• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಅಸ್ಸಾಮ್:‌ ತನ್ನ ಮದುವೆಗೂ ರಜೆ ಪಡೆಯಲೊಲ್ಲದ ಮಹಿಳಾ ಜಿಲ್ಲಾಧಿಕಾರಿ

by
September 14, 2020
in ದೇಶ
0
ಅಸ್ಸಾಮ್:‌ ತನ್ನ ಮದುವೆಗೂ ರಜೆ ಪಡೆಯಲೊಲ್ಲದ ಮಹಿಳಾ ಜಿಲ್ಲಾಧಿಕಾರಿ
Share on WhatsAppShare on FacebookShare on Telegram

ಅಸ್ಸಾಮಿನ ಚಾಚರ್‌ ಜಿಲ್ಲೆಯ ಜಿಲ್ಲಾಧಿಕಾರಿ ಕೀರ್ತಿ ಜಲ್ಲಿ ತನ್ನ ಮದುವೆಗೂ ರಜೆ ಪಡೆಯದೆ ಕರ್ತವ್ಯ ನಿರ್ವಹಿಸಿ ವ್ಯಾಪಕ ಶ್ಲಾಘನೆಗೆ ಒಳಗಾಗಿದ್ದಾರೆ. ಈ ಕರ್ತವ್ಯ ನಿಷ್ಠ ಜಿಲ್ಲಾಧಿಕಾರಿ ಮೂಲತಃ ಹೈದರಾಬಾದ್‌ ನಿವಾಸಿ, 2013 ರ ಬ್ಯಾಚ್‌ನ ಐಎಎಸ್‌ ಅಧಿಕಾರಿ ಕರೋನಾ ಸಾಂಕ್ರಮಿಕ ಹರಡುವ ಮೊದಲೇ ಚಾಚರ್‌ ಜಿಲ್ಲೆಗೆ ಸೇವೆಗೆ ನಿಯೋಜನೆಗೊಂಡಿದ್ದರು.

ADVERTISEMENT

ಚಾಚರ್‌ ಜಿಲ್ಲೆಯಲ್ಲಿ ದಿನವೊಂದಕ್ಕೆ ಸರಾಸರಿ 100ರಂತೆ ಕರೋನಾ ಪ್ರಕರಣಗಳು ಪತ್ತೆಯಾಗುತ್ತಿದೆ. ಹಾಗಾಗಿಯೇ ಈ ಜಿಲ್ಲಾಧಿಕಾರಿ ತನ್ನ ಮದುವೆಗಾಗಿ ರಜೆ ಮಾಡಲು ನಿರಾಕರಿಸಿದ್ದಾರೆ. ಮದುವೆಗಾಗಿ ಹೈದರಾಬಾದಿನಲ್ಲಿರುವ ಮನೆಗೆ ಬರುವುದಿಲ್ಲ, ತಾನು ರಜೆ ಪಡೆಯುವುದಿಲ್ಲವೆಂದು ಮನೆಯವರಿಗೆ ತಿಳಿಸಿದ್ದಾರೆ. ಮದುವೆಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದ ಕುಟುಂಬಸ್ಥರಿಗೆ ಇದು ಕ್ಷಣಕಾಲಕ್ಕೆ ದಿಗ್ಭ್ರಮೆ ಹುಟ್ಟಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೊನೆಗೂ ನಿಗದಿಯಂತೆ ಮದುವೆ ಕಾರ್ಯಕ್ರಮ ನೆರವೇರಲು ವರನೇ ವಧುವಿನ ಅಂದರೆ ಜಿಲ್ಲಾಧಿಕಾರಿಯ ಸಿಲ್ಚಾರ್‌ನಲ್ಲಿರುವ ಬಂಗಲೆಗೆ ತೆರಳಿದ್ದಾರೆ. ಮದುವೆ ಕಾರ್ಯಕ್ರಮಕ್ಕೆ ಝೂಮ್‌ ವಿಡಿಯೋ ಕಾಲ್‌ ಮೂಲಕ ಇಬ್ಬರ ಕುಟುಂಬ ಸೇರಿದಂತೆ ಸುಮಾರು 800 ಮಂದಿ ಸಾಕ್ಷಿಯಾಗಿದ್ದಾರೆ.

ಯಾರೇ ಒಬ್ಬರ ಜೀವನದಲ್ಲಿ ಮದುವೆ ಅನ್ನುವುದು ಮುಖ್ಯ ಅಂಗ ಅನ್ನುವುದು ತಿಳಿದಿದೆ, ಆದರೆ ನನಗೆ ರಜೆ ಪಡೆದುಕೊಳ್ಳುವ ಹಾಗಿರಲಿಲ್ಲ. ಯಾಕೆಂದರೆ ನನ್ನ ಜಿಲ್ಲೆಯಲ್ಲಿ (ಕರ್ತವ್ಯ ನಿರತ) ದಿನವೊಂದಕ್ಕೆ ಸರಾಸರಿ 100 ಕ್ಕೂ ಹೆಚ್ಚು ಕರೋನಾ ಪ್ರಕರಣಗಳು ಪತ್ತೆಯಾಗುತ್ತಿದೆ. ನಾನು ಜನರ ಜೀವ ಉಳಿಸಲು ಹೋರಾಡುತ್ತಿದ್ದೇನೆ. ಇಂತಹ ವಿಷಮ ಘಳಿಗೆಯಲ್ಲೂ ನನ್ನ ಜಿಲ್ಲೆಯನ್ನು ಬಿಟ್ಟು ಹೋಗುವುದು ನನಗೆ ಊಹಿಸಲೂ ಅಸಾಧ್ಯ ಎಂದು ಮಹಿಳಾ ಜಿಲ್ಲಾಧಿಕಾರಿ ಪಿಟಿಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

ಅಲ್ಲದೆ, ತನಗೆ ತನ್ನ ಅಧಿಕೃತ ಸರ್ಕಾರಿ ಬಂಗಲೆಯಲ್ಲಿ ಮದುವೆ ನಡೆದಿರುವುದು ಕುಶಿ ತಂದಿದೆ ಎಂದು ಹೇಳಿದ್ದಾರೆ. ಜೊತೆಗೆ ಜಿಲ್ಲಾಧಿಕಾರಿಯ ನಿರ್ಣಯಕ್ಕೆ ಅವರ ಕುಟುಂಬಸ್ಥರು, ವರನ ಕುಟುಂಬಸ್ಥರು, ಸ್ವತಃ ವರನೇ ಅಭಿನಂದಿಸಿದ್ದಾರೆ.

ಮದುವೆಗೆ ಆಗಮಿಸಿದ ಪುಣೆ ಮೂಲದ ವರ ಆದಿತ್ಯ ಶಶಿಕಾಂತ್‌, ಮದುವೆಗೂ ಮುನ್ನ ಸ್ಥಳೀಯ ಕೋವಿಡ್‌ ಶಿಷ್ಟಾಚಾರದ ಪ್ರಕಾರ ಕಡ್ಡಾಯ ಕ್ವಾರಂಟೈನ್‌ನಲ್ಲಿ ಇದ್ದರು.

“ನನ್ನ ತಂದೆ-ತಾಯಿ ಕೋವಿಡ್‌ ನಿಂದ ಇದೀಗ ಚೇತರಿಸಿಕೊಳ್ಳುತ್ತಿದ್ದು, ಮದುವೆಗೆ ಆಗಮಿಸಲು ಸಾಧ್ಯವಾಗಿಲ್ಲ, ನನ್ನ ಕಡೆಯಿಂದ ನನ್ನ ತಂಗಿಯೊಬ್ಬಳೆ ಮದುವೆಗೆ ಇದ್ದಳು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಝೂಮ್‌ ಮೂಲಕ ಮದುವೆಗೆ ಸಾಕ್ಷಿಯಾದ ಅಷ್ಟೂ ಮಂದಿಯೂ ಮದುವೆಗೆ ಖುದ್ದು ಹಾಜರಾಗುವಂತೆ ವಸ್ತ್ರ ಧರಿಸಿ ವಧುವರರಿಗೆ ಆಶಿರ್ವದಿಸಿದ್ದಾರೆ.

ತನ್ನ ಮದುವೆಗೆ ತನ್ನ ಸಹೋದ್ಯೋಗಿಗಳನ್ನು, ಗೆಳೆಯರನ್ನು ಆಹ್ವಾನಿಸಿದ್ದ ಜಿಲ್ಲಾಧಿಕಾರಿ ಮದುವೆಯ ವಿಷಯ ಬಚ್ಚಿಟ್ಟು, ಗಣೇಶ ಪೂಜೆಗೆಂದು ಆಹ್ವಾನಿಸಿದ್ದರು. ಪೂಜೆಗೆಂದು ಬಂದವರಿಗೆ ಸ್ಥಳದಲ್ಲಿ ಮದುವೆ ವಿಚಾರ ತಿಳಿದು ಆಶ್ಚರ್ಯಕ್ಕೆ ಒಳಗಾಗಿದ್ದಾರೆ. ಸಂಧರ್ಭದಲ್ಲಿ 20 ರಷ್ಟು ಮಂದಿ ಮದುವೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ.

ಅದಲ್ಲದೆ, ಮದುವೆಯ ಮುನ್ನಾ ದಿನ ಹಾಗೂ ನಂತರದ ದಿನವೂ ಎಂದಿನಂತೆ ಜಿಲ್ಲಾಧಿಕಾರಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅಸ್ಸಾಮ್‌ ರಾಜ್ಯದಲ್ಲಿ ಬುಧವಾರ ಸರ್ಕಾರಿ ರಜೆಯಿದ್ದು, ಅಂದೇ ಮದುವೆಯಾಗಿದ್ದಾರೆ. ಹಾಗೂ ಮದುವೆಯ ದಿನವೂ ಔದ್ಯೋಗಿಕ ಕರೆಗಳನ್ನು ಸ್ವೀಕರಿಸಿದ್ದಾರೆ, ಕರ್ತವ್ಯಕ್ಕೆ ಸಂಬಂಧಿಸಿದಂತೆ ಆದೇಶಗಳನ್ನು ನೀಡಿದ್ದಾರೆ.

ಚಾಚರ್‌ ಜಿಲ್ಲೆಯಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದಲೂ, ಜಿಲ್ಲೆಯ ಆರೋಗ್ಯ, ಆಸ್ಪತ್ರೆಯ ಗುಣಮಟ್ಟ ಹೆಚ್ಚಿಸಲು ಅವಿರತ ಶ್ರಮ ಪಡುತ್ತಿದ್ದಾರೆಂದು ಔಟ್‌ಲುಕ್‌ ವರದಿ ಮಾಡಿದೆ.

Tags: ಅಸ್ಸಾಮ್‌ಜಿಲ್ಲಾಧಿಕಾರಿ
Previous Post

ಇಂದಿನಿಂದ ಸಂಸತ್ ಅಧಿವೇಶನ: ಕೇಂದ್ರ ಸರ್ಕಾರ ಈ 6 ಪ್ರಮುಖ ವಿಷಯಗಳ ಚರ್ಚೆಗೆ ಸಿದ್ದವಿದೆಯೇ?

Next Post

ದಂಗೆ ಏಳುವುದಕ್ಕೂ ಮೊದಲು ಹಿಂದಿ ಹೇರಿಕೆ ನಿಲ್ಲಬೇಕು- HD ಕುಮಾರಸ್ವಾಮಿ

Related Posts

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ
ದೇಶ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

by ಪ್ರತಿಧ್ವನಿ
April 10, 2026
0

ಪಟ್ನಾ, ಏ.10: ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಆರೋಪದಡಿ ಬಿಹಾರ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ಈ ಘಟನೆ ದೇಶದಾದ್ಯಂತ ಆತಂಕ...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

April 6, 2026
ಟೆರಿಟೋರಿಯಲ್ ಆರ್ಮಿಯಲ್ಲಿ ಉದ್ಯೋಗ:ಯುವಕರಿಗೆ ಸುವರ್ಣಾವಕಾಶ

 ಮೊಹಮ್ಮದ್ ಇಕ್ಬಾಲ್ ‘ಪಲಾಯನಗೈದ ಆರ್ಥಿಕ ಅಪರಾಧಿ’ ಎಂದು ನ್ಯಾಯಾಲಯ ಘೋಷಣೆ

April 1, 2026
Next Post
ದಂಗೆ ಏಳುವುದಕ್ಕೂ ಮೊದಲು ಹಿಂದಿ ಹೇರಿಕೆ ನಿಲ್ಲಬೇಕು- HD ಕುಮಾರಸ್ವಾಮಿ

ದಂಗೆ ಏಳುವುದಕ್ಕೂ ಮೊದಲು ಹಿಂದಿ ಹೇರಿಕೆ ನಿಲ್ಲಬೇಕು- HD ಕುಮಾರಸ್ವಾಮಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada