ಪಾಲ್ಘರ್ ನಂಡೋಲಿಯಾ ಸಾವಯವ ರಾಸಾಯನಿಕ ಕಾರ್ಖಾನೆಯಲ್ಲಿ ಭಾರೀ ಸ್ಪೋಟಸಂಭವಿಸಿದೆ. ನಂಡೋಲಿಯಾ ಆರ್ಗ್ಯಾನಿಕ್ ಕೆಮಿಕಲ್ಸ್ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪಾಲ್ಘರ್ ಜಿಲ್ಲಾಧಿಕಾರಿ ಕೈಲಾಸ್ ಶಿಂಧೆ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.
ಸೋಮವಾರ ಸಂಜೆ 7:30 ರವೇಳೆಗೆ ಅವಗಢ ಸಂಭವಿಸಿದ್ದು, ಕಾರ್ಖಾನೆಯಲ್ಲಿದ್ದ 14 ಕಾರ್ಮಿಕರಲ್ಲಿ ಇನ್ನಿಬ್ಬರು ನಾಪತ್ತೆಯಾಗಿದ್ದಾರೆ ಎಂದೂ ಪ್ರಾಥಮಿಕ ವರದಿಗಳು ಹೇಳಿವೆ.
ಸ್ಪೋಟದ ಸದ್ದು ಸುತ್ತಲಿನ 10 ಕಿಮೀ ಪ್ರದೇಶದವರೆಗೆ ಕೇಳಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
Explosion reported in Nandolia Organic Chemicals Pvt Ltd, Tarapur. Two of 14 workers in the plant missing; nine safe, three injured. #TarapurBlast #Maharashtra pic.twitter.com/4wjEo4dxq5
— TOI Mumbai (@TOIMumbai) August 17, 2020






