• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ʻಮೋದಿ ಆರತಿʼ : ʻಮೋದಿ ಮೂರ್ತಿʼ : ಕೊನೆಗೂ ಮೋದಿ ಹೆಸರಲ್ಲಿ ದೇವಸ್ಥಾನ.!

by
May 26, 2020
in ದೇಶ
0
ʻಮೋದಿ ಆರತಿʼ : ʻಮೋದಿ ಮೂರ್ತಿʼ : ಕೊನೆಗೂ ಮೋದಿ ಹೆಸರಲ್ಲಿ ದೇವಸ್ಥಾನ.!
Share on WhatsAppShare on FacebookShare on Telegram

ಉತ್ತರಾಖಂಡ್‌ನ ಬಿಜೆಪಿ ಕಾರ್ಯಕರ್ತರು ಮೋದಿಯನ್ನು ಹಾಡಿಹೊಗಳಲು ಮೇ 22ರಂದು ಮೋದಿ ಆರತಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ವೇಳೆ ಲಾಕ್‌ ಡೌನ್‌ ಎಲ್ಲ ತೆರವಾದ ಬಳಿಕ ಮೋದಿಗಾಗಿ ದೇವಸ್ಥಾನ ನಿರ್ಮಿಸುವ ಉದ್ದೇಶ ಹೊಂದಿದೇವೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಇದು ಈಗ ಉತ್ತರಾಖಂಡ್‌ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಮತ್ತೊಂದು ಸುತ್ತಿನ ಕಿತ್ತಾಟಕ್ಕೆ ಕಾರಣವಾಗಿದೆ.

ADVERTISEMENT

ಉತ್ತರಾಖಂಡ್‌ನ ಬಿಜೆಪಿ ಶಾಸಕ ಗಣೇಶ್‌ ಜೋಶಿ ಎಂಬವರು ನಡೆಸಿದ ಕಾರ್ಯಕ್ರಮದಲ್ಲಿ ʻಮೋದಿ ಆರತಿʼಯನ್ನು ನಡೆಸಿದ್ದಾರೆ. ಈ ವೇಳೆ ಉತ್ತರಖಂಡ್‌ ಉನ್ನತ ಶಿಕ್ಷಣ ಸಚಿವ ಧಾನ್‌ ಸಿಂಗ್‌ ರಾವತ್‌ ಕೂಡ ಉಪಸ್ಥಿತರಿದ್ದರು. ಆದರೆ ಬಿಜೆಪಿಯ ಈ ನಡೆಯನ್ನು ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರು ದೂರು ನೀಡಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ ಬಿಜೆಪಿ ಎಂದು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ಕೊಡಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಗಣೇಶ್‌ ಜೋಶಿ, “ನನ್ನ ಪಾಲಿಗೆ ನರೇಂದ್ರ ಮೋದಿಯವರು ದೇವರಿದ್ದಂತೆ. ನಾನು ಮೋದಿಯವರನ್ನ ಪೂಜಿಸುತ್ತೇನೆ. ಅದರಿಂದ ನನಗೆ ಸುಖ, ಶಾಂತಿ, ನೆಮ್ಮದಿ ದೊರಕುತ್ತಿದೆ. ಅಂಥಾ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ಮೋದಿಯವರು ಅಂದ್ರೆ ಭಯ ಬೀಳುತ್ತಾರೆ. ಹೀಗಾಗಿ ಮೋದಿಯವರನ್ನು ಪೂಜೆ ಮಾಡುವುದರಲ್ಲಿ ತಪ್ಪೇನಿದೆ.? ಈ ಲಾಕ್‌ ಡೌನ್‌ ಎಲ್ಲ ಮುಗಿದ ಮೇಲೆ ಮೋದಿ ಮೂರ್ತಿ ಪ್ರತಿಷ್ಠಾಪಿಸಿ ದೇವಸ್ಥಾನವನ್ನು ಕಟ್ಟಲಿದ್ದೇವೆ” ಎಂದು ಹೇಳಿದ್ದಾರೆ.

“ಅಲ್ಲದೆ ಪ್ರಧಾನಿ ಮೋದಿಯವರು ದಿನಕ್ಕೆ 18 ತಾಸು ಕೆಲಸ ಮಾಡುತ್ತಿದ್ದಾರೆ. ಇದು ಮೋದಿಯವರಲ್ಲಿ ಏನೋ ಒಂದು ದೈವಿಕ ಶಕ್ತಿ ಅಡಗಿದೆ ಎಂಬುದಕ್ಕಿರುವ ಸಾಕ್ಷಿ. ಹೀಗಾಗಿ ಮೋದಿಯವರಿಗೆ ಗೌರವ ಸಲ್ಲಿಸಲು ಅವರ ಹೆಸರಲ್ಲೊಂದು ದೇವಸ್ಥಾನ ನಿರ್ಮಿಸಿ, ಅವರ ಮೂರ್ತಿಯನ್ನು ಅಲ್ಲಿ ಸ್ಥಾಪಿಸಿ, ಅವರ ಪೂಜೆ ನಡೆಸಲಿದ್ದೇವೆ” ಎಂದು ಜೋಶಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಇನ್ನು ಇದೇ ವಿಚಾರವನ್ನು ಮುಂದಿಟ್ಟುಕೊಂಡು ಉತ್ತರಾಖಂಡ್‌ ಕಾಂಗ್ರೆಸ್‌ ನಾಯಕ ಸೂರ್ಯಕಾಂತ್‌ ಧಸ್ಮಾನ ಬಿಜೆಪಿ ಎಂದರೆ ಅಂಧ ಭಕ್ತರ ಕಾರ್ಖಾನೆ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಬಿಜೆಪಿಗರ ಈ ನಡೆಯನ್ನ ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಈಗಾಗಲೇ ಕಾಂಗ್ರೆಸ್‌ ನಾಯಕರು ದೂರು ನೀಡಿದ್ದು, ಬಿಜೆಪಿ ಶಾಸಕ ಜೋಶಿ ಅವರನ್ನ ಬಂಧಿಸಲು ಆಗ್ರಹಿಸಿದ್ದಾರೆ.

Tags: BJPPM ModiTempleUtharkhandಮೋದಿ ಆರತಿಮೋದಿ ಮೂರ್ತಿಮೋದಿ ಹೆಸರಲ್ಲಿ ದೇವಸ್ಥಾನ
Previous Post

ಭಾರತದಿಂದ ತನ್ನ ನಾಗರಿಕರನ್ನು ವಾಪಾಸ್‌ ಕರೆಸಿಕೊಳ್ಳಲು ನಿರ್ಧರಿಸಿದ ಚೀನಾ

Next Post

ಕೇಂದ್ರ ಸಚಿವರ ರಕ್ಷಣೆಗೆ ರಾಜ್ಯ ಸರ್ಕಾರ ಸರ್ಕಸ್ ಮಾಡಬೇಕಿತ್ತಾ..?

Related Posts

Bitcoin:ಬಿಟ್‌ಕಾಯಿನ್‌ ಹೂಡಿಕೆದಾರರಿಗೆ ಬಿಗ್‌ ಶಾಕ್: 24 ಗಂಟೆಗಳಲ್ಲಿ 1 ಬಿಲಿಯನ್ ಡಾಲರ್ ನಷ್ಟ
Top Story

Bitcoin:ಬಿಟ್‌ಕಾಯಿನ್‌ ಹೂಡಿಕೆದಾರರಿಗೆ ಬಿಗ್‌ ಶಾಕ್: 24 ಗಂಟೆಗಳಲ್ಲಿ 1 ಬಿಲಿಯನ್ ಡಾಲರ್ ನಷ್ಟ

by ಪ್ರತಿಧ್ವನಿ
February 8, 2026
0

ಚಿನ್ನದ ಬೆಲೆ ಏರಿಕೆ ಜೊತೆಗೆ 2026ರ ಆರಂಭದಲ್ಲೇ ಕ್ರಿಪ್ಟೋ(crypto )ಹೂಡಿಕೆದಾರರಿಗೆ ಬಿಟ್‌ಕಾಯಿನ್(Bitcoin) ಭಾರಿ ಶಾಕ್ ನೀಡಿದೆ. ಒಂದು ಬಿಟ್‌ಕಾಯಿನ್ ಮೌಲ್ಯ 1.2 ಲಕ್ಷ ಡಾಲರ್‌ನಿಂದ 66 ಸಾವಿರ...

Read moreDetails
ಭಾರತದಾದ್ಯಂತ 2.5 ಕೋಟಿ ಆಧಾರ್ ಕಾರ್ಡ್ ರದ್ದು-ಯಾಕೆ ಗೊತ್ತೆ ?

ಭಾರತದಾದ್ಯಂತ 2.5 ಕೋಟಿ ಆಧಾರ್ ಕಾರ್ಡ್ ರದ್ದು-ಯಾಕೆ ಗೊತ್ತೆ ?

February 8, 2026
ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ಸಂತೋಷ್‌ ಲಾಡ್

ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ಸಂತೋಷ್‌ ಲಾಡ್

February 7, 2026
ಧಾರ್ಮಿಕ ಮೂಲ ತಳಪಾಯದಲ್ಲಿ ನಿರ್ಮಿತ ದೇಶಗಳ ಅಂತ್ಯ: ಪಾಕಿಸ್ತಾನದ ದುರಂತ ಭಾರತಕ್ಕೂ ಪಾಠ!

ಧಾರ್ಮಿಕ ಮೂಲ ತಳಪಾಯದಲ್ಲಿ ನಿರ್ಮಿತ ದೇಶಗಳ ಅಂತ್ಯ: ಪಾಕಿಸ್ತಾನದ ದುರಂತ ಭಾರತಕ್ಕೂ ಪಾಠ!

February 7, 2026
ರಷ್ಯಾ ತೈಲ ಖರೀದಿ ಸುಂಕ ರದ್ದು: ಭಾರತದ ಮೇಲಿನ ಅಮೆರಿಕನ್ ತೆರಿಗೆ 50ರಿಂದ 18%ಗೆ ಇಳಿಕೆ

ರಷ್ಯಾ ತೈಲ ಖರೀದಿ ಸುಂಕ ರದ್ದು: ಭಾರತದ ಮೇಲಿನ ಅಮೆರಿಕನ್ ತೆರಿಗೆ 50ರಿಂದ 18%ಗೆ ಇಳಿಕೆ

February 7, 2026
Next Post
ಕೇಂದ್ರ ಸಚಿವರ ರಕ್ಷಣೆಗೆ ರಾಜ್ಯ ಸರ್ಕಾರ ಸರ್ಕಸ್ ಮಾಡಬೇಕಿತ್ತಾ..?

ಕೇಂದ್ರ ಸಚಿವರ ರಕ್ಷಣೆಗೆ ರಾಜ್ಯ ಸರ್ಕಾರ ಸರ್ಕಸ್ ಮಾಡಬೇಕಿತ್ತಾ..?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada