• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಪರಿಹಾರ ಘೋಷಣೆಯ ಎರಡು ವಾರಗಳ ನಂತರವೂ ಪ್ರಯೋಜನ ಪಡೆಯದ ರೈತರು

by
April 13, 2020
in ದೇಶ
0
ಪರಿಹಾರ ಘೋಷಣೆಯ ಎರಡು ವಾರಗಳ ನಂತರವೂ ಪ್ರಯೋಜನ ಪಡೆಯದ ರೈತರು
Share on WhatsAppShare on FacebookShare on Telegram

ಮಾರ್ಚ್ 26 ರಂದು ಪಿಎಂ ಗರೀಬ್ ಕಲ್ಯಾಣ್ ಪ್ಯಾಕೇಜ್ ಘೋಷಿಸುವಾಗ , 2020-21ರ ಪಿಎಂ ಕಿಸಾನ್ ನ ಮೊದಲ ಕಂತನ್ನು 8.69ಕೋಟಿ ರೈತರಿಗೆ ತಕ್ಷಣವೇ ಪಾವತಿಸಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಹೇಳಿದ್ದರು.ಹಣಕಾಸು ಸಚಿವೆ ತಕ್ಷಣವೇ ನೀಡಲಾಗುತ್ತದೆ ಎಂದರೂ 1.82 ಕೋಟಿಗೂ ಅಧಿಕ ರೈತರಿಗೆ ಎಪ್ರಿಲ್-ಜುಲೈ ಅವಧಿಗೆ ಬರಬೇಕಿದ್ದ 2000 ರುಪಾಯಿಗಳು ಎರಡು ವಾರಗಳು ಕಳೆದರೂ ಖಾತೆಗೆ ಜಮಾವಣೆಗೊಂಡಿಲ್ಲ.

ADVERTISEMENT

ಎಪ್ರಿಲ್ 9 ರ ಸಂಜೆ 2020-21ರ ಮೊದಲ ಕಂತನ್ನು 6.86ಕೋಟಿ ರೈತರಿಗೆ ಖಾತೆಗೆ ವರ್ಗಾಯಿಸಲಾಗಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಅಂಕಿಅಂಶ ಒದಗಿಸಿದೆ. ಆದರೆ ಐದರಲ್ಲಿ ಒಬ್ಬ ರೈತನಿಗೆ ಮಾತ್ರ ನಿರ್ಮಲಾ ಸೀತರಾಮನ್ ಹೇಳಿದ ಪ್ರಯೋಜನ ಸಿಗಲಿದೆ ಅಂತಾ ಹೇಳಲಾಗಿದೆ.

ಲಾಕ್‌ಡೌನ್ ಘೋಷಿಸಿದಾಗಿನಿಂದ ಒಟ್ಟಾರೆಯಾಗಿ 15400 ಕೋಟಿ ರುಪಾಯಿಗಳನ್ನು ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ, ಅದರಲ್ಲಿ 1675 ಕೋಟಿ ರುಪಾಯಿಗಳು ಕಳೆದ ವರ್ಷದ ಬಾಕಿಯಾದ ಎಂದು ಸಚಿವಾಲಯ ತಿಳಿಸಿದೆ.
ಹಣಕಾಸು ವರ್ಷದ ಪ್ರಾರಂಭದ ಹತ್ತು ದಿನಗಳೊಳಗೆ 6.86 ಕೋಟಿ ರೈತರಿಗೆ 2020-21ರ ಮೊದಲ ಕಂತನ್ನು ಪಾವತಿಸಲಾಗಿದೆ. ಅದಾಗ್ಯೂ, ಪ್ಯಾಕೇಜ್ ಘೋಷಣೆಯ ಸಂಧರ್ಭದಲ್ಲಿ ಪಿಎಂ ಕಿಸಾನ್ CEO ವಿವೇಕ್ ಅಗರ್ವಾಲ್ ಅವರು 9 ಕೋಟಿ ರೈತರಿಗೆ ಎಪ್ರಿಲ್ ಮೊದಲ ವಾರದೊಳಗೆ ಪಾವತಿ ಮಾಡಲಾಗುತ್ತದೆಂದು ಕೊಟ್ಟ ಭರವಸೆ ಇನ್ನೂ ಪೂರ್ತಿಯಾಗಿಲ್ಲ. ಪಿಎಂ ಕಿಸಾನ್ ಅಡಿಯಲ್ಲಿ ನೋಂದಾಯಿಸಲ್ಪಟ್ಟ 2.13 ಕೋಟಿ ರೈತರಿಗೆ ಇನ್ನೂ ಮೊದಲ ಕಂತು ಪಾವತಿಸಬೇಕಾಗಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆ ಘೋಷಿಸುವಾಗ 12.5 ಕೋಟಿ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದರು. NDA ಸರಕಾರ ಮತ್ತೆ ಅಧಿಕಾರಕ್ಕೆ ಬಂದ ನಂತರ ಈ ಯೋಜನೆಯಿಂದ 14.5ಕೋಟಿ ರೈತರು ಫಲಾನುಭವಿಗಳಾಗುವಂತೆ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಹೇಳಿತ್ತು. ಆದರೆ ರಾಜ್ಯಸರಕಾರಗಳ ನಿಷ್ಕ್ರಿಯತೆಯಿಂದ ಕೇಂದ್ರ ಸರಕಾರ ಉದ್ದೇಶಿಸಿದ್ದ ಫಲಾನುಭವಿಗಳ ಅರ್ಧದಷ್ಟು ಮಾತ್ರ ಫಲಾನುಭವಿಗಳು ಇದುವರೆಗೆ ಮೊದಲ ಕಂತು ಪಡೆದುಕೊಂಡಿದ್ದಾರೆ.

ಪಶ್ಚಿಮ ಬಂಗಾಳ ಸರಕಾರವು ಇದುವರೆಗೆ ಈ ಯೋಜನೆಯನ್ನು ತನ್ನ ರಾಜ್ಯದಲ್ಲಿ ವಿಸ್ತರಿಸಲು ತನ್ನ ವಿರೋಧ ವ್ಯಕ್ತಪಡಿಸಿದೆ. ಆದ್ದರಿಂದ ಪಶ್ಚಿಮ ಬಂಗಾಳದ 70 ಲಕ್ಷ ರೈತರಲ್ಲಿ ಯಾರೊಬ್ಬರೂ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಪ್ರಯೋಜನ ಪಡೆಯಲಿಲ್ಲ‌. ರಾಜ್ಯಗಳು ರೈತರನ್ನು ಈ ಯೋಜನೆಯಡಿ ನೋಂದಾಯಿಸದವರೆಗೆ ಕೇಂದ್ರವು ಈ ಯೋಜನೆಯ ಹಣವನ್ನು ವರ್ಗಾಯಿಸಲು ಸಾಧ್ಯವಿಲ್ಲ.

ನೋಂದಾವಣೆಯ ಸಂಧರ್ಭದಲ್ಲಿ ಪರಿಶೀಲನೆ ಸಮಸ್ಯೆಗಳು, ಆಧಾರ್ ಲಿಂಕ್ ಸಮಸ್ಯೆಗಳು ಮುಂತಾದವುಗಳಲ್ಲಿ ಕೇಂದ್ರ ಸರಕಾರದ ಅಸಮರ್ಥತೆಯೂ ಕಂಡುಬರುತ್ತವೆ.ಈ ಎಲ್ಲಾ ಕಾರಣದಿಂದಾಗಿ ಈ ಯೋಜನೆ ಪ್ರಾರಂಭಸಿದ ಸಮಯದಲ್ಲಿ ಕೇಂದ್ರ ಸರಕಾರ ಉದ್ದೇಶಿಸಿದಷ್ಟು ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ. ಕಿಸಾನ್ ಯೋಜನೆ ಪ್ರಾರಂಭಿಸಿದ ಮೊದಲ ವರ್ಷದಲ್ಲಿ ಸುಮಾರು 75%ರೈತರು ಎಲ್ಲಾ ಮೂರು ಕಂತುಗಳನ್ನು ಪಡೆದುಕೊಂಡಿಲ್ಲ.

ಇದರರ್ಥ 2018-19 ಹಾಗೂ 2019-20ರಲ್ಲಿ ಈ ಯೋಜನೆಗೆ ಮೀಸಲಿಟ್ಟ 95000 ಕೋಟಿ ರುಪಾಯಿಗಳಲ್ಲಿ ಕೇವಲ 56000 ಕೋಟಿ ರುಪಾಯಿಗಳನ್ನು ಬಳಸಲಾಗಿದೆ, 39,000ಕೋಟಿ ರುಪಾಯಿಗಳನ್ನು ಬಳಸದೆ ಬಾಕಿಮಾಡಲಾಗಿದೆ.

Tags: Central GovtLockdownnirmala seetharamanPM Kisan schemeಕೇಂದ್ರ ಸರಕಾರನಿರ್ಮಲಾ ಸೀತರಾಮನ್ಪಿಎಂ ಕಿಸಾನ್ ಯೋಜನೆಲಾಕ್‌ಡೌನ್‌
Previous Post

PM-CARES ಗೆ ನಾವು ಹಣ ಕೊಡಲ್ಲ!? ದೇಶದ ಜನಪ್ರತಿನಿಧಿಗಳು ಇಷ್ಟೊಂದು ಬಡವರೇ?

Next Post

ವಿದೇಶಿ ಕಡಲ ತೀರದಲ್ಲಿ ಸಹಾಯಕ್ಕಾಗಿ ಕಾಯುತ್ತಿದ್ದಾರೆ ಭಾರತೀಯ ಸಮುದ್ರಯಾನಿಗಳು

Related Posts

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?
Top Story

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

by ಪ್ರತಿಧ್ವನಿ
May 27, 2026
0

ಬೆಂಗಳೂರು : ಕಾಂಗ್ರೆಸ್ ನಾಯಕತ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ನಡುವಿನ ದೀರ್ಘಕಾಲದ ಶೀತಲ ಸಮರ ಪರಿಹರಿಸುವಲ್ಲಿ ಯಶಸ್ವಿಯಾದಂತೆ ಕಂಡು ಬರುತ್ತಿದೆ. ಈ ಮೂಲಕ ಸಿದ್ದರಾಮಯ್ಯ ವಿದಾಯಕ್ಕೆ...

Read moreDetails
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

May 26, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

May 26, 2026
ಬೆಂಗಳೂರಿನಲ್ಲಿ ‘ಪೆದ್ದಿ’ ಪ್ರಮೋಷನ್..ರಾಮ್ ಚರಣ್ ಗೆ ರಾಷ್ಟ್ರಪ್ರಶಸ್ತಿ ಕೊಡ್ಬೇಕು ಎಂದ ಶಿವಣ್ಣ

ಬೆಂಗಳೂರಿನಲ್ಲಿ ‘ಪೆದ್ದಿ’ ಪ್ರಮೋಷನ್..ರಾಮ್ ಚರಣ್ ಗೆ ರಾಷ್ಟ್ರಪ್ರಶಸ್ತಿ ಕೊಡ್ಬೇಕು ಎಂದ ಶಿವಣ್ಣ

May 26, 2026
Next Post
ವಿದೇಶಿ ಕಡಲ ತೀರದಲ್ಲಿ ಸಹಾಯಕ್ಕಾಗಿ ಕಾಯುತ್ತಿದ್ದಾರೆ ಭಾರತೀಯ ಸಮುದ್ರಯಾನಿಗಳು

ವಿದೇಶಿ ಕಡಲ ತೀರದಲ್ಲಿ ಸಹಾಯಕ್ಕಾಗಿ ಕಾಯುತ್ತಿದ್ದಾರೆ ಭಾರತೀಯ ಸಮುದ್ರಯಾನಿಗಳು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada