೆಳವಣಿಗೆ..

ʼಕೋವಿಡ್-19‌ʼ ಅಟ್ಟಹಾಸದ ಮಧ್ಯೆಯೂ ಆಶಾದಾಯಕ ಬೆಳವಣಿಗೆ..

ಸಿಎಂ ಯಡಿಯೂರಪ್ಪ ಮಾಡಿದ ಕರೋನಾ ಯಡವಟ್ಟು ಸರಿಪಡಿಸಲು ಬಿಜೆಪಿ ವರಿಷ್ಠರ ಮಧ್ಯಪ್ರವೇಶ!

ಸಿಎಂ ಯಡಿಯೂರಪ್ಪ ಮಾಡಿದ ಕರೋನಾ ಯಡವಟ್ಟು ಸರಿಪಡಿಸಲು ಬಿಜೆಪಿ ವರಿಷ್ಠರ ಮಧ್ಯಪ್ರವೇಶ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist