• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ರಾಜಧರ್ಮ ಪಾಲಿಸಿದ BSY ವಿರುದ್ಧ ಟ್ವಿಟ್ಟರ್‌ ನಲ್ಲಿ ಕಾರ್ಯಕರ್ತರ ಆಂದೋಲನ!

by
April 8, 2020
in ಕರ್ನಾಟಕ
0
ರಾಜಧರ್ಮ ಪಾಲಿಸಿದ BSY ವಿರುದ್ಧ ಟ್ವಿಟ್ಟರ್‌ ನಲ್ಲಿ ಕಾರ್ಯಕರ್ತರ ಆಂದೋಲನ!
Share on WhatsAppShare on FacebookShare on Telegram

ಚೀನಾದ ವುಹಾನ್ ಪ್ರಾಂತ್ಯದ ಮಾಂಸದ ಅಂಗಡಿಯಿಂದ ಆರಂಭವಾದ ಮಾರಣಾಂತಿಕ ಕರೋನಾ ವೈರಸ್ ಇಂದು ಇಡೀ ವಿಶ್ವಕ್ಕೆ ಬೆದರಿಕೆ ಒಡ್ಡಿದೆ. ಚೀನಾದಿಂದ ಅಮೆರಿಕವರೆಗೆ ಸುಮಾರು 80 ಸಾವಿರಕ್ಕೂ ಹೆಚ್ಚು ಹೆಣಗಳನ್ನು ಉರುಳಿಸಿವೆ. ಆದರೂ ಇಲ್ಲೆಲ್ಲೂ ಸಹ ಕರೋನಾ ಎಂಬ ವೈರಸ್ ಗೆ ಧರ್ಮದ ಹಣೆಪಟ್ಟಿ ಕಟ್ಟಿರಲಿಲ್ಲ. ಆದರೆ, ಈ ವೈರಸ್ ಭಾರತಕ್ಕೆ ಪ್ರವೇಶಿಸುತ್ತಿದ್ದಂತೆ ಮುಸ್ಲಿಂ ಎಂಬ ಹಣೆಪಟ್ಟಿ ಕಟ್ಟಲಾಯಿತು.

ಈ ನಡುವೆ ದೆಹಲಿ ಮತ್ತು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕೆಲ ಘಟನೆಗಳು ಮತ್ತು ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿನ್ನೆ ನೀಡಿದ ಸಂದರ್ಶನವೊಂದು ಈಗ ರಾಷ್ಟ್ರದಾದ್ಯಂತ ಭಾರೀ ಸುದ್ದಿಯಾಗುತ್ತಿದೆ. ಅಷ್ಟೇ ಅಲ್ಲ ಈ ಕುರಿತು ಬಿಎಸ್ ವೈ ವಿರುದ್ಧ ಪರ ವಿರೋಧ ಚರ್ಚೆಗಳು ಆರಂಭವಾಗಿದ್ದು #WeLostHopeBSY ಎಂಬ ಹ್ಯಾಷ್‌ ಟ್ಯಾಗ್ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಟಾಪ್ ಟ್ರೆಂಡಿಂಗ್‌ ನಲ್ಲಿ ಸ್ಥಾನ ಪಡೆದಿದೆ.

ಘಟನೆ 1: ಕರೋನಾ ಭೀತಿ ಹಿನ್ನೆಲೆಯಲ್ಲಿ ಸಾಮೂಹಿಕ ಸಮಾರಂಭಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದ ಹೊರತಾಗಿಯೂ ಮುಸ್ಲಿಂ ಸಮುದಾಯ ದೆಹಲಿಯ ನಿಜಾಮುದ್ದೀನ್ ಪ್ರದೇಶದ ಮರ್ಕಜ್ ಮಸೀದಿಯಲ್ಲಿ ಸುಮಾರು 4,000ಕ್ಕೂ ಅಧಿಕ ಜನರನ್ನು ಸೇರಿಸಿ ಸಭೆ ನಡೆಸಿತ್ತು. ಈ ಪೈಕಿ ಕರೋನಾ ಸೊಂಕಿಗೆ ಈಗಾಗಲೇ 10 ಜನ ಮೃತಪಟ್ಟಿದ್ದು ನೂರಾರು ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

ದೇಶದ ನಾನಾ ಮೂಲೆಗಳಿಂದ ಜನ ಈ ಸಮಾರಂಭದಲ್ಲಿ ಭಾಗವಹಿಸಿದ್ದು, ಇದೀಗ ಅವರನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡುವುದೇ ಎಲ್ಲಾ ರಾಜ್ಯ ಸರ್ಕಾರಗಳಿಗೂ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಅಲ್ಲದೆ, ಇದರ ಬೆನ್ನಿಗೆ ಮುಸ್ಲಿಂ ಸಮಾಜವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತಹ ʼಕರೋನಾ ಜಿಹಾದ್ʼಎಂಬ ಮಾತುಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಮತ್ತು ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ದೊಡ್ಡ ಮಟ್ಟದ ಸದ್ದಾಗಿತ್ತು.

ಘಟನೆ-2: ಬೆಂಗಳೂರಿನಲ್ಲಿ ಮುಸ್ಲಿಂ ಜನ ಬಾಹುಳ್ಯವಿರುವ ಸಾದಿಕ್ ಪಾಳ್ಯಕ್ಕೆ ಕರೋನಾ ಕುರಿತು ಜನರಿಗೆ ಅರಿವು ಮೂಡಿಸುವ ಸಲುವಾಗಿ ಇತ್ತೀಚೆಗೆ ಆಶಾ ಕಾರ್ಯಕರ್ತೆಯರು ತೆರಳಿದ್ದರು. ಈ ವೇಳೆ ಆಶಾ ಕಾರ್ಯಕರ್ತೆಯರು CAA ಮತ್ತು NPR ಮಾಹಿತಿ ಪಡೆಯಲು ಬರುತ್ತಿದ್ದಾರೆ ಎಂದು ತಪ್ಪಾಗಿ ತಿಳಿದ ಕೆಲ ಮುಸ್ಲಿಮರು ಆಶಾ ಕಾರ್ಯಕರ್ತೆಯರನ್ನು ದೊಡ್ಡ ದ್ವನಿಯಲ್ಲಿ ಗದರಿಸಿ ಅಲ್ಲಿಂದ ಹೊರ ಹಾಕಿದ್ದರು. ಆದರೆ, ಮುಸ್ಲಿಂ ಸಮಾಜದವರು ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿದ್ದಾರೆ, ಇವರು ಸಮಾಜ ದ್ರೋಹಿಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸಲಾಗಿತ್ತು. ಅಲ್ಲದೆ, ಮುಸ್ಲಿಂ ಸಮಾಜದ ಕೆಲವರು ಮಾಡಿದ್ದ ತಪ್ಪಿಗೆ ಇಡೀ ಮುಸ್ಲಿಂ ಸಮಾಜವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಹೀಗಳೆಯಲಾಗಿತ್ತು.

ಆದರೆ, ನಿನ್ನೆ ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಲ್ಪ ಸಂಖ್ಯಾತ ಮುಸ್ಲಿಂ ಸಮಾಜದವರ ಪರ ಮಾತನಾಡಿದ್ದ ಸಿಎಂ ಯಡಿಯೂರಪ್ಪ, “ಮುಸ್ಲಿಂ ಸಮಾಜದ ಮುಖಂಡರನ್ನು ಕರೆಸಿ ಮಾತನಾಡಲಾಗಿದೆ. ಯಾವುದೋ ಒಂದೆರಡು ಅಹಿತಕರ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಇಡೀ ಮುಸ್ಲಿಂ ಸಮುದಾಯದ ಜನರನ್ನು ಅಪರಾಧಿಗಳು ಎಂಬಂತೆ ಬಿಂಬಿಸುವುದು ತಪ್ಪು. ಮುಸ್ಲಿಮ್ ಬಾಂಧವರ ಕುರಿತು ಯಾರೇ ಮಾತನಾಡಿದರು ಅವರ ವಿರುದ್ಧ ತಕ್ಕ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದರು.

ಹಾಗೇ ನೋಡಿದರೆ BSY ಮೊದಲ ಬಾರಿಗೆ ರಾಜಧರ್ಮವನ್ನು ಪಾಲಿಸಿದ್ದರು. ತಾನು ಬಿಜೆಪಿ ಪಕ್ಷದ ಹಿರಿಯ ಮುಖಂಡ ಎಂಬುದನ್ನು ಪಕ್ಕಕ್ಕೆ ಕಳಚಿಟ್ಟು, ಓರ್ವ ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ ವರ್ತಿಸಿದ್ದರು. ಅಲ್ಲದೆ, ಸೂಕ್ಷ್ಮ ಸಂದರ್ಭದಲ್ಲಿ ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಹೇಗೆ ವರ್ತಿಸಬೇಕು ಎಂದು ಸ್ವತಃ ಪ್ರಧಾನ ಮಂತ್ರಿಗೆ ಅವರು ಮಾದರಿಯಾಗಿದ್ದರು.

ವಿರೋಧ ಪಕ್ಷದ ನಾಯಕರೂ ಪ್ರಶಂಶಿಸಿದ್ದರು:

ಕರೋನಾ ಸೋಂಕು ಸಾಲು ಸಾಲು ಹೆಣಗಳನ್ನು ಬೀಳಿಸುತ್ತಿರುವ ಇಂತಹ ದಿನಗಳಲ್ಲಿ ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಉಳಿಸುವ ನಿಟ್ಟಿನಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಮಾತು ಸಮಾಜದ ಅನೇಕರ ಪ್ರಶಂಸೆಗೆ ಪಾತ್ರವಾಗಿತ್ತು.

ಈ ಕುರಿತು ಸ್ವತಃ ಟ್ವೀಟ್ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, “ಕೊರೊನಾ ಹಾವಳಿಗೆ ಜಾತಿ-ಧರ್ಮಗಳ ಬಣ್ಣಹಚ್ಚಿ ಸಮಾಜವನ್ನು ಒಡೆಯುವ ಕೆಲಸವನ್ನು ಕೆಲವರು, ಸುಳ್ಳು ಸುದ್ದಿ,ತಿರುಚಿದ ವಿಡಿಯೋ ತುಣುಕುಗಳ ಮೂಲಕ ಮಾಡುತ್ತಿದ್ದಾರೆ. ಇಂತಹವರ ಬಗ್ಗೆ ಬಿಎಸ್‌ವೈ ಅವರು ಖಡಕ್ ಎಚ್ಚರಿಕೆ ನೀಡಿರುವುದನ್ನು ನಾನು ಸ್ವಾಗತಿಸಿ ಬೆಂಬಲಿಸುತ್ತೇನೆ. ಅವರು ನುಡಿದಂತೆ ನಡೆಯಬೇಕೆಂದು ಆಗ್ರಹಿಸುತ್ತೇನೆ” ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಕೊರೊನಾ ಹಾವಳಿಗೆ ಜಾತಿ-ಧರ್ಮಗಳ ಬಣ್ಣಹಚ್ಚಿ ಸಮಾಜವನ್ನು ಒಡೆಯುವ ಕೆಲಸವನ್ನು ಕೆಲವರು,
ಸುಳ್ಳು ಸುದ್ದಿ,ತಿರುಚಿದ ವಿಡಿಯೋ ತುಣುಕುಗಳ ಮೂಲಕ ಮಾಡುತ್ತಿದ್ದಾರೆ.
ಇಂತಹವರ ಬಗ್ಗೆ @BSYBJP ಅವರು ಖಡಕ್ ಎಚ್ಚರಿಕೆ ನೀಡಿರುವುದನ್ನು ನಾನು ಸ್ವಾಗತಿಸಿ ಬೆಂಬಲಿಸುತ್ತೇನೆ.
ಅವರು ನುಡಿದಂತೆ ನಡೆಯ ಬೇಕೆಂದು ಆಗ್ರಹಿಸುತ್ತೇನೆ.

— Siddaramaiah (@siddaramaiah) April 7, 2020


ಸಿದ್ದರಾಮಯ್ಯ ಮಾತ್ರವಲ್ಲದೆ, ಅನೇಕ ನಾಯಕರು, ವಿರೋಧ ಪಕ್ಷದ ನಾಯಕರು ಬಿಎಸ್‌ವೈ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಆದರೆ, ಯಡಿಯೂರಪ್ಪ ಅವರ ನಿಲುವು ಬಲಪಂಥೀಯ ಹಾಗೂ ಸ್ವತಃ ಬಿಜೆಪಿ ನಾಯಕರಿಗೆ ಇಷ್ಟವಿದ್ದಂತೆ ಕಾಣುತ್ತಿಲ್ಲ. ಪರಿಣಾಮ ಬಿಎಸ್‌ವೈ ಭಾರೀ ಮಟ್ಟದ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.

ಬಿಜೆಪಿ ಸಿದ್ಧಾಂತಕ್ಕೆ ಬಿಸಿ ಕೆಂಡವಾದರಾ ಬಿಎಸ್‌ವೈ?

ಹೇಳಿ ಕೇಳಿ ಬಿಜೆಪಿ ಪಕ್ಕಾ ಬಲಪಂಥೀಯ ಚಿಂತನೆಯನ್ನು ಹೊಂದಿರುವ ಪಕ್ಷ. ಬಹು ಸಂಖ್ಯಾತ ಹಿಂದೂಗಳ ಮತ ಸೆಳೆಯುವ ಕಾರಣಕ್ಕೆ ರಾಮ ಮಂದಿರದಿಂದ ಚಿಕ್ಕಮಗಳೂರಿನ ದತ್ತಪೀಠದ ವರೆಗೆ ಅವರು ರಾಜಕೀಯ ಮಾಡದ ವಿಚಾರಗಳೇ ಇಲ್ಲ. ಸಿ.ಟಿ ರವಿ, ಅನಂತಕುಮಾರ್‍ ಹೆಗಡೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‍ ಕಟೀಲ್ ಸೇರಿದಂತೆ ಅನೇಕ ನಾಯಕರು ಬಹಿರಂಗವಾಗಿಯೇ ಮುಸ್ಲಿಮರ ವಿರುದ್ಧ ಕೆಂಡ ಕಾರಿರುವ, ಹೀಯಾಳಿಸಿರುವ ಅನೇಕ ನಿದರ್ಶನಗಳು ನಮ್ಮ ಕಣ್ಣ ಮುಂದಿದೆ.

ʼಮುಸ್ಲಿಂ ವಿರೋಧʼ ಎಂಬುದು ಬಿಜೆಪಿ ಪಕ್ಷದ ಒನ್‌ ಲೈನ್ ಅಜೆಂಡಾ. ಇಂತಹದ್ದೊಂದು ಪಕ್ಷದಲ್ಲಿ ನಿಂತು ಬಿಎಸ್‌ವೈ ಹೀಗೊಂದು ಹೇಳಿಕೆ ನೀಡಿದರೆ ಕಮಲ ನಾಯಕರು ಅದನ್ನು ಸಹಿಸುವುದಾದರೂ ಹೇಗೆ?

ಇದೇ ಕಾರಣಕ್ಕೆ BSY ಅವರ ಈ ಹೇಳಿಕೆಯನ್ನು ಸಮರ್ಥಿಸುವವರಿಗಿಂತ ವಿರೋಧಿಸುವವರ ಸಂಖ್ಯೆ ಇದೀಗ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಬೆಳೆದಿದೆ. ನಿನ್ನೆಯಿಂದ ಟ್ವಿಟರ್‌ ನಲ್ಲಿ #WeLostHopeBSY ಎಂಬ ಹ್ಯಾಷ್ ಟ್ಯಾಗ್ ಕ್ರಿಯೇಟ್ ಮಾಡಲಾಗಿದ್ದು BSY ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಲಾಗುತ್ತಿದೆ. ಪರಿಣಾಮ ಈ ಹ್ಯಾಷ್‌ ಟ್ಯಾಗ್ ಟ್ವಿಟರ್‌ ನ ಟಾಪ್ ಟ್ರೆಂಡಿಂಗ್ ನಲ್ಲಿ ಸ್ಥಾನ ಪಡೆದಿದೆ.

ನಮಗೆ ಬಿಜೆಪಿ ಬೇಕು ಆದರೆ, BSY ಬೇಡ ಎಂಬ ಕರೆಯೂ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆದರೆ, ಈ ರೀತಿ ಯಡಿಯೂರಪ್ಪನವರ ವಿರುದ್ಧ ಮುಖೇಡಿ ಆಂದೋಲನ ಮಾಡುತ್ತಿರುವವರು ಅವರ ಪಕ್ಷದವರೇ ಎಂದೂ ಹೇಳಲಾಗುತ್ತಿದೆ. ಅಲ್ಲದೆ, BSY ಹೇಳಿಕೆ ಪಕ್ಷದ ನಾಯಕರಲ್ಲೇ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿರುವುದು ಇಂದು ಗುಟ್ಟಾಗೇನು ಉಳಿದಿಲ್ಲ.

ಮಾಧ್ಯಮಗಳೇ ನೀವೇಕೆ ಹೀಗೆ?

ದೆಹಲಿಯ ನಿಜಾಮುದ್ದೀನ್ ಪ್ರದೇಶದ ಘಟನೆ ಬೆಳಕಿಗೆ ಬಂದ ನಂತರ ರಾಷ್ಟ್ರೀಯ ಮತ್ತು ಸ್ಥಳೀಯ ಮಾಧ್ಯಮಗಳು ಒಟ್ಟಿಗೆ ನಿಂತು ಈ ವೈರಸ್ ಹರಡಲು ಮುಸ್ಲಿಮರೇ ಕಾರಣ ಎಂಬ ಸಾಮಾಜಿಕ ಅಭಿಪ್ರಾಯ ಮೂಡಿಸಲು ಮುಂದಾಗಿದ್ದು ಸುಳ್ಳೇನಲ್ಲ. ಎಲ್ಲಾ ಮಾಧ್ಯಮಗಳೂ ಸಾಮೂಹಿಕವಾಗಿ ʼವೈರಸ್ ಜಿಹಾದ್ʼಎಂದು ಗಂಟೆಗಟ್ಟಲೆ ಕಾರ್ಯಕ್ರಮ ಮಾಡುವ ಮೂಲಕ ಇಡೀ ಸಮಾಜದಲ್ಲಿ ಮುಸ್ಲಿಮರನ್ನು ಕೀಳಾಗಿ ನೋಡುವಂತಹ ವಾತಾವರಣವನ್ನು ನಿರ್ಮಾಣ ಮಾಡಿದ್ದವು.

ಅಸಲಿಗೆ ಯಾರೋ ಕೆಲವರು ಮಾಡುವ ತಪ್ಪಿಗೆ ಇಡೀ ಸಮಾಜವನ್ನು ಹೀಗೆ ಅವಮಾನಕಾರಿಯಾಗಿ ಹೀಗೆಳೆಯುವುದು ಎಷ್ಟು ಸರಿ? ಎಂಬ BSY ಮಾತಿನಲ್ಲಿ ತೂಕವಿದೆ. ನ್ಯಾಯವಾಗಿ ಈ ಕೆಲಸವನ್ನು ಮಾಧ್ಯಮಗಳು ಮಾಡಬೇಕಿತ್ತು. ಇಡೀ ದೇಶಕ್ಕೆ ದೇಶವೇ ಕರೋನಾ ಭೀತಿಯಲ್ಲಿರುವಾಗ ಕೋಮು ಸೌಹಾರ್ದತೆಯನ್ನು, ಶಾಂತಿಯನ್ನು ಕಾಪಾಡಬೇಕಾದದ್ದು ಮಾಧ್ಯಮದ ಕರ್ತವ್ಯ. ಆದರೆ, ಮಾಧ್ಯಮಗಳು ಮಾಡಿದ/ಮಾಡುತ್ತಿರುವ ಕೆಲಸವಾದರೂ ಏನು?

BSY ಹೇಳಿಕೆಯನ್ನು ಪ್ರಶಂಸಿಸುತ್ತಲೇ ಮಾಧ್ಯಮಗಳ ಇಂತಹ ನಡೆಯ ಕುರಿತು ಸರಣಿ ಟ್ವೀಟ್ ಮಾಡುವ ಮೂಲಕ ಕಿಡಿಕಾರಿರುವ ಮಾಜಿ ಸಿಎಂ ಕುಮಾರಸ್ವಾಮಿ, “ಹಿಂದೆಂದೂ ಕಂಡರಿಯದ ರಾಷ್ಟ್ರೀಯ ಆರೋಗ್ಯ ಸಂಕಟದ ಈ ದಿನಗಳಲ್ಲಿ ಕೋಮು ದ್ವೇಷ ಹೊತ್ತಿಸುವುದು ಅಕ್ಷಮ್ಯ ಅಪರಾಧ. ಅಪರಾಧಿಗಳ ವಿರುದ್ಧ ತಕ್ಷಣವೇ ಕಠಿಣ ಕ್ರಮ ಜರುಗಿಸದೇ ಹೋದರೆ ರಾಜ್ಯವೇ ಕೋಮುದಳ್ಳುರಿಗೆ ಬಲಿಯಾಗುವ ಅಪಾಯ ತಪ್ಪಿದ್ದಲ್ಲ.

ಹಿಂದೆಂದೂ ಕಂಡರಿಯದ ರಾಷ್ಟ್ರೀಯ ಅರೋಗ್ಯ ಸಂಕಟದ ಈ ದಿನಗಳಲ್ಲಿ ಕೋಮು ದ್ವೇಷ ಹೊತ್ತಿಸುವುದು ಅಕ್ಷಮ್ಯ ಅಪರಾಧ. ಅಪರಾಧಿಗಳ ವಿರುದ್ಧ ತಕ್ಷಣವೇ ಕಠಿಣ ಕ್ರಮ ಜರುಗಿಸದೇ ಹೋದರೆ ರಾಜ್ಯವೇ ಕೋಮುದಳ್ಳುರಿಗೆ ಬಲಿಯಾಗುವ ಅಪಾಯ ತಪ್ಪಿದ್ದಲ್ಲ.
2/4

— H D Kumaraswamy (@hd_kumaraswamy) April 8, 2020


ಪ್ರಿಂಟ್, ಟಿವಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಸಮುದಾಯಗಳ ವಿರುದ್ಧ ದ್ವೇಷವನ್ನು ಬಿತ್ತರಿಸುವ ಎಲ್ಲರ ಮೇಲೂ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಳ್ಳಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲು ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತೇನೆ” ಎಂದು ಒತ್ತಾಯಿಸಿದ್ದಾರೆ.

ಪ್ರಿಂಟ್, ಟಿವಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಸಮುದಾಯಗಳ ವಿರುದ್ಧ ದ್ವೇಷವನ್ನು ಬಿತ್ತರಿಸುವ ಎಲ್ಲರ ಮೇಲೂ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಳ್ಳಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲು ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತೇನೆ.
3/4

— H D Kumaraswamy (@hd_kumaraswamy) April 8, 2020


ADVERTISEMENT

ಓರ್ವ ಮಾಜಿ ಸಿಎಂ ಸಮಾಜದಲ್ಲಿ ಮಾಧ್ಯಮಗಳ ಮೂಲಕ ದ್ವೇಷ ಬಿತ್ತುವವರ ವಿರುದ್ಧ ಪ್ರಕರಣ ದಾಖಲಿಸಿ ಎಂದು ಎಚ್ಚರಿಕೆ ನೀಡುತ್ತಾರೆ ಎಂದರೆ ಮಾಧ್ಯಮಗಳ ಸಾಮಾಜಿಕ ಜವಾಬ್ದಾರಿ ಎಲ್ಲಿಗೆ ಬಂದು ನಿಂತಿದೆ ಎಂಬುದನ್ನು ನೀವು ಊಹಿಸಬಹುದು.

Tags: BSYCovid 19kumaraswamysiddaramaiahWelostHopeBSYಕುಮಾರಸ್ವಾಮಿಕೋವಿಡ್-19ಬಿಎಸ್‌ವೈಸಿದ್ದರಾಮಯ್ಯ
Previous Post

ಕೋವಿಡ್‌-19 : ಕರ್ನಾಟಕ ಸರ್ಕಾರದ ಅಧಿಕೃತ ಮಾಧ್ಯಮ ಪ್ರಕಟಣೆ – 08-04-2020

Next Post

ಕೇರಳ-ಕರ್ನಾಟಕ ಗಡಿ ನಿರ್ಬಂಧ ಮುಗಿದ ಅಧ್ಯಾಯ; ಕರ್ನಾಟಕದಿಂದ ʼಷರತ್ತುಗಳು ಅನ್ವಯʼ!

Related Posts

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ
ಕರ್ನಾಟಕ

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

by ಪ್ರತಿಧ್ವನಿ
April 14, 2026
0

ವಿಜಯಪುರ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆ, ಒಂದೇ ದಿನದಲ್ಲಿ ಎರಡು ಭೀಕರ ಘಟನೆಗಳು ಬೆಳಕಿಗೆ ಬಂದಿವೆ. ಜಿಲ್ಲೆಯ ಹೊರವಲಯದ ಅಲಿಯಾಬಾದ್ ಬಳಿ ಗುಂಡಿನ ಸದ್ದು ಕೇಳಿಸಿಕೊಂಡಿದ್ದು,...

Read moreDetails
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

ಹರಿಹರ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ : ಯತ್ನಾಳ್‌ ಹೀಗ್ಯಾಕಂದ್ರು..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
Next Post
ಕೇರಳ-ಕರ್ನಾಟಕ ಗಡಿ ನಿರ್ಬಂಧ ಮುಗಿದ ಅಧ್ಯಾಯ; ಕರ್ನಾಟಕದಿಂದ ʼಷರತ್ತುಗಳು ಅನ್ವಯʼ!

ಕೇರಳ-ಕರ್ನಾಟಕ ಗಡಿ ನಿರ್ಬಂಧ ಮುಗಿದ ಅಧ್ಯಾಯ; ಕರ್ನಾಟಕದಿಂದ ʼಷರತ್ತುಗಳು ಅನ್ವಯʼ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada